Asianet Suvarna News Asianet Suvarna News

ನಿರ್ಮಾಣ ಹಂತದ ಕಟ್ಟಡಕ್ಕೆ ಹಸಿರು ಬಣ್ಣದ ಬಟ್ಟೆಯೇ ಬಳಸೋದೇಕೆ?

* ಕಟ್ಟಡಗಳಿಗೇಕೆ ಹಸಿರು ಬಣ್ಣದ ಬಟ್ಟೆಯನ್ನೇ ಬಳಸುತ್ತಾರೆ?

* ಹಸಿರು ಬಣ್ಣ ಬಳಕೆ ಹಿಂದಿದೆ ಇಂಟರೆಸ್ಟಿಂಗ್ ವಿಚಾರ

* ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಈ ಕ್ರಮ

 

Why is the construction site covered with green cloth instead of any other color pod
Author
Bangalore, First Published Mar 31, 2022, 8:33 AM IST | Last Updated Mar 31, 2022, 8:33 AM IST

ನವದೆಹಲಿ(ಮಾ.31): ಬಹುಮಹಡಿ ಕಟ್ಟಡಗಳ ನಿರ್ಮಾಣ ಕಾರ್ಯ ಅನೇಕರು ನೋಡುತ್ತಿರುತ್ತಾರೆ. ಅದರಲ್ಲೂ ನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಿರುವಾಗ ಇಂತಹ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಮೇಲೆ ಹಸಿರು ಬಟ್ಟೆ ಅಥವಾ ಹಸಿರು ಬಣ್ಣದ ಪರದೆ ಹಾಕಿರುವುದನ್ನು ನೋಡಿರಬಹುದು. ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಮುಚ್ಚಲು ಬಟ್ಟೆ ಬಳಸುವುದು ಸಾಮಾನ್ಯ, ಆದರೆ ಈ ಬಟ್ಟೆ ಏಕೆ ಹಸಿರಾಗಿದೆ ಎಂಬ ಲಾಜಿಕ್ ಕೆಲವರಿಗೆ ಮಾತ್ರ ತಿಳಿದಿದೆ.  ಹಾಗಾದ್ರೆ ಕಟ್ಟಡವನ್ನು ಹಸಿರು ಬಟ್ಟೆಯಿಂದ ಏಕೆ ಮುಚ್ಚಲಾಗುತ್ತೆ? ಇಲ್ಲಿದೆ ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ

ಈ ಬಣ್ಣವು ರಾತ್ರಿಯಲ್ಲಿ ವೇಗವಾಗಿ ಪ್ರತಿಫಲಿಸುತ್ತದೆ

ಇತರ ಬಣ್ಣಗಳಿಗೆ ಹೋಲಿಸಿದರೆ ಹಸಿರು ದೂರದಿಂದ ಗೋಚರಿಸುತ್ತದೆ. ಇದರೊಂದಿಗೆ, ರಾತ್ರಿಯಲ್ಲಿ ಸ್ವಲ್ಪ ಬೆಳಕು ಇರುವಾಗಲೂ ಈ ಬಣ್ಣದ ಬಟ್ಟೆಯು ಸುಲಭವಾಗಿ ಗೋಚರಿಸುತ್ತದೆ, ಆದ್ದರಿಂದ ಕಟ್ಟಡವನ್ನು ನಿರ್ಮಿಸುವಾಗ, ಅದನ್ನು ಹಸಿರು ಬಟ್ಟೆಯಿಂದ ಮುಚ್ಚಲಾಗುತ್ತದೆ.

ಕಾರ್ಮಿಕರ ಗಮನ ಬೇರೆಡೆ ಹರಿಯದಿರಲು 

ವಾಸ್ತವವಾಗಿ, ಕಟ್ಟಡದ ನಿರ್ಮಾಣದ ಸಮಯದಲ್ಲಿ ಹಸಿರು ಬಟ್ಟೆಯಿಂದ ಮುಚ್ಚುವುಉದರಿಂದ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರ ಗಮನವನ್ನು ಬೇರೆಡೆಗೆ ಸೆಳೆಯುವುದಿಲ್ಲ ಎಂದು ಹೇಳಲಾಗಿದೆ. ಅನೇಕ ಮಂದಿ ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡಲು ಹೆದರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕಾರ್ಮಿಕರು ಎತ್ತರದಿಂದ ಕೆಳಗೆ ನೋಡಿದಾಗ, ಆಗಾಗ್ಗೆ ಭಯಭೀತರಾಗುತ್ತಾರೆ. ಹೀಗಿರುವಾಗ ಹಸಿರು ಬಣ್ಣದ ಬಟ್ಟೆಯಿಂದ ಕಟ್ಟಡ ಮುಚ್ಚಿದರೆ, ಮನಸ್ಸು ಚಂಚಲವಾಗುವುದಿಲ್ಲ, ಇದಕ್ಕಾಗಿ ಈ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ.

ಧೂಳಿನ ಕಣಗಳು ಹಾರುವುದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆ

ಇದರ ಹೊರತಾಗಿ, ನಿರ್ಮಾಣ ಪ್ರಾರಂಭವಾದಾಗ, ಧೂಳು, ಮಣ್ಣು ಮತ್ತು ಸಿಮೆಂಟ್ ಕಣಗಳು ಪ್ರತಿದಿನ ನಿರ್ಮಾಣ ಸ್ಥಳದಲ್ಲಿ ಹಾರುತ್ತಲೇ ಇರುತ್ತವೆ ಎಂದು ಮತ್ತೊಂದು ವಾದವನ್ನು ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ವಾಸಿಸುವ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಹೀಗಾಗಿ ಕಟ್ಟಡವನ್ನು ಬಟ್ಟೆಯಿಂದ ಮುಚ್ಚುವುದರಿಂದ ಈ ಸಮಸ್ಯೆಯು ಸಾಕಷ್ಟು ಕಡಿಮೆಯಾಗುತ್ತದೆ ಮತ್ತು ಧೂಳಿನ ಕಣಗಳು ಹೊರಬರುವುದಿಲ್ಲ.

Latest Videos
Follow Us:
Download App:
  • android
  • ios