ಭಾರತದ ಕಾರು ಕಂಪನಿಗಳ ನಿದ್ದೆಗೆಡಿಸಿದ ಈ ಬಾರಿಯ ದೀಪಾವಳಿ, ಅಟೋಮೊಬೈಲ್ ಕ್ಷೇತ್ರದಲ್ಲಿ ಸಿಡಿಲು!
ದೀಪಾವಳಿ ಹಬ್ಬಕ್ಕೆ ವಾಹನ ಖರೀದಿ ಸಾಮಾನ್ಯವಾಗಿ ದುಪ್ಪಟ್ಟು. ಎಲ್ಲರು ಶುಭ ಘಳಿಗೆಯಲ್ಲಿ ವಾಹನ ಖರೀದಿಸಲು ಬಯಸುತ್ತಾರೆ.ಆದರೆ ಈ ಬಾರಿಯ ದೀಪಾವಳಿ ಆಟೋಮೊಬೈಲ್ ಕಂಪನಿಗಳ ನಿದ್ದೆಗೆಡಿಸಿದೆ.
ನವದೆಹಲಿ(ಅ.31) ಭಾರತದಲ್ಲಿ ದೀಪಾವಳಿ ಅತ್ಯಂತ ಮಹತ್ವದ ಹಬ್ಬ. ಕತ್ತಲನ್ನು ಓಡಿಸುವ, ಮನೆ ಮನಗಳಲ್ಲಿ ಬೆಳಕು ಪಸರಿಸುವ ಈ ಹಬ್ಬಕ್ಕೆ ಹಿಂದೂ ಪದ್ದತಿ ಮಾತ್ರವಲ್ಲ ವೈಜ್ಞಾನಿಕವಾಗಿಯೂ ಅತ್ಯಂತ ಮಹತ್ವವಿದೆ. ಈ ಪವಿತ್ರ ಹಬ್ಬವನ್ನು ಕುಟುಂಬ ಸಮೇತ ಆಚರಿಸುತ್ತಾರೆ. ಇನ್ನು ಹೊಸ ಬಟ್ಟೆ ಧರಿಸುತ್ತಾರೆ. ವಿಶೇಷವಾಗಿ ಹೊಸ ವಾಹನ ಖರೀದಿಯೂ ಇದೇ ದೀಪಾವಳಿ ಹಬ್ಬದ ವೇಳೆ ಹೆಚ್ಚು. ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನ ಮಾರಾಟ ಬಲು ಜೋರು. ಈ ವೇಳೆ ದಾಖಲೆ ಪ್ರಮಾಣದಲ್ಲಿ, ಆಗಿರುವ ನಷ್ಟಗಳು ಒಂದೇ ತಿಂಗಳಲ್ಲಿ ಸರಿದೂಗಿಸುವ ನಿಟ್ಟಿನಲ್ಲಿ ವಾಹನ ಮಾರಾಟವಾಗುತ್ತದೆ. ಆದರೆ ಈ ಬಾರಿಯ ದೀಪಾವಳಿ ಭಾರತದ ಕಾರು ಕಂಪನಿಗಳನ್ನು ಕಂಗಾಲು ಮಾಡಿದೆ. ಕಾರಣ ನಿರೀಕ್ಷಿತ ಮಟ್ಟದಲ್ಲಿ ಈ ದೀಪಾವಳಿ ಹಬ್ಬಕ್ಕೆ ಕಾರು ಮಾರಾಟವಾಗಿಲ್ಲ. ಇದು ಸಣ್ಣ ಲೆಕ್ಕಾಚಾರವಲ್ಲ ಬರೋಬ್ಬರಿ 7.90 ಲಕ್ಷ ಕಾರುಗಳು ಮಾರಾಟವಾಗದೇ ಹಾಗೇ ಉಳಿದುಕೊಂಡಿದೆ.
ಫೆಡರೇಶನ್ ಆಫರ್ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್(FADA) ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿ ಆಘಾತಕಾರಿಯಾಗಿದೆ. 2024ರ ಮೇ ತಿಂಗಳಿನಿಂದ ಕಾರು ಮಾರಾಟದಲ್ಲಿ ಕುಸಿತ ಕಾಣಲು ಆರಂಭಿಸಿದೆ. ಈ ದೀಪಾವಳಿ ಹಬ್ಬಕ್ಕೆ ಮಾರಾಟದಲ್ಲಿ ದಾಖಳೆ ನಿರ್ಮಾಣವಾಗು ನಿರೀಕ್ಷೆ ಇತ್ತು. ಈ ಮೂಲಕ ಮೇ ತಿಂಗಳಿನಿಂದ ಆಗಿರುವ ನಿಧಾನ ಮಾರಾಟ ದೀಪಾವಳಿ ಹಬ್ಬಕ್ಕೆ ಸರಿದೂಗಬಹುದೆಂಬ ನಿರೀಕ್ಷೆ ಇತ್ತು. ಇದಕ್ಕಾಗಿ ಆಟೋಮೊಬೈಲ್ ಕಂಪನಿಗಳು ಹೆಚ್ಚಿನ ಕಾರು ಉತ್ಪಾದನೆ ಮಾಡಿತ್ತು. ಆದರೆ ಮಾರಾಟ ಆಗಲೇ ಇಲ್ಲ. ಇದೀಗ 7.90 ಲಕ್ಷ ಕಾರುಗಳು ಮಾರಾಟವಾಗಿಲ್ಲ ಎಂದು FADA ವರದಿ ಹೇಳುತ್ತಿದೆ. ಇಯರ್ ಓವರ್ ಇಯರ್ ಅಂಕಿ ಅಂಶ ಪ್ರಕಾರ ಕಾರು ಮಾರಾಟದಲ್ಲಿ ಶೇಕಡಾ 18.18 ರಷ್ಟು ಕುಸಿತ ಕಂಡಿದೆ.
ಭಾರತದಲ್ಲಿ ಆದ ಮಹತ್ವದ ಬದಲಾವಣೆಗೆ ಕಂಗಾಲಾದ ಮಾರುತಿ ಸುಜುಕಿ ಕಂಪನಿ!
10 ಲಕ್ಷ ರೂಪಾಯಿ ಒಳಗಿನ ಕಾರುಗಳ ಮಾರಾಟದಲ್ಲೂ ಭಾರಿ ಕುಸಿತ ಕಂಡಿದೆ. ಇದು ತೀವ್ರ ಹೊಡೆತ ನೀಡಿದೆ. ಇನ್ನು ಕೋವಿಡ್ ಬಳಿಕ ಕಾರು ಮಾರಾಟದಲ್ಲಿ ಭಾರಿ ಕುಸಿತ ಕಂಡಿತ್ತು. ಈ ವೇಳೆ 10 ರಿಂದ 25 ಲಕ್ಷ ರೂಪಾಯಿ ಕಾರುಗಳ ಮಾರಾಟ ಕೊಂಚ ಸಮಾಧಾನ ತಂದಿತ್ತು. ಆದರೆ ಈ ಬಾರಿಯ ಈ ಸೆಗ್ಮೆಂಟ್ ಕಾರುಗಳಿಗೂ ಬೇಡಿಕೆ ಇಲ್ಲ. ಈ ಕಾರು ಮಾರಾಟಕ್ಕೆ ಕುಸಿತಕ್ಕೆ ಕೆಲ ಕಾರಣಗಳು ಬಹಿರಂಗಗೊಂಡಿದೆ.
ಒಂದೆಡೆ ಉದ್ಯೋಗ, ಉದ್ಯಮದಲ್ಲಿನ ಆತಂಕ ಹೆಚ್ಚಾಗುತ್ತಿದೆ. ಜಾಗತಿಕ ಆರ್ಥಿಕ ಹಿಂಜರಿತ, ಮಧ್ಯ ಪ್ರಾಚ್ಯ ಸೇರಿದಂತೆ ಕೆಲ ದೇಶಗಳ ಯುದ್ಧದಿಂದ ಆಗುತ್ತಿರುವ ಪರಿಣಾಮಗಳಿಂದ ಉದ್ಯೋಗಲ್ಲಿ ತಲ್ಲಣಗಾಳುಗುತ್ತಿದೆ. ಹಲವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಅಥವಾ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ತಂತ್ರಜ್ಞಾನದ ಅಭಿವೃದ್ಧಿಯಿಂದ ಉದ್ಯೋಗದ ವ್ಯಾಪ್ತಿ ಸೀಮಿತವಾಗುತ್ತಿದೆ. ಉದ್ಯಮ ಕ್ಷೇತ್ರದಲ್ಲಿನ ಸವಾಲುಗಳು ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ.
ಇದರ ಜೊತೆಗೆ ಪ್ರಮುಖವಾಗಿ ಹವಾಮಾನದಲ್ಲಿ ಆಗಿರುವ ಬದಲಾವಣೆ ಕೂಡ ಕಾರಣವಾಗಿದೆ. ವಿಪರೀತ ಮಳೆ, ಭೂ ಕುಸಿತ, ಪ್ರವಾಹ, ಬೇಸಿಗೆ ಕಾಲದಲ್ಲಿ ತಡೆಯಲಾಗದ ಉರಿ ಬಿಸಿಲು ಸೇರಿದಂತೆ ಅಸಹಜ ವಾತಾವರಣಗಳಿಂದ ಕಾರು ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇನ್ನು ಹೊಸ ಹೊಸ ಕಾರುಗಳು ಬಿಡುಗಡಯಾದಾಗ, ಹಳೇ ಮಾಡೆಲ್, ಹಿಂದಿನ ವರ್ಷ ಬಿಡುಗಡೆಯಾದ ಕಾರುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಅನ್ನೋ ವರದಿಗಳಿವೆ.
ಕನ್ನಡಿಗನ ಬಳಿ ಇದೆ 10.5 ಕೋಟಿ ರೂ ಫೆರಾರಿ ಪುರುಸಾಂಗ್ವೆ, ಈ ಕಾರು ಖರೀದಿಸಿದ ಮೊದಲ ಭಾರತೀಯ!