ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ, ಕಂಟೆಂಟ್ ಕ್ರಿಯೇಟ್ ಮೂಲಕ ಹಲವರು ಭಾರಿ ಆದಾಯಗಳಿಸುತ್ತಿದ್ದಾರೆ. ಹೀಗೆ ಆದಾಯಗಳಿಸಿದ ವಿಶ್ವದ ಟಾಪ್ 10 ಪಟ್ಟಿ ಕ್ರಿಯೇಟರ್ಸ್ ಪಟ್ಟಿ ಬಹಿರಂಗವಾಗಿದೆ. ವಿಶೇಷ ಅಂದರೆ 2ನೇ ಸ್ಥಾನದಲ್ಲಿರುವುದು ಭಾರತದ ಟ್ಯಾಕ್ಸಿ ಚಾಲಕನ ಪುತ್ರ.

ನವದೆಹಲಿ(ಮೇ.04) ಯೂಟ್ಯೂಬ್, ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಕಂಟೆಂಟ್ ಕ್ರಿಯೇಟ್ ಮಾಡಿ ಹಲವರು ಜನಪ್ರಿಯರಾಗಿದ್ದಾರೆ. ಭಾರಿ ಆದಾಯವನ್ನೂ ಗಳಿಸುತ್ತಿದ್ದಾರೆ. ಈ ಪೈಕಿ ಕೆಲವು ಕಂಟೆಂಟ್ ಕ್ರಿಯೇಟರ್ಸ್ ಇದೀಗ ಹಲವು ಸಿಇಒಗಳ ಆದಾಯಕ್ಕಿಂತ ಹೆಚ್ಚಿದೆ. ಇದೀಗ 2024-25ರ ಸಾಲಿನ ಟಾಪ್ 10 ಕ್ರಿಯೇಟರ್ಸ್ ಪಟ್ಟಿ ಬಿಡುಗಡೆಯಾಗಿದೆ. ಅಮೆರಿಕನ್ ಯೂಟ್ಯೂಬರ್ ಜಿಮ್ಮಿ ಡೋನಾಲ್ಡ್‌ಸನ್ ಮೊದಲ ಸ್ಥಾನ ಪಡೆದಿದ್ದಾರೆ. ಇವರ ಮಿ.ಬೀಸ್ಟ್ ಚಾನೆಲ್ ಆದಾಯ, ಫಾಲೋವರ್ಸ್ ಎಲ್ಲಾ ರೀತಿಯಲ್ಲಿ ನಂ.1. ವಿಶೇಷ ಅಂದರೆ ಈ ಪೈಕಿ ಎರಡನೇ ಸ್ಥಾನ ಪಡೆದಿರುವುದು ಭಾರತದ ಟ್ಯಾಕ್ಸಿ ಚಾಲಕನ ಪುತ್ರ ಧಾರ್ ಮಾನ್.

2024-25ರ ಸಾಲಿನಲ್ಲಿ ಈ ಕೆಂಟೆಂಟ್ ಕ್ರಿಯೇಟರ್ಸ್ ಆದಾಯ ಬರೋಬ್ಬರಿ 720 ಬಿಲಿಯನ್ ಅಮರಿಕನ್ ಡಾಲರ್. ಈ ಆದಾಯ ಹಾಗೂ ಮೌಲ್ಯ 2027ರ ವೇಳೆಗೆ ಬರೋಬ್ಬರಿ ದುಪ್ಪಟ್ಟಾಗಲಿದೆ ಎಂದು ಗೋಲ್ಡಮನ್ ಸಾಚ್ ಭವಿಷ್ಯ ನುಡಿದಿದೆ. ಈ 10 ಕಂಟೆಂಟ್ ಕ್ರಿಯೇಟರ್ಸ್ ಒಟ್ಟು ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 2.7 ಬಿಲಿಯನ್. ಇದೀಗ ಈ ಕಂಟೆಂಟ್ ಕ್ರಿಯೇಟರ್ಸ್ ಕೇವಲ ಇಂಟರ್ನೆಟ್ ಸ್ಟಾರ್ ಆಗಿ ಉಳಿದಿಲ್ಲ, ಇವರು ಅತೀ ದೊಡ್ಡ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಕಾರಣ ಇವರೇ ಪ್ರೊಡಕ್ಷನ್ ಹೌಸ್, ಕಂಟೆಂಟ್ ಕ್ರಿಯೇಟ್ ಮಾಡಲು ಸಿಬ್ಬಂದಿಗಳು, ಶೂಟಿಂಗ್, ಎಡಿಟಿಂಗ್ ಹೀಗೆ ಒಂದಷ್ಡು ಮಂದಿಗೆ ಉದ್ಯೋಗ ನೋಡಿದ್ದಾರೆ. ಹಲವು ಸ್ಟುಡಿಯೋ ಕಂಪನಿಗಳನ್ನು ನಡೆಸುತ್ತಿದ್ದಾರೆ.

ಯೂಟ್ಯೂಬ್ ಚಾನೆಲ್ ಆದಾಯಕ್ಕೆ ಪ್ರಯತ್ನಿಸುತ್ತಿದ್ದೀರಾ? ಮಾನಿಟೈಸ್ ಕುರಿತು BCG ಮಾತು ಒಮ್ಮೆ ಕೇಳಿ

ಮಿ.ಬೀಸ್ಟ್ ಆದಾಯ 85 ಮಿಲಿಯನ್ ಅಮೆರಿಕನ್ ಡಾಲರ್
ವಿಶ್ವದ ಟಾಪ್ 10 ಕೆಂಟೆಂಟ್ ಕ್ರಿಯೇಟರ್ಸ್ ಪೈಕಿ ಅಮೆರಿಕದ ಯೂಟ್ಯೂಬರ್ ಜಿಮ್ಮಿ ಡೋನಾಲ್ಡ್‌ಸನ್ ಅವರ ಮಿಸ್ಟರ್ ಬೀಸ್ಟ್ ಮೊದಲ ಸ್ಥಾನದಲ್ಲಿದೆ. ಈತನ ಯೂಟ್ಯೂಬ್ ಹಾಗೂ ಇತರ ಸೋಶಿಯಲ್ ಮೀಡಿಯಾ ಫೋಲೋವರ್ಸ್ ಸಂಖ್ಯೆ ಬರೋಬ್ಬರಿ 573.2 ಮಿಲಿಯನ್. ಇನ್ನು 2024-25ರ ಸಾಲಿನಲ್ಲಿ ಈತನ ಆದಾಯ ಬರೋಬ್ಬರಿ 85 ಮಿಲಿಯನ್ ಅಮೆರಿಕನ್ ಡಾಲರ್. ಜಿಮ್ಮಿ ವಿಡಿಯೋಗಳಲ್ಲಿ ರೋಚಕತೆ ಹೆಚ್ಚು, ಸ್ಟಂಟ್ ರೀತಿಯ ವಿಡಿಯೋಗಳಾಗಿದೆ. ಬಂಕರ್‌ನಲ್ಲಿ 100 ದಿನ, ಗುಹೆಯಲ್ಲಿ ಸಾಹಸ. ಹೀಗೆ ಹಲವು ವಿಡಿಯೋಗಳು ದಾಖಲೆ ವೀವ್ಸ್ ಕಂಡಿದೆ. 

2ನೇ ಸ್ಥಾನದಲ್ಲಿ ಭಾರತದ ಟ್ಯಾಕ್ಸಿ ಚಾಲಕನ ಮಗ
ವಿಶ್ವದ ಟಾಪ್ 10 ಕೆಂಟೆಂಟ್ ಕ್ರಿಯೇಟರ್ಸ್ ಪೈಕಿ 2ನೇ ಸ್ಥಾನದಲ್ಲಿರುವ ಭಾರತೀಯ ಮೂಲದ ಧಾರ್ ಮಾನ್ 204-25ರ ಸಾಲಿನಲ್ಲಿ ಗಳಿಸಿದ ಆದಾಯ 45 ಮಿಲಿಯನ್ ಅಮೆರಿಕನ್ ಡಾಲರ್. ಈತನ ಫಾಲೋವರ್ಸ್ ಸಂಖ್ಯೆ 120 ಮಿಲಿಯನ್. ಈತ ಹುಟ್ಟಿ ಬೆಳೆದಿದ್ದು ಎಲ್ಲಾ ಅಮೆರಿಕದಲ್ಲಿ. ಪೋಷಕರು ಭಾರತೀಯರು. ಭಾರತದಿಂದ ಕೆಲಸಕ್ಕಾಗಿ ಅಮೆರಿಕ ತೆರಳಿದ ಈತನ ಪೋಷಕರು ಅಲ್ಲಿ ಟ್ಯಾಕ್ಸಿ ಚಾಲಕನಾಗಿ ಜೀವನ ಆರಂಭಿಸಿದ್ದು. ಈಗಲೂ ಧಾರ್ ಮಾನ್ ಕುಟುಂಬ ಟ್ಯಾಕ್ಸಿ ಕ್ಯಾಬ್ ಹೊಂದಿದೆ. ಈತನ ಯೂಟ್ಯೂಬ್ ಸಬ್‌ಸ್ಕ್ರೈಬರ್ ಸಂಖ್ಯೆ ಬರೋಬ್ಬರಿ 25 ಮಿಲಿಯನ್. ಈತ ತನ್ನ ಕೆಂಟೆಂಟ್ ಕ್ರಿಯೇಟ್ ಮಾಡಲು ಇತರ ಕೆಲಸಗಳಿಗೆ ಸ್ಟುಡಿಯೋ ಪ್ರೊಡಕ್ಷನ್ ಕಂಪನಿ ಆರಂಭಿಸಿದ್ದಾರೆ. ಇದರಲ್ಲಿ 150 ಸಿಬ್ಬಂದಿಗಳಿದ್ದಾರೆ.ಮ್ಯಾಟ್ ರೈಫ್ ಆದಾಯ 50 ಮಿಲಿಯನ್ ಇದೆ. ಆದರೆ ಫಾಲೋವರ್ಸ್ ಸಂಖ್ಯೆ ಧಾರ್ ಮಾನ್‌ನಷ್ಟಿಲ್ಲ.

ವಿಶ್ವದ ಟಾಪ್ 10 ಕೆಂಟೆಂಟ್ ಕ್ರಿಯೇಟರ್ಸ್ (2024-25)ಗರಿಷ್ಠ ಫಾಲೋವರ್ಸ್ ಹಾಗೂ ಸಬ್‌ಸ್ಕ್ರೈಬರ್ ಪರಿಗಣಿಸಿ ರ್ಯಾಂಕ್ ನೀಡಲಾಗಿದೆ. 
1) ಮಿ.ಬಿಸ್ಟ್: 85 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
2) ಧಾರ್ ಮಾನ್ :45 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
3) ಮ್ಯಾಟ್ ರೈಫ್:50 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
4) ಚಾಲ್ಲಿ ಡಿ ಅಮಿಲಿಯೋ: 23.50 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
5) ಸ್ಟೋಕ್ಸ್ ಟ್ವಿನ್ಸ್ :20 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
6) ಡಿಕ್ಸಿ ಡಿ ಅಮಿಲಿಯೋ: 14.60 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
7) ಮಾರ್ಕ್ ರಾಬರ್: 25 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
8) ಅಲೆಕ್ಸ್ ಕೂಪರ್: 22 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
9) ರೆಟ್ ಆ್ಯಂಡ್ ಲಿಂಕ್:36 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ
10) ಖಬೆ ಲೇಮ್:20 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ

WAVES 2025: ಭಾರತದ ಕಂಟೆಂಟ್‌ ಕ್ರಿಯೇಟರ್‌ಗೆ 21 ಸಾವಿರ ಕೋಟಿ ಪಾವತಿ ಮಾಡಿರುವ YouTube