Asianet Suvarna News Asianet Suvarna News

8 ವರ್ಷ ಬ್ಯಾಟರಿ ವಾರೆಂಟಿ, 440 ಕಿ.ಮಿ ಮೈಲೇಜ್: BMW iX1 ಎಲೆಕ್ಟ್ರಿಕ್ ಕಾರು ಬಿಡುಗಡೆ!

5.6 ಸೆಕೆಂಡುಗಳಲ್ಲಿ 313 hp ಉತ್ಪಾದಿಸುವ ಮೂಲಕ ಗಂಟೆಗೆ 0-100 ಕಿ.ಮೀ. ತಕ್ಷಣದ ಆಕ್ಸಲರೇಷನ್, 440 ಕಿ.ಮೀ.ಗಳವರೆಗೆ ಪರಿಣಾಮಕಾರಿ ರೇಂಜ್ ಮತ್ತು ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳ ಫುಲ್ಲಿ ಎಲೆಕ್ಟ್ರಿಕ್  BMW iX1 ಕಾರು ಬಿಡುಗಡೆಯಾಗಿದೆ. 
 

BMW launch Fully electric  BMW iX1 ev car in India with 440 mileage ragne ckm
Author
First Published Oct 18, 2023, 1:48 PM IST

ನವದೆಹಲಿ(ಅ.18) ಫುಲ್ಲಿ ಎಲೆಕ್ಟ್ರಿಕ್ BMW iX1 ಭಾರತದಲ್ಲಿ ಬಿಡುಗಡೆಯಾಗಿದೆ. ಇದರೊಂದಿಗೆ ಯಶಸ್ವಿ ಲಕ್ಷುರಿ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್- BMW iX1 ಹೊಸ electric avatar ನಲ್ಲಿ petrol ಮತ್ತು diesel drivetrains ನೊಂದಿಗೆ ನೀಡಲಾಗುತ್ತಿರುವ ಈ segment ನಲ್ಲಿ ಮೊದಲನೆಯದಾಗಿದೆ. ಬಿಲ್ಟ್-ಅಪ್ ಯೂನಿಟ್ ಆಗಿರುವ ಮೊದಲ ಫುಲ್ಲಿ ಎಲೆಕ್ಟ್ರಿಕ್ BMWiX1 ಅನ್ನು ವಿಶೇಷವಾಗಿ ಆನ್ಲೈನ್ ನಲ್ಲಿ ಬುಕ್ ಮಾಡಬಹುದು. ಡೆಲಿವರಿಗಳು ಅಕ್ಟೋಬರ್ ನಂತರ ಆರಂಭಗೊಳ್ಳುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 440 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ ಹೊಂದಿದೆ. ಹೊಚ್ಚಹೊಸ BMW ಇಡ್ರೈವ್ ಟೆಕ್ನಾಲಜಿ, ಡಿಸೈನ್, ಸಸ್ಟೇನಬಿಲಿಟಿ ಮತ್ತು ಅತ್ಯಾಧುನಿಕ ಡಿಜಿಟಲೈಸೇಷನ್ ಹೊಂದಿರುವ iX1 ಕಾರು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.  

ಮೊದಲ ಫುಲ್ಲಿ ಎಲೆಕ್ಟ್ರಿಕ್ BMW iX1 xDrive30 M Sport ಎಕ್ಸ್-ಶೋರೂಂ ಬೆಲೆ  69,90,000 ರೂಪಾಯಿ(ಎಕ್ಸ್ ಶೋ ರೂಂ)  BMW iX1 ಆಲ್ಪೈನ್ ವೈಟ್ ನಾನ್-ಮೆಟಾಲಿಕ್ ಪೇಂಟ್ ಮತ್ತು ಸ್ಪೇಸ್ ಸಿಲ್ವರ್, ಬ್ಲಾಕ್ ಸಫೈರ್ ಮತ್ತು ಸ್ಟಾರ್ಮ್ ಬೇ ಮೆಟಾಲಿಕ್ ಪೇಂಟ್ ವರ್ಕ್ಸ್ ಗಳಲ್ಲಿ ಲಭ್ಯ. ಅಪ್  ಹೋಲ್ಸ್ ಟ್ರಿ ಆಯ್ಕೆಗಳಲ್ಲಿ ವೆಗಾಂಜಾ ಪರ್ಫೊರೇಟೆಡ್ ಮೊಚಾ ಮತ್ತು ವೆಗಾಂಜಾ ಪರ್ಫೊರೇಟೆಡ್ ಆಯಿಸ್ಟರ್ ಒಳಗೊಡಿರುತ್ತದೆ. 

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್‌ ಔಟ್‌ ಆದ ಬಿಎಂಡಬ್ಲ್ಯೂ ಐಎಕ್ಸ್‌1 ಐಷಾರಾಮಿ ಎಲೆಕ್ಟ್ರಿಕ್‌ ಎಸ್‌ಯುವಿ!

ಕಾರ್ಯ ನಿರ್ವಹಣೆಯ ವೈವಿಧ್ಯತೆಯಿಂದ ಮೊದಲ ಫುಲ್ಲಿ ಎಲೆಕ್ಟ್ರಿಕ್ BMW iX1 ದೈನಂದಿನ ಮತ್ತು ದೂರ ಪ್ರಯಾಣಗಳಲ್ಲಿ ಸ್ವಾತಂತ್ರ್ಯದ ವಿಶ್ವಾಸಾರ್ಹ ಅನುಭವ ನೀಡುತ್ತದೆ. ಇಂಟೀರಿಯರ್ ನ ಪ್ರಗತಿಶೀಲ ಡಿಸೈನ್ ಮತ್ತು ಅತ್ಯಾಧುನಿಕ ಪರಿಸರ ಮತ್ತು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ವಿಸ್ತಾರ ಆಯ್ಕೆಯು ಅದರ ಲಕ್ಷುರಿಯಸ್ ಗುಣವನ್ನು ಎತ್ತಿ ತೋರಿಸುತ್ತದೆ. ಡಿಜಿಟಲೈಸೇಷನ್ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳು ಡ್ರೈವಿಂಗ್ ಪ್ಲೆಷರ್ ಉನ್ನತಗೊಳಿಸುವ, ಕಂಫರ್ಟ್ ಮತ್ತು ಸೇಫ್ಟಿಗೆ ಆದ್ಯತೆ ನೀಡಿವೆ. ಸಸ್ಟೇನಬಿಲಿಟಿ ಅಂಶವು ಬರೀ ಎಲೆಕ್ಟ್ರಿಕ್ ಡ್ರೈವ್ ಟ್ರೈನ್ ಮಾತ್ರವಲ್ಲದೆ ಹೆಚ್ಚಿನ ಗ್ರೀನ್ ಎನರ್ಜಿ ಬಳಕೆಯನ್ನು ಪ್ರೊಡಕ್ಷನ್ ಮತ್ತು ಸಪ್ಲೈ ಚೈನ್ ನಲ್ಲಿ ಹೊಂದಲಾಗಿದೆ ಮತ್ತು ಸೆಕೆಂಡರಿ ರಾ ಮೆಟೀರಿಯಲ್ಸ್ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ. 

ಮೊದಲ ಫುಲ್ಲಿ ಎಲೆಕ್ಟ್ರಿಕ್ BMWiX1 ಸ್ಟಾಂಡರ್ಡ್ ಎರಡು ವರ್ಷಗಳ ವಾರೆಂಟಿಯನ್ನು ಅನಿಯಮಿತ ಕಿಲೋಮೀಟರ್ ಗಳೊಂದಿಗೆ ಬರುತ್ತದೆ. ರಿಪೇರ್ ಇನ್ ಕ್ಲೂಸಿವ್ ಅನ್ನು ಮೂರನೇ ವರ್ಷದ ಕಾರ್ಯಾಚರಣೆಗಳಿಂದ ಗರಿಷ್ಠ ಐದು ವರ್ಷದವರೆಗೆ ಮೈಲೇಜ್ ಮಿತಿಯಿಲ್ಲದೆ ವಾರೆಂಟಿ ಅನುಕೂಲಗಳನ್ನು ವಿಸ್ತರಿಸಬಹುದು. ಬ್ಯಾಟರಿಗಳು ಎಂಟು ವರ್ಷಗಳವರೆಗೆ ಅಥವಾ 160,000 ಕಿಲೋಮೀಟರ್ ಗಳವರೆಗೆ ವಾರೆಂಟಿ ವ್ಯಾಪ್ತಿಯಲ್ಲಿರುತ್ತವೆ. 
BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಲೋನ್, ಇನ್ಷೂರೆನ್ಸ್ ಮತ್ತು ವೆಹಿಕಲ್ ಸರ್ವೀಸಸ್ ಗಳಿಗೆ ಸಂಪೂರ್ಣ ಪ್ಯಾಕೇಜ್ ಒದಗಿಸುತ್ತಿದ್ದು ಅದು ಮೊದಲ ಫುಲ್ಲಿ ಎಲೆಕ್ಟ್ರಿಕ್ BMW iX1. 100%ಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಅಕ್ಸೆಸರೀಸ್ ಫೈನಾನ್ಸಿಂಗ್ ಕೂಡಾ ನೀಡಲಾಗುತ್ತದೆ. ಇನ್ಷೂರೆನ್ಸ್ ಗರಿಷ್ಠ ರಕ್ಷಣೆಯನ್ನು ಝೀರೋ ಡಿಪ್ರಿಸಿಯೇಷನ್, ಬ್ಯಾಟರಿ ಕವರ್ ಮತ್ತು ರಿಟರ್ನ್ ಟು ಇನ್ವಾಯ್ಸ್ ನಂತಹ ಹೆಚ್ಚುವರಿ ಆಯ್ಕೆಗಳನ್ನು ನೀಡುತ್ತದೆ. ಉಚಿತ 5-ವರ್ಷ ರೋಡ್-ಸೈಡ್ ಅಸಿಸ್ಟೆನ್ಸ್ ಚಾಲನೆಯಲ್ಲಿ ಸಂಪೂರ್ಣ ಮನಃಶ್ಯಾಂತಿ ನೀಡುವುದಲ್ಲದೆ ಪೋರ್ಟಬಲ್ ರೋಡ್ ಸೈಡ್ ಚಾರ್ಜಿಂಗ್ ನಂತಹ ಸೌಲಭ್ಯಗಳನ್ನು ನೀಡುತ್ತದೆ. ಗ್ರಾಹಕರು ಹೊಸ ಗೆ ಟ್ರೇಡ್-ಇನ್/ಅಪ್ಗ್ರೇಡ್ ಗೆ ಆಕರ್ಷಕ ಕೊಡುಗೆಗಳನ್ನು ಕೂಡಾ ಆನಂದಿಸಬಹುದು.

ಭಾರತದಲ್ಲಿ ಫರ್ಸ್ಟ್ ಎವರ್ BMW i4 ಎಲೆಕ್ಟ್ರಿಕ್ ಕಾರು ಬಿಡುಗಡೆ, 590KM ಮೈಲೇಜ್!

ಸಸ್ಟೇನಬಲ್ ಮೊಬಿಲಿಟಿಯ ಮುಂಚೂಣಿಯವರಾಗಿ BMW ಗ್ರೂಪ್ ಇಂಡಿಯಾದ ಎಲೆಕ್ಟ್ರಿಕ್ ಅಫೆನ್ಸಿವ್ ಸಮಯಕ್ಕೆ ಮುಂಚಿತವಾಗಿ ಪ್ರಾರಂಭವಾಗಿದೆ. ಲಕ್ಷುರಿ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ನಮ್ಮ ಯಶಸ್ಸು ಮತ್ತು ನಾಯಕತ್ವದ ತಳಹದಿಯನ್ನು ಶಕ್ತಿಯುತ ಪ್ರಾಡಕ್ಟ್ ಸ್ಟ್ರಾಟಜಿಯ ಮೇಲೆ ನಿರ್ಮಿಸಲಾಗಿದ್ದು ಅದಕ್ಕೆ ಈ ವರ್ಗದ ಅತ್ಯಂತ ವಿಸ್ತಾರ ಎಲೆಕ್ಟ್ರಿಕ್ ಪೋರ್ಟ್ ಫೋಲಿಯೊ ಪೂರಕವಾಗಿದೆ ಎಂದು BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್ ಹೇಳಿದ್ದಾರೆ. ಹೊಚ್ಚಹೊಸ ಸರಣಿಯು ಅತ್ಯಂತ ಯಶಸ್ವಿ BMW X1 ರ ಎಲೆಕ್ಟ್ರಿಫಿಕೇಷನ್ ಆಗಿದ್ದು ಅದು ಈ ವರ್ಗದಲ್ಲಿ ಮೊದಲ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್(SAV) ಆಗಿಸಿದ್ದಯ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆದ್ಯತೆ ನೀಡುವ ಎಲ್ಲ ಗ್ರಾಹಕರಿಗೂ ಸರಿಸಾಟಿ ಇರದ `ಆಯ್ಕೆಯ ಶಕ್ತಿ’ ನೀಡುತ್ತದೆ. ಪ್ರತಿ BMW ಎಲೆಕ್ಟ್ರಿಕ್ ಕಾರ್ ಕೂಡಾ ಕಾಂಪ್ಲಿಮೆಂಟರಿ ವಾಲ್ ಬಾಕ್ಸ್ ಚಾರ್ಜರ್ ನೊಂದಿಗೆ ಬರುತ್ತದೆ ಮತ್ತು ನಾವು 35 ನಗರಗಳಲ್ಲಿ ಇತರೆ ಬ್ರಾಂಡ್ ಗಳ ಗ್ರಾಹಕರಿಗೂ ಸೇರಿ ಮತ್ತು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಅಳವಡಿಕೆ ಹೆಚ್ಚಿಸುವ ದೃಷ್ಟಿಯಿಂದ ನಮ್ಮ  24x7 ಫಾಸ್ಟ್ ಚಾರ್ಜಿಂಗ್ ನೆಟ್ವರ್ಕ್ ಅನ್ನು ಲಭ್ಯತೆ ದೊರೆಯುವಂತೆ ಮಾಡಿದ್ದೇವೆ. ನಾವು ನಮ್ಮ ಶ್ರೇಣಿಯನ್ನು ಎಚ್ಚರಿಕೆಯಿಂದ ವಿಸ್ತರಿಸುವ ಮೂಲಕ ಮತ್ತು ಬಹಳ ಆಲೋಚಿಸಿ ರೂಪಿಸಿದ ಮತ್ತು ಆವಿಷ್ಕಾರಕ ಉತ್ಪನ್ನಗಳಲ್ಲಿ ಒಂದಾದ ನಮ್ಮ ಮೊದಲ ಫುಲ್ಲಿ-ಎಲೆಕ್ಟ್ರಿಕ್ BMW iX1 ಮೂಲಕ ಎಲೆಕ್ಟ್ರಿಕ್-ಮೊಬಿಲಿಟಿಯನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತೇವೆ” ಎಂದರು. 

Follow Us:
Download App:
  • android
  • ios