Asianet Suvarna News Asianet Suvarna News

Electric Vehicle ಪೆಟ್ರೋಲ್, ಡೀಸೆಲ್ ಕಾರು ಸ್ಥಗಿತಗೊಳಿಸಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹ್ಯುಂಡೈ ಹೆಜ್ಜೆ!

  • ಭವಿಷ್ಯದ ಸಾರಿಗೆ ಎಲೆಕ್ಟ್ರಿಕ್ ವಾಹನದತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲು ಹ್ಯುಂಡೈ ನಿರ್ಧಾರ
  • ಪೆಟ್ರೋಲ್, ಡೀಸೆಲ್ ವಾಹನ ಉತ್ಪಾದನೆ ಸ್ಥಗಿತಗೊಳಿಸುತ್ತಾ ಹ್ಯುಂಡೈ ಮೋಟಾರ್
  •  ಸೌತ್ ಕೊರಿಯಾದ ಅತೀ ದೊಡ್ಡ ಕಾರು ತಯಾರಕಾ ಕಂಪನಿ ಹ್ಯುಂಡೈ  ಮಹತ್ವದ ಹೆಜ್ಜೆ
Hyundai Plant to stop developing petrol diesel engine in south korea to focus electric vehicles ckm
Author
Bengaluru, First Published Dec 30, 2021, 4:11 PM IST

ಸೌತ್ ಕೊರಿಯಾ(ಡಿ.30):  ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹ್ಯುಂಡೈ ಕಾರುಗಳು(Hyundai Cars) ಅತೀ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಸೌತ್ ಕೊರಿಯಾದ(South korea) ಹ್ಯುಂಡೈ ಕಾರುಗಳಿಗೆ ಭಾರಿ ಬೇಡಿಕೆಯೂ ಇದೆ. ವಿಶ್ವದ ಅತೀ ದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಹ್ಯುಂಡೈ ಇದೀಗ ಪೆಟ್ರೋಲ್ ಹಾಗೂ ಡೀಸೆಲ್(Petrol and Diesel) ಕಾರು ಉತ್ಪಾದನೆ ಸ್ಥಗಿತಗೊಳಿಸಿ, ಎಲೆಕ್ಟ್ರಿಕ್ ವಾಹನದತ್ತ ಗಮನಕೇಂದ್ರಿಕರಿಸಲು ನಿರ್ಧರಿಸಿದೆ.

ಹೌದು, ಸೌತ್ ಕೊರಿಯಾದಲ್ಲಿ ಹ್ಯುಂಡೈ ಪೆಟ್ರೋಲ್ ಹಾಗೂ ಡೀಸೆಲ್ ವಾಹನ ಉತ್ಪಾದನೆಗೆ ಬ್ರೇಕ್ ಹಾಕಲು ಮುಂದಾಗಿದೆ. ಸದ್ಯ ಬುಕಿಂಗ್ ಆಗಿರುವ ಕಾರುಗಳ ಉತ್ಪಾದನೆಯಾಗಲಿದೆ. ಬಳಿಕ ಸ್ಥಗಿತಗೊಳಿಸುವ ಕುರಿತು ಹ್ಯುಂಡೈ ಚಿಂತಿಸಿದೆ. ಇದಕ್ಕೂ ಮುನ್ನ ಸೌತ್ ಕೊರಿಯಾದಲ್ಲಿರುವ ಹ್ಯುಂಡೈ ಎಂಜಿನ್ ಅಭಿವೃದ್ಧಿ ಹಾಗೂ ಸಂಶೋಧನೆ ಕೇಂದ್ರವನ್ನು ಹ್ಯುಂಡೈ ಸ್ಥಗಿತಗೊಳಿಸಿದೆ. ಹೊಸ ಕಾರುಗಳಿಗಾಗಿ ಎಂಜಿನ್ ಅಭಿವೃದ್ಧಿ ಹಾಗೂ ಸಂಶೋಧನೆ ಮಾಡುವುದಿಲ್ಲ ಎಂದು ಹ್ಯುಂಡೈ ತನ್ನ ಕೇಂದ್ರದ ಕಾರ್ಯಗಳನ್ನು ನಿಲ್ಲಿಸಿದೆ.

Hyundai Ioniq 5 EV ಕೈಗೆಟುಕುವ ದರ, 480 ಕಿ.ಮೀ ಮೇಲೇಜ್, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ!

ಹ್ಯುಂಡೈ ಎಂಜಿನ್ ಅಭಿವೃದ್ಧಿ ಹಾಗೂ ಸಂಶೋಧನೆ ಕೇಂದ್ರವನ್ನು ಇದೀಗ ಎಲೆಕ್ಟ್ರಿಕ್(Electric Vehilce) ಮೋಟಾರು ಅಭಿವೃದ್ಧಿ ಹಾಗೂ ಸಂಶೋಧನಾ ಕೇಂದ್ರವಾಗಿ ಪರಿವರ್ತಿಸುತ್ತಿದೆ. ಈ ಕೇಂದ್ರವನ್ನೂ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಬಳಸಲು ಹ್ಯುಂಡೈ ನಿರ್ಧರಿಸಿದೆ. ವಿಶ್ವದ ಅತೀ ದೊಡ್ಡ ಕಾರು ಮಾರುಕಟ್ಟೆ ಹೊಂದಿರುವ ಹ್ಯುಂಡೈ ಈ ನಿರ್ಧಾರ ಹಲವು ದೇಶಗಳಿಗೆ ಅಚ್ಚರಿ ತಂದಿದೆ.

ಎಲೆಕ್ಟ್ರಿಕ್ ಮೋಟಾರು ಅಭಿವೃದ್ಧಿ ಕೇಂದ್ರದ ಜೊತೆಗೆ ಮತ್ತೊಂದು ಹೊಸ ಕೇಂದ್ರವನ್ನು ಹ್ಯುಂಡೈ ಆರಂಭಿಸುತ್ತಿದೆ. ಇದು ಎಲೆಕ್ಟ್ರಿಕ್ ವಾಹನಗಳಿಗೆ ಅತೀ ಮುಖ್ಯವಾಗಿರುವ ಬ್ಯಾಟರಿ ಅಭಿವೃದ್ಧಿ ಕೇಂದ್ರ. ಈ ಕೇಂದ್ರದಲ್ಲಿ ಎರಡು ವಿಭಾಗಗಳಿವೆ. ಒಂದು ಬ್ಯಾಟರಿ ಡಿಸೈನ್ ಟೀಮ್ ಹಾಗೂ ಬ್ಯಾಟರಿ ಪರ್ಫಾಮೆನ್ಸ್ ಅಭಿವೃದ್ಧಿ ತಂಡ ಎಂದು ಎರಡು ವಿಭಾಗಗಳಿವೆ. ಈ ತಂಡಗಳು ಗರಿಷ್ಠ ಮೈಲೇಜ್ ನೀಡಬಲ್ಲ, ಅತೀ ಕಡಿಮೆ ಸಮಯದಲ್ಲಿ ಚಾರ್ಜ್ ಆಗಬಲ್ಲ ಹಾಗೂ ಹೆಚ್ಚು ಬಾಳಿಕೆಯ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸಲಿದೆ.

Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?

ಹ್ಯುಂಡೈ ಸ್ಥಗಿತಗೊಳಿಸುತ್ತಿರುವ ಸೌತ್ ಕೊರಿಯಾದಲ್ಲಿರುವ ಪ್ರಮುಖ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಅಭಿವೃದ್ಧಿ ಹಾಗೂ ಸಂಶೋಧನಾ ಘಟಕವನ್ನು. ಸದ್ಯ ಭಾರತ ಸೇರಿದಂತೆ ಇತರ ದೇಶಗಳಲ್ಲಿರುವ ಹ್ಯುಂಡೈ ಘಟಕ ಎಂದಿನಂತೆ ಕಾರ್ಯನಿರ್ವಹಸಲಿದೆ. ಹ್ಯುಂಡೈ 2040ರ ವೇಳೆ ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ 2030ರ ವೇಳೆ ಶೇಕಡಾ 30 ರಷ್ಟು ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಹ್ಯುಂಡೈ ನಿರ್ಧರಿಸಿದೆ.

ಭಾರತದಲ್ಲಿ ಹ್ಯುಂಡೈ ಇದೀಗ ಎಲೆಕ್ಟ್ರಿಕ್ ವಾಹನದತ್ತ ಹೆಚ್ಚಿನ ಗಮನಹರಿಸುತ್ತಿದೆ. 2028ರ ವೇಳೆಗೆ 6 ಎಲೆಕ್ಟ್ರಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಹ್ಯುಂಡೈ ಘೋಷಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹ್ಯುಂಡೈ 4,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.  ಭಾರತದಲ್ಲಿ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಹ್ಯುಂಡೈ ಈಗಾಗಲೇ ಸಿದ್ಧತೆ ನಡೆಸಿದೆ. 

Discount offers: ಹ್ಯುಂಡೈ ವರ್ಷಾಂತ್ಯದ ಆಫರ್ ಘೋಷಣೆ, ಆಯ್ದ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್!

ಭಾರತದಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಾಗಿದೆ. ಇನ್ನು  IONIQ 5 ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಜೊತೆಗೆ CNG ಕಾರುಗಳನ್ನು ಹ್ಯುಂಡೈ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಹೆಚ್ಚಿನ ಗಮನವನ್ನು ಪೆಟ್ರೋಲ್ ಹಾಗೂ ಡೀಸೆಲ್ ಕಾರಿಗಿಂತ ಎಲೆಕ್ಟ್ರಿಕ್ ಹಾಗೂ CNG ಕಾರಿನ ಮೇಲೆ ಕೇಂದ್ರೀಕರಿಸುತ್ತಿದೆ. 2022ರ ಮಧ್ಯಭಾಗದಲ್ಲಿ ಹ್ಯುಂಡೈ ವೆನ್ಯೂ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಲ ಮುಂದಾಗಿದೆ. 
 

Follow Us:
Download App:
  • android
  • ios