ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಯಾವುದೇ ಸ್ಟಾರ್ ಗಳಿಸಲು ಎಸ್ ಪ್ರೆಸ್ಸೋ ಕಾರು ವಿಫಲವಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡು ಟಾಟಾ ಮೋಟಾರ್ಸ್ ಮಾರುತಿ ಸುಜುಕಿಯ ಕಾಲೆಳೆಯಿತಾ? 

ಹೌದು, ಟಾಟಾ ಮೋಟಾರ್ಸ್ ಮಾಡಿರುವ ಟ್ವೀಟ್ ಇಂಥದೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಭಾರತದಲ್ಲಿ ತಯಾರಾದ ಮಾರುತಿ ಸುಜಿಯ ಎಸ್ ಪ್ರೆಸ್ಸೋ, ಹುಂಡೈಯ ಗ್ರಾಂಡ್ ಐ10 ನಿಯೋಸ್, ಕಿಯಾ ಸೆಲ್ತೋಸ್ ಕಾರುಗಳ ಸುರಕ್ಷತೆಯ ಕ್ರ್ಯಾಶ್ ಟೆಸ್ಟಿಂಗ್ ಅನ್ನು ಗ್ಲೋಬಲ್ ಎನ್‌ಸಿಎಪಿ ಕೈಗೊಂಡಿತ್ತು. ಇದರಲ್ಲಿ ಎಸ್ ಪ್ರೆಸ್ಸೋ ಯಾವುದೇ ಸ್ಟಾರ್ ಗಳಿಸದೇ ನಿರಾಸೆ ಮಾಡಿಸಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಟಾಟಾ ಮೋಟಾರ್ಸ್, ''ನಾವು ಅಷ್ಟು ಸುಲಭವಾಗಿ ಮುರಿಯುವುದಿಲ್ಲ''(We don't break that easy) ಎಂಬ ಸಾಲುಗಳೊಂದಿಗೆ ಒಡೆದು ಹೋದ ಕಾಫಿ ಮಗ್ ಚಿತ್ರವನ್ನು ಟ್ವೀಟ್ ಮಾಡಿದೆ. ಟಾಟಾ ಮೋಟಾರ್ಸ್ ಮಾಡಿದ ಟ್ವೀಟ್ ನೋಡಲು ಕ್ಲಿಕ್ ಮಾಡಿ.

ಕ್ರ್ಯಾಶ್‌ ಟೆಸ್ಟಿಂಗ್: ಕಿಯಾ ಸೆಲ್ತೋಸ್‌ಗೆ 3 ಸ್ಟಾರ್, ಎಸ್ ಪ್ರೆಸ್ಸೋ ಕಾರಿಗೆ?

ವಿಶೇಷ ಎಂದರೆ, ಈ ಹಿಂದೆಯೂ ಟಾಟಾ ಮೋಟಾರ್ಸ್ ಇದೇ ರೀತಿ ಕಾಲೆಳೆದಿತ್ತು.  ಹೊಸ ತಲೆಮಾರಿನ ಐ20 ಬಿಡುಗಡೆ ಮಾಡಿದ ಹುಂಡೈ ವಿರುದ್ಧವೂ ಟಾಟಾ ಮೋಟಾರ್ಸ್ ಇದೇ ರೀತಿಯ ಕಾಲೆಳೆಯುವ ಟ್ವೀಟ್ ಮಾಡಿತ್ತು. ಟಾಟಾ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅಲ್ಟ್ರೋಜ್ ನೇರ ಪೈಪೋಟಿಯನ್ನು ಈ ಹೊಸ ಐ20 ನೀಡುವ ಸಾಧ್ಯತೆ ಇದೆ.

ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ಕಾಲೆಳೆದ ಟಾಟಾ ಮೋಟಾರ್ಸ್‌ನ ಕ್ರಮ ಸ್ವಲ್ಪ ಒರಟು ಎನಿಸಬಹುದು. ಆದರೆ, ಮಾರುತಿ ಕೂಡ ತನ್ನ ಕಾರುಗಳ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸುವ ಸಂದರ್ಭವನ್ನು ಇದು ಒತ್ತಿ ಹೇಳುತ್ತಿದೆ ಎಂದು ಭಾವಿಸಬಹುದು. ಕಾರುಗಳ ಎಂಟ್ರಿ ಲೇವಲ್‌ ಸೆಗ್ಮೆಂಟ್‌ನಲ್ಲಿ ಟಾಟಾ ಟಿಯಾಗೋ ಮತ್ತು ಮಾರುತಿಯ ಅಲ್ಟೋ, ಸೆಲೆರಿಯೊ ಮತ್ತು ಎಸ್ ಪ್ರೆಸ್ಸೋಗಳ ಮಧ್ಯೆ ತೀವ್ರ ಪೈಪೋಟಿ ಇದೆ. 

ಟೆಸ್ಟಿಂಗ್ ವೇಳೆ ಏನಾಯ್ತು?
ಕಡಿಮೆ ಬಜೆಟ್ ಹಾಗೂ ಎಂಟ್ರಿ ಲೇವರ್ ಕಾರು ಎಸ್ ಪ್ರೆಸ್ಸೋ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗ್ರಾಹಕರ ಮನಸ್ಸನ್ನು ಗೆಲ್ಲುತ್ತಿದೆ. ಆದರೆ, ಸುರಕ್ಷತೆಯ ವಿಷಯದಲ್ಲಿ ಮಾತ್ರ ಅದು ಹಿಂದೆ ಬೀಳುತ್ತಿದೆ. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಎಸ್ ಪ್ರೆಸ್ಸೋ ಹೊಸ ಸುತ್ತಿನಲ್ಲೇ ಯಾವುದೇ ಸ್ಟಾರ್ ಸಂಪಾದಿಸಲು ವಿಫಲವಾಗಿದೆ. ಇದೇ ವೇಳೆ, ಮೇಡ್ ಇನ್ ಇಂಡಿಯಾ ಕಾರುಗಳು ಎನಿಸಿರುವ ಲ್ಯಾಬ್ ಕಂಡಿಷನ್‌ನಲ್ಲಿ  ಹುಂಡೈ ಐ10 ಸ್ಟಾರ್ ಮತ್ತು ಇತ್ತೀಚಿನ ಸೆನ್ಷೆನ್ ಆಗಿರುವ ಕಿಯಾ ಸೆಲ್ತೋಸ್ 3 ಸ್ಟಾರ್ ಸಂಪಾದಿಸಲು ಯಶಸ್ವಿಯಾಗಿವೆ. 

ಪ್ರತಿ 3 ತಿಂಗಳಿಗೆ ಒಂದು ಹೊಸ ರಾಯಲ್‌ ಎನ್‌ಫೀಲ್ಡ್ ಬೈಕ್!

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಎಸ್ ಪ್ರೆಸ್ಸೋ ತೋರಿದ ಪ್ರದರ್ಶನವು ಮಾರುತಿ ಒದಗಿಸುವ ಸುರಕ್ಷತಾ ಕ್ರಮಗಳ ಮೇಲೆ ತುಸು ಚಿಂತೆಗೀಡು ಮಾಡುವಂತಿದೆ. ಅಗ್ಗದ ದರಕ್ಕೆ ದೊರೆಯುವ ಕಾರಿನಲ್ಲಿ ಕ್ಯಾಬಿನ್ ವಿಶಾಲವಾಗಿದ್ದು, ಮೈಕ್ರೋ ಎಸ್‌ಯುವಿ ಲುಕ್ ಹೊಂದಿರುವ ಈ ಕಾರನ್ನು ಹೆಚ್ಚಿನ ಗ್ರಾಹಕರು ಖರೀದಿಗೆ ಆಸಕ್ತರಾಗುತ್ತಿದ್ದಾರೆ. 

ಡ್ರೈವರ್ ಸೈಡ್ ಏರ್ ಬ್ಯಾಗ್ ಹೊಂದಿರುವ ಎಸ್ ಪ್ರೆಸ್ಸೋ ದೊಡ್ಡವರ ವಿಭಾಗದಲ್ಲಿ ಸುರಕ್ಷತೆ ಟೆಸ್ಟಿಂಗ್ ಮಾಡಿದಾಗ ಪ್ರಭಾವ ಬೀರಲು ವಿಫಲವಾಯಿತು. ಗ್ಲೋಬಲ್ ಎನ್‌ಸಿಎಪಿ ಕೈಗೊಂಡ ಟೆಸ್ಟಿಂಗ್‌ನಲ್ಲಿ ಕಾರು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಒಂದು ಪ್ರಮುಖ ಭಾಗ ಎಂದರೆ ಏರ್‌ಬ್ಯಾಗ್‌ಗಳು ಮತ್ತು ಅವು ನೀಡುವ ರಕ್ಷಣೆಯೇ ಆಗಿದೆ. ಅದರಂತೆ, ಎಸ್ ಪ್ರೆಸ್ಸೋ ಒಳಗೆ ಇರಿಸಲಾದ ಡಮ್ಮಿಗಳ ಕುತ್ತಿಗೆ ಮತ್ತು ಎದೆಯ ಪ್ರದೇಶಗಳಿಗೆ ಗಮನಾರ್ಹ ಕ್ರಾಶಿಂಗ್ ಅನುಭವವಾಯಿತು. "ಚಾಲಕನ ಎದೆ ಭಾಗದಲ್ಲಿ ಕಳಪೆ ರಕ್ಷಣೆಯನ್ನು ತೋರಿಸಿತು ಮತ್ತು ಪ್ರಯಾಣಿಕರ ಎದೆ ಭಾಗದ ಸುರಕ್ಷತೆಯಲ್ಲಿ ದುರ್ಬಲವಾಗಿರುವುದು ಗೊತ್ತಾಯಿತು. ಟ್ರಾನ್‌ಫ್ಯಾಸಿಯಾ ಟ್ಯೂಬ್‌ನಿಂದ ಬೆಂಬಲಿತವಾದ ಡ್ಯಾಶ್‌ಬೋರ್ಡ್‌ನ ಹಿಂದೆ ಅಪಾಯಕಾರಿ ರಚನೆಗಳ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಡ್ರೈವರ್ ಮೊಣಕಾಲುಗಳಿಗೂ ಕಡಿಮೆ ರಕ್ಷಣೆ ದೊರೆಯಿತು.  ಆದರೆ ಪ್ರಯಾಣಿಕರ ಮೊಣಕಾಲುಗಳಿಗೆ ಉತ್ತಮ ಸುರಕ್ಷತೆಯ ಪರಿಣಾಮ ಉಂಟಾಯಿತು ಎಂದು ಪರೀಕ್ಷಾ ವರದಿ ವಿವರಿಸಿದೆ. 

ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ