Elon Musk Tips ಕಾರ್ಮಿಕರ ದಿನದಂದು ಸಂಪತ್ತು ಹೆಚ್ಚಿಸುವ ಟಿಪ್ಸ್ ನೀಡಿದ ವಿಶ್ವದ ನಂ.1 ಶ್ರೀಮಂತ ಮಸ್ಕ್!
- ವಿಶ್ವದ ಶ್ರೀಮಂತ ಎಲಾನ್ ಮಸ್ಕ್‌ನಿಂದ ಟಿಪ್ಸ್
- ಷೇರು, ಹೂಡಿಕೆ ಕುರಿತು ಮಹತ್ವದ ಮಾಹಿತಿ
- ಆದಾಯ, ಸಂಪತ್ತು ಹೆಚ್ಚಿಸಲು ಸಲಹೆ
ಕ್ಯಾಲಿಫೋರ್ನಿಯಾ(ಮೇ.01): ಆದಾಯ ಹೆ್ಚ್ಚಿಸಲು, ಸಂಪತ್ತು ವೃದ್ಧಿಸಲು ಎಲ್ಲರು ಬಯಸುತ್ತಾರೆ. ಆದರೆ ಅದು ಹೇಗೆ? ಇದು ಬಹುತೇಕರಿಗೆ ಎದುರಾಗುವ ಸಮಸ್ಯೆ. ಇದೀಗ ಸಂಪತ್ತು ವೃದ್ಧಿಸಲು ವಿಶ್ವದ ಶ್ರೀಮಂತ ಎಲಾನ್ ಮಸ್ಕ್ ಮಹತ್ವದ ಟಿಪ್ಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ಟ್ವಿಟರ್ ಸಾಮಾಜಿಕ ಜಾಲತಾಣ ವೇದಿಕೆ ಖರೀದಿಸಿದ ಮಸ್ಕ್ ಇದೀಗ ಸಂಪತ್ತು ಹೆಚ್ಚಿಸಲು ಸಲಹೆ ನೀಡಿದ್ದಾರೆ.
ಮಸ್ಕ್ ನೀಡಿದ ಟಿಪ್ಸ್‌ಗಳಲ್ಲಿ ಮಹತ್ವದ ಸಲಹೆ ಎಂದರೆ ಸ್ಟಾಕ್ ಮಾರ್ಕೆಟ್‌ನಲ್ಲಿ ಯಾವುದೇ ಸಂಚಲನ ಸೃಷ್ಟಿಯಾದರೂ, ಕರಡಿ ಕುಣಿತವಾದರೂ ವಿಚಲಿತರಾಗಬಾರದು ಎಂದಿದ್ದಾರೆ. ಉತ್ಪನ್ನಗಳು, ಸೇವೆಗಳ ಮೇಲೆ ಅವಲಂಬಿತವಾಗಿ ಹಾಗೂ ವಿಶ್ವಾಸವಿರಿಸಿರುವ ಷೇರುಗಳು ಖರೀದಿಸಿ ಎಂದಿದ್ದಾರೆ.
Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!
ಷೇರು ಮಾರುಕಟ್ಟೆಯಲ್ಲಿ ಖರೀದಿಸಿದ ಷೇರುಗಳು ಕುಸಿತ ಕಾಣುತ್ತಿದೆ ಎಂದು ಮಾರಾಟ ಮಾಡಲೇಬೇಕು ಎಂದಿಲ್ಲ. ಇಂತಹ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಮಾರಾಟಕ್ಕಿಂತ ತಾಳ್ಮೆ ಅಗತ್ಯ ಎಂದು ಮಸ್ಕ್ ಹೇಳಿದ್ದಾರೆ. ಹೂಡಿಕೆ ವೇಳೆ ಎಚ್ಚರ ವಹಿಸಬೇಕು. ಹೂಡಿಕೆ ಮಾಡಿದ ಬಳಿಕ ಇತರ ಚಿಂತೆಗಳನ್ನು ಬಿಟ್ಟು ಹೂಡಿಕೆಯನ್ನು ಡಬಲ್ ಮಾಡುವುದರ ಕುರಿತು ಚಿಂತಿಸಬೇಕು. ಇದರಲ್ಲಿ ಏಳು ಬೀಳುಗಳ ಸಹಜ ಎಂದಿದ್ದಾರೆ.
3.3 ಲಕ್ಷ ಕೋಟಿ ರು.ಗೆ ಟ್ವೀಟರ್ ಖರೀದಿ
ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್ ಅನ್ನು ಖರೀದಿಸಲು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್‌್ಕ ಒಪ್ಪಂದ ಮಾಡಿಕೊಂಡಿದ್ದಾರೆ. 3.3 ಲಕ್ಷ ಕೋಟಿ ರು.ಗಳಿಗೆ ಮಸ್‌್ಕ ಅವರು ಟ್ವೀಟರ್ ಅನ್ನು ಖರೀದಿಸುತ್ತಿದ್ದು, ಷೇರುಪೇಟೆಯಲ್ಲಿ ನೋಂದಣಿಯಾದ ಕಂಪನಿಯೊಂದು ಈ ಮೊತ್ತಕ್ಕೆ ಬಿಕರಿಯಾಗಿದ್ದು ಇದೇ ಮೊದಲು ಎಂಬ ಇತಿಹಾಸ ಸೃಷ್ಟಿಯಾಗಿದೆ.
ಟ್ವೀಟರ್‌ನಲ್ಲಿ ಎಲಾನ್ ಮಸ್‌್ಕ ಶೇ.9.1ರಷ್ಟುಷೇರುಗಳನ್ನು ಹೊಂದಿದ್ದರು. ತನ್ಮೂಲಕ ಆ ಕಂಪನಿಯ ಅತಿದೊಡ್ಡ ಷೇರುದಾರ ಆಗಿದ್ದರು. ಈ ನಡುವೆ, ಇಡೀ ಕಂಪನಿಯನ್ನೇ ಖರೀದಿಸುವ ಸಲುವಾಗಿ ಅವರು ಟ್ವೀಟರ್‌ಗೆ ಆಫರ್ ನೀಡಿದ್ದರು. ಶೇ.91ರಷ್ಟುಷೇರುಗಳನ್ನು ತಲಾ 4150 ರು.ನಂತೆ ಖರೀದಿಸುವುದಾಗಿ ಹೇಳಿದ್ದರು. ಇದೀಗ ನಿರಂತರ ಮಾತುಕತೆ ನಡೆದು, ಮಸ್‌್ಕ ಹೇಳಿದ ದರಕ್ಕೆ ಕಂಪನಿ ಮಾರಾಟ ಮಾಡಲು ಟ್ವೀಟರ್ ಒಪ್ಪಿದೆ.
Twitter ಖರೀದಿಸಿದ ಮಸ್ಕ್: ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ CEO ಪರಾಗ್ ಅಗರ್ವಾಲ್!
ಟ್ವೀಟರ್ ಖರೀದಿ ಬೆನ್ನಲ್ಲೇ ಟೆಸ್ಲಾಗೆ 9.6 ಲಕ್ಷ ಕೋಟಿ ನಷ್ಟ
ಎಲಾನ್ ಮಸ್‌್ಕ ಟ್ವೀಟರ್ ಖರೀದಿಸಿದ ಬೆನ್ನಲ್ಲೇ, ಅವರ ಇನ್ನೊಂದು ಪ್ರಮುಖ ಕಂಪನಿ ಟೆಸ್ಲಾ ಮಂಗಳವಾರ ಷೇರುಪೇಟೆಯಲ್ಲಿ ಭಾರೀ ನಷ್ಟಅನುಭವಿಸಿದೆ. ಟ್ವೀಟರ್ ಖರೀದಿ ಒಪ್ಪಂದ ಅಂತಿಮಗೊಳ್ಳುತ್ತಿದ್ದಂತೆಯೇ ಟೆಸ್ಲಾ ಸಂಸ್ಥೆಯ ಷೇರು ಮೌಲ್ಯ ಶೇ.12.2ರಷ್ಟುಕುಸಿತ ಕಂಡು ಸಂಸ್ಥೆಯು ಬರೋಬ್ಬರಿ 9.6 ಲಕ್ಷ ಕೋಟಿ (126 ಬಿಲಿಯನ್ ಡಾಲರ್) ನಷ್ಟಅನುಭವಿಸಿದೆ.
ಟ್ವೀಟರ್ ಖರೀದಿಗೂ ಟೆಸ್ಲಾ ಕಂಪನಿಗೂ ಸಂಬಂಧವೇ ಇಲ್ಲ. ಆದಾಗ್ಯೂ ಮಸ್‌್ಕ ಟೆಸ್ಲಾದಲ್ಲಿರುವ ತಮ್ಮ ಪಾಲಿನ 21 ಶತಕೋಟಿ ಡಾಲರ್ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿ ಟ್ವೀಟರ್ ಖರೀದಿಗೆ 3.3 ಲಕ್ಷ ಕೋಟಿ ಹೊಂದಿಸಲಿದ್ದಾರೆ ಎಂಬ ಊಹೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಟೆಸ್ಲಾ ಷೇರುದಾರರು ಆತಂಕಕ್ಕೊಳಗಾಗಿ ಕಂಪನಿಯ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಅನಿಶ್ಚಿತವಾಗಬಹುದು ಎಂದು ಹೆದರಿ ಕಡಿಮೆ ಬೆಲೆಗೆ ಷೇರುಗಳನ್ನ ಮಾರಿರÜಬಹುದು ಎನ್ನಲಾಗುತ್ತಿದೆ.