ನವದೆಹಲಿ(ಜು.07): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣಕಾಸಿನ ಹರಿವನ್ನು ಹೆಚ್ಚಿಸುವ ಉದ್ದೇಶದಿಂದ ವಿಶ್ವ ಬ್ಯಾಂಕ್‌ ಜೊತೆ ಕೇಂದ್ರ ಸರ್ಕಾರ 5700 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೊರೋನಾ ಹೋರಾಟ: ಭಾರತಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರೂ. ನೆರವು!

ಕೊರೋನಾ ವೈರಸ್‌ ಬಿಕ್ಕಟ್ಟಿನಿಂದ ನಲುಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಚೇತರಿಕೆ ಹಾಗೂ ಲಕ್ಷಾಂತರ ಜನರ ಉದ್ಯೋಗವನ್ನು ರಕ್ಷಿಸುವ ಉದ್ದೇಶದಿಂದ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ವಿಶ್ವಬ್ಯಾಂಕಿನ ಎಂಎಸ್‌ಎಂಇ ತುರ್ತು ಪ್ರತಿಕ್ರಿಯಾ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ರೂಪದ ನೆರವು ದೊರೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಇನ್ನು ಕಳೆದ ತಿಂಗಳಷ್ಟೇ ಕೊರೋನಾ ವಿರುದ್ಧದ ಹೋರಾಟಕ್ಕೆಂದು ಭಾರತಕ್ಕೆ 7500 ಕೋಟಿ ರು. ನೀಡಲು ವಿಶ್ವ ಬ್ಯಾಂಕ್‌ ಅನುಮೋದನೆ ನೀಡಿತ್ತು. ಕೊರೋನಾದಿಂದ ಬಡವರು, ಜನಸಾಮಾನ್ಯರು ಬಾಧಿತರಾಗಿದ್ದು, ಅವರ ನೆರವಿಗೆ ಸರ್ಕಾರ ನೆರವು ನೀಡುತ್ತಿದೆ. ಇದಕ್ಕೆ ಸಹಾಯ ಮಾಡಲೆಂದು ವಿಶ್ವಬ್ಯಾಂಕ್‌ ನೆರವು ನೀಡಿತ್ತು