ಒಂದೇ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ಗೋವಾ ಪ್ರಯಾಣ, ಬರುತ್ತಿದೆ ಹ್ಯುಂಡೈ Ioniq 6 ಇವಿ ಕಾರು!
ಹ್ಯುಂಡೈ ಈಗಾಗಲೇ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಹಲವು ಸುತ್ತಿನ ಪರೀಕ್ಷೆ ಬಳಿಕ ಇದೀಗ ಹೊಚ್ಚ ಹೊಸ ಹ್ಯುಂಡೈ Ioniq 6 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 614 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಅ.05): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಇದೀಗ ಬರೋಬ್ಬರಿ 614 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಹ್ಯುಂಡೈ Ioniq 6 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರಿನ ವಿಶೇಷತೆ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 614 ಕಿಲೋಮೀಟರ್ ಮೈಲೇಜ್ ನೀಡಲಿದೆ. ಅಂದರೆ ಬೆಂಗಳೂರಿನಿಂದ 563 ಕಿಲೋಮೀಟರ್ ದೂರದಲ್ಲಿರುವ ಗೋವಾ ಪ್ರಯಾಣ ಒಂದೇ ಚಾರ್ಜ್‌ನಲ್ಲಿ ಆಗಲಿದೆ. ಇಷ್ಟೇ ಅಲ್ಲ ಫುಲ್ ಚಾರ್ಜ್ ಮಾಡಲು ಹೆಚ್ಚು ಕಡಿಮೆ 500 ರೂಪಾಯಿ ಸಾಕು. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಫುಲ್ಲಿ ಲೋಡೆಡ್ ಫೀಚರ್ಸ್ Ioniq 6 ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.
ಹ್ಯುಂಡೈ Ioniq 6 ಎಲೆಕ್ಟ್ರಿಕ್ ಕಾರು(Electric car) ಎರಡು ಬ್ಯಾಟರಿ ಪ್ಯಾಕ್‌ನಲ್ಲಿ ಲಭ್ಯವಿದೆ. 53.0 kWh ಬ್ಯಾಟರಿ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ 77.4 kWh ಬ್ಯಾಟರಿ ಪ್ಯಾಕ್ ವೇರಿಯೆಂಟ್‌ನಲ್ಲಿ ಕಾರು ಬಿಡುಗಡೆಯಾಗಲಿದೆ. Ioniq 6 ಎಲೆಕ್ಟ್ರಿಕ್ ಕಾರು ಕಾರು AWD ಆಯ್ಕೆಯೂ ಲಭ್ಯವಿದೆ.
ಮೇಡ್ ಇನ್ ಇಂಡಿಯಾ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆ, 857 ಕಿ.ಮೀ ಮೈಲೇಜ್!
ಕೇವಲ ಮೈಲೇಜ್ ಮಾತ್ರವಲ್ಲ ಪವರ್‌ನಲ್ಲೂ ಈ ಕಾರು(Hyundai ioniq 6) ಅತ್ಯುತ್ತಮ ಎನಿಸಿಕೊಳ್ಳಲಿದೆ. 325ps ಗರಿಷ್ಠ ಪವರ್ ಹಾಗೂ 605 nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಕಾರ 100 ಕಿ.ಮೀ ವೇಗವನ್ನು ಕೇವಲ 5.1 ಸೆಕೆಂಡ್‌ನಲ್ಲಿ ಪಡೆಯಲಿದೆ. ಮತ್ತೊಂದು ವಿಶೇಷತೆ ಅಂದರೆ ಶೇಕಡಾ 10 ರಿಂದ 80 ರಷ್ಟು ಚಾರ್ಜಿಂಗ್ ಕೇವಲ 18 ನಿಮಿಷದಲ್ಲಿ ಆಗಲಿದೆ.
ಈ ಹೊಚ್ಚ ಹೊಸ Ioniq 6 ಎಲೆಕ್ಟ್ರಿಕ್ ಕಾರು 2023ರ ಆರಂಭದಲ್ಲಿ ಯೂರೋಪ್ ಸೇರಿದಂತೆ ಗ್ಲೋಬಲ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಅಷ್ಟೇ ವೇಗದಲ್ಲಿ ಭಾರತದಲ್ಲೂ ನೂತನ ಕಾರು ಬಿಡುಗಡೆಯಾಗಲಿದೆ.
ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!
ಹ್ಯುಂಡೈಯಿಂದ ನಡೆದಾಡುವ ಕಾರು!
ರಸ್ತೆಯ ಮೇಲೆ ಸಂಚರಿಸುವ ಕಾರಿನ ಬಳಿಕ ಆಗಸದಲ್ಲಿ ಹಾರುವ ಕಾರುಗಳು ಸಿದ್ಧವಾಗಿದ್ದವು. ಆದರೆ ಇದೀಗ ಹ್ಯುಂಡೈ ಕಂಪನಿ ನಡೆದಾಡುವ ಕಾರುಗಳನ್ನು ಅಭಿವೃದ್ಧಿಪಡಿಸುವತ್ತ ಹೆಜ್ಜೆ ಇಟ್ಟಿದೆ. ಪಕ್ಕಾ ಹಾಲಿವುಡ್‌ನ ಸ್ಟಾರ್ವಾರ್ಸ್ ಹಾಲಿವುಡ್ ಚಿತ್ರಗಳಲ್ಲಿ ಕಂಡಬರುವ, ಎಲ್ಲ ಭೂಪ್ರದೇಶಗಳಲ್ಲೂ ಸಂಚರಿಸಬಲ್ಲ ‘ನಡೆದಾಡುವ ಕಾರು’ ನಿರ್ಮಿಸಲು ಕಂಪನಿ ಮುಂದಾಗಿದೆ. ಭವಿಷ್ಯದ ಕಾರನ್ನು ಸಿದ್ಧಪಡಿಸಲು ಅಮೆರಿಕದ ಮೊಂಟನಾದಲ್ಲಿ ನ್ಯೂ ಹಾರಿಜಾನ್ ಸ್ಟುಡಿಯೋವನ್ನು ಕಂಪನಿ ನಿರ್ಮಿಸಿದೆ. ಈ ಹೊಸ ಯೋಜನೆಯನ್ನು ‘ಎಲೆವೇಟ್’ ಎಂದು ಹೆಸರಿಸಿದ್ದು, ಭರ್ಜರಿ 150 ಕೋಟಿ ರು. ಹೂಡಿಕೆ ಮಾಡಿದೆ.
ಹೊಸ ಕಾರಿನ ಮಾದರಿಯ ಫೋಟೋಗಳನ್ನು ಕಂಪನಿ ಅನಾವರಣ ಮಾಡಿದ್ದು, ಕಾರುಗಳಿಗೆ ರೋಬೊಟಿಕ್ ಕಾಲುಗಳನ್ನು ಜೋಡಿಸಲಾಗಿದ್ದು, ಇದನ್ನು ಬಳಸಿ ಗುಡ್ಡಗಾಡು ಪ್ರದೇಶ, ರಸ್ತೆಗಳಿಲ್ಲದ ಕಠಿಣ ಮಾರ್ಗಗಳನ್ನು ಸುಲಭವಾಗಿ ಸಂಚರಿಸಬಹುದಾಗಿದೆ. ನೈಸರ್ಗಿಕ ವಿಕೋಪ, ಅಥವಾ ಮಾನವ ನಿರ್ಮಿತ ಅಪಘಾತಗಳಲ್ಲಿ ಜನರನ್ನು ಸುಲಭವಾಗಿ ಸಾಗಿಸಲು ಈ ನಡೆದಾಡುವ ಕಾರು ಸಹಕಾರಿಯಾಗಲಿದೆ. ಅಲ್ಲದೇ ಮೆಟ್ಟಿಲುಗಳನ್ನು ಹತ್ತಿ ಅಂಗವಿಕಲ ಪ್ರಯಾಣಿಕರನ್ನು ಸಾಗಿಸುವ ಪ್ರಾತ್ಯಕ್ಷಿಕೆಯನ್ನು ಹ್ಯುಂಡೈ ತೋರಿಸಿದೆ.