Work from Home Challenges: ಹೇಳಿದಷ್ಟು ಯಾವುದೂ ಸುಲಭವಲ್ಲ, ಇದ್ರಲ್ಲೂ ಇದೆ ಅನೇಕ ಸವಾಲು!

ಆರಾಮವಾಗಿ ಮನೆಯಲ್ಲಿ ಕುಳಿತು ಕೆಲಸ ಮಾಡ್ತಾರೆ,ಬಂದ ಹಣವೆಲ್ಲ ಉಳಿತಾಯವೇ ಅಂತಾ ಅನೇಕರು ನಿಮಗೆ ಹೇಳಿರಬಹುದು. ಇರಬಹುದು ಮನೆಯಲ್ಲಿ ಕುಳಿತು ಕೆಲಸ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಆದ್ರೆ ಅದ್ರಿಂದ ಕೆಲ ನಷ್ಟವೂ ಇದೆ. ಕಂಪ್ಯೂಟರ್ ಮುಂದೆ ಕುಳಿತು,ಕೈನಲ್ಲಿ ಕಾಫಿ ಕಪ್ ಹಿಡಿದು ಈ ಲೇಖನ ಓದಿದ್ರೆ ನಿಮಗೆ ಒಂದಿಷ್ಟು ಮಾಹಿತಿ ಸಿಗುತ್ತದೆ.
 

Working From Home Challenges Advantages And Disadvantages Explained

Business Desk: ಎಲ್ಲ ಕಡೆ ಇಂಟರ್ನೆಟ್ (Internet) ಲಭ್ಯವಾಗಿರುವ ಕಾರಣ ಈಗ ಆನ್ಲೈನ್ (Online) ನಲ್ಲಿ ಕೆಲಸ (Work) ಮಾಡುವುದು ಸುಲಭವಾಗಿದೆ. ಮನೆಯಲ್ಲಿಯೇ ಕುಳಿತು,ಆರಾಮವಾಗಿ ಕೆಲಸ ಮಾಡಬಹುದು.ಚಾಟಿಂಗ್ ನಿಂದ ಹಿಡಿದು ಮೀಟಿಂಗ್ (Meeting) ವರೆಗೆ ಎಲ್ಲವೂ ಈಗ ಆನ್ಲೈನ್. ನೀವು ಆನ್ಲೈನ್‌ನಲ್ಲಿ ಕೆಲಸ ಮಾಡಲು ಯೋಚಿಸುತ್ತಿದ್ದರೆ ಅಥವಾ ಈಗಾಗಲೇ ಆನ್ಲೈನ್ ಮೂಲಕ ಕೆಲಸ ಮಾಡುತ್ತಿದ್ದರೆ, ಆನ್ಲೈನ್‌ನಲ್ಲಿ ಕೆಲಸ ಮಾಡುವುದರಿಂದ ಆಗುವ ಲಾಭವೇನು? ನಷ್ಟವೇನು? ಎಂಬುದನ್ನು ತಿಳಿದುಕೊಳ್ಳಿ.ಆನ್ಲೈನ್‌ನಲ್ಲಿ ಕೆಲಸ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಹಾಗೆಯೇ ಆನ್ಲೈನ್ ನಲ್ಲಿ ಕೆಲಸ ಮಾಡುವುದ್ರಿಂದ ಆರೋಗ್ಯ ಮತ್ತು ವೃತ್ತಿಗೆ ಸಂಬಂಧಿಸಿದ ಅನಾನುಕೂಲಗಳೂ ಇವೆ.  

ಆನ್ಲೈನ್ ನಲ್ಲಿ ಕೆಲಸ ಮಾಡುವ ಅನುಕೂಲಗಳು :    1. ಆನ್‌ಲೈನ್‌ನಲ್ಲಿ ಕೆಲಸ ಮಾಡುವ ದೊಡ್ಡ ಪ್ರಯೋಜನವೆಂದರೆ ನೀವು ಯಾವಾಗ ಬೇಕಾದರೂ ನಿಮ್ಮ ಕೆಲಸವನ್ನು ಪ್ರಾರಂಭಿಸಬಹುದು ಮತ್ತು ನಿಲ್ಲಿಸಬಹುದು. ನಿಮಗೆ ಯಾರೂ ಬಾಸ್ ಇರುವುದಿಲ್ಲ. ಅವರ ಕಿರಿಕಿರಿಗೆ ಕೆಲಸ ಮಾಡಬೇಕಾಗಿರುವುದಿಲ್ಲ.

2. ಹೊರಗಿನ ಓಡಾಟಕ್ಕೆ ಸಮಯ ಹಾಳಾಗುವುದಿಲ್ಲ. ಕಚೇರಿಗೆ ಹೋಗಿ,ಬರಲು ಸಮಯ ಹಿಡಿಯುತ್ತದೆ. ಆದ್ರೆ ಮನೆಯಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಉಳಿಯುತ್ತದೆ.  

3. ಕಚೇರಿಗೆ ಹೋಗುವ ಜನರು,ಕುಟುಂಬದ ಜೊತೆ ಇರಲು ಸಮಯ ಸಿಗುವುದಿಲ್ಲ ಎನ್ನುತ್ತಾರೆ. ಆದ್ರೆ ಮನೆಯಲ್ಲಿ ಕೆಲಸ ಮಾಡುವವರು ಕುಟುಂಬದ ಜೊತೆ ಸಮಯ ಕಳೆಯಬಹುದು.

4. ಆನ್ಲೈನ್‌ನಲ್ಲಿ ಕೆಲಸ ಮಾಡುವ ಜನರು ಅನೇಕ ರೀತಿಯಲ್ಲಿ ಹಣವನ್ನು ಉಳಿಸಬಹುದು. ಮನೆಯಿಂದ ದೂರದ ಕಂಪನಿಯಲ್ಲಿ ಕೆಲಸ ಮಾಡುವವರು ಪ್ರತಿದಿನ ಸಾರಿಗೆ ವೆಚ್ಚ ಮತ್ತು ಊಟದ ವೆಚ್ಚವನ್ನು ಭರಿಸಬೇಕಾಗುತ್ತದೆ. ಮನೆಯಲ್ಲಿದ್ದರೆ ಸಮಯ ಹೊಂದಿಸಿಕೊಂಡು ಆರಾಮವಾಗಿ ಅಡುಗೆ ಸೇವನೆ ಮಾಡಬಹುದು.

5. ಆನ್ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ನಿಸ್ಸಂಶಯವಾಗಿ ನೀವು ಕಂಪ್ಯೂಟರ್ ಮುಂದೆ ಸಮಯ ಕಳೆಯುತ್ತೀರಿ. ನಿಮ್ಮ ಕೆಲಸ ಜೊತೆ  ಬ್ಲಾಗಿಂಗ್, ಯೂಟ್ಯೂಬ್, ಫ್ರೀಲ್ಯಾನ್ಸಿಂಗ್ ಸೇರಿದಂತೆ ಇನ್ನೀ ಅನೇಕ ಕೆಲಸಗಳನ್ನು ಮಾಡುತ್ತ ನೀವು ಆದಾಯ ಗಳಿಸಬಹುದು.

ಇದನ್ನೂ ಓದಿ: TRAI ORDER TO TELECOM COMPANIES : 28 ದಿನವಲ್ಲ 30 ದಿನಗಳ ವ್ಯಾಲಿಡಿಟಿ ನೀಡಿ!

6. ಆನ್ಲೈನ್‌ನಲ್ಲಿ ಕೆಲಸ ಮಾಡುವ ದೊಡ್ಡ ಪ್ರಯೋಜನವೆಂದರೆ ನೀವು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು.ಕಚೇರಿಗೆ ಹೋಗುವವರು ಸಂಬಂಧಿಕರ ಮನೆಗೆ ಹೋಗಲು ರಜೆ ಕೇಳಬೇಕು. ಆದರೆ ಆನ್ಲೈನ್ ನಲ್ಲಿ ಕೆಲಸ ಮಾಡುವವರು ಸಂಬಂಧಿಕರ ಮನೆಗೆ ಹೋಗಿಯೂ ಆರಾಮವಾಗಿ ಕೆಲಸ ಮಾಡುತ್ತಾರೆ.

7. ಆನ್ಲೈನ್ ಕೆಲಸವನ್ನು ಮಾಡಲು ದೊಡ್ಡ ಹೂಡಿಕೆಯ ಅಗತ್ಯವಿಲ್ಲ. ಕಡಿಮೆ ಬಜೆಟ್ ನಲ್ಲಿಯೇ ನೀವು ಕೆಲಸ ಶುರು ಮಾಡಬಹುದು.  1000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ನಿಮ್ಮ ಸ್ವಂತ ವೆಬ್‌ಸೈಟ್ ಪ್ರಾರಂಭಿಸಬಹುದು. 

8. ಆನ್ಲೈನ್‌ನಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಇಂಟರ್ನೆಟ್  ಬಳಸುತ್ತಾರೆ. ಗೂಗಲ್ ನಲ್ಲಿ ಹುಡುಕಾಟ ನಡೆಸಿ ನೀವು ಹೊಸದನ್ನು ಕಲಿಯಬಹುದು.

9. ಸಾಮಾಜಿಕ ಜಾಲತಾಣ ಎಷ್ಟು ಪ್ರಸಿದ್ಧಿ ಪಡೆದಿವೆ ಎಂದ್ರೆ  ರಾತ್ರೋರಾತ್ರಿ ನೀವೂ ಹೀರೋ ಆಗಬಹುದು. ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. 

10. ಸ್ವತಂತ್ರವಾಗಿ ಬದುಕಬಹುದು, ಆನ್ಲೈನ್‌ನಲ್ಲಿ ಕೆಲಸ ಮಾಡುವ ಉತ್ತಮ ವಿಷಯವೆಂದರೆ ಯಾರಿಗೂ ತಲೆಬಾಗುವ ಅಗತ್ಯವಿರುವುದಿಲ್ಲ. ನಿಮಗೆ ಬೇಕಾದಾಗ ನೀವು ಕೆಲಸ ಮಾಡಬಹುದು. 

11. ರಜೆಯ ಸಮಸ್ಯೆಯೂ ಇಲ್ಲಿರುವುದಿಲ್ಲ. ಬೇಕಾದಾಗ ರಜೆ ಪಡೆಯಬಹುದು. ಅವಶ್ಯಕತೆಯಿದ್ದಾಗ ನಿರಂತರವಾಗಿ ಕೆಲಸ ಮಾಡಬಹುದು.

ಆನ್ಲೈನ್ ನಲ್ಲಿ ಕೆಲಸ ಮಾಡುವ ಅನಾನುಕೂಲಗಳು :1. ಆನ್‌ಲೈನ್‌ನಲ್ಲಿ ಕೆಲಸ ಮಾಡುವುದ್ರಿಂದ ನೀವು ಪ್ರಪಂಚದ ಮೂಲೆ ಮೂಲೆಯ ಜನರೊಂದಿಗೆ ಸಂಪರ್ಕ ಬೆಳೆಸಬಹುದು. ಆದ್ರೆ ಸುತ್ತಮುತ್ತಲಿನ ಜನರಿಂದ ದೂರವಿರ್ತೀರಿ. ಇಂಟರ್ನೆಟ್ ಜಗತ್ತಿನಲ್ಲಿ ಕಳೆದು ಹೋಗುವುದ್ರಿಂದ ಜನರ ಭೇಟಿ ಕಡಿಮೆಯಾಗುತ್ತದೆ. ಹೊರಗೆ ಹೋಗುವುದಕ್ಕಿಂತ ಕಂಪ್ಯೂಟರ್ ಮುಂದೆ ಸಮಯ ಕಳೆಯಲು ಜನರು ಬಯಸ್ತಾರೆ.

2. ಆನ್ಲೈನ್‌ನಲ್ಲಿ ಕೆಲಸ ಮಾಡುವ ಭರದಲ್ಲಿ, ಕೆಲವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತು ವ್ಯಾಯಾಮ ಅಥವಾ ಯೋಗದಿಂದ ದೂರವಿರುತ್ತಾರೆ. ವಾಕಿಂಗ್ ಮಾಡುವುದಿಲ್ಲ. ಕಂಪ್ಯೂಟರ್ ಪರದೆ ಕಣ್ಣಿನ ಮೇಲೂ ಪ್ರಭಾವ ಬೀರುತ್ತದೆ.

3. ಎಚ್ಚರಿಕೆಯಿಂದ ಕೆಲಸ ಮಾಡದಿದ್ದರೆ ತಪ್ಪುಗಳು ಹೆಚ್ಚಾಗುವ ಸಾಧ್ಯತೆಯಿದೆ. ಯಾಕೆಂದ್ರೆ ನಿಮ್ಮ ಕೆಲಸವನ್ನು ಮೇಲ್ವಿಚಾರಣೆ ಮಾಡುವವರಿರುವುದಿಲ್ಲ. ಬೇಕಾದಾಗ ಕೆಲಸ ಮಾಡುವ ಅನುಕೂಲತೆ ನಿಮ್ಮನ್ನು ಆಲಸಿ ಮಾಡಬಹುದು. 

4. ಆನ್ಲೈನ್ ನಲ್ಲಿ ಸದಾ ಕೆಲಸ ಮಾಡುವುದ್ರಿಂದ ಸಾಮಾಜಿಕ ಜಾಲತಾಣ ವೀಕ್ಷಣೆ,ಗೇಮಿಂಗ್ ಸೈಟ್ ವೀಕ್ಷಣೆ ಮೂಲಕ ಸಮಯ ಹಾಳಾಗಬಹುದು.    

ಇದನ್ನೂ ಓದಿ: Earn Money: ಮನೆಯಲ್ಲೇ ಕುಳಿತು ಯುಟ್ಯೂಬ್ ಮೂಲಕ ಹಣ ಗಳಿಸಿ

5. ಸದಾ ಕಂಪ್ಯೂಟರ್ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಕಡಿಮೆ ಆದಾಯವಿದ್ದರೆ ನಿಭಾಯಿಸುವುದು ಕಷ್ಟವಾಗುತ್ತದೆ. 

6. ಆನ್ಲೈನ್‌ನಲ್ಲಿ ಏಕಾಂಗಿಯಾಗಿ ಕೆಲಸ ಮಾಡಿದರೆ ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಕುಟುಂಬದ ಜೊತೆಗಿರುವಾಗ ಕೆಲಸಕ್ಕೆ ತೊಂದರೆಯಾಗುತ್ತದೆ. ಕೆಲಸದ ಕಡೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.  

7. ಎಲ್ಲ ಕಂಪನಿಗಳನ್ನು ನಂಬುವುದು ಕಷ್ಟ. ತಿಂಗಳ ಪೂರ್ತಿ ಕೆಲಸ ಮಾಡಿಸಿಕೊಂಡ ಹಣ ನೀಡದೆ ಹೋದ್ರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

Latest Videos
Follow Us:
Download App:
  • android
  • ios