Asianet Suvarna News Asianet Suvarna News

ಹಿಟ್ & ರನ್ ಪ್ರಕರಣ ಸಂತ್ರಸ್ತರಿಗೆ 2 ಲಕ್ಷ ಪರಿಹಾರ ಮೊತ್ತ ಏರಿಕೆ ಪ್ರಸ್ತಾಪ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ್ತ ಪ್ರಸ್ತಾಪವನ್ನು ಸಿದ್ಧಪಡಿಸಿದ್ದು, ಅದರ ಪ್ರಕಾರ ಹಿಟ್ ಆಂಡ್ ರನ್‌ ಪ್ರಕರಣದ ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಮೊತ್ತ ಏರಿಕೆ ಮಾಡುವ ಸಾಧ್ಯತೆ ಇದೆ. ಕೇಂದ್ರವು ಈ ಮೊತ್ತವನ್ನು 2 ಲಕ್ಷ ರೂಪಾಯಿಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ.

Central Government is planning to increase compensation for hit and run cases
Author
Bengaluru, First Published Aug 7, 2021, 2:30 PM IST

ಹಿಟ್ ಆಂಡ್ ರನ್‌ ಅಪಘಾತ ಪ್ರಕರಣದ ಸಂತ್ರಸ್ತ ಕುಟುಂಬಸ್ಥರಿಗೆ ನೆರವು ಒದಗಿಸುವ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಂದಿದೆ. ಹಿಟ್ ಆಂಡ್ ರನ್ ಅಪಘಾತ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ನೆರವಿನ ಮೊತ್ತವನ್ನು ಹೆಚ್ಚಿಸುವ ಉದ್ದೇಶವನ್ನು ಹೊಸ ಪ್ರಸ್ತಾವಿತ ಯೋಜನೆಯು ಹೊಂದಿದೆ.

ಸುದ್ದಿ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಅನೇಕ ವೆಬ್‌ತಾಣಗಳು ಈ ಬಗ್ಗೆ ವರದಿ ಮಾಡಿದ್ದು, ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಿಟ್ ಆಂಡ್ ರನ್ ಅಪಘಾತ ಪ್ರಕರಣದ ಸಂತ್ರಸ್ತರಿಗೆ ಹೊಸ ಯೋಜನೆಯಡಿ 2 ಲಕ್ಷ ರೂಪಾಯಿ ನೆರವು ಒದಗಿಸುವ ಸಾಧ್ಯತೆ.  ಇಂಥ ಪ್ರಕರಣಗಳಲ್ಲಿ ಮೃತ ಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಈ ಮೊದಲು 25 ಸಾವಿರ ರೂಪಾಯಿಯನ್ನು ನೀಡಲಾಗುತ್ತಿತ್ತು. ಇದೀಗ  ಆ ಮೊತ್ತವನ್ನು 2 ಲಕ್ಷ ರೂಪಾಯಿವರೆಗೂ ಏರಿಕೆ ಮಾಡುವ  ಪ್ರಸ್ತಾವನೆ ಇಲಾಖೆಯ ಮುಂದಿದೆ. 

ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!

ಹಿಟ್ ಆಂಡ್ ರನ್ ಅಪಘಾತ ಪ್ರಕರಣದಲ್ಲಿ ವ್ಯಕ್ತಿಯು ಗಂಭೀರ ಗಾಯಗೊಂಡರೆ ಪರಿಹಾರ  ಮೊತ್ತವನ್ನು 25 ಸಾವಿರ ರೂ.ನಿಂದ 50 ಸಾವಿರ ರೂಪಾಯಿಗೆ ಏರಿಸುವ ಪ್ರಸ್ತಾಪವಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ವಿಷಯವನ್ನು ಆ.2ರಂದೇ ನೋಟಿಪೈ ಮಾಡಿದೆ.  2019ರಲ್ಲಿ ಒಟ್ಟು 4,49,002 ರಸ್ತೆ ಅಪಘಾತಗಳು ಸಂಭವಿಸಿದ್ದು, 1,51,113 ಜನರು ಮೃತಪಟ್ಟಿದ್ದಾರೆ.

ಹಿಟ್ ಅಂಡ್ ರನ್ ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡುವ ಯೋಜನೆಯು ಪರಿಹಾರವನ್ನು (ಅಲ್ಪ ಗಾಯಗೊಂಡವರಿಗೆ 12,500 ರಿಂದ  50,000 ವರೆಗೆ ತೀವ್ರವಾಗಿ ಗಾಯಗೊಂಡವರಿಗೆ ಮತ್ತು ಮೃತಪಟ್ಟರೆ 25,000 ದಿಂದ 2,00,000 ರೂ.ವರೆಗೆ) ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕೃತವಾಗಿದೆ ತಿಳಿಸಲಾಗಿದೆ.

ಕರಡು ಯೋಜನೆಯು ರಸ್ತೆ ಅಪಘಾತ ಪ್ರಕರಣಗಳು, ವಿವರವಾದ ಅಪಘಾತ ವರದಿ (ಡಿಎಆರ್) ಮತ್ತು ಅದರ ವರದಿಗಳ ವಿವರವಾದ ತನಿಖೆಗಾಗಿ ಸಂಪೂರ್ಣ ಮಧ್ಯಸ್ಥಿಕೆದಾರರಿಗೆ ಕಾಲಮಿತಿಯ ಜೊತೆಗೆ ಕ್ಲೈಮ್‌ಗಳ ತ್ವರಿತ ಇತ್ಯರ್ಥಕ್ಕಾಗಿ ಸಂಪೂರ್ಣ ಪ್ರಕ್ರಿಯೆಯನ್ನು ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಜುಲೈನಲ್ಲಿ 1.36 ಲಕ್ಷ ವಾಹನ ಮಾರಾಟ ಮಾಡಿದ ಮಾರುತಿ!

2020ರಲ್ಲಿ 3,66,138 ರಸ್ತೆ ಅಪಘಾತಗಳು: ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾವುಗಳು ಹೆಚ್ಚಾಗಿರಬಹುದು. ಆದರೆ, ಪ್ರತಿ ವರ್ಷ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಕೇಂದ್ರ ಸರ್ಕಾರವೇ ನೀಡುವ ಮಾಹಿತಿಯ ಪ್ರಕಾರ, 2020ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1,31,714 ಮಂದಿ ಮೃತಪಟ್ಟಿದ್ದಾರೆ.  ಕೋವಿಡ್ ಸಾವುಗಳ ಸಂಖ್ಯೆ ಬಹುತೇಕ 1.50 ಲಕ್ಷ ದಾಖಲಾಗಿದೆ. ಅಂದರೆ, ಕೋವಿಡ್ ಸಾವುಗಳಿಗೂ ಮತ್ತು ರಸ್ತೆ ಅಪಘಾತ ಸಾವುಗಳಿಗೂ ಅಂಥ ಸಿಕ್ಕಾಪಟ್ಟೆ ವ್ಯತ್ಯಾಸವೇನೂ ಇಲ್ಲ!

ದಿಲ್ಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದ್ದು, ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರು, 2020ರ ಸಾಲಿನಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಪೈಕಿ 1,31,714 ಜನರು ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಬಹುಶಃ ಯಾವುದೇ ರೋಗ ರುಜುನಿಗಳಿಂದಲೂ ಸಾಯುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷೆತೆಗೆ ಸಂಬಂಧಿಸಿದಂತೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ, ಅಪಘಾತ ಸಾವುಗಳನ್ನ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

2020ರಲ್ಲಿ 3,66,138 ಆಕ್ಸಿಡೆಂಟ್, 1,31,714 ದುರ್ಮರಣ!

ಲೋಕಸಭೆಗೆ ಉತ್ತರ ನೀಡಿರುವ ಕೇಂದ್ರ ರಸ್ತೆ ಸಾರಿಗೆ  ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರು, ಶಿಕ್ಷಣ, ರಸ್ತೆ ಮತ್ತು ವಾಹನಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್, ಜಾರಿಗೊಳಿಸುವಿಕೆ ಮತ್ತು ರಸ್ತೆ ಆಧಾರಿತ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸಚಿವಾಲಯವು ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿದೆ ಎಂದು ಹೇಳಿದರು. 

Follow Us:
Download App:
  • android
  • ios