ನವದೆಹಲಿ[ಮಾ.18]: ಹಗರಣಕ್ಕೆ ಸಿಕ್ಕಿಕೊಂಡ ಬಳಿಕ ಆರ್‌ಬಿಐನಿಂದ ಸೇವಾ ನಿರ್ಬಂಧಕ್ಕೆ ಒಳಗಾಗಿದ್ದ ಖಾಸಗಿ ವಲಯದ ಯಸ್‌ ಬ್ಯಾಂಕ್‌, ಬುಧವಾರದಿಂದ ಗ್ರಾಹ​ಕ​ರಿಗೆ ಪೂರ್ಣ ಪ್ರಮಾ​ಣದ ಸೇವೆ ನೀಡ​ಲಿದೆ.

ಸಂಜೆ 6 ಗಂಟೆಯಿಂದ ಎಲ್ಲಾ ರೀತಿಯ ಸೇವೆ​ಯನ್ನು ಪುನಃ ಆರಂಭಿ​ಸಲಾ​ಗು​ತ್ತಿ​ದೆ. ಆದರೆ ಬುಧವಾರ ಸಂಜೆ 6 ಗಂಟೆ ಬ್ಯಾಂಕ್‌ ಮುಕ್ತಾಯದ ಸಮಯವಾಗಿರುವ ಕಾರಣ ಗುರುವಾರ ಬೆಳಗ್ಗೆಯಿಂದ ಗ್ರಾಹಕರಿಗೆ ಮೊದಲಿನಂತೆ ಎಲ್ಲಾ ರೀತಿಯ ಬ್ಯಾಂಕಿಂಗ್‌ ಸೇವೆಗಳು ಲಭ್ಯವಾಗಲಿವೆ.

ಬ್ಯಾಂಕ್‌ನ ಗ್ರಾಹಕರಿಗೆ ಕೆಲ ದಿನಗಳ ಹಿಂದೆ ಆರ್‌ಬಿಐ ಮಾಸಿಕ ಗರಿಷ್ಠ 50000 ರು. ಹಿಂಪಡೆತದ ಮಿತಿ ಹಾಕಿತ್ತು. ಆದರೆ ಬಳಿಕ ಬ್ಯಾಂಕ್‌ ಪುನಶ್ಚೇತನಕ್ಕೆ ಆರ್‌ಬಿಐ ರೂಪಿಸಿದ್ದ ಮಾನದಂಡಗಳ ಅನ್ವಯ ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳು ಮುಂದೆ ಬಂದಿರುವ ಹಿನ್ನೆಲೆಯಲ್ಲಿ, ಬ್ಯಾಂಕ್‌ ಮತ್ತೆ ಸೇವೆ ಆರಂಭಿಸಲು ನಿರ್ಧರಿಸಿದೆ.

ಯಸ್‌ ಬ್ಯಾಂಕ್‌ ಷೇರು ಚೇತ​ರಿ​ಕೆ;

ಇದೇ ವೇಳೆ ಸತತ ಮೂರನೇ ದಿನದ ವಹಿವಾ​ಟಿ​ನಲ್ಲೂ ಯಸ್‌ ಬ್ಯಾಂಕ್‌ ಷೇರು​ಗಳು ಏರು​ಗತಿ ದಾಖ​ಲಿ​ಸಿವೆ. ಮಂಗ​ಳ​ವಾ​ರದ ವಹಿ​ವಾ​ಟಿ​ನಲ್ಲಿ ಯಸ್‌ ಬ್ಯಾಂಕ್‌ ಷೇರು ಮೌಲ್ಯ ಶೇ.59ರಷ್ಟುಏರಿಕೆ ಆಗಿವೆ. ಹೀಗಾಗಿ ಯಸ್‌ ಬ್ಯಾಂಕ್‌ ಷೇರು​ಗಳ ಮೌಲ್ಯ ಪ್ರತಿ ಷೇರಿಗೆ 58.65 ರು. ಆಗಿದೆ. ಮಧ್ಯಂತರ ಅವ​ಧಿ​ಯಲ್ಲಿ ಯಸ್‌ ಬ್ಯಾಂಕ್‌ ಷೇರು ಶೇ.72.91ರಷ್ಟುಏರಿ ಪ್ರತಿ ಷೇರಿಗೆ 64.15 ರು. ಆಗಿತ್ತು.