ಯೂಟ್ಯೂಬ್ ಶಾರ್ಟ್ಸ್ ವೀಕ್ಷಣೆ ಲೆಕ್ಕಾಚಾರದ ವಿಧಾನ ಮಾರ್ಚ್ 31 ರಿಂದ ಬದಲಾಗಲಿದೆ. ಈ ಹಿಂದೆ ವೀಡಿಯೊವನ್ನು ನೋಡಿದ ಸಮಯದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತಿತ್ತು, ಆದರೆ ಇನ್ಮುಂದೆ ಎಷ್ಟು ಬಾರಿ ಪ್ಲೇ ಮಾಡಲಾಗಿದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಆದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಂಟೆಂಟ್ ಕ್ರಿಯೇಟರ್ಸ್ ತಮ್ಮ ವೀಡಿಯೊಗಳ ವ್ಯಾಪ್ತಿಯನ್ನು ಅಂದಾಜು ಮಾಡಲು ಇದು ಸಹಾಯ ಮಾಡುತ್ತದೆ.
ಯೂಟ್ಯೂಬ್ ಶಾರ್ಟ್ಸ್ (YouTube Shorts) ಪೋಸ್ಟ್ ಮಾಡುವ ಕಂಟೆಂಟ್ ಕ್ರಿಯೇಟರ್ಸ್ (Content Creators) ಗೆ ಖುಷಿಯಾಗುವ ಸುದ್ದಿ ಒಂದಿದೆ. ಯೂಟ್ಯೂಬ್ ಶಾರ್ಟ್ಸ್ ವೀವ್ಸ್ ಕೌಂಟ್ ಮಾಡುವ ಮೆಟ್ರಿಕ್ ಬದಲಾವಣೆ ಆಗ್ತಿದೆ. ಮಾರ್ಚ್ 31ರಿಂದ ವೀವ್ಸ್ ಕೌಂಟ್ ಲೆಕ್ಕ ಹಾಕುವ ವಿಧಾನ ಬದಲಾಗಲಿದೆ ಎಂದು ಕಂಪನಿ ಹೇಳಿದೆ. ಇದು ಕಂಟೆಂಟ್ ಕ್ರಿಯೇಟರ್ಸ್ ಗೆ ಸಾಕಷ್ಟು ಸಹಾಯ ಮಾಡಲಿದೆ. ಅವರ ವಿಡಿಯೋಕ್ಕೆ ಜನರು ಹೇಗೆ ಪ್ರತಿಕ್ರಿಯೆ ನೀಡ್ತಿದ್ದಾರೆ ಎಂಬುದನ್ನು ತಿಳಿಯಲು ಅವರಿಗೆ ಇದರಿಂದ ಸುಲಭ ಆಗಲಿದೆ.
ಈಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗಿದೆ. ಇನ್ಸ್ಟಾಗ್ರಾಮ್, ಎಕ್ಸ್ ಖಾತೆ ಜೊತೆ ಯೂಟ್ಯೂಬ್ ಹಾಗೂ ಯೂಟ್ಯೂಬ್ ಶಾರ್ಟ್ಸ್ ಮೂಲಕ ಜನರು ಹಣ ಸಂಪಾದನೆ ಮಾಡ್ತಿದ್ದಾರೆ. ಚಿಕ್ಕ ಚಿಕ್ಕ ವಿಡಿಯೋ ಪೋಸ್ಟ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿರುವ ಅನೇಕರು ನಮ್ಮ ಮುಂದಿದ್ದಾರೆ. ಈ ಮಧ್ಯೆ ಕಂಪನಿ ಶಾರ್ಟ್ಸ್ ವೀವ್ಸ್ ಕೌಂಟ್ ವಿಧಾನ ಬದಲಿಸಿದ್ದು, ಇದು ಶಾರ್ಟ್ ಕಂಟೆಂಟ್ ಕ್ರಿಯೇಟರ್ಸ್ ಗೆ ಹೆಚ್ಚಿನ ಬಳಕೆದಾರರನ್ನು ತಲುಪಲು ನೆರವಾಗಲಿದೆ.
ಹಾಲು ಮಾರುವ ಹುಡುಗನ ಜೊತೆ ಕುಮಾರ್ ವಿಶ್ವಾಸ್ ಮಗಳ ಮದುವೆ, ಲೀಟರ್ ಹಾಲಿನ ಬೆಲೆ
ಮಾರ್ಚ್ 31ರಿಂದ ಏನು ಬದಲಾವಣೆ ? : ಸದ್ಯ ಯೂಟ್ಯೂಬ್ ಶಾರ್ಟ್ಸ್ ಒಂದನ್ನು ಎಷ್ಟು ಸೆಕೆಂಡ್ ನೋಡಲಾಗಿದೆ ಎಂಬ ಆಧಾರದ ಮೇಲೆ ವೀವ್ಸ್ ಲೆಕ್ಕಾಚಾರ ಮಾಡಲಾಗುತ್ತದೆ. ಕಂಪನಿ, ನಿಗದಿತ ಸಂಖ್ಯೆಯ ಸೆಕೆಂಡ್ ಹೊಂದಿದೆ. ಆ ಸೆಕೆಂಡಿನವರೆಗೆ ಬಳಕೆದಾರ ವಿಡಿಯೋ ನೋಡಿದ್ರೆ ಮಾತ್ರ ವೀವ್ಸ್ ಕೌಂಟ್ ಆಗ್ತಾ ಇತ್ತು. ಆದ್ರೆ ಇನ್ಮುಂದೆ ಈ ನಿಯಮ ಬದಲಾಗ್ತಿದೆ. ಇಲ್ಲಿ ಯಾವುದೇ ಸೆಕೆಂಡಿಗೆ ಮಹತ್ವ ಇರುವುದಿಲ್ಲ. ಶಾರ್ಟ್ಸನ್ನು ಎಷ್ಟು ಬಾರಿ ಪ್ಲೇ ಮಾಡಲಾಗಿದೆ ಹಾಗೂ ಮರು ಪ್ಲೇ ಮಾಡಲಾಗಿದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಇದ್ರಿಂದ ಶಾರ್ಟ್ಸ್ ವೀವ್ಸ್ ಹೆಚ್ಚಾಗಲಿದೆ. ಇನ್ಸ್ಟಾಗ್ರಾಮ್ ಹಾಗೂ ಟಿಕ್ ಟಾಕ್ ನಂತೆ ಇನ್ಮುಂದೆ ವೀವ್ಸ್ ಲೆಕ್ಕಾಚಾರ ನಡೆಯಲಿದೆ.
ದೇಶದ 2000 ನಗರಗಳಲ್ಲಿ IPTV ಸರ್ವಿಸ್ ಆರಂಭಿಸಿದ ಏರ್‌ಟೆಲ್; ಕಡಿಮೆ ಬೆಲೆಯಲ್ಲಿ ಸೂಪ
ಹೆಚ್ಚಾಗಲಿದೆಯೇ ಆದಾಯ? : ವೀವ್ಸ್ ಹೆಚ್ಚಾದಂತೆ ಕಂಟೆಂಟ್ ಕ್ರಿಯೇಟರ್ಸ್ ಆದಾಯ ಹೆಚ್ಚಾಗುತ್ತಾ ಎನ್ನುವ ಪ್ರಶ್ನೆ ಬರೋದು ಸಹಜ. ಅದಕ್ಕೆ ಕಂಪನಿ ಸ್ಪಷ್ಟನೆ ನೀಡಿದೆ. ಶಾರ್ಟ್ಸ್ ವೀವ್ಸ್ ಲೆಕ್ಕ ಹಾಕುವ ವಿಧಾನ ಬದಲಾಗುತ್ತದೆ. ಆದ್ರೆ ಇದು ಗಳಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಣ ಸಂಪಾದನೆ ಹಾಗೂ ಕಾರ್ಯಕ್ರಮದ ಪ್ರಸಾರಕ್ಕೆ ಸಂಬಂಧಿಸಿದಂತೆ ಹಳೆ ನಿಯಮವೇ ಜಾರಿಯಲ್ಲಿರಲಿದೆ. ಕಂಟೆಂಟ್ ಕ್ರಿಯೇಟರ್ಸ್ ಬೇಡಿಕೆ ಮೇಲೆ ಈ ನಿಯಮ ಜಾರಿಗೆ ತರಲಾಗಿದೆ. ನಿಯಮ ಬದಲಾದ ನಂತ್ರ ಕ್ರಿಯೇಟರ್ಸ್ ತಮ್ಮ ಕಂಟೆಂಟ್ ವ್ಯಾಪ್ತಿಯನ್ನು ಅಂದಾಜು ಮಾಡಬಹುದು. ಅದ್ರ ಆಧಾರದ ಮೇಲೆ ಕಂಟೆಂಟ್ ಮೇಲೆ ಕೆಲಸ ಮಾಡಬಹುದು. ಕಂಟೆಂಟ್ ಸುಧಾರಿಸುವ ಅಥವಾ ಬದಲಿಸುವ ಅಗತ್ಯವಿದ್ರೆ ಅದ್ರ ಮೇಲೆ ಹೆಚ್ಚಿನ ಗಮನ ಹರಿಸಬಹುದು. ಕ್ರಿಯೇಟರ್ಸ್ ಗೆ ಹಳೆ ಆಯ್ಕೆಯನ್ನು ಕಂಪನಿ ನೀಡಲಿದೆ. ಕ್ರಿಯೇಟರ್ಸ್ ಹಳೆ ವೀವ್ಸ್ ವಿಧಾನವನ್ನೂ ವೀಕ್ಷಣೆ ಮಾಡಬಹುದು. ಯೂಟ್ಯೂಬ್ ಅನಾಲಿಸ್ಟ್ (YouTube Analytics) ನ ಸುಧಾರಿತ ಮೋಡ್‌ಗೆ ಹೋಗುವ ಮೂಲಕ ಅದನ್ನು ವೀಕ್ಷಿಸಬಹುದು.
ಯೂಟ್ಯೂಬ್ ಶಾರ್ಟ್ಸ್ ಮೂಲಕ ಹಣ ಗಳಿಸಲು ಕೆಲವು ಮಾನದಂಡಗಳಿವೆ. ಚಾನೆಲ್ 1000 ಸಬ್ಸ್ಕ್ರೈಬರ್ ಹೊಂದಿರಬೇಕು. ಕಳೆದ 90 ದಿನಗಳಲ್ಲಿ ಚಾನಲ್ 10 ಮಿಲಿಯನ್ ವೀವ್ಸ್ ಹೊಂದಿರಬೇಕು. ಯೂಟ್ಯೂಬ್ ವಿಡಿಯೋದಲ್ಲಿ ಕ್ರಿಯೇಟರ್ ಜಾಹೀರಾತಿನ ಮೂಲಕ ಹಣ ಸಂಪಾದನೆ ಮಾಡ್ತಾನೆ. ಶಾರ್ಟ್ಸ್ ನಲ್ಲಿ ಜಾಹೀರಾತು ಬರೋದಿಲ್ಲ. ಇಲ್ಲಿ ವೀವ್ಸ್ ಮುಖ್ಯ. ಒಂದು ಮಿಲಿಯನ್ ವೀವ್ಸ್ ಗೆ 100ರಿಂದ 300 ಡಾಲರ್ ಸಿಗುತ್ತದೆ.
