Asianet Suvarna News Asianet Suvarna News

ಭಾರತದ ಅತ್ಯಂತ ಹಳೆಯ ವಿಂಟೇಜ್‌ ಕಾರುಗಳ ಪ್ರದರ್ಶನ...

  • ನೂರು ವರ್ಷಕ್ಕಿಂತ ಹಳೆಯ ವಿಂಟೇಜ್‌ ಕಾರುಗಳ ಪ್ರದರ್ಶನ
  • ಕಾರುಗಳ ಪ್ರದರ್ಶನ ಉದ್ಘಾಟಿಸಿದ ವಾಯುಸೇನಾ ಮುಖ್ಯಸ್ಥ
  • 50ಕ್ಕೂ ಹೆಚ್ಚು ವಿಭಿನ್ನ ಕಾರುಗಳ ಪ್ರದರ್ಶನ
Indias Oldest Vintage Cars Go On Display in Delhi akb
Author
Bangalore, First Published Mar 8, 2022, 11:01 AM IST

ನವದೆಹಲಿ(ಮಾ.8):  100 ವರ್ಷಕ್ಕಿಂತಲೂ ಹಳೆಯ ವಿಂಟೇಜ್‌ ಕಾರುಗಳ ಪ್ರದರ್ಶನಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಯ್ತು. ಭಾನುವಾರ ಉದ್ಘಾಟನೆಗೊಂಡ ಈ ಅತ್ಯಂತ ಹಳೆಯ ವಿಂಟೇಜ್‌ ಕಾರುಗಳ ಪ್ರದರ್ಶನವನ್ನು ವಾಯುಸೇನಾ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌ ಚೌಧರಿ ಉದ್ಘಾಟಿಸಿದರು. ಸ್ಟೇಟ್ಸ್‌ಮನ್ ವಿಂಟೇಜ್‌ ಕಾರುಗಳ ಈ ಪ್ರದರ್ಶನದಲ್ಲಿ ಜಾನ್‌ ಮೋರಿಸ್ ಫೈರ್ ಎಂಜಿನ್‌ ಈ ಪ್ರದರ್ಶನದ ಕೇಂದ್ರಬಿಂದುವಾಗಿ ಎಲ್ಲರನ್ನು ಸೆಳೆಯಿತು. 

ವಿಂಟೇಜ್ ಕಾರು ಪ್ರೇಮಿಗಳಿಗಾಗಿ ಒಟ್ಟು 52 ಕಾರುಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ  25 ವಿಂಟೇಜ್‌ಗಳು, 27 ಇತರ ಕ್ಯಾಸಿಕ್‌ಗಳು ಸೇರಿ ಐವತ್ತಕ್ಕೂ ಹೆಚ್ಚು ವಿಭಾಗಗಳು ಈ ಪ್ರದರ್ಶನದಲ್ಲಿದ್ದವು. ವಿಂಟೇಜ್‌ ಕಾರು ಪ್ರದರ್ಶನದ ಮುಖ್ಯ ತೀರ್ಪುಗಾರ ಜಿತೇಂದ್ರ ಪಂಡಿತ್ ಸಿಂಗ್‌  ಮಾತನಾಡಿ. ಈ ವಿಂಟೇಜ್‌ ಕಾರು ಪ್ರದರ್ಶನ ಕೇವಲ ಎರಡು ಬಾರಿ ನಡೆದಿದೆ.  ಆದರೆ ಈ  rally ಕಳೆದ 50 ವರ್ಷಗಳಿಂದ ನಡೆಯುತ್ತಿದೆ. ಆದರೆ COVID-19 ಸಾಂಕ್ರಾಮಿಕ ರೋಗದ ಕಾರಣಕ್ಕೆ ನಮಗೆ ಎಲ್ಲಾ ಅನುಮತಿಗಳನ್ನು ನೀಡಿಲ್ಲ. ಕೇವಲ ಪ್ರದರ್ಶನಕ್ಕೆ ಮಾತ್ರ ಅನುಮತಿಯನ್ನು ನೀಡಲಾಯಿತು ಎಂದು ಜೀತೆಂದ್ರ ಪಂಡಿತ್‌(Jitendra Pandit) ಹೇಳಿದರು. 

 

ವಿಂಟೇಜ್ ಕಾರಿನ ರಿಜಿಸ್ಟ್ರೇಶನ್‌ಗೆ ಹೊಸ ನೀತಿ: ಕೇಂದ್ರದಿಂದ ಮಹತ್ವದ ಹೆಜ್ಜೆ!

ಕಳೆದ 75 ವರ್ಷಗಳಿಂದ ನನ್ನ ನೆರೆಹೊರೆಯವರು ವಿಂಟೇಜ್ ಕಾರನ್ನು ಹೊಂದಿರುವುದರಿಂದ ನಾನು ಕಳೆದ 5-6 ವರ್ಷಗಳಿಂದ ಈ ಕಾರ್ ಶೋ ಮತ್ತು ಪ್ರದರ್ಶನಗಳಿಗೆ ಭೇಟಿ ನೀಡುತ್ತಿದ್ದೇನೆ.  ಅವರಿಂದಾಗಿಯೇ ನಾನು ಈ ಪ್ರದರ್ಶನಗಳಿಗೆ ಬರಲು ಪ್ರಾರಂಭಿಸಿದೆ. ಇಲ್ಲಿಗೆ ನಾನು ನನ್ನ ಇಬ್ಬರು ಸೋದರ ಸಂಬಂಧಿ ಹಾಗೂ ಚಿಕ್ಕಪ್ಪನೊಂದಿಗೆ ಬಂದಿದ್ದೇನೆ ಅವರು ಎರಡು ಕಾರುಗಳನ್ನು ಇಲ್ಲಿಗೆ ತಂದಿದ್ದಾರೆ. ಎಂದು ಭಾರತದಲ್ಲಿ ಸ್ವಿಜ್ ವಾಚ್‌ಗಳನ್ನು (Swizz watche) ನೋಡಿಕೊಳ್ಳುವ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುವ ಮಾಶಾ (Masha) ಹೇಳಿದರು.

Tata Car offers ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್, ಮಾರ್ಚ್ ತಿಂಗಳ ಡಿಸ್ಕೌಂಟ್ ಘೋಷಣೆ!

ನನ್ನ ಬಳಿ 317 ವಿಂಟೇಜ್ ಕಾರು (vintage car)ಗಳಿವೆ, ಇದರ ದುರಸ್ತಿ ಮತ್ತು ನಿರ್ವಹಣೆಗಾಗಿಯೇ  ಸುಮಾರು 50 ಜನರ ತಂಡ  ಇದೆ. ಏಕೆಂದರೆ ಈ ಕಾರುಗಳ ನಿರ್ವಹಣೆ ನಿಜವಾಗಿಯೂ ಸವಾಲಾಗಿದೆ. ಕಾರುಗಳ ಹೊರತಾಗಿ, ನನ್ನ ಬಳಿ ವಿಂಟೇಜ್ ಬೈಕ್‌ಗಳು ಮತ್ತು ಜೀಪ್‌ಗಳೂ ಇವೆ, ಇವುಗಳ ಸಂಖ್ಯೆಯು 450 ರಷ್ಟಿದೆ ಎಂದು ವಿಂಟೇಜ್ ಕಾರುಗಳ ಮಾಲೀಕ ಮದನ್ ಮೋಹನ್ (Madan Mohan) ಹೇಳಿದರು. ವಿಂಟೇಜ್ ವಾಹನಗಳು ದೇಶದ ಪರಂಪರೆ ಎಂದು ನಂಬಿರುವ ಅವರು, ಅದನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಮರ್ಸಿಡೀಸ್-ಬೆನ್ಸ್ (Mercedes-Benz) ಇಂಡಿಯಾ ಹೊಸ ತಲೆಮಾರಿನ ಮರ್ಸಿಡೀಸ್ ಮೇ ಬ್ಯಾಕ್ ಎಸ್ ಕ್ಲಾಸ್ ಲಿಮೋಸಿನ್ ( Mercedes-Maybach S-ಕ್ಲಾಸ್ Limosin) ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಎಸ್-ಕ್ಲಾಸ್ ಮೇಬ್ಯಾಕ್ ದರ 2.5 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತವೆ. ಎಸ್80 4 ಮ್ಯಾಟಿಕ್ ಗೆ 3.2 ಕೋಟಿ  ರೂ.( ಎಕ್ಸ್-ಶೋರೂಮ್) ವರೆಗೆ ಇರುತ್ತದೆ. ಇದರಲ್ಲಿ ಮೊದಲನೆಯದು ಸಂಪೂರ್ಣವಾಗಿ ಸ್ಥಳೀಯವಾಗಿ ಜೋಡಿಸಲ್ಪಟ್ಟ ವಾಹನವಾಗಿದೆ., ಎರಡನೆಯದು ಸಂಪೂರ್ಣ ನಿರ್ಮಿಸಲಾದ ಘಟಕವಾಗಿ (CBU) ಭಾರತಕ್ಕೆ ಆಗಮಿಸುತ್ತದೆ. ಹೊಸ ಎಸ್-ಕ್ಲಾಸ್ ಮೇಬ್ಯಾಕ್ 2020ರ ನವೆಂಬರ್ನಲ್ಲಿ ಜಾಗತಿಕವಾಗಿ ಪರಿಚಯಿಸಲ್ಪಟ್ಟಿತ್ತು.

Follow Us:
Download App:
  • android
  • ios