ಕರ್ನಾಟಕ ಬಜೆಟ್ 2024: ಬೆಂಗ್ಳೂರಿಗೆ ಭರಪೂರ ಕೊಡುಗೆ ನೀಡಿದ ಸಿದ್ದರಾಮಯ್ಯ, ಯಾವ ಜಿಲ್ಲೆಗೆ ಏನು ಸಿಕ್ತು?
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಬೆಂಗಳೂರು ನಗರ, ಬೀದರ್, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಧಾರವಾಡ, ಬೀದರ್, ಗದಗ ಜಿಲ್ಲೆಗಳೂ ಆಯವ್ಯ ಯದಲ್ಲಿ ಉತ್ತಮ ಪಾಲನ್ನೇ ಪಡೆದಿವೆ.
ಬೆಂಗಳೂರು(ಫೆ.17): ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಬೆಂಗಳೂರು ನಗರ, ಬೀದರ್, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಧಾರವಾಡ, ಬೀದರ್, ಗದಗ ಜಿಲ್ಲೆಗಳೂ ಆಯವ್ಯ ಯದಲ್ಲಿ ಉತ್ತಮ ಪಾಲನ್ನೇ ಪಡೆದಿವೆ. ಇದರ ಜತೆಗೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೀನುಗಾರಿಕೆಯ ದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳು ಘೋಷಣೆಯಾಗಿವೆ. ಆದರೆ, ಹಾಸನ, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ಹಾವೇರಿ, ಬಳ್ಳಾರಿ, ಯಾದಗಿರಿ, ಚಾಮರಾಜನಗರ, ದಾವಣಗೆರೆ, ಚಿಕ್ಕಮಗಳೂರು, ವಿಜಯನಗರ ಜಿಲ್ಲೆಗಳಿಗೆ ನಿರೀಕ್ಷೆಯಷ್ಟು ಬಜೆಟ್ ಪಾಲು ದಕ್ಕಿದಂತಿಲ್ಲ.
1 ಬೀದರ್
• ಈ ಸಾಲಿನಲ್ಲೇ ಔರಾದ್ ಕೆರೆಗೆ ನೀರು
• ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ
• ಬೀದರ್-ಬೆಂಗಳೂರು ನಡುವೆ ಆರ್ಥಿಕ ಕಾರಿಡಾರ್ ನಿರ್ಮಾಣ
• ಪುರಾತನ ನೀರು ಸರಬರಾಜು ಪುನಶ್ವೇತನ
* ಹೊನ್ನಿಕೇರಿ ಮೀಸಲು ಅರಣ್ಯದಲ್ಲಿ ಪ್ರವಾಸೋದ್ಯಮಕ್ಕೆ ₹15 ಕೋಟಿ
* ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ
* ಭಾಲ್ಕಿಯಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳ ದಾಖಲೆ ರಿಜಿಟಲೀಕರಣ
* ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
* ಶ್ರೀ ನಾನಕ್ ಝೇರಾ ಸಾಹೇಬ್ ಗುರುದ್ವಾರ ಅಭಿವೃದ್ಧಿಗಾಗಿ 1 ಕೋಟಿ ಅನುದಾನ
ಸಿದ್ದು ಬಜೆಟ್ 2024: ನೀರಾವರಿಗೆ ಭರಪೂರ 19,000 ಕೋಟಿ..!
2 ಕಲಬುರಗಿ
• ಆಳಂದ ಕೆರೆ ತುಂಬಿಸುವ ಯೋಜನೆ
• ಬೆಣ್ಣೆತೊರಾ ಡ್ಯಾಂಗೆ ಭೀಮಾ, ಕಾಗಿಣಾ ನದಿ 1365 dars
* ಚಿತ್ತಾಪುರ, ಜೇವರ್ಗಿ ತಾಲೂಕಿನಲ್ಲಿ ಬಾಂದಾರು, ಕೆರೆ ತುಂಬಿಸುವ ಕಾಮಗಾರಿ
• ವಿವಿಗಳ ಘಟಕ ಕಾಲೇಜು ಸ್ಥಾವನೆ
• ಮೆಗಾ ಟೆಕ್ಸಟೈಲ್‌ಪಾರ್ಕ್‌ಗೆ 50 ಕೋಟಿ
* ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ
• ವಚನ ಸಂಗ್ರಹಾಲಯ/ಮಂಟಪ ಸ್ಥಾಪನೆ
• ವಿವಿಯಲ್ಲಿ ಸೂಫಿ ಸಂತ ಅಧ್ಯಯನ ಪೀಠ
• ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
* ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕ ಸ್ಥಾಪನೆ
ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ
3 ವಿಜಯಪುರ
• ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು
• ಇಟ್ಟಂಗಿಹಾಳ ವಿಮಾನ ನಿಲ್ದಾಣ ಸಮೀಪ ಪಿಪಿಪಿ ಮಾದರಿ ಆಹಾರ ಪಾರ್ಕ್ ವ್ಯಾಪನೆ
• ಆಲಮಟ್ಟಿಯಲ್ಲಿ ಮೀನುಗಾರಿಕಾ ಕೇಂದ್ರ
* ಬಸವನ ಬಾಗೇವಾಡಿ ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ
• ಹೊರ್ತಿ-ರೇವಣಸಿದ್ದೇಶ್ವರ, ಚಿಮ್ಮಲಗಿ, ಮುಳವಾಡ ಏತನೀರಾವರಿ ಯೋಜನೆ
• ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರಾಧಿಕಾರ
* ಅಕ್ಕಮಹಾದೇವಿ ಮಹಿಳಾ ವಿವಿ, ಶಿವಯೋಗಿ ಸಿದ್ದರಾಮೇಶ್ವರರ ಅಧ್ಯಯನ ಪೀಠ
• ವಿಜ್ಞಾನ ಕೇಂದ್ರ /ತಾರಾಲಯ ಕಾರ್ಯಾರಂಭ
* ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ
4 ಯಾದಗಿರಿ
• ಭೀಮಾ ಪ್ಲಾಂಕ್ ಏತ ನೀರಾವರಿ ಯೋಜನೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ
* ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ
• ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಆರಂಭ
5 ಬೆಳಗಾವಿ
• ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ
* ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು 500 ಕೋಟಿ ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿ
• 450 ಕೋಟಿ ವೆಚ್ಚದಲ್ಲಿ 4.50 ಕಿಮಿ ಉದ್ದದ ಮೇಲೇತುವೆ ನಿರ್ಮಾಣ
• ಸವದತ್ತಿಯ ಯಲ್ಲಮ್ಮ ದೇವಿ ದೇಗುಲ ಅಭಿವೃದ್ಧಿ ಮಂಡಳಿ ಸ್ವಾವನೆ
• ನೋಂದಣಿ ಆಗುವ ವಾಹನ ದಾಖಲೆ ಡಿಜಟಲೀಕರಣ ಪ್ರಾಯೋಗಿಕ ಜಾರಿ
* ಅಥಣಿ-ಕೊಟ್ಟಲಗಿ-ಅಮ್ಮಾಜೇಶ್ವರ, ಶ್ರೀಚನ್ನವೃಷಬೇಂದ್ರ, ಮಹಾಲಕ್ಷ್ಮಿ ಸತ್ತಿಗೇರಿ, ಮಾರ್ಕಾಂಡೇಯ, ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳ ಹಳೆಯ ಏತನೀರಾವರಿ ಪುನಶ್ವೇತನ
* ಖಾನಾಪುರದಲ್ಲಿ 100 ಹಾಸಿಗೆ ಆಸ್ಪತ್ರೆ
* ಸಾರ್ವಜನಿಕ ಆರೋಗ್ಯ ಲ್ಯಾಬ್ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ
• ಅರಬಾವಿ ಹಿರೇಬಾಗೇವಾಡಿ, ಸಂತಿ ಬಸ್ತವಾಡ, ಕಾಗವಾಡ ಕೆರೆಗೆ ನೀರು
6 ಬಾಗಲಕೋಟೆ
* ಮೆಳ್ಳಿಗೇರಿ-ಹಲಗಲಿ, ಸಾಲಹಟ್ಟಿ - ಶಿವ ಲಿಂಗೇಶ್ವರ, ಶಿರೂರು, ಹನವಾಳ ಏತ ನಿರಾವರಿ ಯೋಜನೆಗಳ ಪುನಚ್ಛೇತನ
* ಕೆರೂರು ಏತನೀರಾವರಿ ಅನುಷ್ಠಾನ
* ಐಹೊಳೆಯಲ್ಲಿ ಹೋಟೆಲ್ ನಿರ್ಮಾಣ
• ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ
• ಹುನಗುಂದದಲ್ಲಿ ತಾಲೂಕಾ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
7 ರಾಯಚೂರು
* ಒಣ ಮೆಣಸಿನಕಾಯಿ ಮಾರುಕಟ್ಟೆ
• ಗುಂಬಳ್ಳಿ ಕೆರೆ ತುಂಬುವ ಯೋಜನೆ
* ಮಸ್ಕಿ ತಾಲೂಕಿನ ಪಾಮನಕಲ್ಲೂರು, ಇತರ ಪ್ರದೇಶಗಳಿಗೆ ನಾರಾಯಣ ಬಲದಂಡ ಕಾಲುವೆಯಿಂದ ನೀರಾವರಿ ಸೌಲಭ್ಯ
• ತುಂಗಭದ್ರಾ ನದಿಗೆ ಬಿಸಿಬಿ ನಿರ್ಮಾಣ
* ಮಾನ್ವಿ ತಾಲೂಕಿನ ಕುರ್ಡಿ ಕೆರೆಗೆ ನೀರು
• ಚಿಕ್ಕಮಂಚಾಲಿ ಗ್ರಾಮದ ಬಳಿ ₹159 ಬ್ರಿಡ್ಜ್ ಕಂ ಬ್ಯಾರೇಜ್
8 ಧಾರವಾಡ
* ಹುಬ್ಬಳ್ಳಿಯಲ್ಲಿ ಬಯೋ ಸಿಎನ್‌ಜಿ ಘಟಕ
* ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ(ವಾಲ್ಕಿ) ಮ್ಯಾನೇಜ್‌ಮೆಂಟ್ ಆಗಿ ಉನ್ನತೀಕರಣ
• ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮ ಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಯೋಜನ
• ಧಾರವಾಡ ಸಮೀಪ ಸಾವಿರ ಎಕರೆಯಲ್ಲಿ ಕೈಗಾರಿಕಾಭಿವೃದ್ಧಿಗೆ ಯೋಜನೆ
• ಹುಬ್ಬಳ್ಳಿಯಲ್ಲಿ ಕೌಶಲ್ಯ ಕೇಂದ್ರ ಸ್ಥಾಪನೆ
* ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ, ಇಂಟಿಗ್ರೆಟೆಡ್ ಟೌನ್‌ಶಿಪ್ ಅಭಿವೃದ್ಧಿ
9 ಗದಗ
• ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ
* ಜಾಲವಾಡಗಿ ಕೆರೆ ತುಂಬಿಸುವ ಯೋಜನೆ
• ರೋಣ ತಾಲೂಕಿನ ಮಲ್ಲಾಪುರ ರಸ್ತೆಯಲ್ಲಿ ರೈಲ್ವೆ ಮೇಲೇತುವೆ, ಕೆಳ ಸೇತುವೆ ನಿರ್ಮಾಣ
• ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ
* ಶಿರಹಟ್ಟಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ
* 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಅನುದಾನ
• 10 ಕೋಟಿ ವೆಚ್ಚದಲ್ಲಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೂಪರ್ ಸ್ಪೆಷಾಲಿಟಿ ಹೃದಯ ಘಟಕ
• ರೋಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ ಜಿಟಿಟಿಸಿ ಕೇಂದ್ರ ಸ್ಥಾಪನೆ
10 ಕೊಪ್ಪಳ
* ಹುಲಿಗೆಮ್ಮ ದೇವಾಲಯದ ಅಭಿವೃದ್ಧಿ
• ಯಲಬುರ್ಗಾ-ಕುಕನೂರು ತಾಲೂಕಿನ 38 ಕೆರೆ ನೀರು
* ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ ಕೆರೆ, ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ ಸ್ಥಾಪನೆ
* ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ
• ಅಂಜನಾದ್ರಿ ಬೆಟ್ಟ, ಸುತ್ತಲಿನ ಪ್ರದೇಶ ಪ್ರವಾಸಿ ಸೌಲಭ್ಯ ಅಭಿವೃದ್ಧಿಗೆ 100 ಕೋಟಿ
* ಹುಲಿಗೆಮ್ಮ ದೇವಾಲಯದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ
* ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ, ಸಾರ್ವಜನಿಕ ಅರೋಗ್ಯ ಲ್ಯಾಬ್
* 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣ ಹಾಗೂ ಪೀರೋಪಕರಣ ಖರೀದಿಗೆ ಅನುದಾನ
* ತಳಕಲ್‌ನಲ್ಲಿ ವಿಟಿಯು ಸಹಯೋಗದೊಂದಿಗೆ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ
11 ಉತ್ತರ ಕನ್ನಡ
* ಹೊನ್ನಾವರ ತಾಲೂಕಿನ ಮಂಕಿ/ಕಾಸಗೋಡದಲ್ಲಿ ಮೀನುಗಾರಿಕಾ ಸಂಶೋಧನಾ ಕೇಂದ್ರ
* ಭಟ್ಕಳದ ಮುರ್ಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕಾ ಹೊರಬಂದರು ನಿರ್ಮಾಣ
* ಯಲ್ಲಾಪುರ, ಶಿರವತ್ತಿ ಕರೆಗೆ ಈ ಬಾರಿ ನೀರು
* ಸಾರ್ವಜನಿಕ ಆರೋಗ್ಯ ಲ್ಯಾಬ್ ಸ್ಟಾಪನೆ
* ಕೇಣಿಯಲ್ಲಿ ಆಳ ಸಮುದ್ರ ಬಂದರು
* ಪಾವಿನಕುರ್ವೆಯಲ್ಲಿ ಬೃಹತ್ ಬಂದರಿನ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಟೆಂಡರ್
ಶಿರಸಿಯಲ್ಲಿ ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ, ದಾಂಡೇಲಿ ಇಂಟರ್ ಪ್ರಿಟಿಷನ್ ಸೆಂಟರ್ ನಿರ್ಮಾಣ
12 ಹಾವೇರಿ
• ರಾಣಿಬೆನ್ನೂರು ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ- ರಾಣೆಬೆನ್ನೂರಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆನಸಿನಕಾಯಿ ಮಾರುಕಟ್ಟೆ ಸ್ಥಾಪನೆ
• ಹಿರೇಕೆರೂರು ತಾಲೂಕಲ್ಲಿ ಸರ್ವಜ್ಞರ ಸ್ಮಾರಕ
• ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣ
13 ವಿಜಯನಗರ
* ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
* ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಮಟ್ಟದ ಆರೋಗ್ಯ ಪ್ರಯೋಗಾಲಯ
14 ಬಳ್ಳಾರಿ
* ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಸ್ಥಾಪನೆ
* ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ
* ಜೀನ್ಸ್ ಅಪಾರೆಲ್ ಪಾರ್ಕ್ ಅಭಿವೃದ್ದಿ
* ಕ್ರೀಡಾವಸತಿ ಉನ್ನತೀಕರಣ, ಕ್ರೀಡಾ ಸೌಕರ್ಯ ಅಭಿವೃದ್ಧಿಗೆ 10 ಕೋಟಿ
15 ಶಿವಮೊಗ್ಗ
• ಸೋಗಾನೆ ವಿಮಾನ ನಿಲ್ದಾಣ ಸಮೀವ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಸ್ಥಾಪನೆ
• ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನುಗಾರಿಕಾ ಮಾರುಕಟ್ಟೆ ಸ್ಥಾಪನೆ
• ಸೊರಬ ತಾಲೂಕಿನ ವರದಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ
• ಶಿವಮೊಗ್ಗ-ಬೊಮ್ಮನಕಟ್ಟೆ ರಸ್ತೆಯಲ್ಲಿ ರೈಲ್ವೆ ಮೇಲ್ವೇತುವೆ, ಕೆಳ ಸೇತುವೆ ನಿರ್ಮಾಣ
# ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ
• ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯ ಸ್ಥಾಪನೆ
• ಶಿವಮೊಗ್ಗದಲ್ಲಿ 100 ಕೋಟಿ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ
• ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ
16 ದಾವಣಗೆರೆ
# ಸ್ಪೀಟಿನಲ್ ಕೇರ್ ಬ್ಲಾಕ್ ಸ್ಥಾವನೆ
* ಜಿಲ್ಲಾಸ್ಪತ್ರೆಗೆ ಕಾಲ್ವನ್ನೊಪಿ (Colposcopy) ಉಪಕರಣಗಳ ಖರೀದಿಗೆ ಅನುದಾನ
17 ಚಿತ್ರದುರ್ಗ
* ಹೊಸದುರ್ಗ, ಹೊಳಲ್ಕೆರೆಯಲ್ಲಿ ಮೀನುಗಾರಿಕೆಗೆ ಕ್ರಮ
* ಸಾರ್ವಜನಿಕ ಅರೋಗ್ಯ ಲ್ಯಾಬ್
• ವೈದ್ಯಕೀಯ ಕಾಲೇಜು ಪೂರ್ಣ
18 ಉಡುಪಿ
ಸ್ವರ್ಣಾ, ಸಿದ್ದಾವುರ ಏತನೀರಾವರಿ ಯೋಜನೆ ಪುನಕ್ಷೇತನ
• ಮಲ್ಪೆ ಬಂದರಿನಲ್ಲಿ ಬರ್ತ್. ಹಂಗಾ ರಕಟ್ಟೆ ಬಂದರಿನಲ್ಲಿ ಆಧುನಿಕ ಹಡಗು ನಿರ್ಮಾಣ
• ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ
# ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾವನೆ, ಜಿಲ್ಲಾಸ್ಪತ್ರೆಗೆ ಕಾಲ್ವನ್ನೊಪಿ ಉಪಕರಣಗಳ ಖರೀದಿಗೆ ಅನುದಾನ
19 ಚಿಕ್ಕಮಗಳೂರು
* ಸ್ಪೆಸ್ ಮಾರುಕಟ್ಟೆ ಅಭಿವೃದ್ಧಿ
• ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ
• ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
• ವಿಜ್ಞಾನ ಕೇಂದ್ರ/ತಾರಾಲಯ ಸ್ಥಾಪನೆ
20 ತುಮಕೂರು
* ಗುಬ್ಬಿಯ ಮಠದಹಳ್ಳಿ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಕ್ರಮ
• ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ
• ಸಿರಾದಲ್ಲಿ ತಾಲೂಕಾ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ
* ತುಮಕೂರುವರೆಗೆ ಮೆಟ್ರೋ ಅಭಿವೃದ್ಧಿ
21 ಚಿಕ್ಕಬಳ್ಳಾಪುರ
* ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಹಣ
22 ದಕ್ಷಿಣ ಕನ್ನಡ
* ಪುತ್ತೂರು ಪಶು ವಿವಿ ಕಾಲೇಜು ಆರಂಭ
* ಮೀನುಗಾರರಿಗೆ ನೀಡುತ್ತಿರುವ ಪರಿಹಾರದ 1500 ದಿಂದ 2000 ಕ್ಕೇರಿಕೆ
23 ಹಾಸನ
* ವಿಮಾನ ನಿಲ್ದಾಣ ಅಭಿವೃದ್ಧಿಗೆ ಬಾಕಿ ಇರುವ 30 ಕೋಟಿ ಬಿಡುಗಡೆ
• ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ
• ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (IPHL) ಸ್ಥಾಪನೆ
24 ಬೆಂ.ಗ್ರಾಮಾಂತರ
# ಪೂಜೇನಹಳ್ಳಿಯಲ್ಲಿ ಆಹಾರ ವಾರ್ಕ್ ಸ್ಥಾಪನೆಗೆ ಯೋಜನೆ
• ದಾಸನಪುರ ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾವನೆ
• ಕನಕಪುರದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆ, ಶ್ರೀರಂಗ ಕುಡಿಯುವ ನೀರು ಯೋಜನೆಗೆ ವೈಪ್‌ಲೈನ್‌ನಲ್ಲಿ ನೀರು
• ದೇವಹಳ್ಳಿಯಲ್ಲಿ ಸೀಬೆಂಗ್ ಯಾರ್ಡ್ ನಿರ್ಮಾಣ. ನೆಲಮಂಗಲದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ವಥ
• ಅನೇಕಲ್, ನೆಲಮಂಗಲ, ಹೊಸಕೋಟೆ ತಾಲೂಕುಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣ
ಈ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್ ಅಭಿವೃದ್ಧಿ
25 ಕೋಲಾರ
ಮಾರುಕಟ್ಟೆಯಲ್ಲಿ ಬಯೋ ಸಿಎನ್ನಿ
• ಆದಿಮ ಸಾಂಸ್ಕೃತಿಕ ಕೇಂದ್ರ ಅಭಿವೃದ್ಧಿ
• ಜಿಲ್ಲಾಸ್ಪತ್ರೆಗೆ ಕಾಲ್ಪ ಸ್ಕೋಪಿ ಉಪಕರಣ ಖರೀದಿಗೆ ಅನುದಾನ
# ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್ ಅಭಿವೃದ್ಧಿ
26 ಕೊಡಗು
• ವಿಜ್ಞಾನ ಕೇಂದ್ರ/ತಾರಾಲಯ
# ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ
• ಸಾರ್ವಜನಿಕ ಆರೋಗ್ಯ ಲ್ಯಾಬ್
27 ಮೈಸೂರು
• ಬಯೋ ಸಿಎನ್ ಘಟಕ ಸ್ಥಾಪನೆ
* ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ
• ಹುಣಸೂರಿನ ಮರದೂರು ಕೆರೆಗೆ ನೀರು
• ವರುಣಾ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿಗೆ ಕ್ರಮ
* ಕೆ.ಆರ್.ನಗರ ತಾಲೂಕಿನ ಕಸ್ತೂರು ಕೊಪ್ಪಲು, ನಂಜನಗೂಡು ತಾಲೂಕಿನ ದೇವನೂರು
• ಹೆದ್ದಾರಿಯಲ್ಲಿ ಮೇಲೇತುವೆ, ಕುಕ್ಕರಹಳ್ಳಿ, ಶೆಆರ್ ಎನ್ ರಸ್ತೆ ಬಳಿ ರೈಲ್ವೆ ಮೇಲ್ವೇತುವೆ, ಕೆಳ ಸೇತುವೆ ನಿರ್ಮಾಣ
28 ಮಂಡ್ಯ
ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆಗೆ ಸಮಿತಿ ರಚನೆ
• ಕೆಆರ್‌ಎನ್ ಬೃಂದಾವನ ಉನ್ನತೀಕರಿಸಲು ಕ್ರಮ
* ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲೂಕಿನ ಮಾದವಮಂತ್ರಿ ನಾಲೆ, ಮದ್ದೂರು ತಾಲೂಕಿನ ಕೆಮ್ಮಣ್ಣು ನಾಲಾ ಆಧುನೀಕರಣ
# ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ
• ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ
29 ರಾಮನಗರ
• ಹೈಟೆಕ್ ರೇಷ್ಮೆ ಮಾರುಕಟ್ಟೆಯ 2ನೇ ಹಂತದ ಕಾಮಗಾರಿಗೆ 250 ಕೋಟಿ
• ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ ಯೋಜನೆ ಅನುಷ್ಠಾನ
• ಚನ್ನಪಟ್ಟಣ-ಬೈರಾಪಟ್ಟಣ ರಸ್ತೆಯಲ್ಲಿ ರೈಲ್ವೆ ಮೇಲ್ಲೇತುವೆ, ಕೆಳ ಸೇತುವೆ
‘ಅನ್ನ-ಸುವಿಧಾ’ ಯೋಜನೆ ಜಾರಿ: ಹಿರಿಯ ನಾಗರಿಕರ ಮನೆ ಬಾಗಿಲಿಗೇ ರೇಷನ್
30 ಬೆಂಗಳೂರು ನಗರ ಜಿಲ್ಲೆ
• ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪನೆ
• ವಿದ್ಯುತ್ ಬೇಡಿಕೆ ನೀಗಿಸಲು ಸಬ್ ಸ್ಟೇಷನ್
• 2000 ಎಕರೆ ಪ್ರದೇಶದಲ್ಲಿ ನಾಲೆಡ್ಜ್ ಹೆಲ್ತ್ (ಕೆಎಚ್‌ಐಆರ್) ಅಭಿವೃದ್ಧಿಗೆ ಯೋಜನೆ
• ಯಶವಂತರಪುದಲ್ಲಿ ಸರ್ಕಾರಿ ಇಲಾಖೆಗಳಿಗೆ ಸುಸಜ್ಜಿತ ಕಚೇರಿ ಸಂಕೀರ್ಣ ನಿರ್ಮಾಣ
# 233 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರಿ ಸ್ಥಾವನೆ
# ಉತ್ತರ ತಾಲೂಕಿನಲ್ಲಿ ಕ್ರೀಡಾ ಸಮುಚ್ಚಯ ಒಳಗೊಂಡ ಕ್ರೀಡಾ ನಗರ ಸ್ಥಾಪನೆ
• 40 ಸ್ಥಳಗಳಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ
• ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್‌ನಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ
# ಖಾಸಗಿ ವಸತಿ ಸಮುಚ್ಚಯಗಳಲ್ಲಿ ಸಂಸ್ಕರಿಸಿದ ನೀರು ಮರುಬಳಕೆಗೆ ಪ್ರೋತ್ಸಾಹ
# ಪೊಲೀಸ್ ಸುಲಿವನ್ ಮೈದಾನದಲ್ಲಿ 3 ಕೋಟಿ ವೆಚ್ಚದಲ್ಲಿ ಆಕ್ಟೋ ಟರ್ಫ್ ಹಾಕಿ ಪ್ರಾಂಗಣ
• ನೋಂದಣಿ ಆಗುವ ಎಲ್ಲ ವಾಹನಗಳ ದಾಖಲೆ ಡಿಜಿಟಲೀಕರಣ ಪ್ರಾಯೋಗಿಕ ಜಾರಿ
# ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ
# 20 ಕೋಟಿ ವೆಚ್ಚದಲ್ಲಿ 430 ಲ್ಯಾಬ್
• ನೆಪ್ರೋ-ಯುರಾಲಜಿ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ರೋಬೋಟಿಕ್ಸ್ ಯಂತ್ರದ ಮೂಲಕ ಉತ್ತಮ ಶಸ್ತ್ರಚಿಕಿತ್ಸೆ ನೀಡಲು ಕ್ರಮ
• ₹10 ಕೋಟಿ ವೆಚ್ಚದಲ್ಲಿ ನಗರದ ಪೂರ್ವ
ಭಾಗದಲ್ಲಿ 500 ನಿರಾಶ್ರಿತರ ಪರಿಹಾರ ಕೇಂದ್ರ
• ಡಾ.ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂಗಳೂರು
ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ
# 20 ಲಕ್ಷ ಆಸ್ತಿ ಆಸ್ತಿ ತೆರಿಗೆ ದಾಖಲೆ ಡಿಜಿಟಲ್
# ವೈಟ್ ಟಾಪಿಂಗ್ ಡಿಸೆಂಬರ್ ಹೊತ್ತಿಗೆ ಪೂರ್ಣ
• ಹೆಬ್ಬಾಳ ಜಂಕ್ಷನ್‌ನಲ್ಲಿ ಟನಲ್ ಸ್ಥಾಪನೆ
# 250 ಮೀಟರ್ ಎತ್ತರದ ಸೈ-ಡೆಕ್ ನಿರ್ಮಾಣ
• ಸೋಲಾರ್ ಪಾರ್ಕ್ ನಿರ್ಮಾಣ
* ಮೆಟ್ರೋ ಹಂತ-3ರ ಯೋಜನೆಗೆ ಒಪ್ಪಿಗೆ
• ಬಿಎಂಟಿಸಿಗೆ 1,334 ಹೊಸ ಎಲೆಕ್ಟಿಕಲ್ ಬನ್‌ಗಳು ಮತ್ತು 820 ಬಿಎಸ್-6 ಡೀಸೆಲ್ ಬಸ್ ಸೇರ್ವಡೆ- ಮಹಿಳಾ ಸುರಕ್ಷತೆಗೆ ವೆಹಿಕಲ್ ಟ್ಯಾಕಿಂಗ್ ಆ್ಯಪ್ ಅನುಷ್ಠಾನ
• ನಗರದ ಪ್ರಮುಖ 28 ಜಂಕ್ಷನ್‌ಗಳಲ್ಲಿ ಜಪಾನ್ ತಂತ್ರಜ್ಞಾನದ ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆ
# ₹441 ಕೋಟಿ ವೆಚ್ಚದಲ್ಲಿ 7 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ
• ₹200 ಕೋಟಿ ಮೊತ್ತದಲ್ಲಿ 110 ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಪೂರೈಕೆಗೆ ಯೋಜನೆ
# ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ, ಕೆರೆ ಹಾಗೂ ಉದ್ಯಾನವನಗಳ ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ಹೆಚ್ಚಿಸಲು ಕ್ರಮ
# ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ವಜ್ಞ ಉದ್ಯಾನವನ ಅಭಿವೃದ್ಧಿ, ವಿಮಾನ ನಿಲ್ದಾಣದವರೆಗೆ ಮೆಟ್ರೋ ಅಭಿವೃದ್ಧಿ
31 ಚಾಮರಾಜನಗರ
ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (IPHL) ಸ್ಥಾವನೆ
• 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಅನುದಾನ
• ಬಂಡಿಪುರದಲ್ಲಿ 10 ಕೋಟಿ ವೆಚ್ಚದಲ್ಲಿ ಚಿರತೆ ಕಾರ್ಯಪಡೆ ರಚನೆ
• ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ