ಏಕಕಾಲಕ್ಕೆ ವಿವಿಧ ರೆಸ್ಟೋರೆಂಟ್‌ಗಳಿಂದ ಫುಡ್ ಆರ್ಡರ್ ಮಾಡುವ ಗ್ರಾಹಕರಿಗೆ ಜೋಮ್ಯಾಟೋ ಮಲ್ಟಿ ಕಾರ್ಟ್ ಫೀಚರ್ ಪರಿಚಯಿಸಿದೆ. ಕಾರ್ಟ್ ಹಿಸ್ಟರಿ ಕ್ಲಿಯರ್ ಮಾಡದೇ ಫುಡ್ ಆರ್ಡರ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ನೂತನ ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು(ಜು.01) ಆಹಾರ ವಸ್ತುಗಳು, ತಿನಿಸುಗಳು, ವಿವಿದ ರೆಸ್ಟೋರೆಂಟ್‌ಗಳ ವಿಶೇಷ ಖಾದ್ಯಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಸವಿಯುವವರ ಸಂಖ್ಯೆ ಹೆಚ್ಚು. ಈಗ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಜೋಮ್ಯಾಟೋ ಸೇರಿದಂತೆ ಹಲವು ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡಿದೆ. ಆದರೆ ಜೋಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡುವಾಗ ಎದುರಾದ ಕೆಲ ಸಂಕೀರ್ಣತೆಯನ್ನು ನಿವಾರಿಸಲಾಗಿದೆ. ಇದೀಗ ಜೋಮ್ಯಾಟೋ ಮೂಲಕ ಗ್ರಾಹಕರು ಏಕಕಾಲದಲ್ಲಿ ವಿವಿಧ ರೆಸ್ಟೋರೆಂಟ್‌ಗಳ ಖಾದ್ಯಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಆರ್ಡರ್ ಮಾಡಬಹುದು. ಇದಕ್ಕಾಗಿ ಮಲ್ಟಿ ಕಾರ್ಟ್ ಫೀಚರ್ಸ್ ಪರಿಚಯಿಸಲಾಗಿದೆ.

ಮಲ್ಟಿ ಕಾರ್ಟ್ ಫೀಚರ್ಸ್ ಮೂಲಕ ಯಾವುದೇ ಅಡೆಚಣೆ ಇಲ್ಲದೆ ವಿವಿಧ ರೆಸ್ಟೋರೆಂಟ್‌ಗಳ ಖಾದ್ಯಗಳನ್ನು ಏಕಕಾಲದಲ್ಲಿ ಆರ್ಡರ್ ಮಾಡಬಹುದು. ಹೊಸ ಫೀಚರ್ಸ್‌ನಿಂದ ತಮ್ಮ ಕಾರ್ಟ್ ಹಿಸ್ಟರಿ ಕ್ಲೀಯರ್ ಮಾಡಬೇಕಾದ ಪ್ರಮೇಯ ಇಲ್ಲ. ಓರ್ವ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಕಾರ್ಟ್ ರಚಿಸಲು ಅವಕಾಶ ನೀಡಲಾಗಿದೆ. ಒಂದು ರೆಸ್ಟೋರೆಂಟ್‌ನಿಂದ ಒಂದು ಖಾದ್ಯ ಆರ್ಡರ್ ಮಾಡಿ, ಬೇರೊಂದು ರೆಸ್ಟೋರೆಂಟ್‌ನಿಂದ ಮತ್ತೊಂದು ಖಾದ್ಯ ಆರ್ಡರ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇವೆಲ್ಲವೂ ಏಕಕಾಲಕ್ಕೆ ಮಾಡಲು ಮಲ್ಟಿ ಕಾರ್ಟ್ ಫೀಚರ್ಸ್ ನೀಡಲಾಗಿದೆ.

Viral Post : ಹುಟ್ಟುಹಬ್ಬದಂದು ಗ್ರಾಹಕರಿಗೆ ಚಾಕೋಲೇಟ್ ಗಿಫ್ಟ್ ನೀಡಿದ ಜೊಮಾಟೊ ಹುಡುಗನಿಗೆ ಸಿಕ್ಕಿದ್ದೇನು?

ಒಂದು ಕಾರ್ಟ್‌ನಿಂದ ಆರ್ಡರ್ ಪೂರ್ಣಗೊಳಿಸಿದ ಬಳಿಕ ಹಿಂತಿರುಗಿ ಉಳಿದ ಕಾರ್ಟ್‌ಗಳಿಂದ ಬೇರೆ ರೆಸ್ಟೋರೆಂಟ್ ಆರ್ಡರ್ ಮುಂದುವರಿಸಬಹುದು. ಇದಕ್ಕಾಗಿ ಕಾರ್ಟ್ ಹಿಸ್ಟರ್ ಕ್ಲಿಯರ್ ಮಾಡಬೇಕಾದ ಅವಶ್ಯಕತೆ ಇಲ್ಲ. ಇದು ಡಿಜಿಟಲ್ ಕಾಮರ್ಸ್‌ನ ಓಪನ್ ನೆಟ್‌ವರ್ಕ್‌ನಲ್ಲಿ(ONDC) ಪಿನ್‌ಕೋಡ್‌ ಫಂಕ್ಷನ್ ರೀತಿ ಕಾರ್ಯನಿರ್ವಹಿಸಲಿದೆ.

ನೂತನ ಫೀಚರ್ಸ್ ಪರಿಚಯಿಸಿದ ಬಳಿಕ ಮಾತನಾಡಿದ ಜೋಮ್ಯಾಟೋ ವಕ್ತಾರ, ಗ್ರಾಹಕರ ಸುಲಭ ಹಾಗೂ ಉತ್ತಮ ಅನಭದ ಆರ್ಡರ್‌ಗಾಗಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ. ಗ್ರಾಹಕರು ತಮಗೆ ಇಷ್ಟವಾದ ಯಾವುದೇ ಆಹಾರವನ್ನು ಯಾವುದೇ ರೆಸ್ಟೆೋರೆಂಟ್‌ನಿಂದ ಸುಲಭವಾಗಿ ಆರ್ಡರ್ ಮಾಡುವಂತಿರಬೇಕು. ಗ್ರಾಹಕರು ಆರ್ಡರ್ ಮಾಡುವಾಗ ಯಾವುದೇ ಕಿರಿಕಿರಿ ಇರಬಾರದು ಅನ್ನೋದೇ ನಮ್ಮ ಉದ್ದೇಶ. ಹೊಸ ಮಲ್ಟಿ ಕಾರ್ಟ್ ಫೀಚರ್ಸ್‌ನಿಂದ ಜೋಮ್ಯಾಟೋ ಆರ್ಡರ್ ಹೆಚ್ಚಾಗಲಿದೆ. ವಹಿವಾಟು ವೃದ್ಧಿಸಲಿದೆ ಎಂದಿದ್ದಾರೆ.

ಬುದ್ಧಿವಂತ ವಿದ್ಯಾರ್ಥಿಯಲ್ಲ,ಆದರೂ ಐಐಟಿಯಲ್ಲಿ ಓದು,ಈಗ ದಿನದ ಗಳಿಕೆ ಒಂದು ಕೋಟಿ;ಇದು ಝೊಮ್ಯಾಟೋ ಸಿಇಒ ಯಶೋಗಾಥೆ!

ಜೋಮ್ಯಾಟೋ ತನ್ನ ಗ್ರಾಹಕರಿಗೆ ಯಾವುದೇ ಅಡೆಚಣೆ ಇಲ್ಲದ ಶಾಪಿಂಗ್ ಅನುಭವಕ್ಕೆ ತಂತ್ರಜ್ಞಾನದ ಮೂಲಕ ಪರಿಣಾಮಕಾರಿಯಾದ ಫೀಚರ್ಸ್ ಪರಿಚಯಿಸುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಜೋಮ್ಯಾಟೋ ನೇರ ಪ್ರತಿಸ್ಪರ್ಧಿಯಾಗಿರುವ ಸ್ವಿಗ್ಗಿ ಮಾರುಕಟ್ಟೆಯಲ್ಲಿ ಬಹುಪಾಲು ಹೊಂದಿದೆ. ಇದೀಗ ಜೋಮ್ಯಾಟೋ ಹೊಸ ಫೀಚರ್ಸ್ ಪರಿಚಯ ಮಾಡುವ ಮೂಲಕ ಭಾರತತದ ಇ ಕಾಮರ್ಸ್ ಫುಡ್ ಮಾರುಕಟ್ಟೆಯಲ್ಲಿ ಅಗ್ರಗಣ್ಯನಾಗಿ ಮುನ್ನಡೆಯಲು ಸಿದ್ಧತೆ ನಡೆಸಿದೆ. 

ಸಮಯಕ್ಕೆ ಸರಿಯಾಗಿ ಡೆಲಿವರಿ ಸೇರಿದಂತೆ ಜೋಮ್ಯಾಟೋ ತನ್ನ ಸೇವೆಯಲ್ಲೂ ಹಲವು ಬದಲಾವಣೆ ಮಾಡಿಕೊಂಡಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫೀಚರ್ಸ್ ಅಪ್‌ಡೇಟ್ ಮಾಡುತ್ತಿದೆ.