Asianet Suvarna News Asianet Suvarna News

ಭಾರತದಲ್ಲಿ ಉತ್ಪಾದಿತ ವಸ್ತುಗಳ ರಫ್ತು 73000 ಕೋಟಿಗೆ ಏರಿಕೆ!

ಭಾರತದಲ್ಲಿ ಉತ್ಪಾದಿತ ವಸ್ತುಗಳ ರಫ್ತು 73000 ಕೋಟಿಗೆ ಏರಿಕೆ!| 2027ರ ವೇಳೆಗೆ ರಫ್ತಿನ ಪ್ರಮಾಣ 300 ಪಟ್ಟು ಹೆಚ್ಚಳ

Walmart to triple annual exports from India to 10 billion dollars by 2027 pod
Author
Bangalore, First Published Dec 12, 2020, 8:57 AM IST

ನವದೆಹಲಿ(ಡಿ.12): ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಉತ್ಪಾದಿತ ವಸ್ತುಗಳ ರಫ್ತಿನ ಪ್ರಮಾಣವನ್ನು 10 ಬಿಲಿಯನ್‌ ಡಾಲರ್‌ (73000 ಕೋಟಿ ರು.ಗೆ)ಗೆ ಹೆಚ್ಚಿಸುವುದಾಗಿ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿ ವಾಲ್‌ಮಾರ್ಟ್‌ ಘೋಷಿಸಿದೆ. ಈ ಮೂಲಕ ವಿದೇಶಗಳಿಗೆ ಭಾರತ ನಿರ್ಮಿತ ವಸ್ತುಗಳ ಪೂರೈಕೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಮಾಹಿತಿ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ವಾಲ್‌ಮಾರ್ಟ್‌ ಅಧ್ಯಕ್ಷ ಹಾಗೂ ಸಿಇಒ ಡೌಗ್‌ ಮ್ಯಾಕ್‌ಮಿಲನ್‌, ‘ಭಾರತದಿಂದ ನಮ್ಮ ವಾರ್ಷಿಕ ರಫ್ತಿನ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ನಾವು ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಒತ್ತು ನೀಡುತ್ತಿದ್ದೇವೆ. ರಫ್ತು ಹೆಚ್ಚಳದ ಮೂಲಕ ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಗ್ರಾಹಕರನ್ನು ತಲುಪುವ ಈ ಯೋಜನೆಯು ಸ್ಥಳೀಯ ಉದ್ಯಮಿಗಳಿಗೆ ಹೆಚ್ಚಿನ ನೆರವು ನೀಡಲಿದೆ. ಜೊತೆಗೆ ಭಾರತದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯೊಂದಿಗೆ ಭಾರತದಲ್ಲಿ ಆರ್ಥಿಕ ಅಭ್ಯುದಯಕ್ಕೆ ಮುನ್ನುಡಿ ಬರೆಯಲಿದೆ’ ಎಂದು ಹೇಳಿದ್ದಾರೆ.

ಜೊತೆಗೆ ‘ಜಾಗತಿಕ ಚಿಲ್ಲರೆ ವಲಯದ ಯಶಸ್ವಿಗೆ ಸ್ಥಳೀಯ ಉತ್ಪಾದಕರು ಬಹುಮುಖ್ಯ ಹಾಗೂ ಭಾರತೀಯ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ವಾಲ್‌ಮಾರ್ಟ್‌ ಅರ್ಥೈಸಿಕೊಂಡಿದೆ. ವಾಲ್‌ಮಾರ್ಟ್‌ ಒದಗಿಸುವ ವಿಶಿಷ್ಟಮತ್ತು ಜಾಗತಿಕ ವಿತರಣಾ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತೀಯ ಉದ್ದಿಮೆದಾದರು ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಮ್ಯಾಕ್‌ಮಿಲನ್‌ ಹೇಳಿದ್ದಾರೆ.

ವಾಲ್‌ಮಾರ್ಟ್‌ನ ಈ ಘೋಷಣೆಯಿಂದಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ಸಮರ್ಥ ಮತ್ತು ವಾಲ್‌ಮಾರ್ಟ್‌ ವೃದ್ಧಿ ಕಾರ್ಯಕ್ರಮಗಳಿಂದಾಗಿ ಕೊರೋನಾ ಲಾಕ್‌ಡೌನ್‌ ಸಂಕಷ್ಟದಿಂದ ಇದೀಗ ಚೇತರಿಕೆಯತ್ತ ಹೊರಳುತ್ತಿರುವ ಭಾರತದಲ್ಲಿರುವ ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳು ಗಮನಾರ್ಹ ಅಭಿವೃದ್ಧಿ ಸಾಧಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಆಹಾರ, ವೈದ್ಯಕೀಯ ಸಲಕರಣೆಗಳು, ಆಹಾರ ಪದಾರ್ಥಗಳು, ಆರೋಗ್ಯ ಮತ್ತು ಸೌಂದರ್ಯವರ್ಧಕ, ಸಿದ್ಧ ಉಡುಪುಗಳು ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೂ ವಿಫುಲ ಅವಕಾಶಗಳು ಪ್ರಾಪ್ತವಾಗಲಿದೆ.

2018ರಲ್ಲಿ ಬೆಂಗಳೂರು ಮೂಲದ ಇ ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ ಖರೀದಿಸಿರುವ ವಿಶ್ವದ ಅತಿದೊಡ್ಡ ಚಿಲ್ಲರೆ ಮಳಿಗೆ ಸಮೂಹವಾದ ವಾಲ್‌ಮಾರ್ಟ್‌, ಪ್ರಸಕ್ತ ಭಾರತದಿಂದ ವಾರ್ಷಿಕ 3 ಶತಕೋಟಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡುತ್ತಿದೆ.

Follow Us:
Download App:
  • android
  • ios