ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಪ್ಲ್ಯಾನ್ ಮಾಡಿರೋರು ಪ್ರತಿದಿನ ಬೆಲೆ ಚೆಕ್ ಮಾಡೋದು ಸಾಮಾನ್ಯ. ಹಾಗಾದ್ರೆ ಇಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ? ಯಾವ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗಿದೆ? ಇಲ್ಲಿದೆ ಮಾಹಿತಿ.
Gold Rate on February 10th 2023: ಚಿನ್ನ, ಬೆಳ್ಳಿಯ ಒಡವೆಗಳು ಎಷ್ಟಿದ್ದರೂ ಕಡಿಮೆ ಎಂಬ ಭಾವನೆ ಮಹಿಳೆಯರಲ್ಲಿ ಸಾಮಾನ್ಯ. ಇದೇ ಕಾರಣಕ್ಕೆ ಆಗಾಗ ಹೊಸ ವಿನ್ಯಾಸದ ಆಭರಣಗಳನ್ನು ಖರೀದಿಸುವ ಮೂಲಕ ಈ ಕೊರಗನ್ನು ನೀಗಿಸಿಕೊಳ್ಳುತ್ತಾರೆ. ಮಹಿಳೆಯರ ಈ ಆಭರಣ ಮೋಹವೇ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಗೆ ದೊಡ್ಡ ಮಾರುಕಟ್ಟೆ ಒದಗಿಸಿದೆ. ಇನ್ನು ಚಿನ್ನ ಹಾಗೂ ಬೆಳ್ಳಿ ಬೆಲೆ ಸ್ಥಿರವಾಗಿರುವುದು ತುಂಬಾ ಕಡಿಮೆ. ಆಗಾಗ ಬದಲಾವಣೆಯಾಗುತ್ತಲೇ ಇರುತ್ತದೆ. ಹೀಗಿರುವಾಗ ಚಿನ್ನದ ಬೆಲೆ ಇಳಿಕೆಯಾದ್ರಂತೂ ಮಹಿಳೆಯರ ಸಂತಸ ಹೆಚ್ಚುತ್ತದೆ. ತಮ್ಮಿಷ್ಟದ ಒಡವೆ ಖರೀದಿಗೆ ಇದೇ ಸಮಯ ಸೂಕ್ತ ಎಂದು ಖರೀದಿಗೆ ಮುಂದಾಗುತ್ತಾರೆ. ಇನ್ನೂ ಕೆಲವರಿಗೆ ಚಿನ್ನ, ಬೆಳ್ಳಿ ಹೂಡಿಕೆಯ ಸಾಧನವೂ ಹೌದು. ಈ ಎಲ್ಲ ಕಾರಣಗಳಿಂದ ಕೆಲವರು ಪ್ರತಿದಿನ ಚಿನ್ನ ಹಾಗೂ ಬೆಳ್ಳಿ ಬೆಲೆಯನ್ನು ಪರಿಶೀಲಿಸುತ್ತಾರೆ. ಹಾಗಾದ್ರೆ ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ?
ಇಂದು ಬೆಂಗಳೂರಿನಲ್ಲಿ (Bengaluru) ಬಂಗಾರ (Gold), ಬೆಳ್ಳಿ (Silver) ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಆಭರಣ (Jewellery) ದರ ಹೇಗಿದೆ? ಇಲ್ಲಿದೆ ಮಾಹಿತಿ.
Petrol, Diesel Price Today:ಶಿವಮೊಗ್ಗದಲ್ಲಿ ಏರಿಕೆ, ಚಿಕ್ಕಮಗಳೂರಿನಲ್ಲಿ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ
ಇಂದು ದೇಶದಲ್ಲಿ (India) ಬಂಗಾರದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ಬೆಳ್ಳಿಯ ದರದಲ್ಲಿ ಇಳಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ..
ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,290
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,771
ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 42,320
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 46,168
ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 52,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,710
ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,29,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,77,100
ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,950 ರೂ. ಆಗಿದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ನಿನ್ನೆಯಷ್ಟೇ ಇದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 53,750, ರೂ. 52,900 ಹಾಗೂ ರೂ., 52,900 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಚಿನ್ನದ ಬೆಲೆ 53,050 ರೂ. ಆಗಿದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಇಂದಿನ ಬೆಳ್ಳಿ ದರ
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಇಂದು ಇಳಿಕೆಯಾಗಿದೆ. ನಿನ್ನೆ ದೇಶದಲ್ಲಿ 1ಕೆ.ಜಿ. ಬೆಳ್ಳಿ ದರ 71,350ರೂ. ಇಂದು 350ರೂ. ಇಳಿಕೆಯಾಗಿ 71,000 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಇವೆರಡರಲ್ಲಿ ವ್ಯತ್ಯಾಸವಾದ್ರೆ ಅದು ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತದೆ.
ಬೆಂಗಳೂರು ಹಾಗೂ ಇತರೆಡೆ ಬೆಳ್ಳಿ ದರ
ದೇಶಾದ್ಯಂತ ಇಂದು ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 735, ರೂ. 7,350 ಹಾಗೂ ರೂ. 73,500 ಗಳಾಗಿವೆ. ನಿನ್ನೆ ಕೂಡ ಇಷ್ಟೇ ಇತ್ತು. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 73,500 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 71,000 ಹಾಗೂ ಕೋಲ್ಕತ್ತದಲ್ಲಿ ಸಹ 1 ಕೆಜಿ ಬೆಳ್ಳಿ ದರ ರೂ. 71,000 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹ 71,000 ರೂ. ಇದೆ. ಅಂದ್ರೆ ಈ ಮೂರು ನಗರಗಳಲ್ಲಿ ನಿನ್ನೆಗಿಂತ ಇಂದು ರೂ.350 ಇಳಿಕೆಯಾಗಿದೆ.
