ಸ್ವಾವಲಂಬಿ ಭಾರತಕ್ಕಾಗಿ ಮೋದಿ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದೆ. ಸಣ್ಣ ಉದ್ಯಮಿಗಳು, ಬೀದಿ ವ್ಯಾಪಾರಿಗಳು, ಮಹಿಳೆಯರು 10 ಲಕ್ಷದವರೆಗೆ ಸಾಲ ಪಡೆಯಬಹುದು. ಇದು ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ (MUDRA) ಸಾಲ ಯೋಜನೆಯಾಗಿದೆ. ಸಾರಿಗೆ, ಸಲೂನ್, ಕೃಷಿ ಸೇರಿದಂತೆ ಹಲವು ಉದ್ದಿಮೆಗಳಿಗೆ ಸಾಲ ಲಭ್ಯವಿದೆ. ಶಿಶು, ಕಿಶೋರ, ತರುಣ್ ಎಂದು ಮೂರು ವಿಧದ ಸಾಲಗಳಿವೆ. 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.  

ಮೋದಿ ಸರ್ಕಾರ (Modi Govt) ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಅನೇಕ ಅತ್ಯುತ್ತಮ ಯೋಜನೆಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಮುದ್ರಾ ಯೋಜನೆ (Mudra Yojana) ಕೂಡ ಒಂದು. ಸಣ್ಣ ಉದ್ಯಮಿಗಳು ಮತ್ತು ದೇಶೀಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿ, ಸಣ್ಣ ಉದ್ಯಮಿಗಳು, ಬೀದಿ ವ್ಯಾಪಾರಿಗಳು, ಮಹಿಳೆಯರು ಮತ್ತು ಸಣ್ಣ ಅಂಗಡಿಗಳನ್ನು ತೆರೆಯುವ ಜನರು 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ನಾವಿಂದು ಮುದ್ರಾ ಯೋಜನೆಯಡಿ ಸಾಲ ತೆಗೆದು ನೀವು ಯಾವೆಲ್ಲ ವ್ಯಾಪಾರ ಶುರು ಮಾಡ್ಬಹುದು ಎಂಬ ಮಾಹಿತಿ ನೀಡ್ತೇವೆ. 

ಮುದ್ರಾ ಸಾಲ ಎಂದರೇನು? : ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ವಾಸ್ತವವಾಗಿ ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ (MUDRA) ಸಾಲ ಯೋಜನೆಯಾಗಿದೆ. ಇದರ ಮೂಲಕ, ಕೇಂದ್ರ ಸರ್ಕಾರ ವ್ಯಕ್ತಿಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (SME) ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಗೆ ಸುಲಭ ನಿಯಮಗಳು ಮತ್ತು ಕಡಿಮೆ ಬಡ್ಡಿದರಗಳಲ್ಲಿ ಸಾಲಗಳನ್ನು ನೀಡುತ್ತದೆ.

ಅಮೆರಿಕ-ಚೀನಾ ಟ್ರೇಡ್‌ ವಾರ್‌ ನಡುವೆ, ಮೂರು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದ ಕಚ್ಚಾತೈಲದ ಬೆಲೆ!

ಯಾವ ವ್ಯವಹಾರಕ್ಕೆ ಮುದ್ರಾ ಸಾಲ ಲಭ್ಯ? : 
• ಟ್ರ್ಯಾಕ್ಟರ್, ಆಟೋ-ರಿಕ್ಷಾ, ಟ್ಯಾಕ್ಸಿ, ಟ್ರಾಲಿ, ಟಿಲ್ಲರ್, ಸರಕು ಸಾಗಣೆ ವಾಹನ, ತ್ರಿಚಕ್ರ ವಾಹನ, ಇ-ರಿಕ್ಷಾ ಮುಂತಾದ ವಾಣಿಜ್ಯ ಸಾರಿಗೆ ವಾಹನಗಳ ಖರೀದಿಗೆ ಸಾಲ ಲಭ್ಯವಿದೆ.
• ಸಲೂನ್, ಜಿಮ್, ಟೈಲರಿಂಗ್ ಅಂಗಡಿ, ವೈದ್ಯಕೀಯ ಅಂಗಡಿ, ರಿಪೇರಿ ಅಂಗಡಿ, ಡ್ರೈ ಕ್ಲೀನಿಂಗ್ ಮತ್ತು ಫೋಟೋಕಾಪಿ ಅಂಗಡಿ ತೆರೆಯಲು ನೀವು ಸಾಲ ಪಡೆಯಬಹುದು.
• ಹಪ್ಪಳ, ಉಪ್ಪಿನಕಾಯಿ, ಐಸ್ ಕ್ರೀಮ್, ಬಿಸ್ಕತ್ತು, ಜಾಮ್, ಜೆಲ್ಲಿ ಮತ್ತು ಸಿಹಿತಿಂಡಿಗಳನ್ನು ತಯಾರಿಸುವ ವ್ಯವಹಾರ ಆರಂಭಿಸಲು ನೀವು ಮುದ್ರಾ ಸಾಲ ಪಡೆಯಬಹುದು. 
• ಅಂಗಡಿಗಳು ಮತ್ತು ಸೇವಾ ಉದ್ಯಮಗಳನ್ನು ಸ್ಥಾಪಿಸಲು, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ಮತ್ತು ಕೃಷಿಯೇತರ ಲಾಭದಾಯಕ ಚಟುವಟಿಕೆಗಳಿಗೂ ಈ ಸಾಲ ಲಭ್ಯವಿದೆ. 

ಹಿರಿಯ ನಾಗರಿಕರ ಉಳಿತಾಯ ಯೋಜನೆ: ಏಪ್ರಿಲ್‌-ಜೂನ್‌ ತಿಂಗಳಿ

• ಕೃಷಿ ಚಿಕಿತ್ಸಾಲಯಗಳು ಮತ್ತು ಕೃಷಿ ವ್ಯವಹಾರ ಕೇಂದ್ರಗಳು, ಆಹಾರ ಮತ್ತು ಕೃಷಿ ಸಂಸ್ಕರಣಾ ಘಟಕಗಳು, ಕೋಳಿ ಸಾಕಣೆ, ಮೀನು ಸಾಕಣೆ, ಜೇನು ಸಾಕಣೆ, ಜಾನುವಾರು ಸಾಕಣೆ, ಕೃಷಿ ಕೈಗಾರಿಕೆಗಳು, ಡೈರಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳಿಗೆ ಮುದ್ರಾ ಸಾಲವನ್ನು ತೆಗೆದುಕೊಳ್ಳಬಹುದು.

ಮುದ್ರಾ ಸಾಲದ ವಿಧ, ಷರತ್ತಿನ ವಿವರ :
• ಮುದ್ರಾ ಯೋಜನೆಯಡಿಯಲ್ಲಿ, ಶಿಶು, ಕಿಶೋರ ಮತ್ತು ತರುಣ ಎಂಬ ಮೂರು ರೀತಿಯ ಸಾಲಗಳು ಲಭ್ಯವಿದೆ. ಶಿಶು ಮುದ್ರಾ ಯೋಜನೆಯಡಿಯಲ್ಲಿ, ವ್ಯವಹಾರಕ್ಕಾಗಿ 50 ಸಾವಿರ ರೂಪಾಯಿಗಳವರೆಗೆ ಸಾಲ ಲಭ್ಯವಿದೆ. ಕಿಶೋರ ಯೋಜನೆಯಡಿಯಲ್ಲಿ 50001 ರಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲ ಲಭ್ಯವಿದೆ. ಆದರೆ ತರುಣ್ ಯೋಜನೆಯಡಿಯಲ್ಲಿ 500001 ರಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ಲಭ್ಯವಿದೆ.
• 18 ವರ್ಷ ಮೇಲ್ಪಟ್ಟ ಯಾವುದೇ ಪುರುಷ ಅಥವಾ ಮಹಿಳೆ ಈ ಸಾಲವನ್ನು ಪಡೆಯಬಹುದು.
• ಉದ್ಯೋಗವಿಲ್ಲದ ವ್ಯಕ್ತಿಯು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
• ಸ್ಟಾರ್ಟ್ಅಪ್ಗಳು ಅಥವಾ ಗೃಹ ಕೈಗಾರಿಕೆಗಳನ್ನು ಪ್ರಾರಂಭಿಸಲು ಮುದ್ರಾ ಸಾಲವನ್ನು ತೆಗೆದುಕೊಳ್ಳಬಹುದು. 
• ಮುದ್ರಾ ಸಾಲ ಪಡೆಯಲು, ಅರ್ಜಿದಾರರು ಯಾವುದೇ ಭದ್ರತೆಯನ್ನು ಬ್ಯಾಂಕುಗಳು ಅಥವಾ ಸಾಲ ಸಂಸ್ಥೆಗಳಿಗೆ ಠೇವಣಿ ಇಡುವ ಅಗತ್ಯವಿಲ್ಲ. 
• ಈ ಸಾಲವನ್ನು 5 ವರ್ಷಗಳ ಒಳಗೆ ಪಾವತಿಸಬೇಕು.
• ಸಾಲದ ಸಂಸ್ಕರಣಾ ಶುಲ್ಕ ಶೂನ್ಯವಾಗಿದೆ. ಕೆಲವೊಮ್ಮೆ ಅನುಮೋದಿತ ಸಾಲದ ಮೊತ್ತದ ಶೇಕಡಾ 0.50 ರಷ್ಟನ್ನು ಸಂಸ್ಕರಣಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.