Asianet Suvarna News Asianet Suvarna News

ಭಾರತದಲ್ಲಿ 13.51 ಲಕ್ಷ ರೂ. ಮೌಲ್ಯದ ಹೊಸ ಕ್ರೇಟಾ ನೈಟ್ ಎಡಿಷನ್ ಬಿಡುಗಡೆ

ಹ್ಯುಂಡೈ ಮೋಟಾರ್‌ ಇಂಡಿಯಾ (Hyundai Motor India) ಮಂಗಳವಾರ 13.51 ಲಕ್ಷ ರೂ. ಮೌಲ್ಯದ ಹೊಸ ಕ್ರೇಟಾ ನೈಟ್‌ ಎಡಿಷನ್‌ (New Creta Knight edition) ಬಿಡುಗಡೆಯನ್ನು ಘೋಷಿಸಿದೆ

Hyundai launches new Creta knight edition at Rs.13.51 lakh
Author
Bangalore, First Published May 3, 2022, 6:18 PM IST

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಮಂಗಳವಾರ 13.51 ಲಕ್ಷ ರೂ. ಮೌಲ್ಯದ ಹೊಸ ಕ್ರೇಟಾ ನೈಟ್ ಎಡಿಷನ್ (New Creta Knight edition) ಬಿಡುಗಡೆಯನ್ನು ಘೋಷಿಸಿದೆ. ಕ್ರೇಟಾ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಎಸ್ಯುವಿ (SUV)ಯಾಗಿದೆ. 
ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿಯು ಡಾರ್ಕ್-ಥೀಮಿನ ಹೊರಾಂಗಣ ಹಾಗೂ ಇಂಟೀರಿಯರ್ ಹೊಂದಿದೆ. 2022ರ ನವೀಕರಣದ ಭಾಗವಾಗಿ ಹೊಸ ಟ್ರಿಮ್ಗಳು ಮತ್ತು ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. 
ಹೊಸ ಬಿಡುಗಡೆ ಕುರಿತು ಮಾತನಾಡಿದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ನಿರ್ದೇಶಕ (ಮಾರಾಟ, ಮಾರ್ಕೆಟಿಂಗ್ ಮತ್ತು ಸೇವೆ) ತರುಣ್ ಗಾರ್ಗ್, "ಹ್ಯುಂಡೈ ಕಂಪನಿ ವೈವಿಧ್ಯಮಯ ಎಸ್ಯುವಿಗಳ ವ್ಯಾಪಕ ಪೋರ್ಟ್ಫೋಲಿಯೋ ಹೊಂದಿದೆ. ಹೊಸ ಯುಗದ ಗ್ರಾಹಕರ ಅಗತ್ಯತೆಗಳನ್ನು ಅರಿತು ಅವರ ಜೀವನ ಸುಲಭವಾಗಿಸುವ ಎಸ್ಯುವಿಗಳನ್ನು ಮಾರುಕಟ್ಟೆಗಳನ್ನು ಪರಿಚಯಿಸಲಾಗುತ್ತಿದೆ. ಹೊಸ ಕ್ರೇಟಾ ನೈಟ್ (CRETA Knight) ಆವೃತ್ತಿಯ ಬಿಡುಗಡೆಯೊಂದಿಗೆ, ನಾವು ಮತ್ತೊಮ್ಮೆ ಗ್ರಾಹಕರಿಗೆ SUV ಯ ಅತ್ಯಾಕರ್ಷಕ ಆಯ್ಕೆಯನ್ನು ನೀಡುತ್ತಿದ್ದೇವೆ” ಎಂದರು.
 ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿಯು ಹೊಸ  ಎಸ್ ಪ್ಲಸ್ (S+) ಟ್ರಿಮ್ನಲ್ಲಿ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಮತ್ತು ಸಂಪೂರ್ಣ ಲೋಡ್ ಮಾಡಲಾದ SX (O) ಟ್ರಿಮ್ ಅನ್ನು IVT ಮತ್ತು AT ಆಯ್ಕೆಗಳಲ್ಲಿ (1.5-ಲೀಟರ್ MPi ಪೆಟ್ರೋಲ್ ಮತ್ತು 1.5-ಲೀಟರ್ U2 CRDi ಡೀಸೆಲ್ ಎಂಜಿನ್ ಎರಡೂ) ಗಳನ್ನು ನೀಡಲಾಗಿದೆ.
ಇದರ ಕೆಲವು ವಿನ್ಯಾಸದ ಮುಖ್ಯಾಂಶಗಳಲ್ಲಿ, ಕೆಂಪು ಬಣ್ಣದ ಸೇರ್ಪಡೆ, ಕಪ್ಪು ಮುಂಭಾಗದ ಗ್ರಿಲ್, ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಳೆಯುವ ಕಪ್ಪು ಸ್ಕಿಡ್ ಪ್ಲೇಟ್ಗಳು, ಸಿ-ಪಿಲ್ಲರ್ ಗಾರ್ನಿಶ್, ಸೈಡ್ ಸಿಲ್ ಗಾರ್ನಿಶ್, ರೂಫ್ ರೈಲ್ಸ್, ವಿಆರ್ವಿಎಂ(ORVM)ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ಕಪ್ಪು ಬಣ್ಣದ ಟೈಲ್ ಲ್ಯಾಂಪ್ಗಳಿವೆ.
ಜೊತೆಗೆ, ಸನ್ರೂಫ್, ಟ್ರಿಪಲ್-ಬೀಮ್ ಎಲ್ಇಡಿ ಹೆಡ್ಲ್ಯಾಂಪ್ಗಳು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಗಳು, ಬಣ್ಣದ ಎಸಿ ವೆಂಟ್ ಇನ್ಸರ್ಟ್ಗಳೊಂದಿಗೆ ಸಂಪೂರ್ಣ ಕಪ್ಪು ಇಂಟೀರಿಯರ್, ಸ್ಟೀರಿಂಗ್ ವೀಲ್ಗೆ ಬಣ್ಣದ ಸ್ಟಿಚ್ಚಿಂಗ್ ಹಾಗೂ ಪೈಪಿಂಗ್ ಜೊತೆಗೆ ಸ್ಪೋರ್ಟಿನೆಸ್ ಹೊಂದಿರುವ ಸೀಟುಗಳಿವೆ.
2022 ಫೇಸ್ಲಿಫ್ಟ್ನಲ್ಲಿ ಹುಂಡೈ ಟಿಪಿಎಂಎಸ್ (TPMS)  ಅನ್ನು ಪ್ರಮಾಣಿತ ಫಿಟ್ಮೆಂಟ್ ಆಗಿ ಪರಿಚಯಿಸಿದೆ. ಎಸ್ಎಕ್ಸ್ (ಒ)-SX (O) ಟ್ರಿಮ್ಗಳಲ್ಲಿ ಹೊಳೆಯುವ ಕಪ್ಪು ಸೆಂಟರ್ ಕನ್ಸೋಲ್, ಹೊಸ ಡೆನಿಮ್ ನೀಲಿ ಬಣ್ಣಗಳನ್ನು ಸೇರಿಸಲಾಗಿದೆ. 1.5-ಲೀಟರ್ ಪೆಟ್ರೋಲ್ ಎಸ್ ಟ್ರಿಮ್ನಲ್ಲಿ iMT (ಇಂಟೆಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್), ಹೊಸ ಎಸ್ಪ್ಲಸ್ನಲ್ಲಿ 7DCT ಜೊತೆಗೆ 1.4-ಲೀಟರ್ T-GDi ಪೆಟ್ರೋಲ್ ಎಂಜಿನ್ಗಳನ್ನು ಅಳವಡಿಸಲಾಗಿದೆ.
16-ಇಂಚಿನ ಕಪ್ಪು ಮಿಶ್ರಲೋಹದ ಚಕ್ರಗಳು, ವೈರ್ಲೆಸ್ ಚಾರ್ಜರ್, ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ಗಳು, ESC, VSM, HAC, ಪ್ಯಾಡಲ್ ಶಿಫ್ಟರ್ಗಳು, ಪನೋರಮಿಕ್ ಸನ್ರೂಫ್, ಮೆಟಾಲಿಕ್ ಪೆಡಲ್ಗಳು, ಚಾಲಿತ ORVM ಗಳು, ಪವರ್ ವಿಂಡೋ ಇತ್ಯಾದಿಗಳನ್ನು ಒಳಗೊಂಡಂತೆ S ಟ್ರಿಮ್ನ ಮೇಲೆ ಅನೇಕ ಹೆಚ್ಚುವರಿ ವೈಶಿಷ್ಟ್ಯಗಳನ್ನು ಒಳಗೊಂಡ ವೇರಿಯಂಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ನೈಟ್ ಆವೃತ್ತಿಯ ಎಸ್ಯುವಿಯ ಡಾರ್ಕ್ ತೀಮ್ ಅದನ್ನು ಸಾಮಾನ್ಯ ಮಾದರಿಗಳಿಗಿಂತ ಭಿನ್ನವಾಗಿಸುತ್ತದೆ. ಹುಂಡೈ ಕ್ರೇಟಾ ನೈಟ್ ಆವೃತ್ತಿಯ ವೇರಿಯಂಟ್ಗಳ ಬೆಲೆಗಳು- (ಎಕ್ಸ್ ಶೋ ರೂಂ) 1.5L MPi ಪೆಟ್ರೋಲ್ 6MT S+ -  13,51,200 ರೂ.
 1.5L MPi ಪೆಟ್ರೋಲ್ IVT SX (O)-  17,22,000 ರೂ.
 1.5L U2 CRDi ಡೀಸೆಲ್ 6MT -14,47,200 ರೂ.
1.5L U2 CRDi ಡೀಸೆಲ್ 6AT - 18,18,000  ರೂ.

Follow Us:
Download App:
  • android
  • ios