ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಯುಗ ಶುರುವಾಗುತ್ತಿದೆಯಾ? ಇಂಥದೊಂದು ಪ್ರಶ್ನೆ ಮೂಡಲು ಕಾರಣವಿದೆ ಮತ್ತು ಈ ಹಿಂದಿನ ಮೂರು ವರ್ಷದ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ತೈಲ ಆಧರಿತ ವಾಹನಗಳ ಬಳಕೆ ನಿಧಾನವಾಗಿ ಕಡಿಮೆಯಾಗುತ್ತಿರುವುದು ಗೋಚರವಾಗುತ್ತಿದೆ.

2021 ಕವಾಸಕಿ ನಿಂಜಾ ಜೆಡ್ಎಕ್ಸ್ 10 ಆರ್ ಬಿಡುಗಡೆ, ಬೆಲೆ ಬಗ್ಗೆ ಒಂದಿಷ್ಟು

ಹಾಗಂತ ಭಾರೀ ಪ್ರಮಾಣದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರವಾಗಿದೆ ಎಂದರ್ಥವಲ್ಲ. ಆದರೆ, ಈಗ ದೊರೆತಿರುವ ಮುನ್ಸೂಚನೆಗಳು ಮಾತ್ರ ಶೀಘ್ರವೇ ಭಾರತದಲ್ಲಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳೇ ರಸ್ತೆಗಳಲ್ಲಿ ಇರಲಿವೆ. ಜೊತೆಗೆ ಕಳೆದ ಮೂರು  ವರ್ಷದ ಮಾಹಿತಿಯನ್ನು ಗಮನಿಸಿದರೆ ಖಂಡಿತವಾಗಿಯೂ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಇ ವಾಹನ ಪೋರ್ಟಲ್‌ನ ಡೇಟಾ ಪ್ರಕಾರ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯುಂಟಾಗುತ್ತಿದೆ. ಕಳೆದ ಮೂರ ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗತೊಡಗಿದೆ. 2017-18ರಲ್ಲಿ ಭಾರತದಲ್ಲಿ 69,012 ಎಲೆಕ್ಟ್ರಿಕ್ ವಾಹನಗಳಿದ್ದವು. 2018-19ರ ವರ್ಷದಲ್ಲಿ ಈ ಪ್ರಮಾಣ 143,358ಕ್ಕೆ ಏರಿಕೆಯಾಯಿತು. 2019-20 ಸಾಲಿನಲ್ಲಿ ಭಾರತದ ರಸ್ತೆಗಳಲ್ಲಿ 167,041 ಎಲೆಕ್ಟ್ರಿಕ್ ವಾಹನಗಳಿರುವುದನ್ನು ನಾವು ಕಾಣಬಹುದಾಗಿದೆ. ಅಂದರೆ ನಿಧನಾವಾಗಿ ಭಾರತೀಯ ವಾಹನೋದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಶುರವಾಗಿದೆ ಎಂಬುದು ತಿಳಿಯುತ್ತದೆ.

ಕೇಂದ್ರ ಸರ್ಕಾರವು ಈ ಸಂಬಂಧ ಲೋಕಸಭೆಯಲ್ಲಿ ಉತ್ತರವನ್ನು ನೀಡಿದೆ. ಇ-ವಾಹನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಉತ್ತರಿಸಿ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಬಳಿ ಇರುವ ಮಾಹಿತಿಯ ಪ್ರಕಾರ ಎಲೆಕ್ಟ್ರಿಕ್ ವಾಹನಗಳ  ಬೇಡಿಕೆಯಲ್ಲಿ ನಿರಂತರವಾಗಿ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ಮಹಿಂದ್ರಾ ವಾಹನಗಳ ಖರೀದಿ ಮೇಲೆ ಗರಿಷ್ಠ 3.06 ಲಕ್ಷ ರೂ. ಡಿಸ್ಕೌಂಟ್

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಸಾರಿಗೆಯನ್ನು ಜನಪ್ರಿಯಗೊಳಿಸುತ್ತಿರುವುದು ಮತ್ತು ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯು ಎಲೆಕ್ಟ್ರಿಕ್ ವಾಹನಗಳ ಬೇಡಿಕೆಗೆ ಕಾರಣವಾಗಿದೆ. ಈ ಇ-ವಾಹನ ಸಾರಿಗೆ ವ್ಯವಸ್ಥೆಯಿಂದಾಗಿ ಪರಿಸರ ರಕ್ಷಣೆಯೂ ಆಗುತ್ತದೆ. ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸುವ ಸಂಬಂಧ ಕೇಂದ್ರ ಸರ್ಕಾರ ಮಾತ್ರವಲ್ಲದೇ ಹಲವು ರಾಜ್ಯ ಸರ್ಕಾರಗಳು ಉತ್ತೇಜನ ಕ್ರಮಗಳನ್ನು ಕೈಗೊಂಡಿವೆ ಎಂದು ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವೆಹಿಕಲ್ಸ್ ಜಿಎಸ್‌ಟಿ ಸ್ಲ್ಯಾಬ್ ಅನ್ನು ಬದಲಿಸಿದೆ. ಮೊದಲು ಈ ವಾಹನಗಳ ಶೇ.12 ಸ್ಲ್ಯಾಬ್‌ನಲ್ಲಿದ್ದವು, ಈಗ ಅದನ್ನು ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಹಾಗೆಯೇ, ಚಾರ್ಜಿಂಗ್ ಸ್ಟೇಷನ್‌ನಂಥ ಮೂಲಸೌಕರ್ಯಗಳ ಸ್ಥಾಪನೆಗೂ ಜೆಎಸ್‌ಟಿ ರೇಟ್ ಅನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲಾಗಿದೆ. ದಿಲ್ಲಿ ಸರ್ಕಾರ ಸೇರಿದಂತೆ ಹಲವು ರಾಜ್ಯಗಳು ಇ-ವಾಹನ ನೀತಿಯನ್ನು ಅಳವಡಿಸಿಕೊಂಡಿವೆ ಮತ್ತು ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಪ್ರೋತ್ಸಾಹಧನ ನೀಡುತ್ತಿವೆ.

ಎಫ್ಎಎಂಇ ಇಂಡಿಯಾ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರವು ಸಾರ್ವಜನಿಕ ಮತ್ತು ಹಂಚಿಕೆಯ ಸಾರಿಗೆಯ ವ್ಯವಸ್ಥೆಯನ್ನು ಎಲೆಕ್ಟ್ರಿಕ್  ಸಾರಿಗೆ ವ್ಯವಸ್ಥೆಗೆ ಮಾರ್ಪಡಿಸಲು ಗಮನ ಹರಿಸಲಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳು, ಕಾರುಗಳು ಮತ್ತು ದ್ವಿಚಕ್ರವಾಹನಗಳ ಖರೀದಿಗೆ ಮೇಲೆ ಸಬ್ಸಿಡಿ ನೀಡಲಾಗುವುದು ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಇಲಾಖೆ ಸಚಿವ ಪ್ರಕಾಶ್ ಜಾವೇಡ್ಕರ್ ಹೇಳಿದ್ದರು.

ಕಳೆದ ಎರಡ್ಮೂರು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ 2022ರ ಮಾರ್ಚ್ ಹೊತ್ತಿದೆ 10 ಲಕ್ಷ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಗುರಿ ಇನ್ನೂ ಕನಸಾಗೇ ಉಳಿದಿದೆ. ಭಾರತದಲ್ಲಿ ಇನ್ನೂ ಬೇಕಾದಷ್ಟು ಮೂಲ ಸೌಕರ್ಯ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಹಾಗೆಯೇ ತೈಲ ಆಧರಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು ಭಾರೀ ತುಟ್ಟಿಯಾಗಿವೆ. ಹಾಗಾಗಿ, ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಮೂಲಸೌಕರ್ಯ ಸಾಧ್ಯವಾದರೆ ಮುಂಬರುವ ದಿನಗಳಲ್ಲಿ ಗುರಿಯನ್ನು ಮುಟ್ಟುವ ನಂಬಿಕೆ ಸರ್ಕಾರಕ್ಕೆ ಇದೆ.

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ 1 ಲಕ್ಷ ರೂಪಾಯಿ ಸಬ್ಸಿಡಿ!