Asianet Suvarna News Asianet Suvarna News

ವಿಪ್ರೋದಲ್ಲಿ ಫ್ರೆಶರ್ಸ್‌ಗೂ ಕೈತುಂಬ ಸಂಬಳ: ಈಗ್ಲೇ ರೆಸ್ಯೂಮ್ ಕಳ್ಸಿ!

ಹೊಸಬರಿಗೆ ಮಣೆ ಹಾಕಿದ ವಿಪ್ರೋ ಸಂಸ್ಥೆ! ವಾರ್ಷಿಕ 3.5 ಲಕ್ಷ ರೂ. ವೇತನ ನಿಗದಿ! ಫ್ರೆಶರ್ಸ್ ವೇತನ ಇದೀಗ ತಿಂಗಳಿಗೆ 30 ಸಾವಿರ ರೂ.! ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೊಸ ಕೋಡಿಂಗ್ ವ್ಯವಸ್ಥೆ! ಶೇ. 30 ರಷ್ಟು ಹೆಚ್ಚು ನೇಮಕಾತಿಗೆ ಮುಂದಾದ ವಿಪ್ರೋ! ರಾಷ್ಟ್ರೀಯ ಮಟ್ಟದ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧಾರ

Wipro offers good package for freshers apply soon
Author
Bengaluru, First Published Oct 25, 2018, 5:11 PM IST
  • Facebook
  • Twitter
  • Whatsapp

ಬೆಂಗಳೂರು(ಅ.25): ವಿಪ್ರೋ ಸಂಸ್ಥೆ ಹೊಸದಾಗಿ ತನ್ನ ಕಂಪನಿ ಸೇರುವ ಉದ್ಯೋಗಿಗಳ ವೇತನವನ್ನು ವಾರ್ಷಿಕ 3.5 ಲಕ್ಷ ರೂ. ನಿಗದಿ ಮಾಡಿದೆ. ಈ ಮೊದಲು ಇದು 3.2 ಲಕ್ಷ ರೂ. ಇತ್ತು.

ಅದರಂತೆ ವಿಪ್ರೋ ಫ್ರೆಶರ್ಸ್ ವೇತನ ಇದೀಗ ತಿಂಗಳಿಗೆ 30 ಸಾವಿರ ರೂ. ಆಗಲಿದ್ದು, ಶಿಕ್ಷಣ ಮುಗಿಸಿ ಈಗಷ್ಟೇ ಇಂಡಸ್ಟ್ರಿಗೆ ಕಾಲಿಡುವವರಿಗೆ ಸಿಹಿ ಸುದ್ದಿಯಾಗಿ ಪರಿಣಮಿಸಿದೆ.

ಇದೇ ವೇಳೆ ಸಂಸ್ಥೆಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೊಸ ಕೋಡಿಂಗ್ ವ್ಯವಸ್ಥೆಯನ್ನು ಕೂಡ ವಿಪ್ರೋ ಜಾರಿಗೆ ತರಲಿದೆ. ಅಲ್ಲದೇ ಶೇ. 30 ರಷ್ಟು ಹೆಚ್ಚು ನೇಮಕಾತಿ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವಿಪ್ರೋ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್, ಪ್ರತಿಸ್ಪರ್ಧಿ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್ ಕೂಡ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದು, ಅದರಂತೆ ರಾಷ್ಟ್ರೀಯ ಮಟ್ಟದ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳಲುಸಂಸ್ಥೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios