Asianet Suvarna News Asianet Suvarna News

Business Ideas : ಹೂವಿನ ವ್ಯಾಪಾರ ಶುರು ಮಾಡಿ ಹೂವಿನಂತೆಯೇ ಅರಳಬಹುದು ಜೀವನ!

ಬ್ಯುಸಿನೆಸ್ ಮಾಡ್ಬೇಕು ಎನ್ನುವ ಆಸೆ ಕೆಲವರಿಗಿರುತ್ತದೆ. ಆದ್ರೆ ಯಾವುದು ಮಾಡ್ಬೇಕು ಎಂಬುದೇ ದೊಡ್ಡ ಪ್ರಶ್ನೆ. ಹೆಚ್ಚು ಲಾಭತರುವ, ಸದಾ ಬೇಡಿಕೆಯಲ್ಲಿರುವ ವ್ಯಾಪಾರವೊಂದಿದೆ. ಅದನ್ನು ಶ್ರೀಸಾಮಾನ್ಯರು ಶುರು ಮಾಡಿ ಆದಾಯ ಗಳಿಸಬಹುದು.
 

Flower business brings profit and help women to build life
Author
First Published Dec 27, 2022, 11:56 AM IST

ಹೂವಿನ ವ್ಯಾಪಾರ ಅತ್ಯಂತ ಲಾಭದಾಯಕ ವ್ಯಾಪಾರವಾಗಿದೆ. ಈ ವ್ಯಾಪಾರಕ್ಕೆ ಋತುವಿಲ್ಲ. ವರ್ಷದ ಎಲ್ಲ ದಿನ ಭಾರತದಲ್ಲಿ ಹೂವನ್ನು ಬಳಕೆ ಮಾಡಲಾಗುತ್ತದೆ. ದೇಶದಲ್ಲಿ ಒಂದಲ್ಲ ಒಂದು ಹಬ್ಬ, ಶುಭ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಬರೀ ಶುಭಕಾರ್ಯ ಮಾತ್ರವಲ್ಲ ನಮ್ಮಲ್ಲಿ ಸತ್ತ ನಂತ್ರವೂ ಹೂವಿನ ಮಾಲೆ ಹಾಕಿ, ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡ್ತೇವೆ. ಹಾಗಾಗಿ ಅದಕ್ಕೂ ಹೂವು ಅಗತ್ಯವಿದೆ.  ಖಾಲಿ ಕುಳಿತು ಕೆಲಸ ಹುಡುಕುತ್ತಿದ್ದರೆ ನೀವು ಕೂಡ ಹೂವಿನ ವ್ಯಾಪಾರವನ್ನು ಶುರು ಮಾಡಬಹುದು. ನಾವಿಂದು ಹೂವಿನ ಬ್ಯುಸಿನೆಸ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೆವೆ.

ಮೊದಲೇ ಹೇಳಿದಂತೆ ಹೂವಿ (Flower) ಗೆ ಬೇಡಿಕೆ ಇಲ್ಲದ ದಿನವಿಲ್ಲ. ದೀಪಾವಳಿ, ಗಣೇಶ ಚತುರ್ಥಿ, ಈದ್ ಮುಂತಾದ ಹಬ್ಬ (Festival) ಗಳ ಜೊತೆ ಮದುವೆ ಸಮಾರಂಭ, ದೇವಸ್ಥಾನದಲ್ಲಿ ಅಲಂಕಾರ ಹೀಗೆ ನಾನಾ ಕಾರಣಕ್ಕೆ ಜನರು ಹೂಗಳನ್ನು ತೆಗೆದುಕೊಂಡು ಹೋಗ್ತಾರೆ. ಹಬ್ಬದ ಸಂದರ್ಭದಲ್ಲಿ ಹಾಗೂ ಮದುವೆ ಋತುವಿನಲ್ಲಿ ಹೂವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತದೆ. ಹೂವಿನ ವ್ಯಾಪಾರಕ್ಕೆ ನೀವು ಹೆಚ್ಚು ಬಂಡವಾಳ ಹಾಕಬೇಕಾಗಿಲ್ಲ. ಹೂಗಳು ನಿಮಗೆ ಎಲ್ಲೆಡೆ ಸಿಗುತ್ತದೆ. ಆದರೂ ಜನರು ಈ ವ್ಯವಹಾರ (Business) ವನ್ನು ಪ್ರಾರಂಭಿಸಲು ಹೆದರುತ್ತಾರೆ. ಏಕೆಂದರೆ ಹೂವು ಅಲ್ಪಾವಧಿಯಲ್ಲಿಯೇ ಹಾಳಾಗುತ್ತದೆ. ಹೂ ಒಣಗಿದ್ರೆ ಹಣ ಹಾಳಾದಂತೆ. ವ್ಯಾಪಾರದಲ್ಲಿ ನಷ್ಟವಾಗುತ್ತದೆ ಎನ್ನುವ ಕಾರಣಕ್ಕೆ. ಆದರೆ ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ. ಹೂವಿನ ವ್ಯಾಪಾರ ಪ್ರಾರಂಭಿಸಲು ಬಯಸಿದರೆ ಹೂವಿನ ತಾಜಾತನಕ್ಕೆ ಆದ್ಯತೆ ನೀಡಬೇಕು. ಹೂವುಗಳನ್ನು ಸಂಗ್ರಹಿಸಲು ಹೆಚ್ಚಿನ ಜಾಗವಿಲ್ಲ ಅಥವಾ ತಾಜಾ ಇಡಲು ಸಾಧ್ಯವಿಲ್ಲ ಎನ್ನುವುದಾದ್ರೆ ನೀವು ಎಷ್ಟು ಹೂವುಗಳನ್ನು ಮಾರಾಟ ಮಾಡಬಹುದೋ ಅಷ್ಟು ಖರೀದಿಸಿ. ಹೂವನ್ನು ತಾಜಾವಾಗಿಡುವ ವ್ಯವಸ್ಥೆ ಇದ್ರೆ ನೀವು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಇಡಬಹುದು. ಆಗ ಜನರ ಅಗತ್ಯಕ್ಕೆ ತಕ್ಕಂತೆ ನೀವು ಹೂ ನೀಡಬಹುದು. 

ಹೂವಿನ ವ್ಯಾಪಾರಕ್ಕೆ ಸ್ಥಳದ ಆಯ್ಕೆ : ಹೂವಿನ ವ್ಯಾಪಾರಕ್ಕೆ ಸ್ಥಳದ ಆಯ್ಕೆಯೂ ಬಹಳ ಮುಖ್ಯವಾದ ವಿಷಯವಾಗಿದೆ. ನೀವು ಮನೆಯಿಂದಲೇ ಈ ವ್ಯವಹಾರವನ್ನು ಮಾಡಿದರೆ ವ್ಯವಹಾರ  ಸೀಮಿತವಾಗಿರುತ್ತದೆ. ನೀವು ಜನನಿಬಿಡಿ ಪ್ರದೇಶದಲ್ಲಿ, ಮಾರುಕಟ್ಟೆ ಜಾಗದಲ್ಲಿ ವ್ಯಾಪಾರ ಶುರು ಮಾಡಬೇಕು. ನಿಮ್ಮ ಮನೆ ಬೀದಿ ಬದಿಯಲ್ಲಿ ಇದ್ದರೆ ನೀವು ಮನೆ ಮುಂದೆಯೇ ವ್ಯಾಪಾರ ಶುರು ಮಾಡಬಹುದು. ದೇವಾಲಯದ ಹತ್ತಿರ,  ಕುಟುಂಬ ಮತ್ತು ಧಾರ್ಮಿಕ ಸ್ಥಳಗಳಿರುವ, ಹೆಚ್ಚು ಧಾರ್ಮಿಕ ಆಚರಣೆ ನಡೆಯುವ ಸ್ಥಳದಲ್ಲಿಯೂ ನೀವು ವ್ಯವಹಾರ ಶುರು ಮಾಡಬಹುದು.  

ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡೋದು ಹೇಗೆ? ಇದ್ರಿಂದ ಏನ್ ಲಾಭ?

ಹೂವಿನ ವ್ಯಾಪಾರಕ್ಕೆ ಉದ್ಯೋಗಿಗಳ ಆಯ್ಕೆ : ಚಿಲ್ಲರೆ ಹೂವುಗಳನ್ನು ಮಾರಾಟ ಮಾಡಲು ಬಯಸಿದರೆ ಇದಕ್ಕಾಗಿ ನೀವು ಹೆಚ್ಚಿನ ಜನರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಕುಟುಂಬದ ಸದಸ್ಯರ ಸಹಾಯದಿಂದ ನೀವು ಈ ಕೆಲಸವನ್ನು ಮಾಡಬಹುದು. ಆದರೆ ನೀವು ಒಂದೇ ರೀತಿಯ ಪುಷ್ಪಗುಚ್ಛ ಮತ್ತು ಹೂವಿನ ಪ್ಯಾಕೇಜಿಂಗ್ ಅನ್ನು ಇರಿಸಿಕೊಳ್ಳಲು ಬಯಸಿದರೆ ಅದಕ್ಕಾಗಿ ನೀವು ತರಬೇತಿಯನ್ನು ತೆಗೆದುಕೊಳ್ಳಬಹುದು. ಇದಲ್ಲದೆ,  ಹೂಗುಚ್ಛಗಳನ್ನು ತಯಾರಿಸುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಬಹುದು.  

ಹೂವಿನ ವ್ಯಾಪಾರದ ವೆಚ್ಚ :  ಸಣ್ಣ ಪ್ರಮಾಣದಲ್ಲಿ 5 ರಿಂದ 10 ಸಾವಿರ ಹೂಡಿಕೆ ಮಾಡುವ ಮೂಲಕ ಹೂವಿನ ವ್ಯಾಪಾರ  ಪ್ರಾರಂಭಿಸಬಹುದು. ಹೂವಿನ ಸಂಗ್ರಹಣೆ, ಬಾಡಿಗೆ ಕಟ್ಟಡ ಹೀಗೆ ನಿಮ್ಮ ವ್ಯಾಪಾರ ವಿಸ್ತಾರವಾಗಿದ್ದರೆ ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕಾಗುತ್ತದೆ. ದೊಡ್ಡ ಮಟ್ಟದಲ್ಲಿ ವ್ಯಾಪಾರ ಶುರು ಮಾಡಲು ಎರಡರಿಂದ ಮೂರು ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗಬಹುದು.

2023ನೇ ಸಾಲಿನಲ್ಲಿ ತೆರಿಗೆ ಉಳಿತಾಯದ ಪ್ಲ್ಯಾನ್ ಹೇಗಿರಬೇಕು? ಯಾವ ಯೋಜನೆಯಲ್ಲಿ ಹೂಡಿಕೆ ಮಾಡ್ಬಹುದು?

ಹೂವಿನ ವ್ಯಾಪಾರದಲ್ಲಿ ಲಾಭ : ಹೇಳಿದಂತೆ, ಹೂವಿನ ವ್ಯಾಪಾರದಲ್ಲಿ ಲಾಭವಿದೆ. ಹೂವಿಗೆ ಬೇಡಿಕೆ ಸದಾ ಇರೋದ್ರಿಂದ ಅದ್ರ ಲಾಭವನ್ನು ನೀವು ಅಂದಾಜಿಸಬಹುದು.

Follow Us:
Download App:
  • android
  • ios