Upcoming Cars ಆಡಿ ಕ್ಯೂ7 to ಕಿಯಾ ಕರೆನ್ಸ್, ಜನವರಿಯಲ್ಲಿ ಬಿಡುಗಡೆಯಾಗಲಿದೆ 6 ಹೊಚ್ಚ ಹೊಸ ಕಾರು!
ಆಡಿ ಕ್ಯೂ7, ಸ್ಕೋಡಾ ಕೊಡಿಯಾಕ್‌ಗಳು ಪ್ರಮುಖ ಕಾರುಗಳು
*ವೋಲ್ವೋ ಹಾಗೂ ಟೊಯೋಟಾ ಕಾರುಗಳ ಬಿಡುಗಡೆ ನಿರೀಕ್ಷೆ
* ಕಿಯಾ ಕಾರ್ನೆಸ್ ಕೂಡ ಇದೇ ತಿಂಗಳಲ್ಲಿ ಅನಾವರಣಗೊಳಿಸುವ ಸಾಧ್ಯತೆ
2022ನೇ ಸಾಲಿನಲ್ಲಿ ಸಾಕಷ್ಟು ಹೊಸ ಕಾರುಗಳು ಬಿಡುಗಡೆಗೆ ಸಿದ್ಧವಾಗಿವೆ. ಅದರಲ್ಲೂ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿಯೇ ಆರು ಹೊಸ ಕಾರುಗಳು ಬಿಡುಗಡೆಯಾಗಲಿವೆ. ಈ ಪೈಕಿ ಕೆಲವೊಂದು ಕಾರುಗಳ ಫೇಸ್‌ಲಿಫ್ಟ್ (Facelift), ಎಲೆಕ್ಟ್ರಿಕ್ (Electric) ಕಾರುಗಳು ಕೂಡ ಇವೆ. ಈ ಹೊಸ ಕಾರುಗಳ ಬಿಡುಗಡೆಯಿಂದ ಭಾರತೀಯ ಕಾರು ಮಾರುಕಟ್ಟೆ ಹೆಚ್ಚು ಪ್ರೀಮಿಯಮ್ ಆಗಲಿದೆ. ಈ ಕುರಿತು ಇಲ್ಲಿದೆ ವಿವರಗಳು.
ಆಡಿ ಕ್ಯೂ7 (Audi Q7):
ಆಡಿ ಕ್ಯೂ7 ಫೇಸ್‌ಲಿಫ್ಟ್ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಈ ಕಾರು ಭಾರತದ ಹೊರಗೆ ಈಗಾಗಲೇ ಮಾರಾಟವಾಗಿರುವುದರಿಂದ, ಅದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ಮಾಹಿತಿ ನಮ್ಮ ಬಳಿ ಇದೆ. ಕ್ಯೂ7ನಲ್ಲಿ ಹಲವು ಕಾಸ್ಮೆಟಿಕ್ ಬದಲಾವಣೆಗಳಿರಲಿದ್ದು, ಅದರ ಹೊಸ ಮುಂಭಾಗದ ವಿನ್ಯಾಸ ಇತರ ಆಡಿ ಎಸ್‌ಯುವಿಗಳ ವಲಯಕ್ಕೆ ಸೇರಿಸುತ್ತದೆ. ಹೊಸ ಡಿಆರ್‌ಎಲ್‌ಗಳು (DRL), ಹೊಸ ಹೆಡ್‌ಲ್ಯಾಂಪ್‌ಗಳು, ಹೊಸ ಗ್ರಿಲ್‌ಗಳು ಗಮನ ಸೆಳೆಯುತ್ತವೆ. ಜೊತೆಗೆ, ಎರಡೂ ಬದಿಯಲ್ಲಿ ಟ್ವೀಕ್ ಮಾಡಿರುವ ಬಂಪರ್‌ಗಳು, ಹಿಂದಿನ ಲ್ಯಾಂಪ್‌ಗಳು ಒಂದು ಕಂಪ್ಲೀಟ್ ಲುಕ್ ನೀಡುತ್ತವೆ. ಇದು 335 ಪಿಎಸ್ (PS)ಗರಿಷ್ಠ ಪವರ್ ಹಾಗೂ 500 ಎನ್‌ಎಂ ಪೀಕ್ ಟಾರ್ಕ್ ನೀಡುತ್ತದೆ. ಆಡಿ(Audi) ಕಂಪನಿ, ಭಾರತದಲ್ಲಿ ಆಗಸ್ಟ್ ತಿಂಗಳಿನಿಂದಲೇ ಕ್ಯೂ7 ಜೋಡಣೆ ಆರಂಭಿಸಿದ್ದು, ಈಗಾಗಲೇ ಡೀಲರ್ ಬಳಿ ತಲುಪಲಾರಂಭಿಸಿದೆ.
Auto Sales: 2021ರಲ್ಲಿ ಶೇ.130ರಷ್ಟು ಪ್ರಗತಿ ದಾಖಲಿಸಿದ ಸ್ಕೋಡಾ ಆಟೋ ಇಂಡಿಯಾ
ಸ್ಕೋಡಾ ಕೋಡಿಯಾಕ್ (Skoda kodiaq):
ಜನವರಿ 10ರಂದು ಬಿಡುಗಡೆಗೆ ಸಿದ್ಧವಾಗಿರುವ ಸ್ಕೋಡಾ ಕೋಡಿಯಾಕ್, ಕೂಡ ಹೊಸ ಲುಕ್‌ನೊಂದಿಗೆ ಬರಲಿದೆ. ಇದರ ಸ್ಟ್ರೈಟ್ ಗ್ರಿಲ್‌ಗಳು, ಟ್ವೀಕ್ ಮಾಡಲಾದ ಹೆಡ್‌ಲ್ಯಾಂಪ್‌ಗಳು, ಹೊಸ ಎಲ್‌ಇಡಿ ಡಿಆರ್‌ಎಲ್ (DRL)ಗಳು ಮತ್ತು ತಾಜಾ-ಅಪ್ ಬಂಪರ್ ಇದೆ. ಹಿಂಬದಿಯಲ್ಲಿ ಕೂಡ ಟ್ವೀಕ್ ಮಾಡಿದ ಟೈಲ್ ಲ್ಯಾಂಪ್‌ಗಳು ಮತ್ತು ಹೊಸ ಬಂಪರ್ ಇದೆ. ಇಂಟೀರಿಯರ್‌ನಲ್ಲಿ ಹೆಚ್ಚು ಬದಲಾವಣೆ ಇರುವ ಸಾಧ್ಯತೆಯಿಲ್ಲ. ಇತರ ಸ್ಕೋಡಾ ಕಾರುಗಳ ಗಮನ ಸೆಳೆಯುವ ಅಂಶಗಳಾದ ಹೊಸ ಎರಡು-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಇದರಲ್ಲಿ ಕೂಡ ಮುಂದುವರಿಯಲಿದೆ. ಪ್ರಸ್ತುತ ಸ್ಕೋಡಾ ಕುಶಾಕ್ ಡೀಸೆಲ್ ಮಾದರಿಯಾಗಿದ್ದರೂ, ಹೊಸ ಸ್ಕೋಡಾ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 190ಪಿಎಸ್ (PS) ಪವರ್ ಮತ್ತು 320 ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆಯುವ ನಿರೀಕ್ಷೆಯಿದೆ.
Car Price Hike 2022 ಮಾರುತಿ ಸುಜುಕಿ to ಟೊಯೋಟಾ, ಇಲ್ಲಿದೆ ಹೊಸ ವರ್ಷದಿಂದ ಬೆಲೆ ಹೆಚ್ಚಿಸಿದ ಕಾರು ಕಂಪನಿ ಲಿಸ್ಟ್!
ಬಿಎಂಡಬ್ಲ್ಯು ಎಕ್ಸ್ 3 2022 (BMW X3):
ಹೊಸ ವರ್ಷದ ಬಿಎಂಡಬ್ಲ್ಯು (BMW) ಎಕ್ಸ್3 ಎಸ್‌ಯುವಿ ಅಪ್‌ಗ್ರೇಡ್ ಆಗಿರಲಿದ್ದು, ಇದರಲ್ಲಿ ಹೊಸ ಹೆಡ್‌ಲ್ಯಾಂಪ್‌ಗಳು, ಬಂಪರ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಇಂಟೀರಿಯರ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಕಾಣುವ ಸಾಧ್ಯತೆಯಿಲ್ಲ, ಆದ್ದರಿಂದ ಅದೇ 12.3-ಇಂಚಿನ ಇನ್ಫೋಟೈನ್‌ಮೆಂಟ್ ಘಟಕ ಮತ್ತು ಡಿಜಿಟಲ್ ಉಪಕರಣವನ್ನು ನಿರೀಕ್ಷಿಸಲಾಗಿದೆ. ಹೊಸ ಪೀಳಿಗೆಯ iDrive ಸಂಪರ್ಕಿತ ಕಾರು ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಪ್ರಸ್ತುತ-ಜೆನ್ ಕಾರಿನಂತೆ ಅದೇ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ನೋಡುವುದನ್ನು ಮುಂದುವರಿಸುತ್ತೇವೆ. ಇದು 2-ಲೀಟರ್ 4-ಸಿಲಿಂಡರ್ ಪೆಟ್ರೋಲ್ 248PS ಪವರ್ ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಕಿಯಾ ಕ್ಯಾರೆನ್ಸ್(Kia Carens)
ಭಾರತದಲ್ಲಿ ಕಿಯಾದ ಮೊದಲ ಮೂರು ಕಾರುಗಳಾದ ಸೆಲ್ಟೋಸ್, ಸೋನೆಟ್ ಮತ್ತು ಕಾರ್ನಿವಲ್‌ನ ಅಗಾಧ ಯಶಸ್ಸಿನ ನಂತರ ಕಂಪನಿ, ತನ್ನ ಎಂಪಿವಿ ಕ್ಯಾರೆನ್ಸ್ ಅನ್ನು ಭಾರತದಲ್ಲಿ ಹೊರತರಲು ಸಿದ್ಧವಾಗಿದೆ. ಇದು ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳೊಂದಿಗೆ ಮತ್ತು ಉದ್ದ, ಎತ್ತರದ ಮತ್ತು ನೇರವಾದ ರೂಫ್‌ಲೈನ್ ಹೊಂದಿರಲಿದೆ. ಇಂಟೀರಿಯರ್‌ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರಲಿದ್ದು, ಇದು ಯುವಿಒ (UVO) ಸಂಪರ್ಕಿತ ಕಾರ್ ಟೆಕ್ ಹೊಂದಿರುತ್ತದೆ. ಕ್ಯಾರೆನ್ಸ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ 6-ಸ್ಪೀಡ್ ಮ್ಯಾನ್ಯುವಲ್, 1.4-ಲೀಟರ್ ಟರ್ಬೊ-ಪೆಟ್ರೋಲ್ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಆಟೋ ಗೇರ್‌ಬಾಕ್ಸ್ ಇರಲಿದೆ.
Car Sales ಮಾರಾಟದಲ್ಲಿ ಶೇ.4 ರಷ್ಟು ಕುಸಿತ ಕಂಡ ಮಾರುತಿ ಸುಜುಕಿ!
ಟೊಯೋಟೋ ಹೈಲಕ್ಸ್-ಇ (Toyoto Hilux-E)
ಟೊಯೋಟೋ ಹೈಲಕ್ಸ್-ಇ ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ನಾವು ದೇಶದಾದ್ಯಂತ ಹೈಲಕ್ಸ್ ಪರೀಕ್ಷಾರ್ಥ ಸಂಚಾರವನ್ನು ನೋಡಿದ್ದೇವೆ. ಇದು ಯಾವ ಮಾದರಿಯ ಕಾರು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ ಇದರಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಮಾದರಿ ಹಾಗೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೂ ಇರುವ ನಿರೀಕ್ಷೆಯಿದೆ. ಇದು ಟಾಪ್-ಸ್ಪೆಕ್ 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು ಮತ್ತು ಇತರ ಹೋಸ್ಟ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯಬಹುದು.
ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ (Volvo XC40 Recharge) :
ಸ್ವೀಡಿಷ್ ವಾಹನ ತಯಾರಕ ಕಂಪನಿ ವೋಲ್ವೋ ಎಕ್ಸ್ಸಿ40 ಈಗಾಗಲೇ ಡೀಲರ್‌ಗಳನ್ನು ತಲುಪಿದ್ದು, ಅಕ್ಟೋಬರ್‌ನಲ್ಲಿ ವಿತರಣೆಗಳು ಪ್ರಾರಂಭವಾಗಲಿವೆ ಎಂದು ಹೇಳಲಾಗುತ್ತಿದೆಯಾದರೂ, ಇದರ ಬಿಡುಗಡೆಗೆ ಇನ್ನೂ ಸಮಯ ಕೂಡಿ ಬಂದಿಲ್ಲ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದರಲ್ಲೂ ಜನವರಿಯಲ್ಲಿಯೇ ಅದರ ಬಿಡುಗಡೆಯಾಗಲಿದೆ ಎಂಬಂತೆ ಗೋಚರಿಸುತ್ತಿದೆ. ಎಕ್ಸ್‌ಸಿ40, 78 kWh ಬ್ಯಾಟರಿ ಪ್ಯಾಕ್ ಪವರ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ 418 ಕಿಮೀ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಮೋಟಾರ್‌ಗಳು 402ಪಿಎಸ್ (PS) ಪವರ್ ಮತ್ತು 660 ಎನ್‌ಎಂ(Nm) ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಇದು ಕೇವಲ 4.9 ಸೆಕೆಂಡುಗಳಲ್ಲಿ ಶೂನ್ಯದಿಂದ ಗಂಟೆಗೆ 100 ಕಿಮೀವರೆಗೆ ವೇಗ ಹೆಚ್ಚಿಸಬಲ್ಲದು.