Asianet Suvarna News Asianet Suvarna News

ವಿಶ್ವದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು, ಬೆಲೆ 3 ಲಕ್ಷ ರೂಪಾಯಿ, 40 ಲಕ್ಷದ ಟೆಸ್ಲಾಗೆ ಪೈಪೋಟಿ!

ಎಲೆಕ್ಟ್ರಿಕ್ ವಾಹನಗಳಲ್ಲಿ ಅವಿಷ್ಕಾರಗಳು, ಸಂಶೋಧನೆಗಳು ನಡೆಯತ್ತಲೇ ಇದೆ. ಕೈಗೆಟುಕುವ ಬೆಲೆ, ಗರಿಷ್ಠ ಮೈಲೇಜ್ ನೀಡಲು ಎಲ್ಲಾ ಕಂಪನಿಗಳು ಶ್ರಮಿಸುತ್ತಿದೆ. ಆದರೆ ಸದ್ಯ ಎಲೆಕ್ಟ್ರಿಕ್ ವಾಹನಗಳ ಬೆಲೆ ಕೊಂಚ ದುಬಾರಿ ಇದರ ನಡುವೆ 3 ಲಕ್ಷ ರೂಪಾಯಿ ಆರಂಭಿಕ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರು ಭಾರಿ ಸಂಚಲನ ಮೂಡಿಸಿದೆ.

Chinese Hongguang MINI low budget electric car takes on Tesla ckm
Author
Bengaluru, First Published Feb 27, 2021, 3:55 PM IST

ಬೀಜಿಂಗ್(ಫೆ.27): ಅಮೆರಿಕ ಟೆಸ್ಲಾ ಕಾರುಗಳು ವಿಶ್ವದಲ್ಲೇ ಭಾರಿ ಜನಪ್ರಿಯ. ಇದೀಗ ಭಾರತದಲ್ಲೂ ಟೆಸ್ಲಾ ಕಾರು ಬಿಡುಗಡೆಗೆ ತಯಾರಿ ಆರಂಭಗೊಂಡಿದೆ. ಅಮೆರಿಕದ ಟೆಸ್ಲಾ ಕಾರಿಗೆ ಚೀನಾದಲ್ಲೂ ಭಾರಿ ಬೇಡಿಕೆ ಇದೆ. ಇದೀಗ ಟೆಸ್ಲಾ ಕಾರಿಗೆ ಚೀನಾದ ಹ್ಯಾಂಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು ಪೈಪೋಟಿ ನೀಡುತ್ತಿದೆ.

ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!

ಈ ಕಾರಿನ ಬೆಲೆ ಭಾರತೀಯ ರೂಪಾಯಿಗಳಲ್ಲಿ 3 ರಿಂದ 4 ಲಕ್ಷ ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 170 ಕಿ.ಮೀ ಮೈಲೇಜ್. ಸಣ್ಣ ಕಾರಾಗಿರುವ ಕಾರಣ ಚೀನಾ ಜನ ಇದೀಗ ಟೆಸ್ಲಾ ಬದಲು ಹ್ಯಾಂಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಗಿ ಬೀಳುತ್ತಿದ್ದಾರೆ. 2021ರ ಜನವರಿಯಲ್ಲಿ ಹ್ಯಾಂಗ್ವಾಂಗ್ ಮಿನಿ 36,000 ಕಾರುಗಳು ಚೀನಾದಲ್ಲಿ ಮಾರಾಟವಾಗಿದೆ.

ಕೇವಲ 4 ಲಕ್ಷ ರೂಪಾಯಿಗೆ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿಸಿದ ಯುಟ್ಯೂಬರ್!...

ಟೆಸ್ಲಾದ ಮಾಡೆಲ್ 3 ಕಾರಿಗಿಂತ 13,000 ಹೆಚ್ಚು ಕಾರುಗಳನ್ನು ಹ್ಯಾಂಗ್ವಾಂಗ್ ಮಾರಾಟ ಮಾಡಿದೆ. ಶಾಂಘೈ ಮೂಲದ ಈ ಕಾರು ಇದೀಗ ಚೀನಾದಲ್ಲಿ ಸಂಚಲನ ಮೂಡಿಸಿದೆ. ಚೀನಾದಲ್ಲಿ ಭಾರಿ ಜನಮನ್ನಣೆ ಗಳಿಸಿದ ಕಾರಣ ಇದೀಗ ಇತರ ದೇಶಗಳಿಗೆ ವಿಸ್ತರಿಸಲು ಚಿಂತನ ನಡೆಸುತ್ತಿದೆ.

Follow Us:
Download App:
  • android
  • ios