Asianet Suvarna News Asianet Suvarna News

ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್, ಆಫರ್ ಕೆಲ ದಿನ ಮಾತ್ರ!

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಕೆಲ ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. ಇದೀಗ ಮಾರುತಿ ಸುಜುಕಿ ಸೆಲೆರಿಯೋ, ಸ್ವಿಫ್ಟ್, ಅಲ್ಟೋ ಸೇರಿದಂತೆ ಕೆಲ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಿದೆ.

Independence day Celebration Maruti Suzuki announces august month discounts offers on selected model cars ckm
Author
Bengaluru, First Published Aug 13, 2022, 8:00 PM IST

ನವದೆಹಲಿ(ಆ.13): ಮಾರುತಿ ಸುಜುಕಿ ಹೊಸ ಹೊಸ ಕಾರುಗಳ ಬಿಡುಗಡೆ ಜೊತೆಗೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಸ್ವಾತಂತ್ರ್ಯ ದಿನಾಚರಣ ಸಂಭ್ರಮದಲ್ಲಿರುವ ಗ್ರಾಹಕರಿಗೆ ಮಾರುತಿ ಸುಜುಕಿ ಡಿಸ್ಕೌಂಟ್ ಆಫರ್ ನೀಡಿದೆ. ಮಾರುತಿ ಸುಜುಕಿ ಆಗಸ್ಟ್ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಅಡಿಯಲ್ಲಿ ಕಾರು ಖರೀದಿಸುವ ಗ್ರಾಹಕರು 54,000 ರೂಪಾಯಿ ಡಿಸ್ಕೌಂಟ್ ಪಡೆಯಲಿದ್ದಾರೆ. ಮಾರುತಿ ಸುಜುಕಿ ವ್ಯಾಗನರ್, ಸೆಲೆರಿಯೋ, ಸ್ವಿಫ್ಟ್, ಅಲ್ಕೋ ಸೇರಿದಂತೆ ಕೆಲ ಕಾರುಗಳ ಮೇಲೆ ಈ ಡಿಸ್ಕೌಂಟ್ ಆಫರ್ ಅನ್ವಯವಾಗಲಿದೆ. ಈ ಡಿಸ್ಕೌಂಟ್ ಆಫರ್ ಆಗಸ್ಟ್ 31ರ ವರೆಗೆ ಮಾತ್ರ ಇರಲಿದೆ. ಮಾರುತಿ ಸುಜುಕೆ ಅರೆನಾ ಡೀಲರ್‌ಶಿಫ್‌ ಬಳಿಕ ಕಾರು ಖರೀದಿಸುವ ಗ್ರಾಹಕರಿಗೆ ಈ ಡಿಸ್ಕೌಂಟ್ ಆಫರ್ ಅನ್ವಯವಾಗಲಿದೆ.

ಮಾರುತಿ ಅಲ್ಟೋ ಕಾರಿಗೆ ಒಟ್ಟು 22,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 8,000 ನಗದು ಡಿಸ್ಕೌಂಡ್, 10,000 ಬೋನಸ್ ಹಾಗೂ ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಒಳಗೊಂಡಿದೆ. ಇನ್ನು ಮಾರುತಿ ಎಸ್ ಪ್ರೆಸ್ಸೋ ಕಾರಿಗೆ ಒಟ್ಟು 54,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 35,000 ರೂಪಾಯಿ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಒಳಗೊಂಡಿದೆ.

ಹೊಚ್ಚ ಹೊಸ ಮಾರುತಿ ಅಲ್ಟೋ ಕೆ10 ಆಗಸ್ಟ್ 18ಕ್ಕೆ ಬಿಡುಗಡೆ, ಬುಕಿಂಗ್ ಬೆಲೆ 11 ಸಾವಿರ ರೂ ಮಾತ್ರ!

ಮಾರುತಿ ಇಕೋ ಕಾರಿಗೆ ಓಟ್ಟು 22,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಕ್ಯಾಶ್ ಡಿಸ್ಕೌಂಟ್ 10,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 2,000 ರೂಪಾಯಿ ಒಳಗೊಂಡಿದೆ. ಮಾರುತಿ ಸೆಲೆರಿಯೋ ಕಾರಿಗೆ 54,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 35,000 ರೂಪಾಯಿ ನಗದು ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 4,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ.

ಮಾರುತಿ ವ್ಯಾನಗರ್ ಕಾರಿಗೆ 30,000 ರೂಪಾಯಿ ಒಟ್ಟು ಡಿಸ್ಕೌಂಟ್ ನೀಡಲಾಗಿದೆ. 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ ಕಾರ್ಪೋರೇಟ್ ಬೋನಸ್ 5,000 ರೂಪಾಯಿ ಒಳಗೊಂಡಿದೆ. ಮಾರುತಿ ಡಿಸೈರ್ ಕಾರಿಗೆ ಒಟ್ಟು 18,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 5,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 3,000 ರೂಪಾಯಿ ಕಾರ್ಪೋರೇಟ್ ಬೋನಸ್ ಒಳಗೊಂಡಿದೆ. 

31 ಕಿ.ಮೀ ಮೈಲೇಜ್, ಕೈಗೆಟುಕುವದ ದರದ ಮಾರುತಿ ಸುಜುಕಿ ಸ್ವಿಫ್ಟ್ CNG ಕಾರು ಬಿಡುಗಡೆ!

Follow Us:
Download App:
  • android
  • ios