ಹೊಸ ವರ್ಷಕ್ಕೆ ಚಿನ್ನ ಖರೀದಿಸಿ ಎಂಜಾಯ್ ಮಾಡಿ, ಬಂಗಾರದ ಬೆಲೆಯಲ್ಲಿಂದು ಇಳಿಕೆ, ಇಲ್ಲಿದೆ ಇಂದಿನ ದರ
ಇಂದು ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ಕಂಡುಬಂದಿದೆ.ಹೊಸ ವರ್ಷಕ್ಕೆ ಚಿನ್ನ ಖರೀದಿಸಿ ಈ ವರ್ಷವನ್ನು ಉತ್ತಮ ಹೂಡಿಕೆಯಿಂದ ಆರಂಭಿಸುವ ಸುವರ್ಣವಕಾಶ ಬಂದಿದೆ.
ನವದೆಹಲಿ: ಪ್ರಪಂಚದಾದ್ಯಂತ 2025ನೇ ವರ್ಷವನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಕೆಲವರು ಕಾಣಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುತ್ತಾರೆ. ನೀವೂ ಸಹ ಅತ್ಯಾಪ್ತರಿಗೆ ಉಡುಗೊರೆ ನೀಡಲು ಯೋಚಿಸುತ್ತಿದ್ದರೆ ಚಿನ್ನವನ್ನೇ ನೀಡಬಹುದು. ಇದಕ್ಕೆ ಕಾರಣ, ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,109 ರೂಪಾಯಿ (1 ರೂ. ಇಳಿಕೆ)
8 ಗ್ರಾಂ: 56,872 ರೂಪಾಯಿ (8 ರೂ. ಇಳಿಕೆ)
10 ಗ್ರಾಂ: 71,090 ರೂಪಾಯಿ (10 ರೂ. ಇಳಿಕೆ)
100 ಗ್ರಾಂ: 7,10,900 ರೂಪಾಯಿ (100 ರೂ. ಇಳಿಕೆ)
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,755 ರೂಪಾಯಿ (1 ರೂ. ಇಳಿಕೆ)
8 ಗ್ರಾಂ: 62,040 ರೂಪಾಯಿ (8 ರೂ. ಇಳಿಕೆ)
10 ಗ್ರಾಂ: 77,500 ರೂಪಾಯಿ (10 ರೂ. ಇಳಿಕೆ)
100 ಗ್ರಾಂ: 7,75,500 ರೂಪಾಯಿ (100 ರೂ. ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಬೆಂಗಳೂರು: 71,090 ರೂಪಾಯಿ, ಚೆನ್ನೈ: 71,090 ರೂಪಾಯಿ, ಮುಂಬೈ: 71,090 ರೂಪಾಯಿ, ದೆಹಲಿ: 71,240 ರೂಪಾಯಿ, ಕೋಲ್ಕತ್ತಾ: 71,090 ರೂಪಾಯಿ, ಹೈದರಾಬಾದ್: 71,090 ರೂಪಾಯಿ
ಇದನ್ನೂ ಓದಿ: 2025ರಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಾ? ಆರ್ಥಿಕ ತಜ್ಞರ ಉತ್ತರ
ಇಂದಿನ ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಇಂದು ಚಿನ್ನದ ಜೊತೆಯಲ್ಲಿ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ.
10 ಗ್ರಾಂ: 904 ರೂಪಾಯಿ (1 ರೂ. ಇಳಿಕೆ)
100 ಗ್ರಾಂ: 9,040 ರೂಪಾಯಿ (10 ರೂ. ಇಳಿಕೆ)
1 ಕೆಜಿ: 90,400 ರೂಪಾಯಿ (100 ರೂ. ಇಳಿಕೆ)
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಇದನ್ನು ನೀವು ಆ ದಿನದ ಚಿನ್ನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು.
ಇದನ್ನೂ ಓದಿ: ಡಬಲ್ ಆಯ್ತು ಹೊಸ ವರ್ಷದ ಸಂಭ್ರಮ : LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ