Asianet Suvarna News Asianet Suvarna News

ಬರೋಬ್ಬರಿ 79 ಕೋಟಿಗೆ ದೆಹಲಿಯಲ್ಲಿ 5 ಎಕರೆ ಭೂಮಿ ಖರೀದಿಸಿದ ಝೊಮೆಟೋ ಹೆಡ್‌! ಶ್ರೀಮಂತರಿಗೆ ಫಾರ್ಮ್‌ಹೌಸ್‌ ಒಲವೇಕೆ?

ಝೊಮೆಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು ಇತ್ತೀಚೆಗೆ ದೆಹಲಿಯ ಡೇರಾ ಮಂಡಿ ಗ್ರಾಮದಲ್ಲಿ ಬರೋಬ್ಬರಿ 5 ಎಕರೆ ಜಮೀನನ್ನು ಖರೀದಿಸಿದ್ದು ಒಟ್ಟು 79 ಕೋಟಿ ರೂಪಾಯಿ ನೀಡಿ ಈ ಭೂಮಿ ಖರೀದಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

Zomato Founder Deepinder Goyal  purchased  5-Acre Land In Delhi gow
Author
First Published Feb 6, 2024, 3:08 PM IST

ಝೊಮೆಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು ಇತ್ತೀಚೆಗೆ ದೆಹಲಿಯ ಡೇರಾ ಮಂಡಿ ಗ್ರಾಮದಲ್ಲಿ ಬರೋಬ್ಬರಿ 5 ಎಕರೆ ಜಮೀನನ್ನು ಖರೀದಿಸಿದ್ದು ಒಟ್ಟು 79 ಕೋಟಿ ರೂಪಾಯಿ ನೀಡಿ ಈ ಭೂಮಿ ಖರೀದಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ರಿಯಲ್ ಎಸ್ಟೇಟ್ ಡೇಟಾ ಅನಾಲಿಟಿಕ್ಸ್ ಸಂಸ್ಥೆ ಸಿಆರ್‌ಇ ಮ್ಯಾಟ್ರಿಕ್ಸ್ ಅನ್ನು ಉಲ್ಲೇಖಿಸಿ ಖಾಸಗಿ ವೆಬ್‌ತಾಣವೊಂದು ಈ ಬಗ್ಗೆ ವರದಿ ಮಾಡಿದೆ.  ಭೂಮಿಯನ್ನು ಖರೀದಿ ಮಾಡುವಾಗ ಎರಡು ಪ್ರತ್ಯೇಕ ವಹಿವಾಟುಗಳನ್ನು ನಡೆಸಲಾಯಿತು, ಆರಂಭಿಕ 2.5 ಎಕರೆಯನ್ನು ಮಾರ್ಚ್ 2023 ರಲ್ಲಿ 29 ಕೋಟಿ ರೂ.ಗೆ ಖರೀದಿಸಲಾಯಿತು, ನಂತರ ಮುಂದಿನ 2.5 ಎಕರೆಯನ್ನು ರೂ. ಸೆಪ್ಟೆಂಬರ್ 2023 ರಲ್ಲಿ 50 ಕೋಟಿ ರೂ. ಗೆ ಖರೀದಿ ಮಾಡಲಾಗಿದೆ.

ಕನ್ನಡದ ಸೂಪರ್ ಡೂಪರ್ ಹಿಟ್‌ ಚಿತ್ರದಲ್ಲಿ ಪಡ್ಡೆ ಹುಡುಗ್ರ ನಿದ್ದೆ ಕದ್ ...

ಶ್ರೀಮಂತ ವ್ಯಕ್ತಿಗಳು ಫಾರ್ಮ್‌ಹೌಸ್‌ಗಳಲ್ಲಿ ಹೂಡಿಕೆ ಮಾಡುವಂತಹ ಪ್ರವೃತ್ತಿಯು ಕೋವಿಡ್ ನಂತರದ ಯುಗದಲ್ಲಿ  ಅತೀ ಹೆಚ್ಚು ಪ್ರಚಲಿತದಲ್ಲಿದೆ. ಮಾತ್ರವಲ್ಲ ಇದಕ್ಕೆ ಬೇಡಿಕೆ ಕೂಡ ಹೆಚ್ಚಳವಾಗಿದೆ. ಇಂಡಿಯಾ ಸೋಥೆಬೈಸ್ ಇಂಟರ್‌ನ್ಯಾಶನಲ್ ರಿಯಾಲ್ಟಿ (ಐಎಸ್‌ಐಆರ್) ನಡೆಸಿದ ಸಮೀಕ್ಷೆಯ ಪ್ರಕಾರ, 83% ಶ್ರೀಮಂತ ಭಾರತೀಯರು ಬಹು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ.ಇವರೆಲ್ಲ ವೈವಿಧ್ಯಮಯ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೊಗಳತ್ತ ಬೆಳೆಯುವ ಬಗ್ಗೆ ತಮ್ಮ ಒಲವನ್ನು ಪ್ರದರ್ಶಿಸುತ್ತಾರೆ.

ಪ್ರಾಥಮಿಕ ನಿವಾಸಗಳ ಜೊತೆಗೆ, ಸಮೀಕ್ಷೆಯು ವಾಣಿಜ್ಯ ರಿಯಲ್ ಎಸ್ಟೇಟ್ (34%), ಹಾಲಿಡೇ ಹೋಮ್‌ಗಳು (25%), ಕೃಷಿ ಭೂಮಿ (21%), ಮತ್ತು ಫಾರ್ಮ್‌ಹೌಸ್‌ಗಳ (20%) ಮಾಲೀಕತ್ವ ಇರುವುದು ಕಂಡುಬಂದಿದೆ.

ಅಲ್ಲದೆ, ಇತರ ಪ್ರಮುಖ ವ್ಯಕ್ತಿಗಳಾದ ಜೆಸಿ ಚೌಧರಿ, ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಭಾರತದ ಪ್ರೀಮಿಯಂ ಸ್ಯಾನಿಟರಿ ವೇರ್ ಕಂಪನಿಯಾದ ಜಾಕ್ವಾರ್ ಕೂಡ ಫಾರ್ಮ್‌ಹೌಸ್‌ಗಳಲ್ಲಿ ಗಣನೀಯ ಹೂಡಿಕೆಯನ್ನು ಮಾಡಿದ್ದಾರೆ. ಚೌಧರಿ ಅವರು ದಕ್ಷಿಣ ದೆಹಲಿಯಲ್ಲಿ 5 ಎಕರೆ ಫಾರ್ಮ್‌ಹೌಸ್ ಅನ್ನು ರೂ 96 ಕೋಟಿಗೆ ಖರೀದಿ ಮಾಡಿದ್ದರು. ಆದರೆ ಜಾಕ್ವಾರ್ ಅವರು ವೆಸ್ಟೆಂಡ್ ಗ್ರೀನ್ಸ್‌ನಲ್ಲಿ ಮೂರು ಫಾರ್ಮ್‌ಹೌಸ್‌ಗಳನ್ನು ಸರಿಸುಮಾರು ರೂ 235 ಕೋಟಿಗೆ ಖರೀದಿಸಿದ್ದಾರೆ ಎಂದು ವರದಿ ತಿಳಿಸಿದೆ.

ಬ್ಲಾಕ್‌ಬ್ಲಸ್ಟರ್‌ ಹಿಟ್‌ ಸಿನೆಮಾ ನೀಡಿದ ನಂತರ ಸಲ್ಮಾನ್ ಖಾನ್‌ ಜತೆ ನ ...

ದೆಹಲಿಯು ತನ್ನ ಮಾಸ್ಟರ್ ಪ್ಲಾನ್‌ನಲ್ಲಿ ಫಾರ್ಮ್‌ಹೌಸ್‌ಗಳಿಗಾಗಿ ಗೊತ್ತುಪಡಿಸಿದ ಪ್ರದೇಶಗಳನ್ನು ಹೊಂದಿರುವ ಏಕೈಕ ಭಾರತೀಯ ನಗರವಾಗಿ ಎದ್ದು ಕಾಣುತ್ತದೆ, ಇದು ಮೆಹ್ರೌಲಿ, ಪಾಣಿಪತ್, ಬಿಜ್ವಾಸನ್, ರಾಜೋಕ್ರಿ ಮತ್ತು ಚತ್ತರ್‌ಪುರದ ಸುತ್ತಲೂ ಸಮೂಹಗಳಲ್ಲಿ ನೆಲೆಗೊಂಡಿದೆ. ವೆಸ್ಟೆಂಡ್ ಗ್ರೀನ್ಸ್, ಸುಲ್ತಾನ್‌ಪುರ್, ಪುಷ್ಪಾಂಜಲಿ, ವಸಂತ್ ಕುಂಜ್, DLF ಛತ್ತರ್‌ಪುರ್, ರಾಧೇಯ್ ಮೋಹನ್ ಡ್ರೈವ್ ಮತ್ತು ಅನ್ಸಲ್ ಸತ್ಬರಿ ಮುಂತಾದ ಬೇಡಿಕೆಯ ಪ್ರದೇಶಗಳಲ್ಲಿ ಪ್ರಸ್ತುತ INR 10 ಕೋಟಿಯಿಂದ INR 150 ಕೋಟಿವರೆಗಿನ ಅಂದಾಜು 300 ಫಾರ್ಮ್‌ಹೌಸ್‌ಗಳು ಮಾರಾಟಕ್ಕೆ ಲಭ್ಯವಿವೆ.

ಒಟ್ಟಾರೆಯಾಗಿ, ನವದೆಹಲಿ ಮತ್ತು ಸುತ್ತಮುತ್ತಲಿನ 18 ಹಳ್ಳಿಗಳಲ್ಲಿ ಸುಮಾರು 4,000 ಫಾರ್ಮ್‌ಹೌಸ್‌ಗಳಿವೆ, ಪ್ರತಿಯೊಂದೂ ಅರ್ಧ ಎಕರೆಯಿಂದ 2.5 ಎಕರೆಗಳವರೆಗೆ ಗಾತ್ರದಲ್ಲಿ ಬದಲಾಗುತ್ತವೆ. 

Follow Us:
Download App:
  • android
  • ios