ಕ್ರ್ಯಾಶ್ ಟೆಸ್ಟಿಂಗ್: ಕಿಯಾ ಸೆಲ್ತೋಸ್‌ಗೆ 3 ಸ್ಟಾರ್, ಎಸ್ ಪ್ರೆಸ್ಸೋ ಕಾರಿಗೆ?
ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಕಾರು ಟೆಸ್ಟಿಂಗ್‌ನ ಹೊಸ ಸುತ್ತಿನಲ್ಲಿ ಯಾವುದೇ ಸ್ಟಾರ್ ಸಂಪಾದಿಸಿದೇ ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ವೈಫಲ್ಯವನ್ನು ಕಂಡಿದೆ. ಆದರೆ, ಕಂಪನಿ ಮಾತ್ರ ಭಾರತದ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಕಾರುಗಳನ್ನು ರೂಪಿಸಲಾಗಿದೆ ಎಂದು ಹೇಳಿಕೊಂಡಿದೆ.
ಭಾರತೀಯ ರಸ್ತೆಗಳಲ್ಲಿ ಮಾರುತಿ ಸುಜುಕಿ ಪ್ರಯಾಣಿಕರ ಕಾರುಗಳದ್ದೇ ಕಾರುಬಾರು. ಅಷ್ಟರಮಟ್ಟಿಗೆ ಮಾರುತಿ ಸುಜುಕಿ ಕಾರುಗಳ್ನು ಜನರು ಖರೀದಿಸುತ್ತಾರೆ. ಮಾರುತಿಯ ತೀರಾ ಅಗ್ಗದ ಎಂಟ್ರಿ ಲೇವಲ್ ಕಾರಿನಿಂದ ಹಿಡಿದು ಪ್ರೀಮಿಯಂ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಸ್‌ಯುವಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಎಸ್ ಪ್ರೆಸ್ಸೋ ಸೇಫ್ಟಿ ರೇಟಿಂಗ್(ಸುರಕ್ಷತಾ ಶ್ರೇಯಾಂಕ)ದಲ್ಲಿ ಯಾವುದೇ ಶ್ರೇಯಾಂಕ ಪಡೆಯಲು ವಿಫಲವಾಗಿದೆ.
ಕಡಿಮೆ ಬಜೆಟ್ ಹಾಗೂ ಎಂಟ್ರಿ ಲೇವರ್ ಕಾರು ಎಸ್ ಪ್ರೆಸ್ಸೋ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗ್ರಾಹಕರ ಮನಸ್ಸನ್ನು ಗೆಲ್ಲುತ್ತಿದೆ. ಆದರೆ, ಸುರಕ್ಷತೆಯ ವಿಷಯದಲ್ಲಿ ಮಾತ್ರ ಅದು ಹಿಂದೆ ಬೀಳುತ್ತಿದೆ. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಎಸ್ ಪ್ರೆಸ್ಸೋ ಹೊಸ ಸುತ್ತಿನಲ್ಲೇ ಯಾವುದೇ ಸ್ಟಾರ್ ಸಂಪಾದಿಸಲು ವಿಫಲವಾಗಿದೆ. ಇದೇ ವೇಳೆ, ಮೇಡ್ ಇನ್ ಇಂಡಿಯಾ ಕಾರುಗಳು ಎನಿಸಿರುವ ಲ್ಯಾಬ್ ಕಂಡಿಷನ್‌ನಲ್ಲಿ ಹುಂಡೈ ಐ10 ಸ್ಟಾರ್ ಮತ್ತು ಇತ್ತೀಚಿನ ಸೆನ್ಷೆನ್ ಆಗಿರುವ ಕಿಯಾ ಸೆಲ್ತೋಸ್ 3 ಸ್ಟಾರ್ ಸಂಪಾದಿಸಲು ಯಶಸ್ವಿಯಾಗಿವೆ.
ಪ್ರತಿ 3 ತಿಂಗಳಿಗೆ ಒಂದು ಹೊಸ ರಾಯಲ್ ಎನ್‌ಫೀಲ್ಡ್ ಬೈಕ್!
ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಎಸ್ ಪ್ರೆಸ್ಸೋ ತೋರಿದ ಪ್ರದರ್ಶನವು ಮಾರುತಿ ಒದಗಿಸುವ ಸುರಕ್ಷತಾ ಕ್ರಮಗಳ ಮೇಲೆ ತುಸು ಚಿಂತೆಗೀಡು ಮಾಡುವಂತಿದೆ. ಅಗ್ಗದ ದರಕ್ಕೆ ದೊರೆಯುವ ಕಾರಿನಲ್ಲಿ ಕ್ಯಾಬಿನ್ ವಿಶಾಲವಾಗಿದ್ದು, ಮೈಕ್ರೋ ಎಸ್‌ಯುವಿ ಲುಕ್ ಹೊಂದಿರುವ ಈ ಕಾರನ್ನು ಹೆಚ್ಚಿನ ಗ್ರಾಹಕರು ಖರೀದಿಗೆ ಆಸಕ್ತರಾಗುತ್ತಿದ್ದಾರೆ.
ಡ್ರೈವರ್ ಸೈಡ್ ಏರ್ ಬ್ಯಾಗ್ ಹೊಂದಿರುವ ಎಸ್ ಪ್ರೆಸ್ಸೋ ದೊಡ್ಡವರ ವಿಭಾಗದಲ್ಲಿ ಸುರಕ್ಷತೆ ಟೆಸ್ಟಿಂಗ್ ಮಾಡಿದಾಗ ಪ್ರಭಾವ ಬೀರಲು ವಿಫಲವಾಯಿತು. ಗ್ಲೋಬಲ್ ಎನ್‌ಸಿಎಪಿ ಕೈಗೊಂಡ ಟೆಸ್ಟಿಂಗ್‌ನಲ್ಲಿ ಕಾರು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಒಂದು ಪ್ರಮುಖ ಭಾಗ ಎಂದರೆ ಏರ್‌ಬ್ಯಾಗ್‌ಗಳು ಮತ್ತು ಅವು ನೀಡುವ ರಕ್ಷಣೆಯೇ ಆಗಿದೆ. ಅದರಂತೆ, ಎಸ್ ಪ್ರೆಸ್ಸೋ ಒಳಗೆ ಇರಿಸಲಾದ ಡಮ್ಮಿಗಳ ಕುತ್ತಿಗೆ ಮತ್ತು ಎದೆಯ ಪ್ರದೇಶಗಳಿಗೆ ಗಮನಾರ್ಹ ಕ್ರಾಶಿಂಗ್ ಅನುಭವವಾಯಿತು. ಚಾಲಕನ ಎದೆ ಭಾಗದಲ್ಲಿ ಕಳಪೆ ರಕ್ಷಣೆಯನ್ನು ತೋರಿಸಿತು ಮತ್ತು ಪ್ರಯಾಣಿಕರ ಎದೆ ಭಾಗದ ಸುರಕ್ಷತೆಯಲ್ಲಿ ದುರ್ಬಲವಾಗಿರುವುದು ಗೊತ್ತಾಯಿತು. ಟ್ರಾನ್‌ಫ್ಯಾಸಿಯಾ ಟ್ಯೂಬ್‌ನಿಂದ ಬೆಂಬಲಿತವಾದ ಡ್ಯಾಶ್‌ಬೋರ್ಡ್‌ನ ಹಿಂದೆ ಅಪಾಯಕಾರಿ ರಚನೆಗಳ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಡ್ರೈವರ್ ಮೊಣಕಾಲುಗಳಿಗೂ ಕಡಿಮೆ ರಕ್ಷಣೆ ದೊರೆಯಿತು. ಆದರೆ ಪ್ರಯಾಣಿಕರ ಮೊಣಕಾಲುಗಳಿಗೆ ಉತ್ತಮ ಸುರಕ್ಷತೆಯ ಪರಿಣಾಮ ಉಂಟಾಯಿತು ಎಂದು ಪರೀಕ್ಷಾ ವರದಿ ವಿವರಿಸಿದೆ.
ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ
ಕಾರಿನ ಹೊರ ಮೈ ಕವಚ ಮತ್ತು ಅದರ ಕಾಲು ಕೆಳಗಿನ ಭಾಗವು ಕೂಡ ಅಸ್ಥಿರತೆಯಿಂದ ಕೂಡಿದ್ದು ಗೊತ್ತಾಯಿತು. ಪರೀಕ್ಷೆಯ ವೇಳೆ ಗೊತ್ತಾದ ಮತ್ತೊಂದ ಗಮನಾರ್ಹ ಸಂಗತಿ ಎಂದರೆ, ಮುಂಭಾಗದ ಸೀಟ್‌ಬೆಲ್ಟ್‌ಗಳಲ್ಲಿ ಪ್ರಿಟೆನ್ಷನರ್‌ಗಳು ಇಲ್ಲ. ಮತ್ತು ಹಿಂಭಾಗದಲ್ಲಿ ಮಧ್ಯೆದಲ್ಲಿ ಕುಳಿತುಕೊಳ್ಳುವವರಿಗೆ ತ್ರಿಪಾಯಿಂಟ್ ಸೀಟ್ ಬೆಲ್ಟ್ ಕೂಡ ಇಲ್ಲ. ಇದರ ಜೊತೆಗೆ ಮಕ್ಕಳ ಸಂಯಮ ವ್ಯವಸ್ಥೆ(Child Restraint Systems - CRS)ಗಳಿಗೆ ಯಾವುದೇ ISOFIX ಆಂಕರ್‌ರೇಜ್‌ಗಳು ಇಲ್ಲದಿರುವದು ಪರೀಕ್ಷೆ ವೇಳೆ ಕಂಡು ಬಂತು.
ಈ ಟೆಸ್ಟಿಂಗ್ ಕುರಿತು ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ, ಭಾರತೀಯ ಗ್ರಾಹಕರಿಗೆ ನೀಡುವ ರೀತಿಯ ವಾಹನಗಳನ್ನು ಇಲ್ಲಿನ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಯೇ ರೂಪಿಸಲಾಗಿರುತ್ತದೆ ಎಂದು ಹೇಳಿದೆ. ಭಾರತ ಸರಕಾರವು ಇತ್ತೀಚಿಗೆ ಕಾರ್ ಕ್ರ್ಯಾಶ್ ಟೆಸ್ಟಿಂಗ್ ಮಾನದಂಡಗಳನ್ನು ಹೆಚ್ಚಿಸಿದ್ದು ಅವು ಯುರೋಪಿಯನ್ ಮಾನದಂಡಗಳನ್ನು ಹೋಲುತ್ತವೆ. ಕಂಪನಿಯ ಎಲ್ಲಾ ಕಾರುಗಳು ಜಾಗತಿಕ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿಯೇ ರೂಪುಗೊಂಡಿವೆ ಮತ್ತು ಭಾರತ ಸರಕಾರವು ಸೂಕ್ತ ಪರೀಕ್ಷೆ ಮಾಡಿಯೇ ಪ್ರಮಾಣಿಕರಿಸಿದೆ ಎಂದು ಕಂಪನಿಯು ಸುದ್ದಿ ಜಾಲತಾಣವೊಂದಕ್ಕೆ ತಿಳಿಸಿದೆ.
ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!