Asianet Suvarna News Asianet Suvarna News

Mercedes-Benz GLE SUV ಕಾರು ಖರೀದಿಸಿದ 2018ರ ಐಪಿಎಲ್‌ನ ದುಬಾರಿ ಕ್ರಿಕೆಟಿಗ..!

ಐಶಾರಾಮಿ Mercedes-Benz GLE SUV ಕಾರು ಖರೀದಿಸಿದ ಜಯದೇವ್ ಉನಾದ್ಕತ್
ಜಯದೇವ್ ಉನಾದ್ಕತ್, ಟೀಂ ಇಂಡಿಯಾ ಅನುಭವಿ ವೇಗದ ಬೌಲರ್
Mercedes-Benz GLE SUV ಕಾರಿನ ವಿಶೇಷತೆ ಏನು ಗೊತ್ತಾ?

Most expensive cricketer of IPL 2018 Jaydev Unadkat buys luxurious Mercedes Benz GLE SUV priced over Rs 1 crore kvn
Author
First Published Aug 3, 2023, 4:14 PM IST

ಬೆಂಗಳೂರು(ಆ.03): ಇಂಡಿಯನ್ ಪ್ರೀಮಿಯರ್ ಲೀಗ್ ಜಗತ್ತಿನ ಶ್ರೀಮಂತ ಟಿ20 ಲೀಗ್ ಎನಿಸಿಕೊಂಡಿದೆ. ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಯಲ್ಲಿ ಪ್ರತಿ ವರ್ಷವೂ ಹೊಸ ಹೊಸ ತಾರೆಯರ ಉಗಮವಾಗುತ್ತಲೇ ಬಂದಿದ್ದಾರೆ. ಅದೇ ರೀತಿ 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಎಡಗೈ ವೇಗಿ ಜಯದೇವ್ ಉನಾದ್ಕತ್ ಬರೋಬ್ಬರಿ 11.50 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಂಡಾಗ ದೊಡ್ಡ ಸುದ್ದಿಯಾಗಿತ್ತು. ಯಾಕೆಂದರೆ ಉನಾದ್ಕತ್ 2018ರ ಐಪಿಎಲ್‌ನ ದುಬಾರಿ ಆಟಗಾರ ಎನಿಸಿಕೊಂಡಿದ್ದರು. 

ಇದಾದ ಬಳಿಕ ಜಯದೇವ್ ಉನಾದ್ಕತ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಉನಾದ್ಕತ್ ಆಫ್‌ ಫೀಲ್ಡ್‌ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು, ಜಯದೇವ್ ಉನಾದ್ಕತ್, ಇದೀಗ ಒಂದು ಕೋಟಿ ರುಪಾಯಿಗೂ ಹೆಚ್ಚಿನ ಬೆಲೆಯ ಮರ್ಸಿಡೀಸ್ ಬೆಂಜ್-GLE SUV ಕಾರನ್ನು ಖರೀದಿಸಿದ್ದಾರೆ. ಇದೀಗ ಈ ಐಶಾರಾಮಿ ಕಾರು ಖರೀದಿಸಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿಮ್ಮ ನೆಚ್ಚಿನ ಟೀಂ ಇಂಡಿಯಾ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ಧೋನಿ, ವಿರಾಟ್, ರೋಹಿತ್ ಎಜುಕೇಶನ್

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜಯದೇವ್ ಉನಾದ್ಕತ್, ತಮ್ಮ ಪತ್ನಿ ಹಾಗೂ ಕುಟುಂಬದವರು ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಬಂದಿಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಸೌರಾಷ್ಟ್ರ ಮೂಲದ ವೇಗಿ ಕಪ್ಪು ಬಣ್ಣದ ಮರ್ಸಿಡೀಸ್ ಬೆಂಜ್  GLE SUV ಕಾರು ಖರೀದಿಸಿದ್ದಾರೆ. ಬೆಂಜ್  GLE ಕಾರಿನ ಆರಂಭಿಕ ಬೆಲೆ 61.75  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಬೆಲೆ  77.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಈ ಮೊದಲು ಬಾಲಿವುಡ್ ನಟಿ ಕಂಗನಾ ರಣಾವತ್, ರಾಹುಲ್‌ ದ್ರಾವಿಡ್  ಮರ್ಸಿಡೀಸ್ ಬೆಂಜ್  GLE ಕಾರು ಖರೀದಿಸಿದ್ದರು.  ಇನ್ನು ಈ Mercedes-Benz GLE ಜರ್ಮನ್ ಮೂಲದ ಅತ್ಯಂತ ಪ್ರಖ್ಯಾತ SUVs ಆಗಿದ್ದು, ಭಾರತದ ಹಲವು ಸೆಲಿಬ್ರಿಟಿಗಳು ಈ ಕಾರನ್ನು ಖರೀದಿಸಿದ್ದಾರೆ. ಈ ಎಸ್‌ಯುವಿ 2.0 ಲೀಟರ್ 4 ಸಿಲಿಂಡರ್‌ ಹೊಂದಿದ್ದು, ಟರ್ಬೊಚಾರ್ಜಡ್‌ ಎಂಜಿನ್ ಹೊಂದಿದೆ. ಈ ಎಸ್‌ಯುವಿ 0 ಇಂದ 100 ಮೀಟರ್ ವೇಗ ತಲುಪಲು ಕೇವಲ 7.2 ಸೆಕೆಂಡ್‌ಗಳು ಸಾಕಗುತ್ತದೆ. ಈ ಕಾರಿನ ಗರಿಷ್ಠ ಸ್ಪೀಡ್‌ ಪ್ರತಿ ಗಂಟೆಗೆ 225 ಕಿಲೋ ಮೀಟರ್ ಆಗಿದೆ.

ಇದಷ್ಟೇ ಅಲ್ಲದೇ ಈ ಎಸ್‌ಯುವಿ ಪ್ಯಾನರೋಮಿಕ್‌ ಸನ್‌ರೂಫ್ ಹೊಂದಿದೆ. 7 ಏರ್‌ಬ್ಯಾಗ್ಸ್‌, 4 ಋತುವಿನ ಕ್ಲೈಮೇಟ್ ಕಂಟ್ರೋಲ್, 12.3 ಮೀಟರ್‌ ಟಚ್‌ ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಂ ಹಾಗೂ ಇಷ್ಟು ದೊಡ್ಡ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಈ ಐಶಾರಾಮಿ ಎಸ್‌ಯುವಿ ಹೊಂದಿದೆ.

Follow Us:
Download App:
  • android
  • ios