Asianet Suvarna News Asianet Suvarna News

ಸಿಟ್ರಾನ್‌ ಹೊಸ ಎಸ್‌ಯುವಿ ಸಿ3 ಏರ್‌ಕ್ರಾಸ್‌ ಬಿಡುಗಡೆ: ಸೆಪ್ಟೆಂಬರ್‌ನಿಂದ ಬುಕಿಂಗ್‌, ಅಕ್ಟೋಬರ್‌ಗೆ ಲಭ್ಯ

ಫ್ರಾನ್ಸ್‌ ಮೂಲದ ಕಾರು ತಯಾರಿಕಾ ಕಂಪನಿ ಸಿಟ್ರಾನ್‌ ಭಾರತದ ಮಾರುಕಟ್ಟೆಗೆ ಸಿ3 ಏರ್‌ಕ್ರಾಸ್‌ ಎಂಬ 5 ಮತ್ತು 7 ಸೀಟ್‌ ಮಾದರಿಯ ಎಸ್‌ಯುವಿಯನ್ನು ಪರಿಚಯಿಸಿದೆ. ಇದು ಭಾರತದಲ್ಲಿ ಕಂಪನಿಯಿಂದ ಬಿಡುಗಡೆಯಾಗುತ್ತಿರುವ 4ನೇ ಕಾರು.

Citroen launches new SUV C3 Aircross 7 seater car Booking starts from September availability on from October akb
Author
First Published Aug 8, 2023, 8:03 AM IST

ನಿಖಿಲ್‌ ಕುಮಾರ್‌ ಎಂ.ಎನ್‌.

ಚೆನ್ನೈ: ಫ್ರಾನ್ಸ್‌ ಮೂಲದ ಕಾರು ತಯಾರಿಕಾ ಕಂಪನಿ ಸಿಟ್ರಾನ್‌ ಭಾರತದ ಮಾರುಕಟ್ಟೆಗೆ ಸಿ3 ಏರ್‌ಕ್ರಾಸ್‌ ಎಂಬ 5 ಮತ್ತು 7 ಸೀಟ್‌ ಮಾದರಿಯ ಎಸ್‌ಯುವಿಯನ್ನು ಪರಿಚಯಿಸಿದೆ. ಇದು ಭಾರತದಲ್ಲಿ ಕಂಪನಿಯಿಂದ ಬಿಡುಗಡೆಯಾಗುತ್ತಿರುವ 4ನೇ ಕಾರು. ಈ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹ್ಯುಂಡಾಯ್‌ ಕ್ರೆಟಾ (Hyundai Creta), ಕಿಯಾ ಸೆಲ್ಟೋಸ್‌, ವೋಕ್ಸ್‌ವ್ಯಾಗನ್‌ ಟೈಗುನ್‌, ರೆನಾಲ್ಟ್‌ ಟ್ರೈಬರ್‌ಗಳಿಗೆ (Renault Triber)     ಪೈಪೋಟಿ ನೀಡಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು:

ಮುಂಭಾಗದಲ್ಲಿ ಪಿಯಾನೊ ಬ್ಲ್ಯಾಕ್‌ ಮತ್ತು ಕ್ರೋಮ್‌ ಫಿನಿಷಿಂಗ್‌ ಜೊತೆಗೆ ಅಗ್ರೆಸಿವ್‌ ಫ್ರಂಟ್‌ ಗ್ರಿಲ್‌, ಬೋಲ್ಡ್‌ ಆದ ಸಿಟ್ರಾನ್‌ ಲೋಗೋ, ಎಲ್‌ಇಡಿ ಡಿಆರ್‌ಎಲ್‌, ಹ್ಯಾಲೊಜೆನ್‌ ಹೆಡ್‌ಲ್ಯಾಂಪ್‌, ಫಾಗ್‌ ಲ್ಯಾಂಪ್‌, ಸಿಲ್ವರ್‌ ಬಣ್ಣದಲ್ಲಿ ಸ್ಕಿಡ್‌ ಪ್ಲೇಟ್‌ ಹೊಂದಿದೆ. 17 ಇಂಚಿನ ಡೈಮಂಡ್‌ ಕಟ್‌ ಅಲೋಯ್‌ ವೀಲ್‌ಗಳನ್ನು ಜೋಡಿಸಲಾಗಿದೆ. ಇದು ಉತ್ತಮ ರೋಡ್‌ ಗ್ರಿಪ್‌ ನೀಡುತ್ತದೆ. ಇನ್ನು ಕಾರಿನ ಹಿಂದೆ 3ಡಿ ಎಫೆಕ್ಟ್ ಟೇಲ್‌ ಲ್ಯಾಂಪ್‌, ರಿಯರ್‌ ಕ್ಯಾಮೆರಾ, 2 ಪಾರ್ಕಿಂಗ್‌ ಸೆನ್ಸರ್‌ ಇದೆ.

ಒಳಭಾಗದಲ್ಲಿ ಲೆದರ್‌ ಅಪೊಲ್‌ಸ್ಟ್ರಿ ಸೀಟ್‌ಗಳು, ಹೈಟ್‌ ಅಡ್ಜಸ್ಟೆಬಲ್‌ 4 ಹೆಡ್‌ರೆಸ್ಟ್‌ ಇದೆ. 2ನೇ ಸಾಲಿನ ಸೀಟ್‌ಗಳ ನಡುವೆ ಸಾಕಷ್ಟು ಸ್ಥಳವಿದೆ. ಇದರಿಂದ ಸಹ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ. 17 ಇಂಚಿನ ಡಿಜಿಟಲ್‌ ಟಿಎಫ್‌ಟಿ ಕ್ಲಸ್ಟರ್‌, 26 ಇಂಚಿನ ಎಚ್‌ಡಿ ಇನ್ಫೊಟೈನ್‌ಮೆಂಟ್‌ ಸಿಸ್ಟಂ (HD infotainment system), 6 ಸ್ಪೀಕರ್‌, ವಯರ್‌ಲೆಸ್‌ ಆ್ಯಂಡ್ರಾಯ್ಡ್‌ ಆಟೋ, ಆ್ಯಪಲ್‌ ಕಾರ್‌ ಪ್ಲೇ ಸೌಲಭ್ಯದ ಜತೆಗೆ ಒಟ್ಟು 4 ಯುಎಸ್‌ಬಿ ಪೋರ್ಟ್‌ಗಳಿವೆ. ಮೊಬೈಲ್‌ ಇಡಲು ಪ್ರತ್ಯೇಕ ಸ್ಥಳ, ಡ್ರೈವರ್‌ ಹಾಗೂ ಹಿಂಭಾಗದ ಸೀಟ್‌ನಲ್ಲಿ ಆಮ್‌ರ್‍ ರೆಸ್ಟ್‌ ಒದಗಿಸಲಾಗಿದೆ. ಮ್ಯಾನುವಲ್‌ ಎಸಿ ಕಂಟ್ರೋಲ್‌ ಇದೆ.

ಕೈಗೆಟುಕುವ ದರದಲ್ಲಿ ಟಾಟಾ ಪಂಚ್ ಸಿಎನ್‌ಜಿ ಕಾರು ಬಿಡುಗಡೆ, ಸನ್‌ರೂಫ್ ಸೇರಿ ಹಲವು ಫೀಚರ್ಸ್ ಲಭ್ಯ!

7 ಆಸನ ಮಾದರಿ ಕಾರಿನಲ್ಲಿ ಕೊನೆ ಭಾಗದ 2 ಸೀಟ್‌ನಲ್ಲಿ ಮಕ್ಕಳು ಕುಳಿತುಕೊಳ್ಳಲು ಅನುಕೂಲವಾಗಿದೆ. ದೊಡ್ಡವರಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಹಾಗೆಯೇ ಕೊನೆ ಎರಡು ಸೀಟ್‌ಗಳನ್ನು ತೆಗೆದಿಟ್ಟರೆ ಒಟ್ಟು 511 ಲೀಟರ್‌ನಷ್ಟುಬೂಟ್‌ ಸ್ಪೇಸ್‌ ದೊರೆಯುತ್ತದೆ. 5 ಸೀಟರ್‌ ಕಾರಿನಲ್ಲಿ 444 ಲೀಟರ್‌ ಬೂಟ್‌ ಸ್ಪೇಸ್‌ ಲಭ್ಯವಿದೆ.

ಎತ್ತರ 1699 ಎಂಎಂ, ಉದ್ದ 4323 ಎಂಎಂ, ವೀಲ್‌ ಬೇಸ್‌ 2371 ಎಂಎಂ ಹಾಗೂ 200 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿದೆ. ಮುಂದೆ ಎರಡು ಡಿಸ್‌್ಕ ಹಾಗೂ ಹಿಂದೆ ಡ್ರಮ್‌ ಬ್ರೇಕ್‌ ಹೊಂದಿದೆ. ಎರಡೂ ಮಾದರಿಯ ಕಾರಿನಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲ.

ಎಂಜಿನ್‌ ಮತ್ತು ಪರ್ಫಾಮೆನ್ಸ್‌:

1.2 ಲೀಟರ್‌ ಟರ್ಬೋ ಪೆಟ್ರೋಲ್‌ ಎಂಜಿನ್‌ ಜೊತೆಗೆ 6 ಸ್ಪೀಡ್‌ ಮ್ಯಾನುವಲ್‌ ಗೇರ್‌ಬಾಕ್ಸ್‌ನಿಂದ ಕೂಡಿದ್ದು, 110 ಹಾರ್ಸ್‌ ಪವರ್‌ ಉತ್ಪಾದನೆ ಮಾಡಲಿದೆ. ಈ ಎಂಜಿನ್‌ ಉತ್ತಮ ಡ್ರೈವಿಂಗ್‌ ಅನುಭೂತಿ ನೀಡಲಿದ್ದು, ಕೇವಲ 12 ಸೆಕೆಂಡ್‌ಗಳಲ್ಲಿ 0-100 ಕಿ.ಮೀ. ಸ್ಪೀಡ್‌ ಕ್ರಮಿಸಲಿದೆ. 18 ಕಿ.ಮೀ. ಮೈಲೇಜ್‌ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

Mercedes-Benz GLE SUV ಕಾರು ಖರೀದಿಸಿದ 2018ರ ಐಪಿಎಲ್‌ನ ದುಬಾರಿ ಕ್ರಿಕೆಟಿಗ..!

ಸುರಕ್ಷತೆ ಸೌಲಭ್ಯಗಳು:

ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್‌ ಆಗಿ 2 ಏರ್‌ ಬ್ಯಾಗ್‌ ಸೇರಿದಂತೆ ಹಿಲ್‌ ಹೋಲ್ಡ್‌ ಅಸಿಸ್ಟ್‌, ಎಬಿಎಸ್‌, ಇಎಸ್‌ಪಿ, ಟಿಪಿಎಮ್‌ಎಸ್‌, ಹೈ ಸ್ಪೀಡ್‌ ಅಲರ್ಚ್‌ ಫೀಚರ್‌ಗಳು ಸಿಗಲಿವೆ.

ಕಾರಿನ ಬಣ್ಣಗಳು:

ಪೋಲಾರ್‌ ವೈಟ್‌, ಸ್ಟೀಲ್‌ ಗ್ರೇ, ಪ್ಲಾಟಿನಂ ಗ್ರೇ, ಕಾಸ್ಮೋ ಬ್ಲೂ ಹಾಗೂ 6 ಡ್ಯುಯೆಲ್‌ ಟೋನ್‌ ಬಣ್ಣದ ಕಾಂಬಿನೇಷನ್‌ನಲ್ಲಿ ಲಭ್ಯವಿದೆ.

ಬುಕಿಂಗ್‌ ಮತ್ತು ಬಿಡುಗಡೆ:

ಸಿ3 ಏರ್‌ಕ್ರಾಸ್‌ ಮಾದರಿ ಎಸ್‌ಯುವಿಯನ್ನು ಕಂಪನಿಯು ಮುಂಬರುವ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದ್ದು, ಸೆಪ್ಟೆಂಬರ್‌ನಲ್ಲಿ ಬುಕಿಂಗ್‌ ಕಾರ್ಯ ಶುರುವಾಗಲಿದೆ. ಆದರೆ, ಬೆಲೆಯನ್ನು ಕಂಪನಿ ತಿಳಿಸಿಲ್ಲ.

ಈ ಮೊದಲು 2021ರಲ್ಲಿ ಸಿ5 ಏರ್‌ಕ್ರಾಸ್‌ ಕಾರನ್ನು ಸಿಟ್ರಾನ್‌ ಬಿಡುಗಡೆ ಮಾಡಿತ್ತು. ನಂತರ 2022ರಲ್ಲಿ ಸಿ-ಕ್ಯೂಬ್ಡ್ ಪ್ರೋಗ್ರಾಮ್‌ ಮಾದರಿಯಲ್ಲಿ ಸಿ3 ಕಾರು ಹಾಗೂ ಇದೆ ಕಾರನ್ನು 2023ರಲ್ಲಿ ಎಲೆಕ್ಟ್ರಿಕ್‌ ಆವೃತ್ತಿಯಲ್ಲೂ ಬಿಡುಗಡೆ ಮಾಡಿದೆ. ಚೆನ್ನೈನಲ್ಲಿ ಎರಡು ಫ್ಯಾಕ್ಟರಿಯನ್ನು ಹೊಂದಿದೆ. ತಿರುವಳ್ಳೂರ್‌ನಲ್ಲಿ ವಾಹನ ಜೋಡನೆ ಪ್ಲಾಂಟ್‌, ಹೊಸೂರಿನಲ್ಲಿ ಎಂಜಿನ್‌ ಮತ್ತು ಟ್ರಾನ್ಸ್‌ಮಿಷನ್‌ ಪ್ಲಾಂಟ್‌ ಜೊತೆಗೆ ರಿಸರ್ಚ್‌ ಅಂಡ್‌ ಡೆವೆಲಪ್‌ಮೆಂಟ್‌ ಸೆಂಟರ್‌ನ್ನು ಸ್ಥಾಪಿಸಿದೆ.

Follow Us:
Download App:
  • android
  • ios