ದೇಶದ ಹಲವೆಡೆ ಭಾನುವಾರ ಇಂಧನ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ರಾಜ್ಯ ವಿವಿಧ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರದ ವಿವರ ಇಲ್ಲಿದೆ.
ಬೆಂಗಳೂರು (ಮಾ.28): ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಏರುತ್ತಿದೆ. ಕರ್ನಾಟಕದಲ್ಲಿಯೂ ವಿವಿಧ ನಾಯಕರುಗಳು ನಾಮಪತ್ರ ಅಭಿಯಾನ ಕೂಡ ಜೋರಾಗಿದೆ. ಪ್ರಚಾರ ಕಾರ್ಯ, ಸಮಾವೇಶ, ಓಡಾಟ-ತಿರುಗಾಟ ಈ ಸಮಯದಲ್ಲಿ ಸಾಮಾನ್ಯವೂ ಆಗಿರುತ್ತದೆ. ಇಂಥ ಹಂತದಲ್ಲಿ ಮೊದಲಿಗೆ ಎಚ್ಚರ ವಹಿಸಬೇಕಾಗೋದು ವಾಹನ ವ್ಯವಸ್ಥೆ. ಅದರೊಂದಿಗೆ ವಾಹನದ ಒಳಗಿರುವ ಇಂಧನದ ವ್ಯವಸ್ಥೆ. ಇಂಧನದ ಬೆಲೆ ಏರಿಕೆ ಆದಲ್ಲಿ ನಮ್ಮ ಓಡಾಟದ ಖರ್ಚು ಕೂಡ ಹೆಚ್ಚಾಗುತ್ತದೆ. 100 ಹಾಗೂ 99 ರೂಪಾಯಿಗಳ ನಡುವೆ ಪೆಟ್ರೋಲ್ ಬೆಲೆ ಕೆರೆ ದಡ ಆಟವಾಡುತ್ತಿದ್ದರೆ, ಡೀಸೆಲ್ ಬೆಲೆ ಕೂಡ ಇದರಿಂದ ಹೊರತಲ್ಲ. ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸ ಕಾಣುತ್ತದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಇರುವ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ.
ದೇಶದ ಸರಕು ಸಾಗಾಣೆಗೆ ಬೆನ್ನೆಲುಬು ಇಂಧನ ಬೆಲೆ. ಎಲೆಕ್ಟ್ರಿಕ್ ವಾಹನಗಳು, ಖಾಸಗಿ ವಾಹನಗಳ ಕ್ಷೇತ್ರದಲ್ಲಿ ಮಾತ್ರವೇ ಬೂಮ್ ಆಗುತ್ತಿದೆ. ಆದರೆ, ಸರಕು ಸಾಗಾಣೆಗೆ ಇಂದಿಗೂ ದೇಶ ನೆಚ್ಚಿಕೊಂಡಿರುವುದು ಡೀಸೆಲ್ ಮೇಲೆ. . ಇದರ ಬೆಲೆ ಹೆಚ್ಚಾದಲ್ಲಿ ಸಾಗಣೆ ವೆಚ್ಚ ಕೂಡ ಏರುವ ಕಾರಣ ಕೊನೆಗೆ ಅದು ಜನಸಾಮಾನ್ಯರ ಜೇಬಿನ ಮೇಲೆಯೇ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿ ದಿನ ಇವುಗಳ ದರದ ಮೇಲೆ ಕಣ್ಣಿಡುವುದು ಅವಶ್ಯಕ. 100ರ ಗಡಿ ದಾಟಿ ಕುಳಿತಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಆ ಬಳಿಕ ಯಾವುದೇ ಏರಿಕೆಯಾಗಿರಲಿಲ್ಲ. ಆದರೆ, ಚುನಾವಣೆಯ ಹೊತ್ತಿನಲ್ಲಿ ಸರ್ಕಾರ ಇಂಧನಗಳ ಬೆಲೆಯಲ್ಲಿ ಇಳಿಕೆ ಮಾಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ಗೆ 94.72. ರೂಪಾಯಿ ಇದೆ. ಮುಂಬೈನಲ್ಲಿ 104.21, ಕೋಲ್ಕತ್ತಾದಲ್ಲಿ 103.94, ಚೆನ್ನೈನಲ್ಲಿ 100.75 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 87.62, ಮುಂಬೈನಲ್ಲಿ 92.15, ಕೋಲ್ಕತ್ತಾ 90.76, ಚೆನ್ನೈನಲ್ಲಿ 92.34 ರೂಪಾಯಿ ಇದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ದರಗಳು ಇಂತಿದೆ
| ಜಿಲ್ಲೆ | ಪೆಟ್ರೋಲ್ ಬೆಲೆ (ಲೀ/ರೂ.) | ಡೀಸೆಲ್ ಬೆಲೆ (ಲೀ/ರೂ.) |
| ಬಾಗಲಕೋಟೆ | 100.38 | 86.45 |
| ಬೆಂಗಳೂರು | 99.84 | 85.93 |
| ಬೆಂಗಳೂರು ಗ್ರಾಂ. | 99.49 | 85.62 |
| ಬೆಳಗಾವಿ | 100.24 | 86.33 |
| ಬಳ್ಳಾರಿ | 101.51 | 87.46 |
| ಬೀದರ್ | 100.18 | 86.27 |
| ಬಿಜಾಪುರ | 100.15 | 86.23 |
| ಚಾಮರಾಜನಗರ | 100 | 86.08 |
| ಚಿಕ್ಕಬಳ್ಳಾಪುರ | 99.84 | 85.93 |
| ಚಿಕ್ಕಮಗಳೂರು | 102.34 | 88.04 |
| ಚಿತ್ರದುರ್ಗ | 100.90 | 86.71 |
| ದಕ್ಷಿಣ ಕನ್ನಡ | 99.38 | 85.48 |
| ದಾವಣಗೆರೆ | 101.31 | 87.08 |
| ಧಾರವಾಡ | 99.61 | 85.75 |
| ಗದಗ | 100.28 | 86.35 |
| ಗುಲ್ಬರ್ಗ | 99.61 | 85.75 |
| ಹಾಸನ | 99.84 | 85.75 |
| ಹಾವೇರಿ | 100.31 | 86.38 |
| ಕೊಡಗು | 101.37 | 87.14 |
| ಕೋಲಾರ | 99.71 | 85.82 |
| ಕೊಪ್ಪಳ | 100,76 | 86.79 |
| ಮಂಡ್ಯ | 100.08 | 86.15 |
| ಮೈಸೂರು | 99,40 | 85.54 |
| ರಾಯಚೂರು | 99,74 | 85.88 |
| ರಾಮನಗರ | 100.29 | 86.34 |
| ಶಿವಮೊಗ್ಗ | 100.80 | 86.67 |
| ತುಮಕೂರು | 100.72 | 86.73 |
| ಉಡುಪಿ | 99.92 | 85.97 |
| ಉತ್ತರ ಕನ್ನಡ | 101.69 | 87.57 |
| ವಿಜಯನಗರ | 102.13 | 87.82 |
| ಯಾದಗಿರಿ | 100.33 | 86.40 |
