ಭಾರತೀಯ ಮಾರುಕಟ್ಟೆಗೆ ಮರಳಲಿರುವ ಫೋರ್ಡ್‌: ಇವಿ ಉತ್ಪಾದನೆಗೆ ಸಜ್ಜು

Electric Vehicle Updates: ಭಾರತೀಯ ಕಾರು ಮಾರುಕಟ್ಟೆಯನ್ನು ತೊರೆದ ಏಳು ತಿಂಗಳ ನಂತರ, ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮತ್ತು ರಫ್ತು ಮಾಡಲು ಫೋರ್ಡ್ ಮತ್ತೆ ಬರುತ್ತಿದೆ.

Ford to return to India: To produce and export EV

ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ವಹಿವಾಟು ಸಾಧಿಸದ ಹಿನ್ನೆಲೆಯಲ್ಲಿ ಭಾರತದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ್ದ ಫೋರ್ಡ್‌ ಕಂಪನಿ (Ford Company) ಈಗ ಮತ್ತೊಮ್ಮೆ ತನ್ನ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ಕಾರು ಮಾರುಕಟ್ಟೆಯನ್ನು ತೊರೆದ ಏಳು ತಿಂಗಳ ನಂತರ, ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮತ್ತು ರಫ್ತು ಮಾಡಲು ಫೋರ್ಡ್ ಮತ್ತೆ ಬರುತ್ತಿದೆ.
ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಅಸ್ತಿತ್ವವನ್ನು ಹೊಂದಿತ್ತು. ತನ್ನ ಸದೃಢ ವಾಹನಗಳ ನಿರ್ಮಾಣಕ್ಕಾಗಿ ಜನಪ್ರಿಯಗೊಂಡಿದ್ದ ವಾಹನ ತಯಾರಕ ಕಂಪನಿಹೆಚ್ಚುತ್ತಿರುವ ನಷ್ಟದಿಂದಾಗಿ ಭಾರತದಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ಘೋಷಿಸಿತ್ತು. ಈಗ, ಅಮೇರಿಕ ಮೂಲದ ವಾಹನ ತಯಾರಕ ಕಂಪನಿ ಪುನರಾಗಮನ ಮಾಡಲು ಸಿದ್ಧವಾಗಿದೆ.
ಎಲೆಕ್ಟ್ರಿಕ್‌ ವಾಹನ (ಇವಿ-EV) ಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಕಂಪನಿಯು ಈ ಎಲೆಕ್ಟ್ರಿಕ್ ವಾಹನಗಳನ್ನು ರಫ್ತು ಮಾಡಲು ಯೋಜನೆ ರೂಪಿಸುತ್ತಿರುವಂತಿದೆ. ಇದು ಮೂಲಭೂತವಾಗಿ ಸರ್ಕಾರದ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ (ಪಿಎಲ್ಐ-PLI) ಯೋಜನೆಯ ಲಾಭವನ್ನು ಪಡೆಯಲು ಮುಂದಾಗಿದೆ. ಆದರೆ, PLI ಪ್ರಯೋಜನಗಳನ್ನು ಪಡೆಯಲು, ಫೋರ್ಡ್ ದೇಶದಲ್ಲಿ ಹೊಸ ಹೂಡಿಕೆಗಳನ್ನು ಮಾಡಬೇಕಾಗುತ್ತದೆ.

ದೇಶದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸುವ ಮೊದಲು, ಫೋರ್ಡ್ ಸುಮಾರು 4,000 ಕಾರ್ಮಿಕರೊಂದಿಗೆ ಎರಡು ಉತ್ಪಾದನಾ ಘಟಕಗಳನ್ನು ನಡೆಸುತ್ತಿತ್ತು. ಆಗ ದೇಶೀಯ ಮಾರುಕಟ್ಟೆ ಮತ್ತು ರಫ್ತು ಎರಡಕ್ಕೂ ವಾಹನಗಳನ್ನು ತಯಾರಿಸಲಾಗುತಿತ್ತು. ಆದರೆ, ಕಳೆದೊಂದು ದಶಕದಲ್ಲಿ 2 ಶತಕೋಟಿ ಡಾಲರ್ಗಿಂತ ಹೆಚ್ಚಿನ ನಷ್ಟವನ್ನು ಎದುರಿಸಿತು. ಫೋರ್ಡ್ ಫಿಗೋ (Ford Figo), ಇಕೋಸ್ಪೋರ್ಟ್ (Ecosport) ಮತ್ತು ಎಂಡೀವರ್ಗಳ (Endeaver) ಯಶಸ್ಸಿನ ಹೊರತಾಗಿಯೂ, ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಹೊತ್ತಿಗೆ, ಫೋರ್ಡ್ನ ಮಾರುಕಟ್ಟೆ ಪಾಲು ಶೇ.1.5ಕ್ಕಿಂತ ಕಡಿಮೆಯಿತ್ತು. ಈಗ, ಕಂಪನಿಯು ತಮಿಳುನಾಡಿನಲ್ಲಿರುವ ತನ್ನ ಕಾರ್ಖಾನೆಯನ್ನು ಹೊಸ ಇವಿಗಳನ್ನು ತಯಾರಿಸುವ ಘಟಕವನ್ನಾಗಿ ಪರಿವರ್ತಿಸುವ ಸಾಧ್ಯತೆಯಿದೆ. ಇದು ಫೋರ್ಡ್ ಮತ್ತು ಭಾರತ ಎರಡಕ್ಕೂ ಗೆಲುವಿನ ಕ್ರಮವಾಗಿದೆ.

ಇದನ್ನೂ ಓದಿ: ಭಾರಿ ಬೇಡಿಕೆ ಹಿನ್ನೆಲೆ: ಇವಿ ಉತ್ಪಾದನೆ ಹೆಚ್ಚಿಸಲಿರುವ ಟಾಟಾ ಮೋಟಾರ್ಸ್

ಫೋರ್ಡ್ನ ಇಂಡಿಯಾ ನಿರ್ಗಮನದ ನಂತರ ಸರ್ಕಾರವು ಹೊಸ PLI ಯೋಜನೆಯನ್ನು ಘೋಷಿಸಿತು. ಇದು ಪ್ರಯಾಣಿಕರ EV ತಯಾರಕರಿಗೆ ಅವರ ವಾರ್ಷಿಕ ಮಾರಾಟದ ಮೌಲ್ಯದ ಆಧಾರದ ಮೇಲೆ ಶೇ.13 – 16ರವರೆಗೆ ಪ್ರೋತ್ಸಾಹಕಗಳನ್ನು ನೀಡುತ್ತದೆ. ಹೊಸ ಯೋಜನೆಯು BEV ಗಳು ಮತ್ತು FCEV ಗಳಿಗೆ ಮಾತ್ರ ಅನ್ವಯಿಸುತ್ತದೆ. ಫೋರ್ಡ್ ಈ ಅವಕಾಶವನ್ನು ಬಳಸಿಕೊಂಡು EV ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಏಕೆಂದರೆ, ಭಾರತದಲ್ಲಿ EV ಮಾರುಕಟ್ಟೆಯು ಇನ್ನೂ ಸಣ್ಣದಾಗಿಯೇ ಇದೆ. ಅಂದರೆ, ವಿಶ್ವದ ಒಟ್ಟು ಇವಿ ಮಾರುಕಟ್ಟೆಯ ಶೇ.1ರಷ್ಟು ಮಾತ್ರ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಪ್ರಕಾರ, ಕಳೆದ ತಿಂಗಳು ಎಲೆಕ್ಟ್ರಿಕ್ ಕಾರುಗಳು ಮತ್ತು SUV ಗಳ ಚಿಲ್ಲರೆ ಮಾರಾಟವು ಶೇ.324ರಷ್ಟು ಜಿಗಿದಿದೆ. ಭಾರತವು 2070 ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಇಳಿಮುಖವಾಗಿಸಲು ಮುಂದಾಗಿದೆ ಎಂದು ಘೋಷಿಸಿದಾಗಿನಿಂದ ಅನೇಕ ಕಂಪನಿಗಳು ವಿದ್ಯುತ್ ವಾಹನಗಳನ್ನು ಉತ್ಪಾದಿಸಲು ಸಬ್ಸಿಡಿಗಳು ಮತ್ತು ರಾಜ್ಯ ಬೆಂಬಲವನ್ನು ಪಡೆಯುತ್ತಿದೆ.

ಇದನ್ನೂ ಓದಿ: Electric Vehicle: ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಆರಂಭ

ಈ ನಡುವೆ, ಫೋರ್ಡ್ ಘಟಕವನ್ನು ಬಳಸಿಕೊಂಡು ಟಾಟಾ ಮೋಟಾರ್ಸ್ 2 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲು ಮುಂದಾಗಿತ್ತು. ಇತ್ತೀಚಿನ ಬೆಳವಣಿಗೆಯಲ್ಲಿ, ಟಾಟಾ ಮೋಟಾರ್ಸ್ ತನ್ನ ಹೊಸ-ಪೀಳಿಗೆಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಕೇಂದ್ರವನ್ನಾಗಿ ಮಾಡಲು ಈ ಹೊಸ ಉತ್ಪಾದನಾ ಘಟಕದಲ್ಲಿ ರೂ 2,000 ಕೋಟಿ ಹೂಡಿಕೆ ಮಾಡಲು ಬಯಸುತ್ತದೆ ಎಂದು ತಿಳಿದುಬಂದಿದೆ. 2026 ರ ವೇಳೆಗೆ ಈ ಹೊಸ ಘಟಕದಲ್ಲಿ ವರ್ಷಕ್ಕೆ 2 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಟಾಟಾ ಮೋಟಾರ್ಸ್ ಕಣ್ಣಿಟ್ಟಿದೆ.

Latest Videos
Follow Us:
Download App:
  • android
  • ios