ಹ್ಯುಂಡೈ ಐಯೋನಿಕ್ 6 ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲೇ ಸೋಲ್ಡ್ ಔಟ್
ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ (Hyundai) 6 ತಿಂಗಳ ಹಿಂದೆ ಅನಾವರಣಗೊಳಿಸಿದ್ದು, ಎಲೆಕ್ಟ್ರಿಕ್ ಕಾರ್ ಹ್ಯುಂಡೈ ಐಯೋನಿಕ್ 6 (Ioniq 6), ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸಂಪೂರ್ಣ ಸೋಲ್ಡ್ ಔಟ್ ಆಗಿದೆ ಎಂದು ಕಂಪನಿ ತಿಳಿಸಿದೆ.
ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ (Hyundai) 6 ತಿಂಗಳ ಹಿಂದೆ ಅನಾವರಣಗೊಳಿಸಿದ್ದು, ಎಲೆಕ್ಟ್ರಿಕ್ ಕಾರ್ ಹ್ಯುಂಡೈ ಐಯೋನಿಕ್ 6 (Ioniq 6), ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸಂಪೂರ್ಣ ಸೋಲ್ಡ್ ಔಟ್ ಆಗಿದೆ ಎಂದು ಕಂಪನಿ ತಿಳಿಸಿದೆ.
ಹ್ಯುಂಡೈ ತನ್ನ ಐಯೋನಿಕ್ (Ioniz) 6ರ ನವೆಂಬರ್ 9 ರಂದು ಜರ್ಮನಿ, ಯುಕೆ, ಫ್ರಾನ್ಸ್, ನಾರ್ವೆ ಮತ್ತು ನೆದರ್ಲ್ಯಾಂಡ್ಸ್ನಂತಹ ಮಾರುಕಟ್ಟೆಗಳಲ್ಲಿ ಪೂರ್ವ ಮಾರಾಟ ಪ್ರಾರಂಭಿಸಿತ್ತು. ಮೊದಲ ಆವೃತ್ತಿಯಲ್ಲಿ ಕಂಪನಿ ಕೇವಲ 2500 ವಾಹನಗಳನ್ನು ಬಿಡುಗಡೆಗೊಳಿಸಿತ್ತು. ಈ ಎಲ್ಲಾ ವಾಹನಗಳು ಒಂದೇ ದಿನದಲ್ಲಿ ಮಾರಾಟವಾಗಿದೆ.ಮೊದಲ ಆವೃತ್ತಿಯ ವಿಶೇಷವೆಂದರೆ, ಇದು 20 ಇಂಚಿನ ಚಕ್ರಗಳು, ಮುಂದಿನ ಬಂಪರ್ ಹಾಗೂ ಹಿಂದಿನ ಬೂಟ್ ಡೋರ್‌ನ ಕೆಳಗೆ ಕಪ್ಪು ಅಲ್ಯುಮಿನಿಯಂನ ಎಚ್ (H) ಎಂಬ್ಲಮ್ ಕಾಣಸಿಗುತ್ತದೆ.
ಹ್ಯುಂಡೈ ಐಯೊನಿಕ್-6 ಅನ್ನು ಇ-ಜಿಎಂಪಿ (E-GMP) ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಇದು ಹೊರಭಾಗದಲ್ಲಿ ಚೂಪಾದ ರೇಖೆಗಳನ್ನು ಹೊಂದಿವೆ. ಇಂಟೀರಿಯರ್‌ನಲ್ಲಿ ಬೂದು ಬಣ್ಣದ ಒಳಾಂಗಣಗಳು, 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಡ್ಯುಯಲ್-ಸ್ಕ್ರೀನ್ ಸೆಟಪ್ ನೀಡಲಿದೆ. ಇದರ ವೈಶಿಷ್ಟ್ಯಗಳಲ್ಲಿ, ಇದು 12.0-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಆಂಡ್ರಾಯ್ಡ್ ಆಟೋ (Android auto) ಮತ್ತು ಆಪಲ್ ಕಾರ್ ಪ್ಲೇ (Apple Car play) ಸೌಲಭ್ಯಗಳನ್ನು ಹೊಂದಿದೆ. ಜೊತೆಗೆ, ಇದು 12.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಒಳಗೊಂಡಿದೆ. ಏರ್ಬ್ಯಾಗ್ಗಳು, ಪಾರ್ಕಿಂಗ್ ಕ್ಯಾಮೆರಾ ಮತ್ತು ಸ್ಥಿರತೆ ನಿಯಂತ್ರಣದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಒಂದೇ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ಗೋವಾ ಪ್ರಯಾಣ, ಬರುತ್ತಿದೆ ಹ್ಯುಂಡೈ Ioniq 6 ಇವಿ ಕಾರು!
ಈ ಎಲೆಕ್ಟ್ರಿಕ್ ಕಾರನ್ನು 53.0 ಕೆಡಬ್ಲ್ಯುಎಚ್ (kWh) ಮತ್ತು 77.4 ಕೆಡಬ್ಲ್ಯುಎಚ್ (kWh) ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಲ್ಲಿ ಇದು 610 ಕಿ.ಮೀ ಚಲಿಸಬಲ್ಲದು ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಸಿಂಗಲ್ ಮೋಟಾರ್ ಮತ್ತು ಡ್ಯುಯಲ್ ಮೋಟಾರ್ ಆಯ್ಕೆಗಳನ್ನೂ ನೀಡಲಾಗಿದೆ. ಟಾಪ್ ಮಾಡೆಲ್ 5.1 ಸೆಕೆಂಡ್ಗಳಲ್ಲಿ 0-100 ಕಿಮಿ (kmph) ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ, ವಾಹನವನ್ನು ಕೇವಲ 18 ನಿಮಿಷಗಳಲ್ಲಿ ಶೇ.10-80 ರಷ್ಟು ಚಾರ್ಜ್ ಮಾಡಬಹುದು.
5-ಸ್ಟಾರ್ ಸುರಕ್ಷತಾ ರೇಟಿಂಗ್:
ಹ್ಯುಂಡೈ ಐಯೋನಿಕ್ (IONIQ) 6, ಯುರೋ ಎನ್‌ಕ್ಯಾಪ್ (NCAP) ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಯುರೋ ಎನ್‌ಸಿಎಪಿಯ ಸುರಕ್ಷತಾ ಪರೀಕ್ಷೆಗೆ ಒಳಪಡುವ ವಾಹನಗಳನ್ನು ನಾಲ್ಕು ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. 'ವಯಸ್ಕರ ಸುರಕ್ಷತೆ', 'ಮಕ್ಕಳ ಸುರಕ್ಷತೆ', 'ದುರ್ಬಲ ರಸ್ತೆಗಳಲ್ಲಿನ ಕಾರ್ಯಕ್ಷಮತೆ' ಮತ್ತು 'ಸುರಕ್ಷತಾ ನೆರವು'. ಇದರಲ್ಲಿ ಹ್ಯುಂಡೈ ಐಯೋನಿಕ್ ( IONIQ) 6 'ವಯಸ್ಕ ಸುರಕ್ಷತೆ', 'ಮಕ್ಕಳ ಸುರಕ್ಷತೆ’ ಮತ್ತು 'ಸುರಕ್ಷತಾ ನೆರವು' ವಿಭಾಗಗಳಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ.
ಹುಂಡೈ ಮೋಟಾರ್ ಯುರೋಪ್‌ನ ಮಾರ್ಕೆಟಿಂಗ್ ಉಪಾಧ್ಯಕ್ಷ ಮಾರ್ಕೆಟಿಂಗ್ ಆಂಡ್ರಿಯಾಸ್ ಕ್ರಿಸ್ಟೋಫ್ ಹಾಫ್‌ಮನ್, "ಹ್ಯುಂಡೈ ನಮ್ಮ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ಮತ್ತು ತಂತ್ರಜ್ಞಾನ-ಚಾಲಿತ ಚಲನಶೀಲತೆ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. ಈ ಸುರಕ್ಷತಾ ರೇಟಿಂಗ್ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ.
Tata vs Hyundai ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ Ai3 ಮೈಕ್ರೋ SUV ಕಾರು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿ!
ತನ್ನ ಹೊಸ ಐಯೋನಿಕ್ 6 ಸೆಡಾನ್‌ನೊಂದಿಗೆ ಹ್ಯುಂಡೈ, ಅಮೆರಿಕದ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಮಾಡಲ್ 3 (Tesla ಮಾಡೆಲ್ 3) ಗೆ ಸ್ಪರ್ಧೆ ನೀಡುವ ಗುರಿ ಹೊಂದಿದೆ.