ವರ್ಷಾಂತ್ಯದ ಆಫರ್, ಹೋಂಡಾ ಆಯ್ದ ಕಾರುಗಳ ಮೇಲೆ 1.26 ಲಕ್ಷ ರೂ ಡಿಸ್ಕೌಂಟ್!
2024ನೇ ಸಾಲಿನ ಕೊನೆಯ ತಿಂಗಳಲ್ಲಿ ಕ್ಲಿಯರೆನ್ಸ್ ಸೇಲ್ ಸಾಮಾನ್ಯ. ಇದೀಗ ಹೋಂಡಾ ಕಾರ್ ಭರ್ಜರಿ ಆಫರ್ ನೀಡಿದೆ. ಆಯ್ದ ಹೋಂಡಾ ಕಾರುಗಳ ಮೇಲೆ 1.26 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಇದರಿಂದ ಹೋಂಡಾ ಕಾರುಗಳ ಬೆಲೆ ಮತ್ತಷ್ಟು ಅಗ್ಗವಾಗಿದೆ.
ನವದೆಹಲಿ(ಡಿ.10) ಹೊಸ ವರ್ಷ ಬರಮಾಡಿಕೊಳ್ಳುವ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಹಲವು ಕಂಪನಿಗಳು ವರ್ಷಾಂತ್ಯದ ಆಫರ್ ನೀಡುತ್ತಿದೆ. ಇದೀಗ ಹೋಂಡಾ ಕಾರು ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಬರೋಬ್ಬರಿ 1.26 ಲಕ್ಷ ರೂಪಾಯಿ ಆಫರ್ ನೀಡುತ್ತಿದೆ. ಈ ಮೂಲಕ ವರ್ಷಾಂತ್ಯದಲ್ಲಿ ಹೋಂಡಾ ಕಾರುಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸಲು ಸಾಧ್ಯವಿದೆ. ಪ್ರಮುಖವಾಗಿ ಹೋಂಡಾ ಅಮೇಜ್ , ಹೋಂಡಾ ಸಿಟಿ ಸೇರಿದಂತೆ ಹಲವು ಕಾರುಗಳ ಮೇಲೆ ಆಫರ್ ಘೋಷಿಸಿದೆ.
ಇತ್ತೀಚೆಗೆ ಹೋಂಡಾ ಅಮೇಜ್ ಹೊಸ ಮಾಡೆಲ್ ಬಿಡುಗಡೆಯಾಗಿದೆ.ಮಾರುತಿ ಸುಜುಕಿ ಹೊಸ ಡಿಝೈರ್ ಕಾರಿಗೆ ಪ್ರತಿಸ್ಪರ್ಧಿಯಾಗಿ 3ನೇ ಜನರೇಶನ್ ಅಮೇಜ್ ಕಾರು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಅಮೇಜ್ ಕಾರಿಗೆ ಹೋಂಡಾ ಡಿಸ್ಕೌಂಟ್ ಘೋಷಿಸಿದೆ. ಅಮೇಜ್ ಕಾರಿಗೆ ಒಟ್ಟು 1.26 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದು ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ಕಾರ್ಪೋರೇಟ್ ಬೋನಸ್ ಒಳಗೊಂಡಿದೆ. ಹೊಸ ಹೋಂಡಾ ಅಮೇಜ್ ಕಾರು 7.20 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದೀಗ ಆಫರ್ ಬಳಿಕ ಅಮೇಜ್ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
ಹ್ಯುಂಡೈ ವರ್ಷಾಂತ್ಯದ ಡಿಸ್ಕೌಂಟ್ ಆಫರ್, ಜನಪ್ರಿಯ ಕಾರುಗಳ ಮೇಲೆ 75,000 ರೂ ಕಡಿತ!
ಹೋಂಡಾ ಸಿಟಿ ಕಾರಿನ ಮೇಲ 1.14 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಹ್ಯುಂಡೈ ವರ್ನಾ, ವೋಕ್ಸ್‌ವ್ಯಾಗನ್ ವರ್ಟಸ್, ಮಾರುತಿ ಸಿಯಾಜ್ ಸೇರಿದಂತೆ ಸೆಡಾನ್ ಪ್ರೀಮಿಯಂ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಸಿಟಿ ಕಾರಿನ ಆರಂಭಿಕ ಬೆಲೆ 11.82 ಲಕ್ಷ ರೂಪಾಯಿ ಇನ್ನು ಟಾಪ್ ಮಾಡೆಲ್ ಬೆಲೆ 16.35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಹೋಂಡಾ ಎಸ್‌ಯುವಿ ಕಾರುಗಳ ಪೈಕಿ ಎಲವೇಟ್ ಅತ್ಯಂತ ಜನಪ್ರಿಯ ಕಾರಾಗಿದೆ. ಮಾರಾಟದಲ್ಲಿ ಇತರ ಬ್ರ್ಯಾಂಡ್ ಕಾರುಗಳಿಗೆ ಹೋಲಿಸಿದರೆ ಎಲವೇಟ್ ನಿರೀಕ್ಷೀತ ಯಶಸ್ಸು ಕಾಣಲಿಲ್ಲ. ಇದೀಗ ಎಲವೇಟ್ ಕಾರಿಗೆ 96,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಕಳೆದೆರಡು ತಿಂಗಳು ಎಲವೇಟ್ ಕಾರಿಗೆ ಡಿಸ್ಕೌಂಟ್ ಆಫರ್ ನೀಡಿದೆ. ಮಾರಾಟ ಹೆಚ್ಚಿಸಲು ಹೋಂಡಾ ಪ್ರತಿ ತಿಂಗಳು ಡಿಸ್ಕೌಂಟ್ ನೀಡುತ್ತಿದೆ. ಇದೀಗ ವರ್ಷಾಂತ್ಯದ ಡಿಸ್ಕೌಂಟ್‌ನಲ್ಲಿ 96,000 ರೂಪಾಯಿ ನೀಡಲಾಗಿದೆ. ಹೋಂಡಾ ಎಲವೇಟ್ ಕಾರಿನ ಆರಂಭಿಕ ಬೆಲೆ 11.69 ಲಕ್ಷ ರೂಪಾಯಿ ಹಾಗೂ 16.43 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ವರ್ಷಾಂತ್ಯದಲ್ಲಿ ಆಯ್ದ ಕಾರುಗಳ ಮೇಲೆ ಹೋಂಡಾ ಬೆಲೆ ಕಡಿತ ಘೋಷಿಸಿದೆ. ಈ ಮೂಲಕ ಮಾರಾಟ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಕೆಲ ಆಟೋಮೊಬೈಲ್ ಕಂಪನಿಗಳು ಬೆಲೆ ಕಡಿತ ಘೋಷಿಸಿದೆ. ಪ್ರಮುಖ ಕಾರಣ ಹೊಸ ವರ್ಷದಿಂದ ಅಂದರೆ ಜನವರಿ 1, 2025ರಿಂದ ಬಹುತೇಕ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಘೋಷಣೆಯಾಗಿದೆ. ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರ ಸೇರಿದಂತೆ ಬಹುತೇಕ ಬ್ರ್ಯಾಂಡ್‌ಗಳು ಈಗಾಗಲೇ ಬೆಲೆ ಏರಿಕೆ ಘೋಷಿಸಿದೆ. ಶೇಕಡಾ 4 ರಷ್ಟು, ಶೇಕಡಾ 3 ರಷ್ಟು ಬೆಲೆ ಏರಿಕೆ ಮಾಡುತ್ತಿದೆ. ಇದರಿಂದ ಹೊಸ ವರ್ಷದಲ್ಲಿ ಪ್ರತಿ ಕಾರುಗಳ ಮೇಲೆ 20 ರಿಂದ 40 ರೂಪಾಯಿ ವರೆಗೆ ಬೆಲೆ ಹೆಚ್ಚಳವಾಗಲಿದೆ.
ಹೊಸ ವರ್ಷದ ಆಫರ್ ಮೂಲಕ ಕಾರು ಖರೀದಿ ಪ್ಲಾನ್ ಇದೆಯಾ? ಅಪ್‌ಡೇಟ್ ನೀಡಿದ ಮಹೀಂದ್ರ!
ಹೊಸ ವರ್ಷದಲ್ಲಿ ಬೆಲೆ ಹೆಚ್ಚಳ ಕಾರಣ ಮಾರಾಟದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ಇದೀಗ ವರ್ಷಾಂತ್ಯದ ಆಫರ್ ನೀಡುವ ಮೂಲಕ ಮಾರಾಟದಲ್ಲಿ ಗಣನೀಯ ಏರಿಕೆ ಸಾಧಿಸಲು ಮುಂದಾಗಿದೆ. ಇದರ ಜೊತೆಗೆ ಹೊಸ ವರ್ಷದಲ್ಲಿ ಹಲವು ಹೊಸ ಮಾಡೆಲ್ ಕಾರುಗಳು ಬಿಡುಗಡೆಯಾಗಲಿದೆ.
ವಿಶೇಷ ಸೂಚನೆ: ಕಾರುಗಳ ಆಫರ್, ಬೆಲೆ ಕಡಿತ ಡೀಲರ್‌ನಿಂದ ಡೀಲರ್‌ಗೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಮಾಹಿತಿ ಖಚಿತಪಡಿಸಿಕೊಳ್ಳಿ.