Asianet Suvarna News Asianet Suvarna News

ದುಬಾರಿಯಾಗುತ್ತೆ ರೋಟಿ, ಚಪಾತಿ; ಗಗನಕ್ಕೇರಿದ ಗೋಧಿ ಬೆಲೆ!

ದೇಶದ ಷೇರು ಮಾರುಕಟ್ಟೆ ದಾಖಲೆಯ ಪ್ರಮಾಣ ಏರಿಕೆಯಲ್ಲಿದೆ. ಡಾಲರ್‌ ಎದುರು ರೂಪಾಯಿ ಕೂಡ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ದೇಶದ ಗೋಧಿ ಬೆಲೆಯಲ್ಲೂ ದೊಡ್ಡ ಮಟ್ಟದ ಏರಿಕೆ ಕಂಡಿದೆ. ಪ್ರತಿ ಕ್ವಿಂಟಾಲ್‌ ಗೋಧಿ ದರ ದೇಶದ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಗೋಧಿ ಬೆಳೆಗಾರರಿಗೆ ಖುಷಿ ನೀಡಿದ್ದರೂ, ಗ್ರಾಹಕರಿಗೆ ಇದರ ಬಿಸಿ ಈಗಾಗಲೇ ಆರಂಭವಾಗಿದೆ.
 

Wheat prices skyrocket traders will profit prompt price-cooling measures say govt sources san
Author
First Published Nov 12, 2022, 10:58 AM IST

ನವದೆಹಲಿ (ನ.12): ದೇಶದ ಸಗಟು ಮಾರುಕಟ್ಟೆಯಲ್ಲಿ ಗೋಧಿ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಗಮನ ನೀಡಿದ್ದು, ಬೆಲೆಯನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೂಡ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಕ್ತ ಮಾರುಕಟ್ಟೆಗೆ ರಾಜ್ಯದ ಮೀಸಲು ಗೋಧಿಯನ್ನು ಬಿಡುಗಡೆ ಮಾಡುವುದು, ಆಮದು, ವ್ಯಾಪಾರ ಹಾಗೂ ಸರ್ಕಾರಿ ಮೂಲಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂಥ ಕ್ರಮಗಳನ್ನು ಕೈಗೊಳ್ಳಬಹುದು ಎನ್ನಲಾಗಿದೆ. ಸರ್ಕಾರವು ಆಹಾರ ಹಣದುಬ್ಬರವನ್ನು ನಿಯಂತ್ರಿಸಲು ಒಂದೆಡೆ ದೊಡ್ಡ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದೆ. ಆದರೆ ಗೋಧಿ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದರಿಂದ ಅದರ ಪ್ರಯತ್ನಗಳು ವಿಫಲವಾಗುತ್ತಿವೆ. ಗೋಧಿ ಬೆಲೆಯ ಇಳುವರಿಯಲ್ಲಿ ಹಠಾತ್‌ ಕುಸಿತವಾಗಿದ್ದರಿಂದ ಭಾರತವು ಮೇ ತಿಂಗಳಿನಲ್ಲಿ ಗೋಧಿ ರಫ್ತು ಮಾಡುವುದಕ್ಕೆ ನಿಷೇಧ ವಿಧಿಸಿತ್ತು. ಕಳೆದ ಬಾರಿಯ ಗೋಧಿ ಕೊಯ್ಲಿನಲ್ಲಿ ಇಳುವರಿ ಬಹಳ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಗೋಧಿ ದಾಸ್ತಾನು ಕೂಡ ಕಡಿಮೆಯಾಗಿದೆ. ರೈತರಲ್ಲೂ ಗೋಧಿ ದಾಸ್ತಾನು ಕೂಡ ಖಾಲಿಯಾಗಿದೆ ಎಂದು ಬೆಳೆಗಾರರು ವ್ಯಾಪಾರಿಗಳಿಗೆ ತಿಳಿಸಿದ್ದಾರೆ.

ಸ್ಥಳೀಯ ಗೋಧಿ ಬೆಲೆಗಳು ಗುರುವಾರ ಒಂದು ಟನ್‌ಗೆ ದಾಖಲೆಯ 26,500 ರೂಪಾಯಿಗಳಿಗೆ ($324.18) ಜಿಗಿದಿದ್ದು, ಮೇ ರಫ್ತು ನಿಷೇಧದ ನಂತರ ಸುಮಾರು 27% ಹೆಚ್ಚಾಗಿದೆ. 'ಗೋಧಿ ಬೇಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಆದರೆ ಸರಬರಾಜಿನಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ'' ಎಂದು ಇಂದೋರ್‌ನ ಗೋಧಿ ವ್ಯಾಪಾರಿ ಮಕ್ಸುಖ್‌ ಯಾದವ್‌ ಹೇಳಿದ್ದಾರೆ. ಈಗ ಇರುವ ಟ್ರೆಂಡ್‌ ನೋಡಿದರೆ, ಬೆಲೆಗಳು ಏರುತ್ತಿರುತ್ತದೆ. ಮುಂದಿನ ವರ್ಷದ ಹೊಸ ಋತುವಿನ ಬೆಳೆ ಪ್ರಾರಂಭವಾಗುವವರೆಗೂ ಇದು ಸ್ಥಿರವಾಗಿರುತ್ತದೆ ಎಂದಿದ್ದಾರೆ.

ಭಾರತವು ವಿಶ್ವದ 2ನೇ ಅತಿದೊಡ್ಡ ಗೋಧಿ ಉತ್ಪಾದಕ ದೇಶ. ಅಲ್ಲದೆ, ಗೋಧಿಯ ಉತ್ಪನ್ನಗಳ ಅತಿದೊಡ್ಡ ಗ್ರಾಹಕ ದೇಶವೂ ಭಾರತವಾಗಿದೆ. ಹಿಟ್ಟು ಮತ್ತು ಬಿಸ್ಕತ್ತು ತಯಾರಕರಂತಹ ಬೃಹತ್ ಗ್ರಾಹಕರು ಬೆಲೆಗಳನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ರಾಜ್ಯದ ಮೀಸಲುಗಳನ್ನು ಆಫ್‌ಲೋಡ್ ಮಾಡಲು ಪರಿಗಣಿಸಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.  "ನಾವು ಬೆಲೆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲಿಯೇ ಈ ವಿಚಾರವಾಗಿ ಮಧ್ಯಪ್ರವೇಶಿಸುತ್ತೇವೆ' ಎಂದು ತಿಳಿಸಿದ್ದಾರೆ. ರಾಜ್ಯದ ಮೀಸಲಿನಿಂದ ಎಷ್ಟು ಪ್ರಮಾಣದ ಗೋಧಿ ಬಿಡುಗಡೆ ಮಾಡಬೇಕು ಎನ್ನವುದೇ ಸದ್ಯದ ಪ್ರಶ್ನೆಯಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಡಿಮೆ ದಾಸ್ತಾನುಗಳ ಕಾರಣದಿಂದಾಗಿ ಹೊಸದಿಲ್ಲಿಯು ಬೃಹತ್ ಮೀಸಲು ಗೋಧಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.

Russia Ukraine Crisis:ಗೋಧಿ ಬೆಲೆ ಶೇ.55 ಏರಿಕೆ; ಜಾಗತಿಕ ಆಹಾರ ಧಾನ್ಯಗಳ ಪೂರೈಕೆ ಮೇಲೆ ಯುದ್ಧದ ಪರಿಣಾಮವೇನು?

ಅಕ್ಟೋಬರ್‌ ಅರಂಭದ ವೇಳೆಗೆ ರಾಜ್ಯದ ಗೋದಾಮುಗಳಲ್ಲಿ ಗೋದಿ ದಾಸ್ತಾನು 22.7 ಮಿಲಿಯನ್‌ ಟನ್‌ಗಳಷ್ಟಿತ್ತು. ಒಂದು ವರ್ಷದ ಹಿಂದಿನ ಸಮಯಕ್ಕೆ ಹೋಲಿಸಿದರೆ 46.9 ಮಿಲಿಯನ್‌ ಟನ್‌ಗಳಷ್ಟು ಕಡಿಮೆಯಾಗಿದೆ. 2022ರ ದೇಶೀಯ ಗೋಧಿ ಖರೀದಿಗಳು ಶೆ. 57ರಷ್ಟು ಕುಸಿದಿವೆ. 40% ಗೋಧಿ ಆಮದು ತೆರಿಗೆಯನ್ನು ಸರ್ಕಾರವು ಕೈಬಿಡಬಹುದು ಎಂದು ಮೂಲಗಳು ತಿಳಿಸಿವೆ.

Russia Ukraine Crisis:ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಮಾಹಿತಿ

ದೇಶದಲ್ಲಿ ಬ್ರ್ಯಾಂಡೆಡ್‌ ಗೋಧಿ ಬೆಲೆಗಳು: ದೇಶದ ಸೂಪರ್‌ ಮಾರ್ಕೆಟ್‌ಗಳಾದ ಜಿಯೋ ಮಾರ್ಟ್‌ ಹಾಗೂ ಬಿಗ್‌ ಬಾಸ್ಕೆಟ್‌ನಲ್ಲಿ ಬ್ರ್ಯಾಂಡೆಡ್‌ ಗೋಧಿ ಹಿಟ್ಟಿನ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ಆಶೀರ್ವಾದ್‌ ಗೋಧಿ ಹಿಟ್ಟು ಪ್ರತಿ ಕೆಜಿಗೆ 41.40 ರೂಪಾಯಿ ಆಗಿದ್ದರೆ, ನೇಚರ್‌ ಫ್ರೆಶ್‌ ಸಂಪೂರ್ಣ 35.90 ರೂಪಾಯಿ, ಪತಂಜಲಿ 35.80, ಗುಡ್‌ ಲೈಫ್‌ 34.50 ರೂಪಾಯಿ, ಫಾರ್ಚುನ್‌ ಗೋಧಿ ಹಿಟ್ಟು  33.50 ರೂಪಾಯಿ ಆಗಿದೆ. ಇನ್ನು ಕಳೆದ ಒಂದು ವರ್ಷದಲ್ಲಿ ಭಾರತ ಶೇ. 215ರಷ್ಟು ಗೋಧಿಯನ್ನ 10 ದೇಶಗಳಿಗೆ ರಫ್ತು ಮಾಡಿದೆ. ಬಾಂಗ್ಲಾದೇಶ, ನೇಪಾಳ, ಯುಎಇ, ಶ್ರೀಲಂಕಾ, ಯೆಮೆನ್,‌  ಅಫ್ಘಾನಿಸ್ತಾನ, ಕತಾರ್‌, ಇಂಡೋನೇಷ್ಯಾ, ಓಮನ್‌ ಹಾಗೂ ಮಲೇಷ್ಯಾ ದೇಶಗಳಿಗೆ ರಫ್ತು ಮಾಡಿದೆ.
 

Follow Us:
Download App:
  • android
  • ios