Asianet Suvarna News Asianet Suvarna News

ಫ್ಲಿಪ್‍ಕಾರ್ಟ್ ಬೇರು, ವಾಲ್ ಮಾರ್ಟ್ ಷೇರು: ವ್ಯಾಪಾರ ಜೋರು!

ಫ್ಲಿಪ್‍ಕಾರ್ಟ್, ವಾಲ್‌ಮಾರ್ಟ್ ಷೇರು ಒಪ್ಪಂದ! ಶೇ.77 ರಷ್ಟು ಷೇರು ಖರೀದಿಸಿದ ವಾಲ್ ಮಾರ್ಟ್! 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ! ಹೊಸ ಉದ್ಯೋಗಾವಕಾಶಕ್ಕೆ ಬಾಗಿಲು ಓಪನ್
  

Walmart completes deal to acquire 77 per cent stake in Flipkart
Author
Bengaluru, First Published Aug 19, 2018, 2:34 PM IST

ಬೆಂಗಳೂರು(ಆ.19): ಫ್ಲಿಪ್‍ಕಾರ್ಟ್ ಇ- ಕಾಮರ್ಸ್ ಕಂಪನಿಯಲ್ಲಿ ಶೇ.77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಸಂಸ್ಥೆ ತಿಳಿಸಿದೆ.

ಫ್ಲಿಪ್‍ಕಾರ್ಟ್ ವ್ಯವಹಾರ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಟೋನ್ವಿಲ್ಲೆ ದೈತ್ಯ ಕಂಪನಿ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುತ್ತಿದೆ.  ಈ ಹೂಡಿಕೆಯೊಂದಿಗೆ ವಾಲ್‌ಮಾರ್ಟ ಈಗ ಫ್ಲಿಪ್‍ಕಾರ್ಟ್ ನಲ್ಲಿ ಶೇ.77 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.

ಫ್ಲಿಪ್‍ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್, ಟೆನ್ಸೆಂಟ್, ಟೈಗರ್ ಗ್ಲೋಬಲ್ ಮತ್ತು ಮೈಕ್ರೋಸಾಫ್ಟ್ ಕಾರ್ಪ್ ಸೇರಿದಂತೆ ಇತರ ಷೇರುದಾರರು ವ್ಯಾಪಾರದ ಉಳಿದ ಭಾಗವನ್ನು ಹೊಂದಿದ್ದಾರೆ. ಇದರಿಂದಾಗಿ ವಾಲ್‌ಮಾರ್ಟ್ ಅಂತಾರಾಷ್ಟ್ರೀಯ ವ್ಯವಹಾರದ ವಿಭಾಗದಲ್ಲಿಯೇ ಫ್ಲಿಪ್‍ಕಾರ್ಟ್ ಹಣಕಾಸು ಜೊತೆಗೊಡಲಿದೆ ಎನ್ನಲಾಗಿದೆ.

ಎರಡು ಕಂಪನಿಗಳು ಏಕ ರೀತಿಯ ಬ್ರಾಂಡ್ ಹೊಂದಿರಲಿದ್ದು, ಭಾರತದ ಮಾರುಕಟ್ಟೆ ಸ್ವರೂಪಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಾಗುವುದು ಎನ್ನಲಾಗಿದೆ. ಅಲ್ಲದೇ  ಫ್ಲಿಪ್‍ಕಾರ್ಟ್ ನಿರ್ವಹಣಾ ತಂಡವೇ  ವ್ಯವಹಾರವನ್ನು ನೋಡಿಕೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತೀಯ ಗ್ರಾಹಕರಿಗೆ ಗುಣಮಟ್ಟ ಹಾಗೂ ರಿಯಾಯಿತಿ ದರದಲ್ಲಿ ಸರಕುಗಳನ್ನು ಒದಗಿಸುವ ನಿಟ್ಟಿನಲ್ಲಿ ಹೂಡಿಕೆ  ಮಾಡಲಾಗುತ್ತಿದೆ. ಇದರಿಂದಾಗಿ ಹೊಸ ಉದ್ಯೋಗಾವಕಾಶ ದೊರೆಯಲಿವೆ. ಜೊತೆಗೆ ಫ್ಲಿಪ್‍ಕಾರ್ಟ್ ಬೆಳವಣಿಗೂ ಶ್ರಮಿಸಲಾಗುವುದು ಎಂದು ವಾಲ್ ಮಾರ್ಟ್ ಅಂತಾರಾಷ್ಟ್ರೀಯ ಸಂಸ್ಥೆ ಅಧ್ಯಕ್ಷ ಹಾಗೂ ಸಿಇಓ ಜುಡಿಟ್ ಮೆಕ್ಯಾನಾ  ಹೇಳಿದ್ದಾರೆ.

ವಾಲ್‌ಮಾರ್ಟ್ ಜೊತೆ ಸೇರಿರುವುದರಿಂದ ಫ್ಲಿಪ್‍ಕಾರ್ಟ್ ಆರ್ಥಿಕ, ತಾಂತ್ರಿಕ ಮತ್ತು ಸ್ಥಳೀಯವಾಗಿಯೂ ಸದೃಢಗೊಳ್ಳಲಿದೆ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಹೊಸ ಅಲೆ ಉಂಟುಮಾಡುವ ವಿಶ್ವಾಸ ಇರುವುದಾಗಿ ಫ್ಲಿಪ್‍ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಹೇಳಿದ್ದಾರೆ.

Follow Us:
Download App:
  • android
  • ios