ನವದೆಹಲಿ(ಡಿ.03) BMW ಗ್ರೂಪ್‍ಇಂಡಿಯಾ ಹೊಸ BMW 2 ಸೀರೀಸ್ ಗ್ರಾನ್ ಕೂಪೆ `ಬ್ಲಾಕ್ ಶಾಡೋ’ ಎಡಿಶನ್ ಕಾರು  ಬಿಡುಗಡೆ ಮಾಡಿದೆ.  ಚೆನ್ನೈನಲ್ಲಿರುವ BMW ಪ್ಲಾಂಟ್‌ನಲ್ಲಿ  ಉತ್ಪಾದನೆಯಾದ ಈ ವಿಶೇಷ ಆವೃತ್ತಿಯು ಡಿಸೆಂಬರ್ 7,2020 ರ ನಂತರ BMW ಅಧೀಕೃತ ವೆಬ್‌ಸೈಟ್‌ನಲ್ಲಿ ದೊರೆಯಲಿದೆ.  ನೂತನ ಕಾರಿನ ಬೆಲೆ 42.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಭಾರತದಲ್ಲಿ ಆಲ್-ನ್ಯೂ BMW X5M ಕಾಂಪಿಟಿಷನ್ ಬಿಡುಗಡೆ !

ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಸೆಡಾನ್‍ನ ಅನುಕೂಲ ಮತ್ತು ಕೂಪೆಯ ಸ್ಪೋರ್ಟ್‌ನೆಸ್  ಪರಿಪೂರ್ಣವಾಗಿ ಸಂಯೋಜಿಸುತ್ತದೆ. ಹೊಸ `ಬ್ಲಾಕ್ ಶಾಡೋ’ ಎಡಿಷನ್ BMW‘M’ಪರ್ಫಾರ್ಮೆನ್  ಸ್ಪೋರ್ಟ್ಸ್ ಹಾಗೂ ಅಗ್ರೆಸ್ಸೀವ್ ಆಗಿದೆ. ಎಲ್ಲಾ ಆಯಾಮಗಳಲ್ಲೂ ಕ್ರೀಡಾಗುಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಡೈನಮಿಕ್ಸ್‌ನತ್ತ ಗಮನ ನೀಡಿ ವಿನ್ಯಾಸಗೊಳಿಸಲಾದ  ಈ ಕಾರು ಮೋಟಾರ್ ಸ್ಪೋರ್ಟ್ ಉತ್ಸಾಹಿ ಗ್ರಾಹಕರ ಅಗತ್ಯಗಳಿಗೆ ಹೊಂದುವಂತೆ ಶಕ್ತಿಯುತವಾಗಿದೆ.. ಸೀಮಿತ ಯೂನಿಟ್‍ಗಳಲ್ಲಿ ಲಭ್ಯವಿರುವ‘ಬ್ಲಾಕ್ ಶಾಡೋ’ಎಡಿಷನ್ ನಮ್ಮಗ್ರಾಹಕರಿಗೆ ಅತ್ಯಾಧುನಿಕ BMW ಫೋರ್-ಡೋರ್ ಕೂಪೆ ಹೊಂದುವ ವಿಶೇಷ ಅವಕಾಶ ಒದಗಿಸುತ್ತದೆ ಎಂದು BMW ಗ್ರೂಪ್‍ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್ ಹೇಳಿದರು.  

ಹೊಸ ವಿನ್ಯಾಸದ ಅಂಶಗಳು ಹೊಸ BMW 2 ಸೀರೀಸ್ ಗ್ರಾನ್‍ಕೂಪೆಯ ಹೊರಾಂಗಣವನ್ನು ಮತ್ತಷ್ಟು ಆಕರ್ಷವಾಗಿದೆ. ಕಾರಿನ ಕಾರ್ಯಕ್ಷಮತೆ, ಉತ್ಪಾದನೆಯಗುಣಮಟ್ಟ ಮತ್ತು ವಿನ್ಯಾಸದಲ್ಲಿ ಅತ್ಯುನ್ನತ ಅಗತ್ಯಗಳನ್ನು ಪೂರೈಸುತ್ತವೆ.  BMW 2 ಸೀರೀಸ್ ಗ್ರಾನ್ ಕೂಪೆ `ಬ್ಲಾಕ್ ಶಾಡೋ’ ಎಡಿಷನ್ M ಸ್ಪೋರ್ಟ್ ಡಿಸೈನ್ ಸ್ಕೀಂನಲ್ಲಿ ವಿಶೇಷ ಬೆಲೆಯಲ್ಲಿ ಲಭ್ಯವಿದೆ.

BMW 220d M ಸ್ಪೋರ್ಟ್‘ಬ್ಲಾಕ್ ಶಾಡೋ’ಎಡಿಷನ್ ಬೆಲೆ 42,30,000 ರೂಪಾಯಿ.   ‘ಬ್ಲಾಕ್ ಶಾಡೋ’ಎಡಿಷನ್ ಖರೀದಿಸುವ ಗ್ರಾಹಕರಿಗೆ 2,50,000  ಮೌಲ್ಯದ BMW ಇಂಡಿವಿಜುಯಲ್ ಹೈ-ಗ್ಲಾಸ್ ಶಾಡೋ ಲೈನ್ ಪ್ಯಾಕೇಜ್‍ನೊಂದಿಗೆ BMW ‘M’ ಪರ್ಫಾರ್ಮೆನ್ಸ್ ಕಿಟ್ ಪಡೆಯಲಿದ್ದಾರೆ. ಮೊದಲ 24 ಗ್ರಾಹಕರು ಯಾವುದೇ ವಿಶೇಷ ದರದಲ್ಲಿ `ಬ್ಲಾಕ್ ಶಾಡೋ’ ಎಡಿಷನ್ ಕಿಟ್ ಪಡೆಯುತ್ತಾರೆ.

ಇಂಟೀರಿಯರ್‍ ಕ್ಯಾಬಿನ್‍ನ ವೈಶಾಲ್ಯತೆಯನ್ನುಎದ್ದುಕಾಣುವಂತೆ ವಿನ್ಯಾಸಗೊಳಿಸಲಾಗಿದ್ದು ಡ್ರೈವರ್-ಫೋಕಸ್ಡ್‍ಕಾಕ್‍ಪಿಟ್ ವಿಶಿಷ್ಟವಾದ ವಸ್ತುಗಳೊಂದಿಗೆ ಮತ್ತುದೊಡ್ಡ ಪನೋರಮಗ್ಲಾಸ್ ಸನ್‍ರೂಫ್ ಹೊಂದಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಸ್ಪೋಟ್ರ್ಸ್ ಸೀಟ್ಸ್ ಎಲೆಕ್ಟ್ರಿಕಲ್ ಮೆಮೊರಿ ಫಂಕ್ಷನ್ ಮತ್ತುಉದಾರ ಕ್ಯಾಬಿನ್ ಸ್ಥಳದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ ದೂರ ಪ್ರಯಾಣದಲ್ಲಿ ಅನುಕೂಲ ಒದಗಿಸುವ ಹೆಚ್ಚಿನ  ಸ್ಥಳಾವಕಾಶ ನೀಡುತ್ತದೆ.

ಈ ಕಾರು ಫ್ರಂಟ್-ವ್ಹೀಲ್‍ಡ್ರೈವ್‍ಆರ್ಕಿಟೆಕ್ಚರ್ ಹೊಂದಿದ್ದುರಾಜಿಯಿರದಡ್ರೈವಿಂಗ್‍ಡೈನಮಿಕ್ಸ್‍ನೀಡುತ್ತದೆ.  ಡ್ರೈವಿಂಗ್ ಸ್ಟೆಬಿಲಿಟಿ ಕಂಟ್ರೋಲ ಸಂಯೋಜನೆಯೊಂದಿಗೆ ಕೆಲಸ ಮಾಡುವ ಮೂಲಕ ಅಂಡರ್ ಸ್ಟೀರಿಂಗ್ ಕಡಿಮೆ ಮಾಡುತ್ತದೆ. BMW ಪರ್ಫಾರ್ಮೆನ್ಸ್‍ಕಂಟ್ರೋಲ್ ಸಿಸ್ಟಂ ಕಾರಿನ ಸ್ಥಿರತೆಯನ್ನು ಚಕ್ರಗಳ ಉದ್ದೇಶಿತ ಬ್ರೇಕಿಂಗ್ ಮೂಲಕ ಹೆಚ್ಚಿಸುತ್ತದೆ.

BMW ಟ್ವಿನ್ ಪವರ್‍ಟರ್ಬೊಡೀಸೆಲ್‍ಎಂಜಿನ್‍ಗರಿಷ್ಠ ಶಕ್ತಿಯನ್ನುಅಸಾಧಾರಣದಕ್ಷತೆಯೊಂದಿಗೆ ವಿಲೀನಗೊಳಿಸುತ್ತದೆ ಮತ್ತುತಕ್ಷಣದ ಪ್ರತಿಕ್ರಿಯೆಯನ್ನುಕಡಿಮೆಎಂಜಿನ್ ವೇಗಗಳಲ್ಲೂ ನೀಡುತ್ತದೆ.ಟು-ಲೀಟರ್ ಫೋರ್-ಸಿಲಿಂಡರ್ ಡೀಸೆಲ್‍ಎಂಜಿನ್ 190 hP ಔಟ್‍ಪುಟ್‍ಉತ್ಪಾದಿಸುತ್ತದೆ ಮತ್ತು 1,750 - 2,500 RPMನಲ್ಲಿ 400 nm ಗರಿಷ್ಠ ಟಾರ್ಕ್ ನೀಡುತ್ತದೆ. ಕಾರು ಕೇವಲ 7.5 ಸೆಕೆಂಡುಗಳಲ್ಲಿ 0 -100KM ವೇಗ ತಲುಪಲಿದೆ.