ಮುಂಬೈ[ಮಾ.07]: ಯಸ್‌ ಬ್ಯಾಂಕ್‌ ಮೇಲೆ ಸರ್ಕಾರ ಕೆಲವು ನಿರ್ಬಂಧ ವಿಧಿಸಿದ ಬೆನ್ನಲ್ಲೇ ಅದರ ಪ್ರವರ್ತಕ ರಾಣಾ ಕಪೂರ್‌ ಅವರ ಮುಂಬೈ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ರಾತ್ರಿ ದಾಳಿ ನಡೆಸಿದೆ. ಕಪೂರ್‌ ಮೇಲೆ ಅಕ್ರಮದ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಮುಂಬೈನ ವರ್ಲಿಯಲ್ಲಿರುವ ರಾಣಾ ಕಪೂರ್‌ ನಿವಾಸಕ್ಕೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು, 79 ಖೊಟ್ಟಿಕಂಪನಿಗಳು ಹಾಗೂ 1 ಲಕ್ಷ ನಕಲಿ ಗ್ರಾಹಕರ ಮೂಲಕ 13 ಸಾವಿರ ಕೋಟಿ ರು. ವಂಚನೆ ಎಸಗಿದ ಡಿಎಚ್‌ಎಫ್‌ಎಲ್‌ ಕುರಿತಾಗಿ ಕಪೂರ್‌ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೆ, ರಾಣಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ದೇಶ ಬಿಟ್ಟು ವಿದೇಶಗಳಿಗೆ ಪರಾರಿಯಾಗದಂತೆ ರಾಣಾ ಕಪೂರ್‌ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಹೊರಡಿಸಲಾಗಿದೆ.

"