ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದಾಗಿ ಊಬರ್, ಓಲಾ ಸಿಗದೇ ಇದ್ದಾಗ ಯುವಕನೊಬ್ಬ ಪೋರ್ಟರ್ ಆ್ಯಪ್ ಮೂಲಕ ತನ್ನನ್ನೇ ಆಫೀಸ್‌ಗೆ ಕಳುಹಿಸಿಕೊಂಡ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದಾಗಿ ಊಬರ್, ಓಲಾ ಸಿಗದೇ ಇದ್ದಾಗ ಯುವಕನೊಬ್ಬ ಪೋರ್ಟರ್ ಆ್ಯಪ್ ಮೂಲಕ ತನ್ನನ್ನೇ ಆಫೀಸ್‌ಗೆ ಕಳುಹಿಸಿಕೊಂಡ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನ ಟ್ರಾಫಿಕ್ ಜನರಿಗೆ ಒಂದಲ್ಲ ಒಂದು ವಿಚಿತ್ರ ಸಂಗತಿಗಳನ್ನು ಮಾಡಿಸುತ್ತದೆ. ಇಲ್ಲಿ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯ. ಟ್ರಾಫಿಕ್‌ನಲ್ಲಿ ಬೈಕ್ ಮೇಲೆ ಕೂತು ಮೀಟಿಂಗ್‌ಗಳಲ್ಲಿ ಭಾಗವಹಿಸುವುದು, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದು ಹೀಗೆ ನಾನಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅದರೆ, ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದುಮ ನೆಟ್ಟಿಗರು ಪರ ವಿರೋಧ ಚರ್ಚೆ ಮಾಡಿದ್ದಾರೆ. ಅಷ್ಟಕ್ಕೂ ಈ ಚರ್ಚೆಗೆ ಕಾರಣವಾಗಿರುವುದು ಗೂಡ್ಸ್ ಸರಬರಾಜು ಮಾಡುವ ಪೋರ್ಟರ್ ವಾಹನದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಒಬ್ಬರು ಪ್ರಯಾಣಿಸಿ ಆಫೀಸಿಗೆ ತಲುಪಿದ್ದಾರೆ.
ಇದನ್ನೂ ಓದಿ: ರಸ್ತೆ ಪಕ್ಕ ನಿಂತಿದ್ದ 6 ವಿದ್ಯಾರ್ಥಿನಿಯರ ಮೇಲೆ ಕಾರ್ ಹತ್ತಿಸಿದ ಪಾಪಿ! | Suvarna News | Kannada News
ಕೆಲವೊಮ್ಮೆ ಊಬರ್, ಓಲಾ ಸಹ ಸಿಗದ ಪರಿಸ್ಥಿತಿ ಬಂದಾಗ ಸಮಯಕ್ಕೆ ಸರಿಯಾಗಿ ತಲುಪುವುದು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಒಬ್ಬ ಯುವಕ ಮಾಡಿದ ಕೆಲಸ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಊಬರ್, ಓಲಾ ಸಿಗದೇ ಇದ್ದಾಗ ತಾನು ಏನು ಮಾಡಿದೆ ಎಂದು ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಪೋರ್ಟರ್ ಆ್ಯಪ್ ಮೂಲಕ ತನ್ನನ್ನೇ ಆಫೀಸ್‌ಗೆ ಕಳುಹಿಸಿಕೊಂಡಿದ್ದಾನೆ ಈ ಯುವಕ. ಸಾಮಾನುಗಳನ್ನು ಸಾಗಿಸಲು ಬಳಸುವ ಪೋರ್ಟರ್ ಆ್ಯಪ್‌ನಲ್ಲಿ ಮನುಷ್ಯರನ್ನೂ ಕಳುಹಿಸಬಹುದೇ? ಊಬರ್, ಓಲಾ ಸಿಗದೇ ಇದ್ದಾಗ ಪೋರ್ಟರ್ ಆ್ಯಪ್ ಮೂಲಕ ತನ್ನನ್ನೇ ಆಫೀಸ್‌ಗೆ ಕಳುಹಿಸಿಕೊಂಡೆ ಎಂದು ಬೈಕ್ ಮೇಲೆ ಕುಳಿತಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದಾನೆ.
ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವಕನ ಐಡಿಯಾ ಚೆನ್ನಾಗಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಪೋರ್ಟರ್ ಕಂಪನಿಯೂ ಯುವಕನ ಬುದ್ಧಿವಂತಿಕೆ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಕ್ಕೆ ಮೆಚ್ಚುಗೆ ಸೂಚಿಸಿದೆ.
