ಮೊದಲು ಕಾರು, ಡಿಸೈನ್, ಸರ್ವೀಸ್ ಸರಿಮಾಡಿ, ಟೀಕಿಸಿದ ವ್ಯಕ್ತಿಗೆ ಆನಂದ್ ಮಹೀಂದ್ರ ಉತ್ತರಕ್ಕೆ ಮೆಚ್ಚುಗೆ!
ಮೊದಲು ನಿಮ್ಮ ಕಾರಿನಲ್ಲಿರುವ ಸಮಸ್ಯೆ ಬಗೆಹರಿಸಿ, ಸರ್ವೀಸ್, ಅಲ್ಲಿನ ಉದ್ಯೋಗಿಗಳ ನಡತೆ, ಬಿಡಿ ಭಾಗ, ಕಾರಿನ ಡಿಸೈನ್ ಸೇರಿದಂತೆ ಗ್ರೌಂಡ್ ಲೆವೆಲ್ ಸಮಸ್ಯೆ ಬಗಹರಿಸಿ. ವ್ಯಕ್ತಿಯೊಬ್ಬ ಮಹೀಂದ್ರ ಕಾರುಗಳ ಕುರಿತು ತೀರಾ ಕೆಟ್ಟದಾಗಿ ಟೀಕಿಸಿದ್ದಾನೆ. ಈ ಟೀಕೆಗೆ ಸ್ವತಃ ಆನಂದ್ ಮಹೀಂದ್ರ ತಾಳ್ಮೆಯಿಂದ ನೀಡಿದ ಉತ್ತರ ಎಲ್ಲರ ಮನಗೆದ್ದಿದೆ.
ಮುಂಬೈ(ಡಿ.02) ಮಹೀಂದ್ರ ಇದೀಗ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ವಿಶ್ವದ ಗಮನಸೆಳೆದಿದೆ. ಮಹೀಂದ್ರ ಹೊಸ ಬಿಇ6 ಹಾಗೂ XEV 9e ಕಾರಿನ ಡಿಸೈನ್, ಸೇಫ್ಟಿ ಫೀಚರ್,ಪವರ್, ಅತ್ಯಾಧುನಿಕ ತಂತ್ರಜ್ಞಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಸುಶಾಂತ್ ಮೆಹ್ತ ಅನ್ನೋ ವ್ಯಕ್ತಿ ಮಹೀಂದ್ರ ಕಾರು, ಡಿಸೈನ್, ಸರ್ವೀಸ್, ಉದ್ಯೋಗಿಗಳ ನಡವಳಿಕೆ ಕುರಿತು ಕೆಟ್ಟದಾಗಿ ಟೀಕಿಸಿದ್ದಾರೆ. ಮೊದಲು ನಿಮ್ಮ ಕಾರುಗಳಲ್ಲಿನ ಸಮಸ್ಯೆ ಸರಿಪಡಿಸಿ, ಬಿಡಿಭಾಗ ಸಮಸ್ಯೆ ದೂರವಾಗಿಸಿ, ನಿಮ್ಮ ಡಿಸೈನ್ ತೀರಾ ಕೆಟ್ಟದಾಗಿದೆ. ನಿಮ್ಮ ಟೇಸ್ಟ್ ಕೂಡ ಇಷ್ಟು ಕೆಟ್ಟದಾಗಿದೆಯಾ? ಕೆಟ್ಟ ಕಾರುಗಳನ್ನು ನಿರ್ಮಾಣ ಮಾಡುತ್ತಿದ್ದೀರಿ ಎಂದೆಲ್ಲಾ ಹಿಗ್ಗಾಮುಗ್ಗಾ ಮಹೀಂದ್ರ ಕಾರುಗಳನ್ನು ಟೀಕಿಸಿದ್ದಾನೆ. ಆದರೆ ಈತನ ಟೀಕೆಯನ್ನು ಆನಂದ್ ಮಹೀಂದ್ರ ನಿರ್ಲಕ್ಷಿಸಿಲ್ಲ. ಆನಂದ್ ಮಹೀಂದ್ರ ತಾಳ್ಮೆಯಿಂದ ನೀಡಿದ ಉತ್ತರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸುಶಾಂತ್ ಮೆಹ್ತಾ ಟ್ವೀಟ್ ಮೂಲಕ ಮಹೀಂದ್ರ ಕಾರುಗಳ ಕುರಿತು ಟೀಕಿಸಿದ್ದಾನೆ. ಮಹೀಂದ್ರ ಆಗಸದೆತ್ತರದ ಕನಸುಗಳನ್ನು, ಯೋಜನೆಗಳನ್ನು ಘೋಷಿಸುವ ಮೊದಲು ನಿಮ್ಮ ಕಾರಿನಲ್ಲಿರುವ ಸಮಸ್ಯೆ, ಸರ್ವೀಸ್ ಸೆಂಟರ್, ಉದ್ಯೋಗಿಗಳ ನಡವಳಿಕೆ, ಕೆಳಮಟ್ಟದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ ಎಂದು ಟ್ವೀಟ್ ಮಾಡಿದ್ದಾನೆ. ಇದೇ ಟ್ವೀಟ್‌ನಲ್ಲಿ ಮಹೀಂದ್ರ ಯಾವುದೇ ಅಧ್ಯಯನ ಇಲ್ಲದೆ ಕಾರು ನಿರ್ಮಾಣ ಮಾಡುತ್ತಿದೆ. ಹೀಗಾಗಿ ಎಲ್ಲಿ ನೋಡಿದರೂ ದೂರುಗಳೇ ಕೇಳಿಬರುತ್ತಿದೆ. ಮಹೀಂದ್ರ ಕಾರುಗಳ ವಿನ್ಯಾಸ ಕುರಿತು ನಾನು ಮಾತನಾಡುವುದಿಲ್ಲ. ಕಾರಣ ಮಹೀಂದ್ರ ಕಾರುಗಳು ಹ್ಯುಂಡೈ ಕಾರುಗಳ ಹತ್ತಿರಕ್ಕೂ ಬರುವುದಿಲ್ಲ. ಏನೋ ಮಾಡಲು ಹೋಗಿ ಅತೀಯಾಗಿ ಡಿಸೈನ್ ಮಾಡುತ್ತೀರಿ. ಇದು ಕಳಪೆ ಮಾತ್ರವಲ್ಲ ಕೆಟ್ಟದಾಗಿ ಕಾಣುತ್ತಿದೆ. ಬಿಇ6ಇ ಎಲೆಕ್ಟ್ರಿಕ್ ಕಾರು ಕೂಡ ಇದಕ್ಕೆ ಹೊರತಾಗಿಲ್ಲ. ಇದು ಮತ್ತಷ್ಟು ಕೆಟ್ಟದಾಗಿದೆ. ಈ ರೀತಿ ಕೆಟ್ಟ ಡಿಸೈನ್ ಮಾಡುತ್ತಿರುವ ನಿಮ್ಮ ಡಿಸೈನ್ ತಂಡ ಹಾಗೂ ನಿಮಗೂ ಕೆಟ್ಟ ಟೇಸ್ಟ್ ಇದೆ ಅನ್ನೋದು ಗೊತ್ತಾಗುತ್ತಿದೆ. ಮಹೀಂದ್ರ ಭ್ರಮನಿರಸನ ತರುತ್ತಿದೆ. ಕೇವಲ ದೊಡ್ಡ ಗಾತ್ರದ ಕಾರು ನಿರ್ಮಾಣ ಮಾಡಿದರೆ ಸಾಲದು ಎಂದು ಸುಶಾಂತ್ ಮೆಹ್ತ ಟ್ವೀಟ್ ಮಾಡಿದ್ದಾನೆ.
ಡಿಕೆ ಶಿವಕುಮಾರ್ ಕಾಲೇಜು ದಿನದ ಯೆಝಡಿ ಬೈಕ್‌ಗೆ ಕನ್ನಡದಲ್ಲೇ ಆನಂದ್ ಮಹೀಂದ್ರ ಕಮೆಂಟ್!
ಸುಶಾಂತ್ ಮೆಹ್ತಾ ಟೀಕೆಯನ್ನು ತಾಳ್ಮೆಯಿಂದಲೇ ಓದಿದ ಆನಂದ್ ಮಹೀಂದ್ರ, ನಿರ್ಲಕ್ಷಿಸಿಲ್ಲ. ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದಾರೆ. ಸುಶಾಂತ್ ನೀವು ಹೇಳಿದ್ದು, ಮಹೀಂದ್ರ ಸಾಕಷ್ಟು ದೂರ ಕ್ರಮಿಸಬೇಕಿದೆ. ಆದರೆ ಶೂನ್ಯದಿಂದ ಇಲ್ಲೀವರೆಗೆ ಬಂದಿರುವುದನ್ನು ನೀವು ಪರಿಗಣಿಸಿ. 1991ರಲ್ಲ ನಾನು ಮಹೀಂದ್ರಗೆ ಸೇರಿಕೊಂಡಾಗ ಮಾರುಕಟ್ಟೆ ಆಗಷ್ಟೆ ತೆರೆದುಕೊಳ್ಳುತ್ತಿತ್ತು. ವಿದೇಶಿ ಕಾರುಗಳ ಪೈಪೋಟಿ ನಡುವೆ ಮಹೀಂದ್ರ ಕಾರು ಉದ್ಯಮಕ್ಕೆ ಕಾಲಿಟ್ಟಾಗ ಹಲವರು ವ್ಯಂಗ್ಯವಾಡಿದ್ದರು. ನೀವು ಕಾರು ಉದ್ಯಮದಿಂದ ಹಿಂತಿರುಗುವುದು ಒಳ್ಳೆಯದು ಎಂದು ಕಿವಿ ಮಾತು ಹೇಳಿದ್ದರು. ಆದರೆ ಸವಾಲಾಗಿ ಸ್ವೀಕರಿಸಿ ಮುಂದೆ ಸಾಗಿದ್ದೇವೆ. ಮೂರು ದಶಕಗಳ ಬಳಿಕವೂ ನಾವು ಪೈಪೋಟಿ ನೀಡುತ್ತಿದ್ದೇವೆ. ನಿಮ್ಮ ಕಠಿಣ ಶಬ್ದದ ಮಾತುಗಳು, ಟೀಕೆಗಳು ನಮ್ಮನ್ನು ಮತ್ತಷ್ಟು ಕೆಲಸ ಮಾಡುವಂತೆ ಮಾಡಿದೆ. ನಾವು ಸಾಕಷ್ಟು ಮೈಲಿ ದೂರ ಕ್ರಮಿಸಬೇಕಿದೆ. ಪ್ರತಿ ದಿನ ಸುಧಾರಿಸಿಕೊಳ್ಳುತ್ತಿದ್ದೇವೆ. ಅಭಿವೃದ್ಧಿಪಡಿಸುತ್ತಿದ್ದೇವೆ. ನಿಮ್ಮ ಟೀಕೆಗಳಿಗೆ ಧನ್ಯವಾದ ಎಂದು ಆನಂದ್ ಮಹೀಂದ್ರ ಉತ್ತರಿಸಿದ್ದಾರೆ.
ಖುದ್ದು ಆನಂದ್ ಮಹೀಂದ್ರ ಉತ್ತರಕ್ಕೆ ಸುಶಾಂತ್ ಮೆಹ್ತ ಪುಳಕಿತರಾಗಿದ್ದಾರೆ. ಮತ್ತೊಂದು ರಿಪ್ಲೈ ಮಾಡಿರುವ ಸುಶಾಂತ್, ನನ್ನ ಕಠಿಣ ಶಬ್ದಗಳಿಂದ ನೋಂದುಕೊಂಡಿದ್ದಾರೆ ಎಂದು ಟ್ವೀಟ್ ಡಿಲೀಟ್ ಮಾಡಿದ್ದೆ. ಮಹೀಂದ್ರ ತಂಡ ಕರೆ ಮಾಡಿ ಸೂಚಿಸಿತ್ತು. ಆದರೆ ಆನಂದ್ ಮಹೀಂದ್ರ ಟ್ವೀಟ್‌ಗೆ ಉತ್ತರಿಸಿದ್ದಾರೆ. ನನ್ನ ಟೀಕೆಗೆ ಉತ್ತರ ನೀಡಿರುವುದು ಸಂತಸ ತಂದಿದೆ ಎಂದು ಸುಶಾಂತ್ ಮೆಹ್ತಾ ಟ್ವೀಟ್ ಮಾಡಿದ್ದಾರೆ.