ಈ ಮೂರು ವಸ್ತುಗಳನ್ನು ಮಾರಾಟ ಮಾಡಿ ಪ್ರತಿದಿನ 3-4 ಸಾವಿರ ಗಳಿಸಿ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಪಡೆಯಲು ಮಾರುಕಟ್ಟೆ ತಂತ್ರಗಳನ್ನು ಅರಿಯಿರಿ.
Business Idea: ಯಾವುದೇ ವ್ಯವಹಾರ ಮಾಡುವ ಮುನ್ನ ಮಾರುಕಟ್ಟೆಯ ಅಪಾಯಗಳನ್ನು ಗಮನಿಸಿಕೊಂಡಿರಬೇಕು. ಇಲ್ಲವಾದ್ರೆ ಬ್ಯುಸಿನೆಸ್ ಆರಂಭದ ಬೆರಳಣಿಕೆ ದಿನಗಳಲ್ಲಿಯೇ ನಷ್ಟ ಅನುಭವಿಸಬೇಕಾಗುತ್ತದೆ. ಇಂದು ನಾವು ಹೇಳುವ ಈ ಬ್ಯುಸಿನೆಸ್ ಆರಂಭಿಸಿದ್ರೆ ಪ್ರತಿದಿನ 3 ರಿಂದ 4 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಖರ್ಚು ವೆಚ್ಚ ತೆಗೆದ್ರೂ ದಿನಕ್ಕೆ 1 ರಿಂದ ಒಂದೂವರೆ ಸಾವಿರ ರೂಪಾಯಿ ಲಾಭ ನಿಮ್ಮದಾಗುತ್ತದೆ. ಸ್ಥಳೀಯವಾಗಿಯೇ ಈ ವ್ಯವಹಾರ ಆರಂಭಿಸಬಹುದು. ನಿಮ್ಮ ಈ ವ್ಯಾಪಾರ ಹೆಚ್ಚು ಲಾಭ ಮಾಡಿಕೊಳ್ಳುವ ಯುಕ್ತಿಯನ್ನು ನೀವು ತಿಳಿದುಕೊಂಡಿರಬೇಕು. ಒಂದು ವೇಳೆ ನಿಮ್ಮ ವ್ಯಾಪಾರ ಕ್ಲಿಕ್ ಆದ್ರೆ ಗ್ರಾಹಕರು ನೀವಿದ್ದಲ್ಲಿಗೇ ಬಂದು ಮೂರು ಉತ್ಪನ್ನಗಳನ್ನು ಖರೀದಿಸುತ್ತಾರೆ.
ನೀವು ತರಕಾರಿ ಮಾರುಕಟ್ಟೆಗೆ ಹೋಗಿದ್ರೆ ಈ ಮೂರು ವಸ್ತುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ವ್ಯಾಪಾರಿಗಳನ್ನು ಗಮನಿಸಿರುತ್ತೀರಿ. ಸಾಮಾನ್ಯವಾಗಿ ತರಕಾರಿ ಮಾರಾಟ ಮಾಡುತ್ತಿದ್ರೆ, ವ್ಯಾಪಾರದ ಅವಧಿ ಸೀಮಿತವಾಗಿರುತ್ತದೆ. ಹಸಿರು ತರಕಾರಿ ಮತ್ತು ಸೊಪ್ಪು ಕೇವಲ ಒಂದು ಅಥವಾ ಎರಡು ದಿನ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಖರೀದಿಸಿದ ತರಕಾರಿ/ಸೊಪ್ಪುನ್ನು ಎರಡು ಅಥವಾ ಮೂರು ದಿನಗಳಲ್ಲಿ ಮಾರಾಟ ಮಾಡಬೇಕಾಗುತ್ತದೆ. ಇಲ್ಲವಾದ್ರೆ ತರಕಾರಿ ಒಣಗಿ/ಕೊಳೆತು ಹಾಳಾಗುತ್ತದೆ. ತರಕಾರಿ ತಾಜಾತನ ಕಡಿಮೆಯಾದ್ರೆ ಗ್ರಾಹಕರು ಖರೀದಿಸಲ್ಲ. ನೀವು ಬೆಲೆ ಕಡಿಮೆ ಮಾಡಿದರೂ ಗ್ರಾಹಕರು ಖರೀದಿಸಲ್ಲ. ಆದರೆ ಈ ಮೂರು ತರಕಾರಿಗಳು ಮಾತ್ರ ಹೆಚ್ಚು ದಿನ ಬಾಳಿಕೆಗೆ ಬರೋದರಿಂದ ನಷ್ಟದ ಪ್ರಮಾಣ ಅತ್ಯಂತ ಕಡಿಮೆಯಾಗಿರುತ್ತದೆ.
ಯಾವುದು ಆ ಮೂರು ವಸ್ತುಗಳು?
ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲೂಗಡ್ಡೆ ಹೆಚ್ಚು ದಿನ ಬಾಳಿಕೆ ಬರುವ ತರಕಾರಿ. ಒಂದು ಬಾರಿ ಲೋಡ್‌ಗಟ್ಟಲೇ ಖರೀದಿಸಿದ್ರೆ ಸುಮಾರು 15 ದಿನಗಳವರೆಗೆ ಈ ಮೂರು ತರಕಾರಿ ಮಾರಾಟ ಮಾಡಬಹುದು. ನೇರವಾಗಿ ರೈತರಿಂದ ಈ ಮೂರು ವಸ್ತುಗಳನ್ನು ಖರೀದಿಸಿ ಮಾರಾಟ ಮಾಡಿದ್ರೆ ಲಾಭದ ಪ್ರಮಾಣ ಸಹ ಅಧಿಕವಾಗಿರುತ್ತದೆ. ಎಪಿಎಂಸಿಯಿಂದ ಖರೀದಿಸಿ ನಿಮ್ಮೂರಿನಲ್ಲಿಯೇ 15 ದಿನಗಳವರೆಗೆ ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವನ್ನು ಗಮನಿಸಿಕೊಂಡು ಪ್ರತಿನಿತ್ಯ ದರ ಬದಲಾಯಿಸಿಕೊಂಡು ವ್ಯಾಪಾರ ಮಾಡಿದ್ರೆ ನಷ್ಟದ ಅಪಾಯವಿರಲ್ಲ.
ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿದೆ ಹೆಚ್ಚು ಲಾಭ
ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಅವುಗಳ ಗಾತ್ರದ ಮೇಲೆ ವಿಂಗಡಿಸಿ ಬೇರೆ ಬೇರೆ ದರದಲ್ಲಿ ಮಾರಾಟ ಮಾಡಬೇಕು. ಇದೇ ರೀತಿ ಬೆಳ್ಳುಳ್ಳಿಯನ್ನು ಅವುಗಳ ಗುಣಮಟ್ಟದಲ್ಲಿ ವಿಂಗಡಿಸಿಕೊಳ್ಳಬೇಕು. ನಂತರ ಈರುಳ್ಳಿ-ಬೆಳ್ಳುಳ್ಳಿಯನ್ನು ಗಾಳಿ ಮತ್ತು ಬೆಳಕು ಬರುವ ಪ್ರದೇಶದಲ್ಲಿ ಸಂಗ್ರಹಿಸಬೇಕು. ಅದೇ ಆಲೂಗಡ್ಡೆಯನ್ನುಇದೇ ರೀತಿಯಲ್ಲಿಯೇ ಸ್ಟೋರ್ ಮಾಡಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಝೆರೋಧಾ ಖಾತೆ ಕ್ಲೋಸ್ ಮಾಡಿ, ಗ್ರಾಹಕನ ಇಮೇಲ್‌ಗೆ ನಿತಿನ್ ಕಾಮತ್ ನೀಡಿದ ಉತ್ತರವೇನು?
ದಿನಕ್ಕೆ ಎಷ್ಟು ಸಂಪಾದನೆ?
ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 50 ರೂ.ವರೆಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ 100 ರಿಂದ 120 ರೂ.ವರೆಗೆ ಮಾರಾಟ ಮಾಡುತ್ತಿದೆ. ನೀವು ದಿನಕ್ಕೆ ಕನಿಷ್ಠ 20 ಕೆಜಿ ಈರುಳ್ಳಿ ಮಾರಿದ್ರೆ 1,000 ರೂಪಾಯಿ ಆಗುತ್ತದೆ. 10 ಕೆಜಿ ಬೆಳ್ಳುಳ್ಳಿ ಮಾರಿದ್ರೆ 1,200 ರೂಪಾಯಿ ಆಗುತ್ತದೆ. ಕೆಜಿಗೆ 40 ರೂಪಾಯಿಯಂತೆ ದಿನಕ್ಕೆ 20 ಕೆಜಿ ಆಲೂಗಡ್ಡೆ ಮಾರಿದ್ರೆ 800 ರೂಪಾಯಿ ಆಗುತ್ತದೆ. ಈ ಮೂರು ವಸ್ತುಗಳ ಮಾರಾಟದಿಂದ ದಿನಕ್ಕೆ ಕನಿಷ್ಠ 3,000 ರೂಪಾಯಿ ಸಂಪಾದಿಸಬಹುದು. ಇದರ ಜೊತೆಯಲ್ಲಿ ಹಸಿ ಶುಂಠಿಯನ್ನು ಮಾರಾಟಕ್ಕಿರಿಸಿಕೊಂಡ್ರೆ ಇದರಿಂದಲೂ ದಿನಕ್ಕೆ ಕನಿಷ್ಠ 1,000 ರೂ. ಸಂಪಾದಿಸಬಹುದು. ಹೋಟೆಲ್‌ಗಳಿಂದ ಆರ್ಡರ್ ಸಿಗಲು ಆರಂಭಿಸಿದ್ರೆ ಮಾರಾಟದ ಪ್ರಮಾಣ ಹೆಚ್ಚಳವಾಗಿ ಲಾಭವೂ ಸಹ ಹೆಚ್ಚಾಗುತ್ತದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಬರೀ 25 ಸಾವಿರ ಇನ್ವೆಸ್ಟ್‌ಮೆಂಟ್, ತಿಂಗಳಿಗೆ 50 ಸಾವಿರ ಆದಾಯ; ಈ ಬ್ಯುಸಿನೆಸ್ ಮಾಡಿದ್ರೆ ಯಶಸ್ಸು ಖಂಡಿತ!
