Yes Bank - DHFL ಹಗರಣ: ಇಬ್ಬರು ಉದ್ಯಮಿಗಳಿಂದ 415 ಕೋಟಿ ಮೌಲ್ಯದ ಆಸ್ತಿ ಸೀಜ್ ಮಾಡಿದ ಇಡಿ
ಯೆಸ್ ಬ್ಯಾಂಕ್ - ಡಿಎಫ್‌ಎಚ್‌ಎಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬುಧವಾರ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದು ದೇಶದ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣ ಎನ್ನಲಾಗಿದೆ.
ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಆರೋಪ ಹೊತ್ತಿರುವ ಮಹಾರಾಷ್ಟ್ರ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ ಜಾಗದಿಂದ ಕೆಲ ದಿನಗಳ ಹಿಂದಷ್ಟೇ ಆಗಸ್ಟಾ ವೆಸ್ಟ್‌ಲ್ಯಾಂಡ್ (Augusta Westland) ಹೆಲಿಕಾಪ್ಟರ್ (Helicopter) ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬೆಳವಣಿಗೆಯ ನಂತರ ಜಾರಿ ನಿರ್ದೇಶನಾಲಯ ಇಂದು ಆ ಉದ್ಯಮಿ ಹಾಗೂ ಇತರ ಉದ್ಯಮಿಗೆ ಸೇರಿದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು (Assets) ಸೀಜ್ ಮಾಡಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ನಡೆದ ಅತಿ ದೊಡ್ಡ ಬ್ಯಾಂಕ್ ವಂಚನೆ (Bank Fraud) ಪ್ರಕರಣದಲ್ಲಿ ಈ ಇಬ್ಬರು ಉದ್ಯಮಿಗಳು ಆರೋಪಿಗಳಾಗಿದ್ದಾರೆ.
Yes Bank- DHFL ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಆಗಸ್ಟ್ 3 ರಂದು 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಲಗತ್ತಿಸಿಕೊಂಡಿದೆ. ಈ ಪೈಕಿ 251 ಕೋಟಿ ರೂ. ಮೌಲ್ಯದ ಆಸ್ತಿ ಸಂಜಯ್ ಛಾಬ್ರಿಯಾಗೆ ಸೇರಿದ್ದರೆ, ಇನ್ನು ಉಳಿದ 164 ಕೋಟಿ ರೂ. ಆಸ್ತಿ ಅವಿನಾಶ್ ಭೋಸ್ಲೆಗೆ ಸೇರಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಈವರೆಗೆ ಈ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 1,827 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೀಜ್ ಮಾಡಲಾಗಿದೆ ಎಂದೂ ಇಡಿ (ED) ಮಾಹಿತಿ ನೀಡಿದೆ. ಈ ಉದ್ಯಮಿಗಳ ವಿರುದ್ಧ 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (Prevention of Money Laundering Act) (PMLA) ನಿಬಂಧನೆಗಳ ಅಡಿಯಲ್ಲಿ ED ಎರಡು ತಾತ್ಕಾಲಿಕ ಲಗತ್ತು ಆದೇಶಗಳನ್ನು ಹೊರಡಿಸಿದೆ.
ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ಹಗರಣ: ಮುಂಬೈ, ಪುಣೆಯಲ್ಲಿ ಸಿಬಿಐ ದಾಳಿ
ಸಂಜಯ್ ಛಾಬ್ರಿಯಾ ಅವರಿಗೆ ಸೇರಿದ ಮುಂಬೈನ ಸಾಂಟಾಕ್ರೂಜ್‌ನಲ್ಲಿರುವ 116.5 ಕೋಟಿ ರೂ. ಮೌಲ್ಯದ ಭೂಮಿಯ ಭಾಗ, 115 ಕೋಟಿ ರೂ. ಮೌಲ್ಯದ ಬೆಂಗಳೂರಿನ ಛಾಬ್ರಿಯಾ ಕಂಪನಿಗೆ ಸೇರಿದ ಶೇ. 25 ರಷ್ಟು ಈಕ್ವಿಟಿ ಷೇರುಗಳು, 3 ಕೋಟಿ ರೂ. ಮೌಲ್ಯದ ಮುಂಬೈನ ಸಾಂಟಾಕ್ರೂಜ್‌ನಲ್ಲಿರುವ ಫ್ಲಾಟ್, ದೆಹಲಿ ಏರ್‌ಪೋರ್ಟ್‌ನಲ್ಲಿರುವ ಛಾಬ್ರಿಯಾ ಹೋಟೆಲ್‌ನಿಂದ ಬಂದ ಲಾಭ ಹಾಗೂ 3.10 ಕೊಟಿ ರೂ. ಮೌಲ್ಯದ 3 ಲಕ್ಷುರಿ ಕಾರುಗಳನ್ನು ಸಹ ಜಾರಿ ನಿರ್ದೇಶನಾಲಯ ಸೀಜ್ ಮಾಡಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಅವಿನಾಶ್ ಭೋಸ್ಲೆ ಅವರಿಗೆ ಸೇರಿದ 102.8 ಕೋಟಿ ರೂ. ಮೌಲ್ಯದ ಮುಂಬೈನಲ್ಲಿರುವ ಡುಪ್ಲೆಕ್ಸ್ ಫ್ಲಾಟ್, 14.65 ಕೋಟಿ ರೂ. ಮೌಲ್ಯದ ಪುಣೆಯಲ್ಲಿರುವ ಭೂ ಭಾಗ, 29.24 ಕೋಟಿ ರೂ. ಮೌಲ್ಯದ ಪುಣೆಯ ಮತ್ತೊಂದು ಭೂ ಭಾಗ, 15.52 ಕೋಟಿ ರೂ. ಮೌಲ್ಯದ ನಾಗ್ಪುರದ ಭೂ ಭಾಗ ಹಾಗೂ 1.45 ಕೋಟಿ ರೂ. ಮೌಲ್ಯದ ನಾಗ್ಪುರದ ಮತ್ತೊಂದು ಭೂ ಭಾಗವನ್ನು ಸಹ ಇಡಿ ಸೀಜ್ ಮಾಡಿದೆ ಎಂಬ ಬಗ್ಗೆ ಮಾಹಿತಿ ದೊರಕಿದೆ.
Yes bank case ಯೆಸ್ ಬ್ಯಾಂಕ್ ಕಪೂರ್‌ರಿಂದ 5050 ಕೋಟಿ ರೂ ಅಕ್ರಮ ಹಣ ವರ್ಗ, ಇಡಿ!
ಈ ಹಿಂದೆಯೇ 1,412 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಸೀಜ್ ಮಾಡಿಕೊಂಡಿತ್ತು. ಈ ಪೈಕಿ ವಾಧವನ್‌ಗಳಿಗೆ ಸೇರಿದ 12.59 ಕೋಟಿ ರೂ. ಮೌಲ್ಯದ 5 ಹೈ ಎಂಡ್ ವಾಹನಗಳು, 600 ಕೋಟಿ ರೂ. ಮೌಲ್ಯದ ಯೆಸ್ ಬ್ಯಾಂಕ್ - ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದ ಆರೋಪಿ ರಾಣಾ ಕಪೂರ್‌ಗೆ ಸೇರಿದ ಆಸ್ತಿಗಳನ್ನು ಸೀಜ್ ಮಾಡಿತ್ತು. ಅಲ್ಲದೆ, ಕಪಿಲ್ ವಾಧವನ್, ಧೀರಜ್ ವಾಧವನ್ ಹಾಗೂ ರಾಣಾ ಕಪೂರ್‌ನ್ನು ಈ ವರ್ಷದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇನ್ನೊಂದೆಡೆ, ಜೂನ್ ತಿಂಗಳಲ್ಲಿ ಸಂಜಯ್ ಛಾಬ್ರಿಯಾ ಹಾಘೂ ಅವಿನಾಶ್ ಭೋಸ್ಲೆಯನ್ನು ಜೂನ್‌ನಲ್ಲಿ ಬಂಧಿಸಲಾಗಿತ್ತು. ಈ ಎಲ್ಲ ಉದ್ಯಮಿಗಳು ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ.