Asianet Suvarna News Asianet Suvarna News

ಈ ವರ್ಷ 7904 ಕೋಟಿ ರು. ದಾನ ನೀಡಿದ ಅಜೀಂ ಪ್ರೇಮ್‌ಜಿ!

ಈ ವರ್ಷ 7904 ಕೋಟಿ ರು. ದಾನ ನೀಡಿದ ಅಜೀಂ ಪ್ರೇಮ್‌ಜಿ| ದಿನಕ್ಕೆ 22 ಕೋಟಿ ದಾನ  ದೇಶದ ನಂ.1 ದಾನಿ
 

With donations of Rs 22 crore a day Azim Premji is most generous Indian pod
Author
Bangalore, First Published Nov 11, 2020, 4:12 PM IST

ಮುಂಬೈ(ನ.11): 2020ನೇ ಹಣಕಾಸು ವರ್ಷದಲ್ಲಿ ಒಟ್ಟು 7,804 ಕೋಟಿ ರು.ಗಳನ್ನು ಸಮಾಜ ಸೇವೆಗೆ ನೀಡುವ ಮೂಲಕ ದೇಶದ ನಂ.1 ದಾನಿಯಾಗಿ ವಿಪೊ್ರೀ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹೊರಹೊಮ್ಮಿದ್ದಾರೆ. ಈ ವರ್ಷ ಇವರು ದಿನಕ್ಕೆ ಸರಾಸರಿ 22 ಕೋಟಿ ರು. ಮಾಡಿದ್ದಾರೆ

ಕಳೆದ ವರ್ಷ ಎಚ್‌ಸಿಎಲ್ ಕಂಪನಿಯ ಶಿವ ನಾಡಾರ್ 826 ಕೋಟಿ ರು. ದಾನ ಮಾಡುವ ಮೂಲಕ ಅತಿದೊಡ್ಡ ದಾನಿಯಾಗಿದ್ದರು. ಈ ವರ್ಷ ಅವರು 795 ಕೋಟಿ ರು. ದಾನ ಮಾಡಿದ್ದಾರೆ. ಕಳೆದ ವರ್ಷ 426 ಕೋಟಿ ರು. ನೀಡಿದ್ದ ಅಜೀಂ ಪ್ರೇಮ್‌ಜಿ ಈ ವರ್ಷ ಅದನ್ನು ಭಾರಿ ಪ್ರಮಾಣದಲ್ಲಿ ಏರಿಸಿ ನಂ.1 ದಾನಿಯಾಗಿದ್ದಾರೆ.

ಶಿವ ನಾಡಾರ್ 2ನೇ ಅತಿ ದೊಡ್ಡ ದಾನಿಯಾಗಿದ್ದಾರೆ. ದೇಶದ ನಂ.1 ಶ್ರೀಮಂತ ಉದ್ಯಮಿ, ರಿಲಯನ್‌ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ 458 ಕೋಟಿ ರು. ನೀಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಹುರುನ್ ರಿಪೋರ್ಟ್ ಇಂಡಿಯಾ ಹಾಗೂ ಎಡೆಲ್ಗಿವ್ ಫೌಂಡೇಶನ್‌ಗಳು ಸೇರಿ ಈ ಪಟ್ಟಿ ಸಿದ್ಧಪಡಿಸಿವೆ.

2020ರಲ್ಲಿ ದೇಶದಲ್ಲಿ ದಾನಿಗಳಿಂದ ಹರಿದುಬಂದ ಒಟ್ಟು ಮೊತ್ತ 12,050 ಕೋಟಿ ರು.ಗೆ ಏರಿಕೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.175 ಹೆಚ್ಚು. ಇನ್ನು, ಈ ವರ್ಷ ಒಟ್ಟು ದಾನಿಗಳ ಸಂಖ್ಯೆ 78ಕ್ಕೆ (ಕಳೆದ ವರ್ಷ 72) ಏರಿಕೆಯಾಗಿದೆ. ನಂದನ್ ನಿಲೇಕಣಿ 159 ಕೋಟಿ, ಅವರ ಪತ್ನಿ ರೋಹಿಣಿ 47 ಕೋಟಿ ದಾನ ಮಾಡಿದ್ದಾರೆ.

Follow Us:
Download App:
  • android
  • ios