Asianet Suvarna News Asianet Suvarna News

ತಮಗೆ ತಾವೇ ಐಷಾರಾಮಿ ಕಾರು ಉಡುಗೊರೆ ನೀಡಿದ ಬಿಗ್‌ಬಾಸ್ ಖ್ಯಾತಿಯ ಜಿಯಾ ಶಂಕರ್!

ಟಿವಿ ಸೀರಿಯಲ್ ಮೂಲಕ ಖ್ಯಾತಿಗಳಿಸಿದ್ದ ಜಿಯಾ ಶಂಕರ್ ಇತ್ತೀಚೆಗೆ ಬಿಗ್‌ಬಾಸ್ ಒಟಿಟಿ ಮೂಲಕ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಬಿಗ್‌ಬಾಸ್ ಒಟಿಟಿ 2ನೇ ಆವೃತ್ತಿಯಿಂದ ಹೊರಬಂದ ಬೆನ್ನಲ್ಲೇ ಇದೀಗ ಜಿಯಾ ಶಂಕರ್ ಹೊಚ್ಚ ಹೊಸ BMW ಕಾರು ಖರೀದಿಸಿ ತಮಗೆ ತಾವೇ ಗಿಫ್ಟ್ ನೀಡಿದ್ದಾರೆ.
 

Bigg boss ott 2 fame Jiya shankar gift herself a swanky BWM suv new car ckm
Author
First Published Aug 13, 2023, 3:47 PM IST

ಮುಂಬೈ(ಆ.13) ಟಿವಿ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿರುವ ಜಿಯಾ ಶಂಕರ್ ಇತ್ತೀಚೆಗೆ ಬಿಗ್ ಬಾಸ್ ಒಟಿಟಿ 2ನೇ ಆವೃತ್ತಿಯಲ್ಲಿ ಭಾರಿ ಜನಪ್ರಿಯರಾಗಿದ್ದಾರೆ. ಟಾಪ್ 6 ಸ್ಥಾನಕ್ಕೆ ತಲುಪಿದ್ದ ಜಿಯಾ ಶಂಕರ್ ಇತ್ತೀಚೆಗೆ ರಿಯಾಲಿಟಿ ಶೋನಿಂದ ಹೊರಬಿದ್ದಿದ್ದರು. ಆದರೆ ಜಿಯಾ ಶಂಕರ್ ಅಭಿಮಾನಿಗಳ ಮನಗೆದ್ದಿದ್ದರು. ಬಿಗ್‌ಬಾಸ್ ಒಟಿಟಿ 2ನೇ ಆವೃತ್ತಿಯಿಂದ ಹೊರಬಿದ್ದ ಬೆನ್ನಲ್ಲೇ ಜಿಯಾ ಶಂಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹೊಚ್ಚ ಹೊಸ ಐಷಾರಾಮಿ ಕಾರು ಖರೀದಿಸಿ ತಮಗೇ ತಾವೇ ಉಡುಗೊರೆಯಾಗಿ ನೀಡಿದ್ದಾರೆ. ಜಿಯಾ ಶಂಕರ್ ಹೊಸ BMW ಕಾರು ಖರೀದಿಸಿ, ತಮಗೆ ಗಿಫ್ಟ್ ನೀಡಿದ್ದಾರೆ.

ಜಿಯಾ ಖಾನ್ ತಮ್ಮ ತಾಯಿ ಜೊತೆ ಶೋರೂಂಗೆ ತೆರಳಿ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ವಿಶೇಷ ಅಂದರೆ ಹಿಂದೂ ಸಂಪ್ರದಾಯದಂತೆ ಕಾರಿಗೆ ಪೂಜೆ ಸಲ್ಲಿಸಿದ್ದಾರೆ. ಮುಚ್ಚಿದ್ದ ಕಾರಿನ ಕವರ್ ತೆಗೆದು ಜಿಯಾ ಶಂಕರ್‌ಗೆ ಆಪ್ತರು,ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಕಾರಿಗೆ ಹೂವಿನ ಮಾಲೆ ತೊಡಿಸಿ ಪೂಜೆ ಸಲ್ಲಿಸಲಾಯಿತು. ಪೂಜೆ ನೇರವೇರಿಸಿ, ಕಾರಿನ ಮುಂಭಾಗದಲ್ಲಿ ಜಿಯಾ ಶಂಕರ್ ತೆಂಗಿನ ಕಾಯಿ ಒಡೆದು ಎಲ್ಲರಿಗೂ ಸಿಹಿ ಹಂಚಿದ್ದಾರೆ. ಬಳಿಕ ತಾಯಿ ಹಾಗೂ ಆಪ್ತರೊಂದಿಗೆ ಹೊಸ ಕಾರಿನಲ್ಲಿ ಮನೆಗೆ ಪ್ರಯಾಣಿಸಿದ್ದಾರೆ. 

ಪಿಂಕ್ ಸ್ಯಾರಿ, ಕಪ್ಪು ಗ್ಲಾಸ್; 3.2 ಕೋಟಿ ರೂಪಾಯಿ ಮೇಬ್ಯಾಕ್ ಕಾರಿನ ಜೊತೆ ಕಾಣಿಸಿಕೊಂಡ ಕಂಗನಾ!

ಜಿಯಾ ಶಂಕರ್ ಖರೀದಿಸಿರುವುದು BMW  ಪ್ರಿಯಿಎಂ ಎಸ್‌ಯುವಿ ಕಾರು. ಹೈಎಂಡ್ ಕಾರು ಇದಾಗಿದೆ. ಇದರ ಬೆಲೆ 87 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ. ಇದೀಗ ಹೊಚ್ಚ ಹೊಸ ಐಷಾರಾಮಿ ಕಾರನ್ನು ತಮಗೇ ಉಡುಗೊರೆಯಾಗಿ ನೀಡಿದ ಜಿಯಾ ಶಂಕರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಜಿಯಾ ಶಂಕರ್ ಬಿಗ್‌ಬಾಸ್ ಒಟಿಟಿಯಲ್ಲಿ ಎಲ್ಲರ ಮನಗೆದಿದ್ದರು. ತಮ್ಮ ವೈಯುಕ್ತಿಕ ಬದುಕಿನ ಕುರಿತು ಮನಬಿಚ್ಚಿ ಮಾತನಾಡಿದ್ದರು. 20 ವರ್ಷಗಳ ಹಿಂದೆ ಜಿಯಾ ಶಂಕರ್ ತಂದೆ ದೂರವಾಗಿದ್ದರು. 13 ವರ್ಷವಿದ್ದ ಜಿಯಾ ಶಂಕರ್ ಹಾಗೂ ಆಕೆಯ ತಾಯಿನ್ನು ಬಿಟ್ಟು ಹೋದ ತಂದೆ ಈಗ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಜಿಯಾ ಶಂಕರ್ ಹೇಳಿಕೊಂಡಿದ್ದರು. ಇತರ ಕುಟುಂಬಗಳನ್ನು, ತಂದೆ ಹಾಗೂ ಮಗಳನ್ನು ನೋಡಿದಾಗ ನನಗೆ ತೀವ್ರ ನೋವಾಗುತ್ತದೆ. ನನ್ನ ಬದುಕಿನ ನೆನಪುಗಳು ಮರುಕಳಿಸುತ್ತದೆ. ನಾನು ತಂದೆ ಬಳಿ ಇದುವರೆಗೂ ಮಾತನಾಡಿಲ್ಲ. ಎಲ್ಲಿದ್ದಾರೆ ಎಂದೂ ಗೊತ್ತಿಲ್ಲ. ನನ್ನ ಹಾಗೂ ತಾಯಿಯನ್ನು 20 ವರ್ಷದ ಹಿಂದೆ ಬಿಟ್ಟು ಹೋಗಿದ್ದಾರೆ ಎಂದು ಬಿಗ್‌ಬಾಸ್ ಒಟಿಟಿ ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿದ್ದರು.

ಸಹೋದರನಿಗೆ ಕೋಟಿ ಮೌಲ್ಯದ ಬೆಂಜ್ ಕಾರು ಉಡುಗೊರೆ ನೀಡಿದ ನಟಿ ಶೆಹನಾಜ್!

ಬಿಗ್‌ಬಾಸ್ ಒಟಿಟಿಗೂ ಮೊದಲ ಜಿಯಾ ಶಂಕರ್ ಟಿವಿ ಸೀರಿಯಲ್‌ನಲ್ಲಿ ಭಾರಿ ಖ್ಯಾತಿ ಗಳಿಸಿದ್ದಾರೆ. ಮೇರಿ ಹಾನಿಕಾರಕ್ ಬಿವಿ ಹಾಗೂ ಸುಶೀಲಾ ಸುಶೀಲಾ ದಾರವಾಹಿಗಳಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಮನ್ನಣೆ ಗಳಿಸಿದ್ದಾರೆ. 2013ರಲ್ಲಿ ತೆಲುಗು ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಜಿಯಾ ಶಂಕರ್ ಹಿಂದಿ ಸೀರಿಲ್ ಹಾಗೂ ಹಿಂದಿ ಬಿಗ್‌ಬಾಸ್ ಒಟಿಟಿ 2ನೇ ಆವೃತ್ತಿ ಮೂಲಕ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. 2017ರಲ್ಲಿ ತಮಿಳು ಚಿತ್ರದಲ್ಲೂ ಜಿಯಾ ಶಂಕರ್ ಕಾಣಿಸಿಕೊಂಡಿದ್ದರು. ಸಿನಿಮಾಗಿಂತ ಜಿಯಾ ಶಂಕರ್ ದಾರವಾಹಿ ಹಾಗೂ ಬಿಗ್‌ಬಾಸ್ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. 

 

 

Follow Us:
Download App:
  • android
  • ios