ಪ್ರತಿಷ್ಠಿತ ಟೆಸ್ಲಾ ಕಂಪನಿಯಲ್ಲಿ ಕೆಲಸಬೇಕಾ? ಭಾರತದಲ್ಲಿ ನೇಮಕಾತಿ ಆರಂಭ!

  • ಅಮರಿಕ ಮೂಲದ ಟೆಸ್ಲಾ ಇದೀಗ ಭಾರತದಲ್ಲಿ ನೇಮಕಾತಿ ಆರಂಭ
  • ವಿಶ್ವದ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕ ಕಂಪನಿ
  • ಕೈತುಂಬಳ ಸಂಬಳ ಸೇರಿ ಹಲವು ಅಮೆರಿಕನ್ ಸೌಲಭ್ಯ
American based electric car Tesla begins recruiting for top positions in India ckm

ನವದೆಹಲಿ(ಜೂ.03):  ಅಮೆರಿಕ ಪ್ರತಿಷ್ಠಿತ ಕಂಪನಿ ಟೆಸ್ಲಾ ಈಗಾಗಲೇ ಭಾರತಕ್ಕೆ ಕಾಲಿಟ್ಟಿದೆ. ಕೊರೋನಾ ನಡುವೆ ಭಾರತದಲ್ಲಿ ಡೀಲರ್‌ಶಿಪ್ ಶೂಂ ರೋ ತೆರೆದಿದೆ. ಇದರ ಜೊತೆ ಕಚೇರಿ ಕೂಡ ಆರಂಭಿಸುತ್ತಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಇದೀಗ ಭಾರತದಲ್ಲಿ ನೇಮಕಾತಿ ಆರಂಭಿಸುತ್ತಿದೆ.

ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನೆ: ಸ್ವತಃ ಸಿಎಂ ಬಿಎಸ್‌ವೈ ಘೋಷಣೆ

ಕ್ಯಾಲಿಫೋರ್ನಿಯಾ ಮೂಲದ ಟೆಸ್ಲಾ ಕಂಪನಿ ಭಾರತದಲ್ಲಿ  ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.  ಈಗಾಗಲೇ ಭಾರತದಲ್ಲಿ ಟೆಸ್ಲಾ ಕಂಪನಿಯು ಹಿರಿಯ ಕಾನೂನು ಸಲಹೆಗಾರರನ್ನು ನೇಮಕ ಮಾಡಿದೆ ಎಂದು ಟೆಸ್ಲಾ ಫ್ಯಾನ್ ಕ್ಲಬ್ ಟ್ವೀಟ್ ಮಾಡಿದೆ.

ಸುಮಾರು ನಾಲ್ಕು ವರ್ಷಗಳಿಂದ ಟೆಸ್ಲಾ ಜೊತೆಗಿರುವ ಪ್ರಶಾಂತ್ ಮೆನನ್ ಅವರನ್ನು ಭಾರತದ  ಟೆಸ್ಲಾ ಸಿಇಒ ಆಗಿ ಬಡ್ತಿ ನೀಡಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆದರೆ ಈ ಕುರಿತು ಟೆಸ್ಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವೆಚ್ಚ ಕಡಿಮೆ ಮಾಡಲು ಸರಕು ಆಮದು, ಮಾರಾಟ ತೆರಿಗೆ ಕುರಿತು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಲು ಟೆಸ್ಲಾ ಮುಂದಾಗಿದೆ. 

0 to 60 ಕಿ.ಮೀ ವೇಗ ಕೇವಲ 2 ಸೆಕೆಂಡ್‌ನಲ್ಲಿ; ಇದು ಟೆಸ್ಲಾ ಕಾರಿನ ಚಮತ್ಕಾರ!

ಟೆಸ್ಲಾ ಭಾರತ ಆಗಮನದೊಂದಿಗೆ ಎಲೆಕ್ಟ್ರಿಕ್ ಕಾರುಗಳ ಕ್ಷೇತ್ರದಲ್ಲಿ ಹೊಸ ಇತಿಹಾಸ ರಚಿಸಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಈಗಾಗಲೇ ಟಾಟಾ, ಹ್ಯುಂಡೈ, ಎಂಜಿ ಸೇರಿದಂತೆ ಕೆಲ ಕಾರು ಕಂಪನಿಗಳು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಇದೀಗ ಟೆಸ್ಲಾ ಕಡಿಮೆದರದಲ್ಲಿ ಕಾರು ಬಿಡುಗಡೆ ಮಾಡಿದರೆ ತೀವ್ರ ಪೈಪೋಟಿ ಎದುರಿಸಲಿದೆ. 

ಎಲನ್ ಮಸ್ಕ್ ಬದಲು ಮಸ್ಕ್ ಮೆಲನ್ ಉಚ್ಚರಿಸಿದ ಇಂಗ್ಲೀಷ್ ಟೀಚರ್; ವಿಡಿಯೋ ವೈರಲ್!

ಟೆಸ್ಲಾ ಅಮೆರಿಕದಿಂದ ಹೊರಗೆ ಶಾಂಘೈನಲ್ಲಿ ಮೊದಲ ಶಾಖೆ ಆರಂಭಿಸಿತು. ಇದೀಗ ಚೀನಾದ ವಾರ್ಷಿಕ ಕಾರು ಮಾರಾಟದಲ್ಲಿ ಟೆಸ್ಲಾ ಶೇಕಡಾ 6 ರಷ್ಟು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಚೀನಾದ ರೀತಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ತೆರೆದುಕೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣ ದುಬಾರಿ ಬೆಲೆ. ಹೀಗಾಗಿ ಭಾರತದಲ್ಲಿ ಟೆಸ್ಲಾಗೆ ಸವಾಲು ಬೆಟ್ಟದಷ್ಟಿದೆ.

Latest Videos
Follow Us:
Download App:
  • android
  • ios