ತಿಂಗಳಿಗೆ ಲಕ್ಷ ಲಕ್ಷ ದುಡಿಯೋ ಈ ಕೋಣ ಸಂಜೆ ವಾಕಿಂಗ್ ಮಾಡಿ, ಟಿವಿ ನೋಡಿಯೇ ಮಲಗೋದು!

ಕೋಣನಿಗಿಂತ ಕಡೆ  ಅಂತಾ ನಾವು ಬೈತಿರ್ತೇವೆ. ಅಂದ್ರೆ ಯಾವುದಕ್ಕೂ ಪ್ರಯೋಜನವಿಲ್ಲದ ದಡ್ಡ ಎಂಬ ಅರ್ಥವನ್ನು ಇದು ನೀಡುತ್ತದೆ. ಆದ್ರೆ ಕೋಣ ಅಪ್ರಯೋಜಕ ಅಲ್ಲ. ಐಷಾರಾಮಿ ಕೋಣದ ವಿವರ ಇಲ್ಲಿದೆ.
 

You Will Be Surprised To Hear The Income Of This Buffalo roo

ಜಾನುವಾರುಗಳ ಸಾಕಣೆ ಎಂದಾಗ ಅಲ್ಲಿ ದನ ಹಾಗೂ ಎಮ್ಮೆ ಪ್ರಾಮುಖ್ಯತೆ ಪಡೆಯುತ್ತದೆ. ಹೊಲದಲ್ಲಿ ಕೆಲಸ ಮಾಡುವವರು ಎತ್ತುಗಳನ್ನು ಸಾಕುತ್ತಾರೆಯೇ ವಿನಾ ಕಾರಣಕ್ಕೆ ಎತ್ತುಗಳಿಗೆ ಹೆಚ್ಚು ಆದ್ಯತೆ ನೀಡೋದಿಲ್ಲ. ಕೊಟ್ಟಿಗೆಯಲ್ಲಿರುವ ಎಮ್ಮೆ ಅಥವಾ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದಾಗ ಸಂಭ್ರಮ ಡಬಲ್ ಆಗಿರುತ್ತದೆ. ಮುಂದೆ ಅದ್ರ ಹಾಲು ಬಳಕೆಗೆ ಬರುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಕೊಟ್ಟಿಗೆಗೆ ಕೋಣ ಅಥವಾ ಎತ್ತು ಬಂದಾಗ ಸಂಭ್ರಮವಿರೋದಿಲ್ಲ. ಅದು ಸ್ವಲ್ಪ ದೊಡ್ಡದಾಗ್ತಿದ್ದಂತೆ ಅದನ್ನು ಮಾರಾಟ ಮಾಡಲು ಅನೇಕರು ಬಯಸ್ತಾರೆ. ಎತ್ತಿಗಿಂತ ಕೋಣನ ಮೇಲೆ ಪ್ರೀತಿ ಬಹಳ ಕಡಿಮೆ ಎಂದ್ರೂ ತಪ್ಪಾಗೋದಿಲ್ಲ. ನೀವು ಸಾಮಾನ್ಯವಾಗಿ ಯಾರ ಮನೆಯ ಕೊಟ್ಟಿಗೆಯಲ್ಲೂ ಕೋಣನನ್ನು ನೋಡೋದು ಕಷ್ಟ. ಅದು ಪ್ರಯೋಜನಕ್ಕಿಲ್ಲ, ಬರೀ ಹೊಟ್ಟೆಗೆ ಹಾಕ್ಬೇಕು ಎನ್ನುವ ಕಾರಣಕ್ಕೇ ಅನೇಕರು ಮಾರುತ್ತಾರೆ. ಆದ್ರೆ ಇಂದು ನಾವು ಹೇಳ್ತಿರುವ ಸುದ್ದಿಯಲ್ಲಿ ಕೋಣಕ್ಕೂ ಬೆಲೆ ಇದೆ ಎಂಬುದು ನಿಮಗೆ ಗೊತ್ತಾಗಲಿದೆ. ಕೋಣನನ್ನು ನೀವು ಸರಿಯಾಗಿ ಬಳಸಿಕೊಂಡ್ರೆ ಅದ್ರಿಂದ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಬಹುದು. 

ನಾವು ಹೇಳಲು ಹೊರಟ ಕೋಣ (Buffalo) ಪಾಣಿಪತ್  ಮೂಲದ್ದು. ಕೋಣದ ವಯಸ್ಸು ಕೇವಲ ಆರು ವರ್ಷ. ಆದ್ರೂ 30 ಸಾವಿರ ಕರುವಿಗೆ ಅಪ್ಪನಾಗಿದ್ದಾನೆ. ಅಷ್ಟೇ ಅಲ್ಲ ಪ್ರತಿ ತಿಂಗಳಿ ಎಂಟು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತದೆ. 

ಚಹಾ ಮಾರುತ್ತಿದ್ದವರೂ ಕೋಟ್ಯಾಧಿಪತಿಗಳ್ತಾರೆ, ಇದು ಅದೃಷ್ಟವೋ, ಯೋಗವೋ?

ಈ ಕೋಣನನ್ನು ಪಾಟ್ನಾ (Patna) ದಲ್ಲಿ ನಡೆದ ಡೈರಿ (Dairy) ಮತ್ತು ಕ್ಯಾಟಲ್ ಎಕ್ಸ್‌ಪೋದಲ್ಲಿ (Cattle Expo) ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಎಲ್ಲರ ಆಕರ್ಷಣಗೆ ಈ ಕೋಣ ಅಂದ್ರೆ ತಪ್ಪಾಗಲಾರದು. ಅದ್ರ ತೂಕ 15 ಕ್ವಿಂಟಲ್ ಇದೆ. ಅದಕ್ಕೆ ಐಷಾರಾಮಿ (Luxury) ಜೀವನ ನಡೆಸುವ ಅವಕಾಶವಿದೆ. ಅದ್ರ ಆರೈಕೆ ನೋಡಿದ್ರೆ ನೀವು ಬೆಚ್ಚಿ ಬೀಳ್ತಿರಾ. ಪ್ರತಿದಿನ ಒಂದು ಲೀಟರ್ ಸಾಸಿವೆ ಎಣ್ಣೆಯಿಂದ ಇದು ಮಸಾಜ್ ಮಾಡಿಕೊಳ್ಳುತ್ತದೆ.

ಇದನ್ನು 5 ಜನರ ತಂಡ 24 ಗಂಟೆಗಳ ಕಾಲ ಎಚ್ಚರಿಕೆಯಿಂದ ನೋಡಿಕೊಳ್ಳುತ್ತದೆ. ಇದ್ರ ಆರೈಕೆಗೆ ಮಾಲೀಕ ಸಿಕ್ಕಾಪಟ್ಟೆ ಖರ್ಚು ಕೂಡ ಮಾಡ್ತಾನೆ. ಪಾಣಿಪತ್ ನಿವಾಸಿ ನರೇಂದ್ರ ಸಿಂಗ್ ಇದ್ರ ಮಾಲೀಕ. ಗೋಲು-2 ಇದ್ರ ಹೆಸರು. ಎರಡು ವರ್ಷಗಳ ಹಿಂದೆ ಪಾಣಿಪತ್ ಕೃಷಿ ಮೇಳದಲ್ಲಿ ಈ ಕೋಣದ ಬೆಲೆ 10 ಕೋಟಿಯಾಗಿತ್ತು. ಮೇವಿನ ಹೊರತಾಗಿ ಪ್ರತಿನಿತ್ಯ ಹತ್ತು ಲೀಟರ್ ಹಾಲು ಕುಡಿಯುತ್ತಿದ್ದು, ಗೋಲು-2 , 10 ಕೆ.ಜಿ ಸೇಬು ಹಣ್ಣು ತಿನ್ನುತ್ತದೆ.  ಪ್ರತಿದಿನ 30 ಕೆಜಿ ಮೇವು, ಏಳು ಕೆಜಿ ಗೋಧಿ ಕಾಳು ಮತ್ತು 50 ಗ್ರಾಂ ಖನಿಜ ಮಿಶ್ರಣವನ್ನು ನೀಡಲಾಗುತ್ತದೆ. 

ಮೊದಲೇ ಹೇಳಿದಂತೆ ಈ ಕೋಣ ಐಷಾರಾಮಿ ಜೀವನ ನಡೆಸುತ್ತಿದೆ. ಕೋಣ ಬೆಳಗ್ಗೆ ಹಾಗೂ ಸಂಜೆ ಐದು ಕಿಲೋಮೀಟರ್ ನಡೆಯುತ್ತದೆ. ಬೆಳಿಗ್ಗೆ ವಾಕಿಂಗ್ ಹೋಗಿ ಬಂದ್ಮೇಲೆ ಸ್ನಾನ ಮಾಡಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತದೆ. ನಂತ್ರ ಮತ್ತೆ ವಾಕಿಂಗ್ ಮಾಡುತ್ತದೆ. ರಾತ್ರಿ ನಾಲ್ಕು ಗಂಟೆಗಳ ಕಾಲ ಎಸಿ ರೂಮಿನಲ್ಲಿ ಕುಳಿತು ಟಿವಿ ವೀಕ್ಷಣೆ ಮಾಡುತ್ತದೆ.

ಕೊಳಕು ಕ್ಲೀನ್ ಮಾಡೇ ಕೋಟ್ಯಾದಿಪತಿಯಾದ ಹುಡುಗಿ!

ಇದು ಚಿಕ್ಕ ವಯಸ್ಸಿನಲ್ಲೇ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈಗಾಗಲೇ ಇದಕ್ಕೆ ಮೂವತ್ತು ಸಾವಿರ ಮಕ್ಕಳಿದ್ದಾರೆ. ಡಿಸೆಂಬರ್ ಮೂವತ್ತರಂದು ಇದು ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲಿದೆ. ಇದ್ರ ವೀರ್ಯ ಮಾರಾಟ ಮಾಡಿ ಮಾಲೀಕರು ಹಣ ಸಂಪಾದನೆ ಮಾಡ್ತಾರೆ. ಎಕ್ಸ್ಪೋದಲ್ಲೂ ಇದಕ್ಕೆ ಅವಕಾಶ ನೀಡಲಾಗಿದೆ. ಗೋಲು -2 ನ ವೀರ್ಯ ಬೇಕೆಂದ್ರೆ ಪ್ರತಿ ಡೋಸ್‌ಗೆ 300 ರೂಪಾಯಿ ನೀಡಬೇಕಾಗುತ್ತದೆ. 

Latest Videos
Follow Us:
Download App:
  • android
  • ios