ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸ್ಬೇಕಾ? ಹೀಗೆ ಮಾಡಿ..
ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆ. ಹೀಗಾಗಿ ಇದರಲ್ಲಿರುವ ಮಾಹಿತಿಗಳನ್ನು ಆಗಾಗ ಅಪ್ಡೇಟ್ ಮಾಡೋದು ಅಗತ್ಯ. ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆ ಬದಲಾಯಿಸಲು ಅಥವಾ ಸೇರಿಸಲು ಏನು ಮಾಡ್ಬೇಕು? ಇಲ್ಲಿದೆ ಮಾಹಿತಿ.
Business Desk:ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಸರ್ಕಾರದ ಪ್ರಮುಖ ಯೋಜನೆಗಳ ಪ್ರಯೋಜನ ಪಡೆಯುವ ತನಕ ಇದು ಅಗತ್ಯ. ಈ ನಡುವೆ 10 ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ . ಅಲ್ಲದೆ, ಯಾವುದೇ ಶುಲ್ಕವಿಲ್ಲದೆ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಯುಐಡಿಎಐ 2023ರ ಸೆಪ್ಟೆಂಬರ್ 14ರ ತನಕ ಅವಕಾಶ ಕಲ್ಪಿಸಿದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ಅಪ್ಡೇಟ್ ಮಾಡೋದು ಅಗತ್ಯ. ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಿದ್ದರೆ ಅಥವಾ ಮೊಬೈಲ್ ಸಂಖ್ಯೆಯನ್ನು ಸೇರಿಸಬೇಕಿದ್ದರೆ ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಮಾಡಬಹುದು. ಹಾಗಾದ್ರೆ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಏನು ಮಾಡ್ಬೇಕು? ಇಲ್ಲಿದೆ ಮಾಹಿತಿ.
1.ಸಮೀಪದ ನೋಂದಣಿ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ: ಯುಎಡಿಎಐ ವೆಬ್ ಸೈಟ್ uidai.gov.in ಭೇಟಿ ನೀಡಿ. 'Locate Enrollment Centre' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಸಮೀಪದ ಆಧಾರ್ ಸೇವಾ ಕೇಂದ್ರದ ಮಾಹಿತಿ ನೀಡುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಬಹುದು.
ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗಡುವು ಮೂರು ತಿಂಗಳು ವಿಸ್ತರಣೆ; ಸೆ.14ರ ತನಕ ಕಾಲಾವಕಾಶ
2.ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ: ನೀವು ಗುರುತಿಸಿರುವ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿರುವ ಸಿಬ್ಬಂದಿ ಬಳಿ ಈ ಬಗ್ಗೆ ವಿಚಾರಿಸಿದರೆ ಅವರು ನಿಮಗೆ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡುವ ಪ್ರಕ್ರಿಯೆ ಬಗ್ಗೆ ನಿರ್ದೇಶನ ನೀಡುತ್ತಾರೆ.
3.ಅರ್ಜಿ ಪೂರ್ಣಗೊಳಿಸಿ: ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಅರ್ಜಿಯನ್ನು ಭರ್ತಿ ಮಾಡಿ. ಅರ್ಜಿಯನ್ನು ಜಾಗರೂಕತೆಯಿಂದ ಭರ್ತಿ ಮಾಡಿ ಹಾಗೂ ಯಾವುದೇ ತಪ್ಪುಗಳು ಆಗದಂತೆ ಎಚ್ಚರ ವಹಿಸಲು ಆ ಮಾಹಿತಿಗಳನ್ನು ಪರಿಶೀಲಿಸಿ.
4.ಅರ್ಜಿ ಸಲ್ಲಿಕೆ ಮಾಡಿ: ಅರ್ಜಿ ಭರ್ತಿ ಮಾಡಿದ ಬಳಿಕ ಅದನ್ನು ಆಧಾರ್ ಕೇಂದ್ರದ ಸಿಬ್ಬಂದಿಗೆ ಸಲ್ಲಿಕೆ ಮಾಡಿ. ಅವರು ಅರ್ಜಿಯನ್ನು ಪರಿಶೀಲಿಸುತ್ತಾರೆ. ಗುರುತು ದೃಢೀಕರಣ, ವಿಳಾಸ ದೃಢೀಕರಣ ಹಾಗೂ ನಿಮ್ಮ ಬಳಿ ಈಗಿರುವ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
5.ಶುಲ್ಕ ಪಾವತಿಸಿ: ಈ ಕೆಲಸಕ್ಕೆ ನೀವು 50ರೂ. ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿ ಪ್ರಕ್ರಿಯೆ ಬಗ್ಗೆ ಅಲ್ಲಿನ ಸಿಬ್ಬಂದಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ.
6. ಯುಆರ್ ಎನ್ ಸಂಖ್ಯೆ ಪಡೆಯಿರಿ: ಶುಲ್ಕ ಪಾವತಿ ಬಳಿಕ ಆಧಾರ್ ಕೇಂದ್ರದ ಸಿಬ್ಬಂದಿ ನಿಮಗೆ ಯುಆರ್ ಎನ್ ಸ್ಲಿಪ್ ನೀಡುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಮನವಿ ಸ್ಟೇಟಸ್ ಟ್ರ್ಯಾಕ್ ಮಾಡಲು ಯುಆರ್ ಎನ್ ಅಗತ್ಯ.
ಮೊಬೈಲ್ ನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
7.ಸ್ಟೇಟಸ್ ಚೆಕ್ ಮಾಡಿ: ನಿಮ್ಮ ಮೊಬೈಲ್ ಸಂಖ್ಯೆ ತಿದ್ದುಪಡಿ ಪ್ರಗತಿಯನ್ನು ನಿರ್ವಹಿಸಲು ಯುಐಡಿಎಐ ಅಧಿಕೃತ ವೆಬ್ ಸೈಟ್ myaadhaar.uidai.gov.in.ಭೇಟಿ ನೀಡಿ. ಆ ಬಳಿಕ 'Check Enrollment'ವಿಭಾಗಕ್ಕೆ ಭೇಟಿ ನೀಡಿ. ಅಲ್ಲಿ ನಿಮ್ಮ ಯುಆರ್ ಎನ್ ಜೊತೆಗೆ ಇತರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಮನವಿಯ ಪ್ರಸಕ್ತ ಸ್ಟೇಟಸ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
8.ಅಪ್ಡೇಟ್ ಗೆ ಕಾಯಿರಿ: ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಮನವಿ ಸಲ್ಲಿಕೆ ಮಾಡಿದ ಬಳಿಕ ಯುಐಡಿಎಐ ಅಪ್ಡೇಟ್ ಆದ ಮೊಬೈಲ್ ಸಂಖ್ಯೆಯನ್ನು ಡೇಟಾಬೇಸ್ ಗೆ ಅಪ್ಡೇಟ್ ಮಾಡಿ. ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನಲ್ಲಿ ಯಶಸ್ವಿಯಾಗಿ ಅಪ್ಡೇಟ್ ಮಾಡಲು 90 ದಿನಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಈಗಿನ ಮೊಬೈಲ್ ಸಂಖ್ಯೆಯನ್ನೇ ಬಳಸಬಹುದು.