ಪಿಎಂ ಆವಾಸ್ ಯೋಜನೆ (ನಗರ) ವಿಸ್ತರಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ನೀಡಿದ ವರದಿ,ಇದಕ್ಕೇನು ಕಾರಣ?

ಪಿಎಂ ಆವಾಸ್ ಯೋಜನೆ (ನಗರ) ಅನೇಕ ಅರ್ಹ ಜನರಿಗೆ ಮನೆಗಳನ್ನು ಒದಗಿಸಿದೆ. ಆದರೆ, ಈ ಯೋಜನೆ ನಿಗದಿತ ಗುರಿಯನ್ನು ಇನ್ನೂ ತಲುಪಿರದ ಕಾರಣ ಮುಂದಿನ ವರ್ಷದ ಡಿಸೆಂಬರ್ ತನಕ ವಿಸ್ತರಿಸುವಂತೆ  ಗೃಹ ಹಾಗೂ ನಗರ ವ್ಯವಹಾರಗಳ ಸ್ಥಾಯಿ ಸಮಿತಿ ಸಂಸತ್ತಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. 
 

Why PM Awas Yojana Urban is staring at an extension anu

ನವದೆಹಲಿ (ಆ.27): ಭಾರತ ಸರ್ಕಾರದ ಮಹಾತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಆವಾಸ್ ಯೋಜನೆ -ನಗರ (ಪಿಎಂಎವೈ-ಯು) 2015 ರ ಜೂನ್ ನಲ್ಲಿ ಪ್ರಾರಂಭವಾಗಿತ್ತು. ನಗರ ಪ್ರದೇಶದ ಎಲ್ಲ ಆರ್ಹ ಫಲಾನುಭವಿಗಳಿಗೆ ಮನೆಗಳನ್ನು ಒದಗಿಸೋದು ಈ ಯೋಜನೆಯ ಉದ್ದೇಶ. ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಈ ಯೋಜನೆ ಅಂತ್ಯವಾಗಲಿದೆ. ಆದರೆ, ಈ ಮಿಷನ್ ಈಗಲೂ ಕೂಡ ಅಪೂರ್ಣವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಅಗತ್ಯಗಳು, ಬೇಡಿಕೆ ಹಾಗೂ ಪೂರೈಕೆ ನಡುವೆ ಅಂತರವಿರೋದು. ಗೃಹ ಹಾಗೂ ನಗರ ವ್ಯವಹಾರಗಳ ಸ್ಥಾಯಿ ಸಮಿತಿ ಸಂಸತ್ತಿಗೆ ಸಲ್ಲಿಸಿರುವ ವರದಿಯು ಪ್ರಸ್ತುತ ಜಾರಿಯಲ್ಲಿರುವ ಯೋಜನೆಯನ್ನು ಮಾರ್ಪಾಡಿನೊಂದಿಗೆ ಅಥವಾ ಈ ಉದ್ದೇಶ ಪೂರೈಕೆಗೆ ಹೊಸ ಯೋಜನೆ ಬಿಡುಗಡೆಗೊಳಿಸುವ ಅಗತ್ಯವನ್ನು ಎತ್ತಿ ಹಿಡಿದಿದೆ. ಪಿಎಂಎವೈ -ಯು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭದಲ್ಲಿ ಒಟ್ಟು 2ಕೋಟಿ ಮನೆಗಳನ್ನು ನೀಡುವ ಗುರಿ ಹೊಂದಿತ್ತು. ಆದರೆ, ಸರ್ಕಾರದ ಮಾಹಿತಿ ಅನ್ವಯ 2023ರ ಆಗಸ್ಟ್ 23ಕ್ಕೆ ಅನ್ವಯವಾಗುವಂತೆ ಒಟ್ಟು 1.19 ಕೋಟಿ ಮನೆಗಳಿಗೆ ಮಾತ್ರ ಅನುಮೋದನೆ ಸಿಕ್ಕಿದೆ. 

ಪ್ರಾರಂಭದಲ್ಲಿ ಈ ಯೋಜನೆಯಡಿ 1.8 ಕೋಟಿ ಸ್ಲಂ ಮನೆಗಳು ಹಾಗೂ 20ಲಕ್ಷ ಸ್ಲಂಯೇತರ ಬಡವರನ್ನು ತಲುಪುವ ಗುರಿ ಹೊಂದಲಾಗಿತ್ತು. ಆದರೆ, ಪಿಎಂಎವೈ (ಯು) ಅಡಿಯಲ್ಲಿ 1.12  ಕೋಟಿ ಮನೆಗಳಿಗೆ ಬೇಡಿಕೆಯಿತ್ತು. ಇನ್ನು ಪಿಎಂಎವೈ-ಯು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಮನೆಗಳ ಅಗತ್ಯಗಳನ್ನು ಅಂದಾಜಿಸಲು ಸೂಚಿಸಿತ್ತು.  ನಗರ ಪ್ರದೇಶಗಳಲ್ಲಿ ಎಷ್ಟು ಮನೆಗಳ ಅಗತ್ಯವಿದೆ ಎಂಬುದನ್ನು ಪತ್ತೆ ಹಚ್ಚಲು ಸಚಿವಾಲಯ ಯಾವುದೇ ಸ್ವತಂತ್ರ ಅಧ್ಯಯನ ಕೈಗೊಂಡಿಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಆದರೆ, ಅಂಕಿಅಂಶಗಳ ಅನ್ವಯ ನಗರ ಪ್ರದೇಶಗಳಲ್ಲಿ 'ಎಲ್ಲರಿಗೂ ಮನೆ' ಎಂಬ ಯೋಜನೆ ಸದ್ಯ ಅಪೂರ್ಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದ ಆರ್ಥಿಕತೆಯಲ್ಲಿ ಜಗತ್ತಿಗೆ ಆಶಾವಾದ, ಆತ್ಮವಿಶ್ವಾಸ ಕಾಣಿಸುತ್ತಿದೆ: ಪ್ರಧಾನಿ ಮೋದಿ

ಬೇಡಿಕೆ ಹಾಗೂ ಪೂರೈಕೆ
2001ರ ಸೆನ್ಸಸ್ ಅನ್ವಯ ದೇಶದ ನಗರ ಪ್ರದೇಶಗಳಲ್ಲಿ 286.1ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಈ ಪ್ರಮಾಣ 2011ರ ಸೆನ್ಸಸ್ ನಲ್ಲಿ 377.1 ಮಿಲಿಯನ್ ಗೆ ಏರಿಕೆಯಾಗಿತ್ತು. ಇದು ವಾರ್ಷಿಕ ಶೇ.2.76ರ ಪ್ರಗತಿ ದಾಖಲಿಸಿದೆ. ಇನ್ನು ಕೈಗೆಟುಕುವ ಬೆಲೆಯಲ್ಲಿ ಮೂಲಸೌಕರ್ಯಗಳನ್ನೊಳಗೊಂಡ ಮನೆಗಳನ್ನು ನಗರ ಪ್ರದೇಶಗಳಲ್ಲಿ ಒದಗಿಸೋದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಏಕೆಂದರೆ ಒಟ್ಟು ಜನಸಂಖ್ಯೆಯ ಶೇ.31ಕ್ಕಿಂತ ಹೆಚ್ಚಿನ ಜನರು ನಗರ ಪ್ರದೇಶಗಳಲ್ಲೇ ವಾಸಿಸುತ್ತಾರೆ. 

ತಾಂತ್ರಿಕ ತಂಡ (ಟಿಜಿ)-12  ಅಂದಾಜಿನ ಪ್ರಕಾರ 2012-17ನೇ ಅವಧಿಯಲ್ಲಿ 1.88 ಕೋಟಿ ಮನೆಗಳ ಕೊರತೆಯಿತ್ತು. ಇದಕ್ಕೆ ಸ್ಲಂ ಪ್ರದೇಶಗಳಲ್ಲಿ ಶೇ.34ರಷ್ಟು ಹೆಚ್ಚಳವಾಗಿರೋದೆ ಕಾರಣ. ಸ್ಲಂಗಳಲ್ಲಿನ ಮನೆಗಳ ಸಂಖ್ಯೆ 18 ಮಿಲಿಯನ್ ತನಕ ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು.

ಎನ್ ಎಸ್ಎಸ್ ಒ (2012) 69ನೇ ರೌಂಡ್ ವರದಿ ಅನ್ವಯ ದೇಶದಲ್ಲಿ ಒಟ್ಟು 33,510  ಸ್ಲಂಗಳಿವೆ. ಇವುಗಳು 88,09,007 ಮನೆಗಳಿವೆ. 2011ರ ಸೆನ್ಸಸ್ ಅನ್ವಯ ಸ್ಲಂ ಮನೆಗಳ ಒಟ್ಟು ಸಂಖ್ಯೆ 139.20ಲಕ್ಷ ಇದೆ. ಇನ್ನು ವಲಸೆ ಜನಸಂಖ್ಯೆ 44.66 ಲಕ್ಷವಿದೆ. ಇನ್ನು 2011ರ ಸೆನ್ಸಸ್ ಡೇಟಾ ಅನ್ವಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಗಳ ಬೇಡಿಕೆ 183.86ಲಕ್ಷ ಇದೆ. ಆದರೆ, ಆಂಧ್ರ ಪ್ರದೇಶ, ಬಿಹಾರ, ಗುಜರಾತ್, ಜಾರ್ಖಂಡ, ಕೇರಳ, ಅಸ್ಸಾಂ, ಮಣಿಪುರ, ತ್ರಿಪುರ, ಅಂಡಮಾನ್ ಹಾಗೂ ನಿಕೋಬರ್ ದ್ವೀಪಗಳಲ್ಲಿ ಮಾತ್ರ ಒಟ್ಟು ಸ್ಲಂಗಳ ಸಂಖ್ಯೆ ಹಾಗೂ ವಲಸಿಗರ ಸಂಖ್ಯೆಗಿಂತ ಹೆಚ್ಚಿನ ಮನೆಗಳ ಬೇಡಿಕೆ ಇದೆ. ಇನ್ನು ಉಳಿದ ರಾಜ್ಯಗಳಲ್ಲಿ ಒಟ್ಟು ಸ್ಲಂ ಮನೆಗಳು ಹಾಗೂ ವಲಸೆ ಜನಸಂಖ್ಯೆ ಪ್ರಮಾಣಕ್ಕಿಂತ ಕಡಿಮೆ ಮನೆಗಳ ಬೇಡಿಕೆಯಿದೆ. 

ಸೆಪ್ಟೆಂಬರ್ ತಿಂಗಳಿಂದ ತರಕಾರಿ ಬೆಲೆ ಇಳಿಕೆ: ಆರ್ ಬಿಐ ಗವರ್ನರ್

ಹೊಸ ಯೋಜನೆ ಜಾರಿಯಾಗುತ್ತಾ?
ಸ್ಥಾಯಿ ಸಮಿತಿ ಈ ಬಗ್ಗೆ ಸಚಿವಾಲಯ ಅಧ್ಯಯನ ನಡೆಸಿ ನೈಜ್ಯ ಅಂಶಗಳನ್ನು ತಿಳಿಯುವಂತೆ ಶಿಫಾರಸ್ಸು ಮಾಡಿದೆ. ಅಲ್ಲದೆ, ಈ ಯೋಜನೆಯನ್ನು ಮಾರ್ಪಾಡು ಮಾಡುವ ಮೂಲಕ ಮತ್ತೆ ಜಾರಿ ಮಾಡುವಂತೆ ಅಥವಾ ಹೊಸ ಯೋಜನೆ ರೂಪಿಸುವಂತೆಯೂ ಸಮಿತಿ ಸೂಚಿಸಿದೆ.


 

Latest Videos
Follow Us:
Download App:
  • android
  • ios