ನವದೆಹಲಿ(ಮಾ.23): ಏ.1ರ ಗಡುವಿಗೆ ಎರಡು ವಾರ ಮುನ್ನವೇ ದೇಶದ ಅತೀ ದೊಡ್ಡ ತೈಲ ಕಂಪನಿ ಇಂಡಿಯನ್‌ ಆಯಿಲ್‌ ದೇಶಾದ್ಯಂತ ವಿಶ್ವದ ಅತೀ ಸ್ವಚ್ಛ ಪೆಟ್ರೋಲ್‌ ಹಾಗೂ ಡೀಸೆಲ್‌ ಪೂರೈಕೆ ಆರಂಭಿಸಿದೆ.

ದೇಶಾದ್ಯಂತ ಇರುವ ತನ್ನ 28 ಸಾವಿರ ಪೆಟ್ರೋಲ್‌ ಬಂಕ್‌ಗಳಲ್ಲಿ ಅತೀ ಕಡಿಮೆ ಸಲ್ಫರ್‌ ಅಂಶ ಇರುವ ಬಿಎಸ್‌-6 ಮಾದರಿಯ ಪೆಟ್ರೋಲ್‌ ಹಾಗೂ ಡೀಸೆಲ್‌ ದೊರೆಯುತ್ತಿದೆ ಎಂದು ಇಂಡಿಯನ್‌ ಆಯಿಲ್‌ ಮುಖ್ಯಸ್ಥ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

ಭಾರತ್‌ ಪೆಟ್ರೋಲಿಯಂ ಹಾಗೂ ಹಿಂದೂಸ್ಥಾನ್‌ ಪೆಟ್ರೋಲಿಯಂ ಕೂಡ ತನ್ನ ಬಂಕ್‌ಗಳಿಗೆ ಈ ಮಾದರಿಯ ಪೆಟ್ರೋಲ್‌ ಪೂರೈಕೆ ಮಾಡುತ್ತಿದ್ದು, ಇನ್ನೊಂದು ವಾರದೊಳಗೆ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಲಭ್ಯವಾಗಲಿದೆ.